ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : ತುಮಕೂರಿನ ಕೈಗಾರಿಕಾ ನೋಡ್ ನಲ್ಲಿ 88,500 ಉದ್ಯೋಗ ಸೃಷ್ಟಿ

December 31, 2020


 ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿಯೊಂದು ಸಿಕ್ಕಿದ್ದು, ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ನ ಭಾಗವಾಗಿ ತುಮಕೂರಿನಲ್ಲಿ ಕೈಗಾರಿಕಾ ನೋಡ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ಇದರಿಂದಾಗಿ 88,500 ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಬೃಹತ್ ಮತ್ತು ಮಾಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಜಗದೀಶ್ ಶೆಟ್ಟರ್, ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ನ ಭಾಗವಾಗಿ ತುಮಕೂರಿನಲ್ಲಿ ಕೈಗಾರಿಕಾ ನೋಡ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 1,701.81 ಕೋಟಿ ರೂ. ಮೀಸಲಿರಿಸಿದ್ದು, ಇದರಿಂದಾಗಿ ಅಂದಾಜು 88,500 ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಿದರು.

ಈ ಮಹತ್ವಾಕಾಂಕ್ಷೆಯ ಕಾರಿಡಾರ್ ನ ಭಾಗವಾಗಿ ತುಮಕೂರು ನೋಡ್ ಗೆ ಅನುಮೋದನೆ ನೀಡಿರುವ ಪ್ರಧಾನಿ ಮೋದಿ ಮತ್ತು ಸಂಪುಟ ಸಹದ್ಯೋಗಿಗಳಿಗೆ ರಾಜ್ಯ ಸರ್ಕಾರದ ವತಿಯಿಂದ ಅಭಿನಂನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಮಗನ ಮೇಲಿನ ಸಿಟ್ಟಿಗೆ ನಾಯಿ ಹೆಸರಿಗೆ ಆಸ್ತಿ ಬರೆದ ರೈತ

December 31, 2020

 


ಆಸ್ತಿ ವಿಚಾರವಾಗಿ ಹೆತ್ತವರು ಹಾಗೂ ಮಕ್ಕಳ ನಡುವೆ ವೈಮನಸ್ಯ ಮೂಡುವುದು ಹೊಸ ವಿಚಾರವೇನಲ್ಲ. ತಂದೆಯೊಬ್ಬರು ತಮ್ಮ ಮಗನಿಂದ ತೀರಾ ಬೇಸತ್ತು ತಮ್ಮ ಆಸ್ತಿಯ ಭಾಗವೊಂದನ್ನು ತಮ್ಮ ಸಾಕು ನಾಯಿಗೆ ಬರೆದ ಘಟನೆ ಮಧ್ಯ ಪ್ರದೇಶದಲ್ಲಿ ಜರುಗಿದೆ.

ವೃತ್ತಿಯಲ್ಲಿ ರೈತರಾದ ಓಂ ನಾರಾಯಣ್ ವರ್ಮಾ, ತಮ್ಮ ಆಸ್ತಿಯ ವಿಲ್‌ನಲ್ಲಿ ಸಾಕು ನಾಯಿ ಜಾಕಿಯೂ ಸಹ ಪಾಲುದಾರ ಎಂದು ಬರೆದಿದ್ದು, ಅದಕ್ಕೆ ಎರಡು ಎಕರೆ ಜಮೀನನ್ನು ಕಾಣಿಸಿದ್ದಾರೆ.

ಮಧ್ಯ ಪ್ರದೇಶದ ಚಿಂದ್ವಾರಾ ಜಿಲ್ಲೆಯ ಬಾರಿಬಾಡಾ ಗ್ರಾಮದವರಾದ ಓಂ ನಾರಾಯಣ್‌ ಈ ಬಗ್ಗೆ ಮಾತನಾಡಿ, "ನನ್ನ ಮಡದಿ ಚಂಪಾ ಹಾಗೂ ಸಾಕು ನಾಯಿ ಜಾಕಿ ನನ್ನ ಸೇವೆ ಮಾಡುತ್ತಿದ್ದು, ನಾನು ಈಗ ಆರೋಗ್ಯವಾಗಿದ್ದೇನೆ. ಇಬ್ಬರೂ ಸಹ ನನ್ನ ಪ್ರೀತಿಪಾತ್ರರಾಗಿದ್ದಾರೆ" ಎನ್ನುತ್ತಾರೆ.

11 ತಿಂಗಳ ತಮ್ಮ ಸಾಕು ನಾಯಿಯನ್ನು ತಮ್ಮ ಮರಣಾನಂತರ ಯಾರು ನೋಡಿಕೊಳ್ಳುತ್ತಾರೋ ಅವರಿಗೆ ಅದರ ಪಾಲಿಗೆ ಬರೆದಿರುವ ಎರಡು ಎಕರೆ ಮೇಲೆ ಹಕ್ಕು ಇರಲಿದೆ ಎಂದು ವರ್ಮಾ ಬರೆದಿದ್ದಾರೆ.

ಆದರೆ ಕಹಾನಿಗೆ ಇಲ್ಲೊಂದು ಟ್ವಿಸ್ಟ್‌ ಇದೆ. ಮಗನ ಮೇಲೆ ಕೋಪಗೊಂಡು ಹೀಗೆ ವಿಲ್ ಬರೆದಿದ್ದ ವರ್ಮಾರನ್ನು ಮನವೊಲಿಸಿದ ಆತನ ಗ್ರಾಮದ ಸರ್ಪಂಚ್‌, ಮತ್ತೊಮ್ಮೆ ವಿಲ್‌ ಅನ್ನು ಬರೆಯುವಂತೆ ಮಾಡಿದ್ದಾರೆ.

ನಾಳೆ 'ವಿವಿಧ ಹುದ್ದೆ'ಗಳ ನೇಮಕಾತಿಗೆ 'ನೇರ ಸಂದರ್ಶನ'

December 31, 2020

 


ಹಾಸನ : ಹಾಸನದ ಹೆಸರಾಂತ ಕಂಪನಿಗಳು ಖಾಲಿ ಇರುವ ವಿವಿಧ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲು ಜ.1 ರಂದು ಮದ್ಯಾಹ್ನ 1 ಗಂಟೆಯವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೇರ ಸಂದರ್ಶನ ಮೂಲಕ ಆಯ್ಕೆ ನಡೆಯಲಿದೆ.

8ನೇ ತರಗತಿ ಎಸ್.ಎಸ್.ಎಲ್.ಸಿ/ ಪಿ.ಯು.ಸಿ/ ಐ.ಟಿ.ಐ/ ಡಿಪ್ಲೋಮೋ, ಯಾವುದೇ ಪದವಿ/ ನಲ್ಲಿ ತೇರ್ಗಡೆ ಹೊಂದಿದ 18 ರಿಂದ 30 ವರ್ಷ ಒಳಪಟ್ಟ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳ್ಳುತ್ತಿದ್ದು, ಆಸಕ್ತ ನಿರುದ್ಯೋಗಿ ಯುವಕ/ ಯುವತಿಯರು ತಮ್ಮ ಸ್ವವಿವರಗಳು ಆಧಾರ್ ಕಾರ್ಡ್ ಮತ್ತು ಶೈಕ್ಷಣಿಕ ದಾಖಲಾತಿಗಳ ಜೆರಾಕ್ಸ್ ಪ್ರತಿಗಳೊಂದಿಗೆ ಕಛೇರಿಗೆ ಹಾಜರಾಗಿ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಹಾಸನ ಇವರನ್ನು ಇವರನ್ನು ಖುದ್ದಾಗಿ ಅಥವಾ ದೂ.ಸ : 08172-296374 ಅಥವಾ 8722606874 / 8660141863 ಅನ್ನು ಸಂಪರ್ಕಿಸಿ ಮಾಹಿತಿ ಪಡೆಯಲು ಕೋರಲಾಗಿದೆ

ಕೋವಿಡ್ -19 ಇರುವ ಹಿನ್ನೆಲೆ ಹಾಜರಾಗುವ ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನ ಪಾಲಿಸುವಂತೆ ತಿಳಿಸಿದ್ದಾರೆ.

Indian Postal Circle Recruitment 2020: 1826 ಗ್ರಾಮೀಣ ದಖ್ ಸೇವಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ

December 31, 2020

 


ಭಾರತೀಯ ಪೋಸ್ಟಲ್ ಸರ್ಕಲ್ 1826 ಗ್ರಾಮೀಣ ದಖ್ ಸೇವಕ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ಹುದ್ದೆಗಳ ಬಗ್ಗೆ ತಿಳಿದುಕೊಂಡು ಆನ್‌ಲೈನ್ ಮೂಲಕ ಜನವರಿ 20,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ವಿದ್ಯಾರ್ಹತೆ:

10 ಮತ್ತು 12ನೇ ತರಗತಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ:

ಡಿಸೆಂಬರ್ 21,2020ರ ಅನ್ವಯ ಕನಿಷ್ಟ 18 ರಿಂದ ಗರಿಷ್ಟ 40 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ವೇತನ:

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 10,000/- ರಿಂದ 14,500/-ರೂ ಗಳ ವರೆಗೆ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಅರ್ಜಿದಾರರು 100/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಿರುತ್ತದೆ. ಮಹಿಳಾ/ಅಂಗವಿಕಲ ಅಭ್ಯರ್ಥಿಗಳು ಶುಲ್ಕ ವಿನಾಯಿತಿಯನ್ನು ಹೊಂದಿರುತ್ತಾರೆ.

ಅರ್ಜಿ ಸಲ್ಲಿಕೆ:

ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ http://www.appost.in/gdsonline/home.aspx?utm_source=DH-MoreFromPub&utm_medium=DH-app&utm_campaign=DH ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಜನವರಿ 20,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಯುಪಿಎಸ್ ಸಿ ನೇಮಕಾತಿ 2021: 400ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

December 31, 2020

 


ನವದೆಹಲಿ, ಡಿ. 31: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ ಸಿ) ಯು 2021ನೇ ಸಾಲಿನ ನೇಮಕಾತಿಯನ್ನು ಆರಂಭಿಸಿದೆ. 400 ವಿವಿಧ ಹುದ್ದೆಗಳಿಗೆ ಸಂಬಂಧಿಸಿದಂತೆ ಅಧಿಸೂಚನೆ ಪ್ರಕಟಿಸಲಾಗಿದ್ದು, ಈ ಕುರಿತಂತೆ ಯುಪಿಎಸ್ ಸಿ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಅರ್ಹ, ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಜನವರಿ 19, 2021ರೊಳಗೆ ಅರ್ಜಿ ಸಲ್ಲಿಸಬಹುದು.

ಸಂಸ್ಥೆ ಹೆಸರು: Union Public Service Commission (UPSC)

ಹುದ್ದೆ ಹೆಸರು: NDA & Naval Academy

ಒಟ್ಟು ಹುದ್ದೆ: 400

ಉದ್ಯೋಗ ಸ್ಥಳ: ಭಾರತದೆಲ್ಲೆಡೆ

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಜನವರಿ 19, 2021

ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 12ನೇ ತರಗತಿ ಪಾಸಾಗಿರಬೇಕು.

ಸಂಬಳ ನಿರೀಕ್ಷೆ: 56,100/ ಪ್ರತಿ ತಿಂಗಳು.

ವಯೋಮಿತಿ: ಕೇಂದ್ರ ಲೋಕಸೇವಾ ಆಯೋಗ ನಿಯಮಾವಳಿ ಅನುಸಾರ.

ಅರ್ಜಿಶುಲ್ಕ:

ಎಲ್ಲಾ ಅಭ್ಯರ್ಥಿಗಳಿಗೆ: 100 ರು

ಎಸ್ ಸಿ/ ಎಸ್ಟಿ/ ಮಹಿಳೆ: ಯಾವುದೇ ಶುಲ್ಕವಿಲ್ಲ

ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ/ಸಂದರ್ಶನ.

ಪ್ರಮುಖ ದಿನಾಂಕ:

ಆನ್ ಲೈನ್ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 30-12-2020

ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 19-01-2021

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ  ಕ್ಲಿಕ್ ಮಾಡಿ

ಜನವರಿಯಲ್ಲಿ ಸಾಲು ಸಾಲು ಸರ್ಕಾರಿ ರಜೆ - ಈಗಲೇ ಪ್ಲಾನ್ ಮಾಡಿಕೊಳ್ಳಿ

December 30, 2020


 ಜನವರಿಯಲ್ಲಿ 9 ಸರ್ಕಾರಿ ರಜೆಗಳು ಇವೆ. ವಾರದ ರಜೆ, ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ಹಬ್ಬದ ರಜೆ ಸೇರಿ 9 ರಜೆಗಳಿದ್ದು, ತಮ್ಮ ಯಾವುದೇ ವ್ಯವಹಾರ, ಊರು, ಪ್ರವಾಸಕ್ಕೆ ಹೋಗಿ ಬರುವುದಾದಲ್ಲಿ ಮೊದಲೇ ಪ್ಲಾನ್ ಮಾಡಿಕೊಳ್ಳಬಹುದಾಗಿದೆ.

ಜನವರಿ 3 ಭಾನುವಾರ

ಜನವರಿ 9 ಎರಡನೇ ಶನಿವಾರ

ಜನವರಿ 10 ಭಾನುವಾರ

ಜನವರಿ 14 ಸಂಕ್ರಾಂತಿ

ಜನವರಿ 17 ಭಾನುವಾರ

ಜನವರಿ 23 ನಾಲ್ಕನೇ ಶನಿವಾರ

ಜನವರಿ 24 ಭಾನುವಾರ

ಜನವರಿ 26 ಗಣರಾಜ್ಯೋತ್ಸವ

ಜನವರಿ 31 ಭಾನುವಾರ ರಜೆ ಇರುತ್ತದೆ

ಜನವರಿ 25 ರಂದು ಒಂದು ದಿನ ರಜೆ ಹಾಕಿದರೆ ಜನವರಿ 23 ರಿಂದ 26 ರವರೆಗೆ ರಜೆ ಸೌಲಭ್ಯ ಪಡೆಯಬಹುದಾಗಿದೆ. ಇನ್ನು ಸ್ಥಳೀಯ ರಜೆಗಳು ಕೂಡ ಇರುತ್ತವೆ. ಇದರಿಂದ ಊರು, ಪ್ರವಾಸಕ್ಕೆ ಹೋಗಿ ಬರಲು ಅನುಕೂಲವಾಗುತ್ತದೆ.

ಜನವರಿಯಲ್ಲಿ ಹೆಚ್ಚಿನ ಸಂಖ್ಯೆಯ ರಜೆ ಇರುವುದರಿಂದ ಬ್ಯಾಂಕ್ ವ್ಯವಹಾರಗಳಿದ್ದಲ್ಲಿ ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು ಎಂದು ಹೇಳಲಾಗಿದೆ.

ಕುತೂಹಲ ಮೂಡಿಸಿದೆ ಸಿಎಂ ಯಡಿಯೂರಪ್ಪ ಪ್ರೆಸ್ ಮೀಟ್: ಮಹತ್ವದ ಘೋಷಣೆ ಸಾಧ್ಯತೆ

December 30, 2020

 


ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇವತ್ತು ಮಧ್ಯಾಹ್ನ 12 ಗಂಟೆಗೆ ಸುದ್ದಿಗೋಷ್ಟಿ ಕರೆದಿದ್ದು, ನೈಟ್ ಕರ್ಫ್ಯೂ, ಲಾಕ್ಡೌನ್ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ನೈಟ್ ಕರ್ಫ್ಯೂ ಜಾರಿಗೊಳಿಸುವುದಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ಕಂದಾಯ ಸಚಿವ ಆರ್. ಅಶೋಕ್ ಅವರು ನೈಟ್ ಕರ್ಫ್ಯೂ ಜಾರಿ ಮಾಡಲಾಗುವುದು ಎಂದು ಹೇಳಿದ್ದು, ಗೊಂದಲ ಮೂಡಿಸಿದೆ.

ಸಿಎಂ ಮಧ್ಯಾಹ್ನ ಪತ್ರಿಕಾಗೋಷ್ಠಿಯಲ್ಲಿ ಅತಿದೊಡ್ಡ ಘೋಷಣೆ ಮಾಡುತ್ತಾರೆ ಎನ್ನುವ ನಿರೀಕ್ಷೆ ಇದ್ದು, ಗೊಂದಲಕ್ಕೆ ಮಧ್ಯಾಹ್ನ ತೆರೆ ಬೀಳಲಿದೆ. ಹೊಸ ವರ್ಷಾಚರಣೆ ಸಂದರ್ಭದಲ್ಲಿ ರೂಪಾಂತರ ಕೊರೋನಾ ವೈರಸ್ ವ್ಯಾಪಕವಾಗಿ ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡುವ ಇಲ್ಲವೇ ಕಠಿಣ ನಿಯಮ ಜಾರಿಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಹೊಸ ವರ್ಷಾಚರಣೆ ವೇಳೆ ಸೋಂಕು ತಡೆಗೆ ಅಗತ್ಯವಾದರೆ ರಾಜ್ಯಗಳು ನೈಟ್ ಕರ್ಫ್ಯೂ ಸೇರಿ ನಿಯಮ ಜಾರಿಗೊಳಿಸಬಹುದೆಂದು ಕೇಂದ್ರ ಸರ್ಕಾರ ಹೇಳಿರುವುದರಿಂದ ಸಿಎಂ ಪತ್ರಿಕಾಗೋಷ್ಠಿಯ ಬಗ್ಗೆ ಕುತೂಹಲ ಹೆಚ್ಚಾಗಿದೆ ಎನ್ನಲಾಗಿದೆ.

ಐಟಿಐ ಪಾಸ್ ಆದವರಿಗೆ ಇಲ್ಲಿ ಕೆಲಸ ಇದೆ.!

December 30, 2020


ಬೆಂಗಳೂರು: ನ್ಯಾಷನಲ್ ಅಲ್ಯೂಮಿನಿಯಂ ಕಂಪನಿ ಲಿಮಿಟೆಡ್ (NALCO) 10 ಬಾಯ್ಲರ್ ಆಪರೇಟರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಪಟ್ಟ ಹುದ್ದೆಗೆ ಅನುಗುಣವಾಗಿ 10ನೇ ತರಗತಿ ಹಾಗೂ ಐಟಿಐ ವಿದ್ಯಾರ್ಹತೆಯನ್ನು ಹೊಂದಿರಬೇಕು. ಜೊತೆಗೆ 2 ವರ್ಷ ಅನುಭವ ಹೊಂದಿರಬೇಕು. ಆಯ್ಕೆಯಾದವರಿಗೆ ಮಾಸಿಕ ₹29,500 to ₹90,000 ವೇತನ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಕಡೆ ದಿನ ಜ.30 ಆಗಿದೆ. ಹೆಚ್ಚಿನ ಮಾಹಿತಿಗೆ NALCO ವೆಬ್ ನಲ್ಲಿ ಸಿಗಲಿದೆ.

`ಇ-ಸಂವೇದಾ ಕ್ಲಾಸ್' : 8,9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

December 30, 2020

 


ಬೆಂಗಳೂರು : ರಾಜ್ಯದ 8,9 ಹಾಗೂ 10 ನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಹತ್ವದ ಮಾಹಿತಿ ನೀಡಿದ್ದು, ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಭೌತಿಕ ತರಗತಿಗಳು ಆರಂಭವಾಗದೇ ಇರುವುದರಿಂದ ದೂರದರ್ಶನ ಚಂದನ ವಾಹಿನಿಯಲ್ಲಿ ಸಂವೇದಾ ಪಾಠಗಳನ್ನು ಜನವರಿ 4 ರಿಂದ ಮರು ಪ್ರಸಾರ ಮಾಡಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಚಂದನಾ ವಾಹಿನಿಯಲ್ಲಿ ಪ್ರಸಾರವಾದ ಪಾಠಗಳು 2021 ಜನವರಿ 1 ಕ್ಕೆ ಪೂರ್ಣಗೊಳ್ಳಲಿವೆ. ಜನವರಿ 1 ರಿಂದ 10 ನೇ ತರಗತಿಗೆ ಶಾಲಾ ತರಗತಿಗಳು ಮತ್ತು 6 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ತರಗತಿಗಳು ಆರಂಭವಾಗುತ್ತಿವೆ. ಇದರ ಜೊತೆಗೆ ಮಕ್ಕಳ ಕಲಿಕೆಯ ಹಿತದೃಷ್ಟಿಯಿಂದ ಚಂದನಾ ವಾಹಿನಿಯಲ್ಲಿ 8,9 ಮತ್ತು 10 ನೇ ತರಗತಿಗಳಿಗೆ ಪ್ರಸಾರವಾಗುತ್ತಿದ್ದ ಪಾಠಗಳನ್ನು ಜನವರಿ 4 ರಿಂದ ಮರು ಪ್ರಸಾರ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

'ಆದಾಯ ತೆರಿಗೆ ಪಾವತಿ'ದಾರರಿಗೆ ಬಿಗ್ ರಿಲ್ಯಾಕ್ಸ್ : ಫೆ.28ರವರೆಗೆ ವಾರ್ಷಿಕ IT, ಜ.10ರವರೆಗೆ 'ITR ರಿಟರ್ನ್' ಸಲ್ಲಿಕೆ ಅವದಿ ವಿಸ್ತರಣೆ

December 30, 2020


 ನವದೆಹಲಿ : ಕೊರೋನಾ ಸೋಂಕಿನ ಕಾರಣದಿಂದಾಗಿ ಇದೀಗ ಆದಾಯ ತೆರಿಗೆ ಪಾವತಿದಾರರಿಗೆ ಕೇಂದ್ರ ಸರ್ಕಾರ ಬಿಗ್ ರಿಲ್ಯಾಕ್ಸ್ ನೀಡಿದೆ. 2019-20ನೇ ಸಾಲಿನ ವಾರ್ಷಿಕ ಹಣಕಾಸು ವಹಿವಾಟಿನ ಆದಾಯ ತೆರಿಗೆ ಪಾವತಿಗೆ ಕೊನೆಯ ದಿನಾಂಕವನ್ನು ಫೆಬ್ರವರಿ 28, 2021ರವರೆಗೆ ಹಾಗೂ FY20 ಐಟಿಆರ್ ಫೈಲಿಂಗ್ ಕೊನೆಯ ದಿನಾಂಕವನ್ನು ಜನವರಿ 10, 2021ರವರೆಗೆ ವಿಸ್ತರಿಸಲಾಗಿದೆ.

ಈ ಕುರಿತಂತೆ ಕೇಂದ್ರ ಆದಾಯ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ ಮಾಹಿತಿ ನೀಡಿದ್ದು, ಕೊರೊನಾವೈರಸ್ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ 2019-20ನೇ ಹಣಕಾಸು ವರ್ಷದ ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ 2017ರ ಅನ್ವಯ ವಾರ್ಷಿಕ ರಿಟರ್ನ್ ಸಲ್ಲಿಕೆಯ ದಿನಾಂಕವನ್ನು ಫೆಬ್ರವರಿ 28ರವರೆಗೆ ವಿಸ್ತರಿಸಲಾಗಿದೆ ಎಂಬುದಾಗಿ ತಿಳಿಸಿದೆ.

ಇನ್ನೂ FY20 ಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ದಿನಾಂಕವನ್ನು 2021ರ ಜನವರಿ 10ರವರೆಗೆ ವಿಸ್ತರಿಸಲಾಗಿದೆ.

ಈ ಮೂಲಕ ಆದಾಯ ತೆರಿಗೆ ಪಾವತಿದಾರರಿಗೆ ಬಿಗ್ ರಿಲ್ಯಾಕ್ಸ್ ನೀಡಿದೆ.

ಜನವರಿಯಿಂದ ಶಾಲಾಗಳು ಪುನಾರಂಭ ಹಿನ್ನೆಲೆ :ಸಚಿವ ಸುರೇಶ್ ಕುಮಾರ್ ಹೇಳಿದ್ದೇನು..?

December 30, 2020

 


ಬೆಂಗಳೂರು ಜನವರಿಯಿಂದ ಶಾಲಾಗಳು ಪುನಾರಂಭ ಹಿನ್ನೆಲೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶಾಲಾ-ಕಾಲೇಜುಗಳಿಗೆ ಭೇಟಿ ನೀಡುತ್ತಿದ್ದಾರೆ. ಮೊದಲನೆಯದಾಗಿ ಮಲ್ಲೇಶ್ವರಂನ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದ ಸಚಿವರು, ಶಾಲೆ ಪುನಾರಂಭದ ಕುರಿತಂತೆ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ವೀಕ್ಷಿಸಿದರು. ಬಳಿಕ ಅಮ್ಮಣಿ ಮಹಿಳಾ ಕಾಲೇಜಿಗೆ ಭೇಟಿ ನೀಡಿ ಪ್ರಾಂಶುಪಾಲರಿಂದ ಮಾಹಿತಿ ಪಡೆದರು. ಜೊತೆಗೆ ಸ್ಯಾನಿಟೈಸ್​ ವ್ಯವಸ್ಥೆ, ಸಾಮಾಜಿಕ ಅಂತರದ ಬಾಕ್ಸ್‌ಗಳು ಇರುವುದನ್ನ ಖಚಿತ ಪಡಿಸಿಕೊಂಡರು.

ನಂತರ ಮಾತಾನಾಡಿದ ಸಚಿವರು​​, ಪೋಷಕರಿಂದ ಬಂದ ಅಭಿಪ್ರಾಯದ ಬಗ್ಗೆಯೂ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ‌. ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 700 ವಿದ್ಯಾರ್ಥಿಗಳು ಹಾಗೂ ಮಹಾರಾಣಿ ಅಮ್ಮಣಿ ಕಾಲೇಜಿನಲ್ಲಿ 600 ಪಿಯು ವಿದ್ಯಾರ್ಥಿನಿಗಳಿದ್ದಾರೆ.

ಈಗಾಗಲೇ ಸೆಕ್ಷನ್ ಮಾಡಿ ಟೈಂ ಟೇಬಲ್ ರಚನೆ ಮಾಡಿದ್ದಾರೆ. ಜ್ವರ-ನೆಗಡಿ ಇದ್ದರೆ ಐಸೋಲೇಷನ್ ರೂಂ ಮಾಡಿದ್ದು, ನರ್ಸ್ ಸೌಲಭ್ಯ ಕೂಡ ಇದೆ ಎಂದರು. ಮೊದಲ ದಿನ ಶೇ. 50 ರಿಂದ 60 ರಷ್ಟು ಮಕ್ಕಳು ಬರುವ ನಿರೀಕ್ಷೆ ಇದೆ.‌ ಆರ್​ಪಿಸಿಆರ್ ಪರೀಕ್ಷೆ ಸರ್ಟಿಫಿಕೇಟ್ ಪ್ರಾಂಶುಪಾಲರಿಗೆ ಕೊಡಬೇಕು. ಕಾಲೇಜಿಗೆ ಕರೆಸಿ ಕೋವಿಡ್ ಪರೀಕ್ಷೆ ಮಾಡುವ ವ್ಯವಸ್ಥೆ ಇದೆ ಎಂದರು.

ಯಾವ ಹಣ್ಣು ಸೇವನೆಯಿಂದ ಯಾವ ಪ್ರಯೋಜನ ಸಿಗಲಿದೆ ಗೊತ್ತಾ.?

December 30, 2020

 


ಹಣ್ಣುಗಳನ್ನು ಸೇವಿಸುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಎಂಬುದು ಎಲ್ಲರಿಗೂ ತಿಳಿದೆ ಇದೆ. ಹಣ್ಣುಗಳು ದೇಹಕ್ಕೆ ಬೇಕಾದ ವಿಟಮಿನ್ಸ್, ಪೋಷಕಾಂಶಗಳನ್ನು ನೀಡುತ್ತದೆ. ಹಾಗಾಗಿ ಯಾವ ಹಣ್ಣುಗಳನ್ನು ಸೇವಿಸಿದರೆ ದೇಹಕ್ಕೆ ಯಾವ ಪ್ರಯೋಜನ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

*ಪಪ್ಪಾಯ: ಇದು ಕಣ್ಣಿಗೆ ತುಂಬಾ ಒಳ್ಳೆಯದು. ಪಪ್ಪಾಯವನ್ನು ಸೆವಿಸುವುದರಿಂದ ಕಣ್ಣುಗಳು ದುರ್ಬಲವಾಗುವುದಿಲ್ಲ. ಅಲ್ಲದೇ ದೇಹದಲ್ಲಿ ಕಬ್ಬಿಣದ ಕೊರತೆಯಾಗಲ್ಲ. ದೇಹಕ್ಕೆ ಸುಸ್ತು, ದಣಿವು ಆಗಲ್ಲ. ಹೊಟ್ಟೆಯ ಸಮಸ್ಯೆ ದೂರವಾಗುತ್ತದೆ.

*ಸೇಬು: ಇದರಲ್ಲಿ ಫೈಬರ್ ಅಧಿಕವಾಗಿದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದು ದೇಹಕ್ಕೆ ಶಕ್ತಿ ನೀಡುತ್ತದೆ.

*ಬಾಳೆಹಣ್ಣು: ಇದು ಹಲವು ಬಗೆಯ ಜೀವಸತ್ವ ಹಾಗೂ ಖನಿಜಗಳನ್ನು ಒಳಗೊಂಡಿದೆ.

ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ.

*ದಾಳಿಂಬೆ: ದಾಳಿಂಬೆ ದೇಹದಲ್ಲಿ ರಕ್ತಹೀನತೆ ಸಮಸ್ಯೆಯನ್ನು ನಿವಾರಿಸುತ್ತದೆ. ರಕ್ತಹೀನತೆ ಸಮಸ್ಯೆ ಇರುವವರಿಗೆ ಇದು ತುಂಬಾ ಪ್ರಯೋಜನಕಾರಿ.

*ಕಲ್ಲಂಗಡಿ ಹಣ್ಣು: ಇದು ದೇಹದಲ್ಲಿ ನೀರಿನ ಕೊರತೆಯನ್ನು ನೀಗಿಸುತ್ತದೆ. ಇದರ ಸೇವನೆಯಿಂದ ಕ್ಯಾನ್ಸರ್ ನಂತಹ ಗಂಭೀರ ಸಮಸ್ಯೆಯಿಂದ ದೂರವಿರಬಹುದು.

ದೇಹದ ಬೊಜ್ಜು ಕರಗಿಸಲು ಹೋಗಿ ಈ ತಪ್ಪುಗಳನ್ನು ಮಾಡಬೇಡಿ, ಅನಾರೋಗ್ಯಕ್ಕೆ ತುತ್ತಾಗುತ್ತೀರಿ ಎಚ್ಚರ.!

December 30, 2020

 


ಬೊಜ್ಜು ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುವ ಸಮಸ್ಯೆಯಾಗಿದೆ. ಇದರಿಂದ ತೂಕ ಹೆಚ್ಚಳವಾಗುತ್ತದೆ. ಈ ಬೊಜ್ಜನ್ನು ಕರಗಿಸಲು ಜನರು ಹರಸಾಹಸ ಮಾಡುತ್ತಾರೆ. ಆದರೆ ಅವರು ಬೊಜ್ಜು ಕರಗಿಸಲು ಮಾಡುವ ಕೆಲವೊಂದು ತಪ್ಪುಗಳು ಅವರ ದೇಹದ ಮೇಲೆ ಪರಿಣಾಮ ಬೀರುತ್ತದೆ.

*ಕ್ಯಾಲೋರಿ : ತೂಕ ಇಳಿಸಲು ಕೆಲವರು ಕ್ಯಾಲೋರಿ ಆಹಾರಗಳನ್ನು ಸೇವಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸುತ್ತಾರೆ. ಇದರಿಂದ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.

*ಕೊಬ್ಬು : ದೇಹದ ಆರೋಗ್ಯಕ್ಕೆ ಕನಿಷ್ಟ ಪ್ರಮಾಣದ ಕೊಬ್ಬು ಅಗತ್ಯ. ಆದರೆ ದೇಹದಲ್ಲಿ ಬೊಜ್ಜು ಬೆಳೆಯಲು ಪ್ರಮುಖ ಕಾರಣ ಕೊಬ್ಬು. ಹಾಗಾಗಿ ಕೆಲವರು ಬೊಜ್ಜನ್ನು ಕಡಿಮೆ ಮಾಡಲು ಕೊಬ್ಬಿನ ಆಹಾರದಿಂದ ದೂರವಿರುತ್ತಾರೆ. ಇದರಿಂದ ಆರೋಗ್ಯ ಸಮಸ್ಯೆ ಕಾಡಬಹುದು.

*ಕೆಲವರು ಬೊಜ್ಜನ್ನು ಕರಗಿಸಲು ಆಹಾರವನ್ನು ಸೇವಿಸುವುದನ್ನು ತಪ್ಪಿಸುತ್ತಾರೆ.

ಇದರಿಂದ ದೇಹಕ್ಕೆ ಪೋಷಕಾಂಶಗಳ ಕೊರತೆಯಾಗಿ ಅನಾರೋಗ್ಯಕ್ಕೆ ತುತ್ತಾಗಬಹುದು.

*ಬೊಜ್ಜು ಕಡಿಮೆ ಮಾಡಲು ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಗಳು ಒಂದು ಉತ್ತಮ ಮಾರ್ಗ. ಆದರೆ ಕೆಲವರು ಬೊಜ್ಜು ಕರಗಿಸಲು ಅತಿಯಾಗಿ ವ್ಯಾಯಾಮ ಹಾಗೂ ದೈಹಿಕ ಚಟುವಟಿಕೆಗಳನ್ನು ಮಾಡುತ್ತಾರೆ. ಇದರಿಂದ ದೇಹ ಶಕ್ತಿ ಕಳೆದುಕೊಳ್ಳಬಹುದು.

ಪೋಷಕರೇ ಎಚ್ಚರ..! ಮಕ್ಕಳಿಗೆ ಹೆಚ್ಚು ಅಪಾಯಕಾರಿ ರೂಪಾಂತರ ಕೊರೊನಾ

December 30, 2020

 


ಬೆಂಗಳೂರು: ರಾಜ್ಯದಲ್ಲಿ ರೂಪಾಂತರ ಕೊರೊನಾ ಸೋಂಕು ಕಾಲಿಟ್ಟ ಬೆನ್ನಲ್ಲೇ ಆತಂಕ ಹೆಚ್ಚಿದೆ. ಅದರಲ್ಲೂ ಚಿಕ್ಕ ಮಕ್ಕಳಲ್ಲಿ ಈ ಸೋಂಕು ಹೆಚ್ಚು ಅಪಾಯಕಾರಿಯಾಗಿದೆ ಎಂದು ತಿಳಿದು ಬಂದಿದೆ.

ಬ್ರಿಟನ್ ನಿಂದ ಭಾರತಕ್ಕೆ ಆಗಮಿಸಿರುವ 6 ಜನರಲ್ಲಿ ರೂಪಾಂತರ ಕೊರೊನಾ ಸೋಂಕು ಪತ್ತೆಯಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಮೂವರಲ್ಲಿ ಈ ವೈರಸ್ ಪತ್ತೆಯಾಗಿದ್ದು, ಸಿಲಿಕಾನ್ ಸಿಟಿ ಜನರ ನಿದ್ದೆಗೆಡಿಸಿದೆ. ರೂಪಾಂತರ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದ್ದು, ಬೆಂಗಳೂರಿನಲ್ಲಿ ತಾಯಿ ಹಾಗೂ ಮಗುವಿನಲ್ಲಿ ಸೋಂಕು ಪತ್ತೆಯಾಗಿದ್ದು, ಮಕ್ಕಳಲ್ಲಿ ಈ ಸೋಂಕು ಹರಡಿದಲ್ಲಿ ಅಪಾಯಕಾರಿ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಮುಂಜಾಗ್ರತೆ ಅಗತ್ಯವಾಗಿದೆ.

ಹೊಸ ಕೊರೊನಾ ಪ್ರಭೇದ ಪತ್ತೆಯಾದವರಿಗೆ 28 ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಕಡ್ಡಾಯವಾಗಿ ನೀಡಬೇಕು.

ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆ 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಚಿಕಿತ್ಸೆ ನೀಡಬೇಕು. ವಿಶೇಷವಾಗಿ ಮಕ್ಕಳಲ್ಲಿ ಸೋಂಕು ಪತ್ತೆಯಾದಲ್ಲಿ ಅಪಾಯಕಾರಿಯಾಗಿದ್ದು, ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದು ಅಗತ್ಯವೆಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

ಹಲ್ಲುನೋವಿಗೆ ಪರಿಣಾಮಕಾರಿ ಮನೆಮದ್ದುಗಳು

December 29, 2020

 


ಹಲ್ಲುನೋವಿಗೆ ಪರಿಣಾಮಕಾರಿ ಮನೆಮದ್ದುಗಳು

Saakshatv healthtips toothache remedies

ಮಂಗಳೂರು, ಡಿಸೆಂಬರ್30: ಇತ್ತೀಚಿನ ದಿನಗಳಲ್ಲಿ ದೇಹಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿವೆ. ಇವುಗಳಲ್ಲಿ ಹಲ್ಲುನೋವು ಕೂಡ ಒಂದು. ಈ ಸಮಸ್ಯೆ ನೋವನ್ನು ಉಂಟುಮಾಡುವುದಲ್ಲದೆ, ಮುಖದ ಮೇಲೆ ಸೆಳೆತವನ್ನೂ ಉಂಟುಮಾಡುತ್ತದೆ. ಈ ನೋವನ್ನು ನಿವಾರಿಸಲು ಔಷಧಿಗಳು, ನಂಜುನಿರೋಧಕ ಕ್ರೀಮ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಕೆಲವೊಮ್ಮೆ ಅದು ಪ್ರಯೋಜನವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಮನೆಮದ್ದುಗಳು ತುಂಬಾ ಪ್ರಯೋಜನಕಾರಿಯಾಗಿದೆ.

ತಾಜಾ ಪೇರಲೆ (ಸೀಬೆಕಾಯಿ) ಎಲೆಗಳನ್ನು ಅಗಿಯಿರಿ. ಈ ಎಲೆಗಳನ್ನು ನೀರಿನಲ್ಲಿ ಕುದಿಸಿ ನಂತರ ಅ ನೀರಿನಿಂದ ಬಾಯಿಯನ್ನು ಸ್ವಚ್ಛಗೊಳಿಸಿ.
Saakshatv healthtips toothache remedies

ಈರುಳ್ಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಂಜುನಿರೋಧಕ ಗುಣಲಕ್ಷಣಗಳಲ್ಲಿ ಕಂಡುಬರುತ್ತದೆ.

ಇದು ಹಲ್ಲುನೋವನ್ನು ನಿವಾರಿಸುತ್ತದೆ. ಹಲ್ಲುನೋವು ತೊಡೆದುಹಾಕಲು, ಹಲ್ಲಿನ ಕೆಳಗೆ ಸಣ್ಣ ಈರುಳ್ಳಿ ಒತ್ತಿ ಹಿಡಿದುಕೊಳ್ಳಿ. ಇದು ನೋವನ್ನು ನಿವಾರಿಸುತ್ತದೆ.

ಕಲ್ಲು ಉಪ್ಪಿನ ಆರೋಗ್ಯಕರ ಪ್ರಯೋಜನಗಳು

ಬೆಳ್ಳುಳ್ಳಿ ಮೊಗ್ಗು ತಿನ್ನುವುದರಿಂದ ಹಲ್ಲುನೋವು ಸುಲಭವಾಗಿ ನಿವಾರಣೆಯಾಗುತ್ತದೆ. ನೋಯುತ್ತಿರುವ ಹಲ್ಲಿನ ಕೆಳಗೆ ಬೆಳ್ಳುಳ್ಳಿ ಮೊಗ್ಗು ಒತ್ತಿ. ಅದರ ರಸವನ್ನು ಹೀರಿಕೊಳ್ಳಲು ಬಿಡಿ. ಸುಮಾರು 10 ರಿಂದ 15 ನಿಮಿಷಗಳ ಕಾಲ ಇದನ್ನು ಮಾಡಿ.

ಹಲ್ಲುನೋವು ನಿವಾರಿಸಲು, ಸ್ವಲ್ಪ ಉಪ್ಪು ಮತ್ತು ಸ್ವಲ್ಪ ಕರಿ‌ಮೆಣಸು ಪುಡಿಯನ್ನು ಮಿಶ್ರಣ ಮಾಡಿ. ಈಗ ಈ ಮಿಶ್ರಣಕ್ಕೆ ಸ್ವಲ್ಪ ಪ್ರಮಾಣದ ನೀರು ಸೇರಿಸಿ ನಂತರ ಚೆನ್ನಾಗಿ ಮಿಶ್ರಣ ಮಾಡಿ ಹಲ್ಲುಗಳ ಮೇಲೆ ಹಚ್ಚಿ. ಇದನ್ನು ಮಾಡುವುದರ ಮೂಲಕ ನೀವು ವ್ಯತ್ಯಾಸವನ್ನು ಕಾಣುವಿರಿ.

ಸೂಚನೆ : ಇಲ್ಲಿರುವ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ನೀಡಲಾಗಿದೆ. ಇದು ವೈದ್ಯರ ಸಲಹೆಗೆ ಪರ್ಯಾಯವಲ್ಲ. ಆದ್ದರಿಂದ ವೈದ್ಯಕೀಯ ಸಲಹೆಯನ್ನು ನಿರ್ಲಕ್ಷಿಸಬೇಡಿ.

ಆರೋಗ್ಯ ಸಂಬಂಧಿತ ಹೆಚ್ಚಿನ ಮಾಹಿತಿಗಾಗಿ ಗೂಗಲ್ ನಲ್ಲಿ saakshatv healthtips ಎಂದು ಸರ್ಚ್ ಮಾಡಿ.

Our Website : https://saakshatv.com/

ಟೈಟಾನಿಕ್ ಎಂಬ ದೈತ್ಯ ಹಡಗಿನ ಭಯಾನಕವಾದ ಅಸಲಿ ಕಥೆ..!

December 29, 2020

 


ಹಾಯ್ ಫ್ರೆಂಡ್ಸ್, ಟೈಟಾನಿಕ್.. ಇಡೀ ವಿಶ್ವವೇ ಬಲ್ಲ ಒಂದು ಅದ್ಭುತ ಹಡಗು.. ಇದರ ಮೇಲೆ ಸಿನಿಮಾ ಕೂಡ ಬಂದಿದೆ. ಅದನ್ನು ಇಂಗ್ಲಿಷ್ ಬಾರದೇ ಇರೋರು ಕೂಡ ನೋಡಿದ್ದಾರೆ.. ಅಷ್ಟು ಫೇಮಸ್ ಆಗಿತ್ತು ಟೈಟಾನಿಕ್ ಫಿಲಂ.. ಅದು ಹಿಟ್ ಆಗೋಕೆ ಕಾರಣ ಅದರ ಹಿಂದಿನ ಈ ಹಡಗು.. 3 ಫುಟ್‍ಬಾಲ್ ಮೈದಾನದಷ್ಟು ಅಗಲ, 17 ಅಂತಸ್ತಿನ ಕಟ್ಟಡದಷ್ಟು ಎತ್ತರ ಮತ್ತು 3,500 ಮಂದಿ ಪ್ರಯಾಣಿಕರನ್ನು ಒಮ್ಮೆಗೇ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದ ಹಡಗು.. ಟೈಟಾನಿಕ್ ಸ್ಟೋರಿ ಶುರುವಾಗೋದು 1909ರ ಮಾರ್ಚ್ 31ರಿಂದ.. ಉತ್ತರ ಐರ್ಲೆಂಡ್‍ನ ಬೆಲ್‍ಫಾಸ್ಟ್​​​​​​ ವೈಟ್ ಸ್ಟಾರ್‍ಲೈನ್ ಎಂಬ ಕಂಪನಿ ಜಗತ್ತಿನ ದೊಡ್ಡ ಹಡಗನ್ನು ನಿರ್ಮಿಸಲು ಶುರು ಮಾಡಿತು. ಅದರಂತೆ 3 ಸಾವಿರ ಜನ ಹಗಲು ರಾತ್ರಿ ಶ್ರಮವಹಿಸಿ, 2 ವರ್ಷಗಳಲ್ಲಿ ನಿರ್ಮಿಸಿದ್ರು.

ಟೈಟಾನಿಕ್ ನಿರ್ಮಾಣವಾದಾಗ ಇದನ್ನು ನೋಡ್ಕೊಂಡು ಹೋಗೋಕೆ ಅಂತಾನೇ 1 ಲಕ್ಷ ಜನ ಆಗಮಿಸಿದ್ರು. ಯಾಕಂದ್ರೆ ಇದನ್ನು ಕಂಡ ಜನ ತುಂಬಾ ಆಶ್ಚರ್ಯಗೊಂಡಿದ್ರು. ಇಷ್ಟು ದೊಡ್ಡ ಹಡಗು ನಿರ್ಮಿಸಲು ಸಾಧ್ಯವಿದೆ ಅನ್ನೋದನ್ನ ಯಾರೂ ಕಲ್ಪನೆ ಕೂಡ ಮಾಡಿರಲಿಲ್ಲ. ಈ ಹಡಗು 882 ಅಡಿ 9 ಇಂಚು ಉದ್ದ ಮತ್ತು 175 ಅಡಿ ಅಗಲವಿತ್ತು. ಈ ಹಡಗು ನಿರ್ಮಾಣಕ್ಕೆ 7.5 ಮಿಲಿಯನ್ ಡಾಲರ್ ಅಂದ್ರೆ 52.5 ಕೋಟಿ ರೂಪಾಯಿ ಖರ್ಚಾಗಿತ್ತು.

1912ರ ಏಪ್ರಿಲ್ 2ರಂದು ಟೈಟಾನಿಕ್ ಸಂಪೂರ್ಣವಾಗಿ ಸಿದ್ಧವಾಯ್ತು. ಮೊದಲಿಗೆ ಯಶಸ್ವಿಯಾಗಿ ಟ್ರಯಲ್ ಮುಗಿಸಿದ ಬಳಿಕ 1,912ರ ಏಪ್ರಿಲ್ 10ರಲ್ಲಿ ಇಂಗ್ಲೆಂಡ್‍ನ ಸೌತಾಂಪ್ಟನ್‍ನಿಂದ ನ್ಯೂಯಾರ್ಕ್ ಸಿಟಿಗೆ ಹೊರಟಿತು. ಈ ದೂರ ಸುಮಾರು 5,800 ಕಿಲೋಮೀಟರ್ ಆಗಿತ್ತು. ಟೈಟಾನಿಕ್ ತನ್ನ ಮೊದಲ ಯಾತ್ರೆಯಲ್ಲಿದ್ದಾಗ ಇದ್ರಲ್ಲಿ ಸುಮಾರು 2,224 ಪ್ರಯಾಣಿಕರು ಮತ್ತು ಸಿಬ್ಬಂದಿ ಪ್ರಯಾಣಿಸುತ್ತಿದ್ರು. ಇವರೆಲ್ಲರೂ ಈ ಹಡಗಿನಲ್ಲೇ ಪ್ರಯಾಣಿಸಲು ಬಂದವರಾಗಿರಲಿಲ್ಲ. ಬದಲಾಗಿ ಇವರಲ್ಲಿ ಅದೆಷ್ಟೋ ಜನ ಬೇರೆ ಹಡಗುಗಳಲ್ಲಿ ಪ್ರಯಾಣಿಸಲು ಬಂದಿದ್ರು. ವೈಟ್ ಸ್ಟಾರ್ ಲೈನ್‍ನ ಉಳಿದೆರಡು ಹಡಗುಗಳಲ್ಲಿ ತೊಂದರೆ ಕಾಣಿಸಿಕೊಂಡಿದ್ದರಿಂದ ಮತ್ತು ಟೈಟಾನಿಕ್ ಹಡಗಿನಲ್ಲಿ ಜಾಗ ಇದ್ದಿದ್ದರಿಂದ ಟೈಟಾನಿಕ್‍ನಲ್ಲಿ ಕೂರಿಸಿ ಕಳುಹಿಸಲಾಯ್ತು. ಟೈಟಾನಿಕ್ ಪ್ರಯಾಣ ಮೊದಲ 4 ದಿನ ಎಲ್ಲವೂ ಸರಿಯಾಗೇ ಇತ್ತು. ಆದ್ರೆ ಏಪ್ರಿಲ್ 14ರಂದು ರಾತ್ರಿ 11.40ರ ವೇಳೆಗೆ ಎಲ್ಲವೂ ಬದಲಾಗಿ ಹೋಯ್ತು. ನಾರ್ಥ್ ಅಟ್ಲಾಂಟಿಕ್ ಸಾಗರದಲ್ಲಿ ಹಿಮಗಡ್ಡೆ ತಾಗಿದ್ದರಿಂದ ಹಡಗಿನ ತಳಭಾಗದಲ್ಲಿ ಸಣ್ಣ ರಂಧ್ರವಾಯ್ತು. ಮತ್ತು ಹಡಗು ನಿಧಾನವಾಗಿ ಮುಳುಗೋಕೆ ಶುರುವಾಯ್ತು. ಇದ್ರ ಬೆನ್ನಲ್ಲೇ ಹಡಗಿನಲ್ಲಿ ಕೋಲಾಹಲ ಉಂಟಾಯ್ತು.

ಜನರನ್ನು ಉಳಿಸೋಕೆ ಲೈವ್ ಬೋಟ್‍ಗಳನ್ನು ಬಳಸೋಕೆ ಶುರು ಮಾಡಲಾಯ್ತು. ಟೈಟಾನಿಕ್‍ನಲ್ಲಿ ಕೇವಲ 20 ಬೋಟ್‍ಗಳು ಮಾತ್ರ ಇದ್ದಿದ್ದರಿಂದ ಕೇವಲ 700 ಜನರನ್ನು ಮಾತ್ರವೇ ಉಳಿಸೋಕೆ ಸಾಧ್ಯವಾಯ್ತು. ಉಳಿದ 1500ಕ್ಕೂ ಹೆಚ್ಚು ಜನ ಸಮುದ್ರದಾಳದಲ್ಲಿ ಮುಳುಗಿ ಸಮಾಧಿಯಾದ್ರು. ಇನ್ನು ಕೆಲವರು ಈಜುವ ಮೂಲಕ ಜೀವ ಉಳಿಸಿಕೊಳ್ಳಲು ಯತ್ನಿಸಿದರಾದ್ರೂ, ನೀರಿನ ತಾಪಮಾನ ಮೈನಸ್ 2 ಡಿಗ್ರಿ ಸೆಲ್ಶಿಯಸ್ ಇದ್ದಿದ್ದರಿಂದ ಅವರೂ ಕೂಡ ಉಳಿಯಲಿಲ್ಲ. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಕೂಡ ಟೈಟಾನಿಕ್ ಸಿಬ್ಬಂದಿ ತಮ್ಮ ಸಾಹಸ ಪ್ರವೃತ್ತಿ ಬಿಡಲಿಲ್ಲ. ಹಡಗಿನಲ್ಲಿದ್ದ ಜನರನ್ನು ಅಂತಿಮವಾಗಿ ಸಂತೋಷಪಡಿಸೋಣ ಅಂತ ಹಾಡೋಕೆ ಶುರು ಮಾಡಿದ್ರು. ಹಿಮಗಡ್ಡೆಗೆ ತಾಗಿದ 2 ಗಂಟೆ 40 ನಿಮಿಷಗಳ ಬಳಿಕ ಟೈಟಾನಿಕ್ ಸಂಪೂರ್ಣವಾಗಿ ಮುಳುಗಿತು. ನಂತರ ಸಮುದ್ರದಾಳಕ್ಕೆ ಸೇರಲು ಇದು ತೆಗೆದುಕೊಂಡಿದ್ದು ಕೇವಲ 15 ನಿಮಿಷ ಮಾತ್ರ.. ಈ ರೀತಿ ಮನುಷ್ಯ ನಿರ್ಮಿತ ಅತಿದೊಡ್ಡ ಹಡಗು ಪ್ರಕೃತಿಯ ಆಟದ ಮುಂದೆ ಸೋತು ಇಬ್ಭಾಗವಾಗಿತ್ತು. ಇದ್ರೊಂದಿಗೆ ನ್ಯೂಯಾರ್ಕ್ ತೀರದಲ್ಲಿ ನಿಂತು ಹಡಗಿನಲ್ಲಿದ್ದವರಿಗೆ ಕಾಯುತ್ತಿದ್ದವ ಕಾಯುವಿಕೆ ಕೂಡ ನಿರಂತರವಾಗಿ ಹೋಯ್ತು.

1912ರಲ್ಲಿ ಮುಳುಗಿದ್ರೂ ಕೂಡ ಇದರ ಅವಶೇಷಗಳನ್ನು ಪತ್ತೆಹಚ್ಚಲು 73 ವರ್ಷಗಳೇ ಬೇಕಾಯ್ತು. 1985ರಲ್ಲಿ ಟೈಟಾನಿಕ್ ಅವಶೇಷಗಳನ್ನು ಪತ್ತೆಹಚ್ಚಲಾಯ್ತು. ಇದು ಎರಡು ಭಾಗವಾಗಿತ್ತಲ್ವಾ.. ಈ ಎರಡು ಭಾಗಗಳ ನಡುವಿನ ಅಂತರ 600 ಮೀಟರ್​​​ನಷ್ಟಿತ್ತು. ಟೈಟಾನಿಕ್ ಹಡಗಿನ ಬಗ್ಗೆ ಹಲವು ಡಾಕ್ಯುಮೆಂಟರಿ, ಸಿನಿಮಾಗಳು ಬಂದಿವೆ. ಅವುಗಳ ಪೈಕಿ 1997ರ ನವೆಂಬರ್ 18ರಂದು ರಿಲೀಸ್ ಮಾಡಲಾದ ಸಿನಿಮಾ ಸೂಪರ್ ಹಿಟ್ ಆಗಿತ್ತು. ಟೈಟಾನಿಕ್ ಹಡಗು ನಿರ್ಮಾಣಕ್ಕೆ ಖರ್ಚಾದ ಹಣಕ್ಕಿಂತಲೂ ಶೇ.40ರಷ್ಟು ಹೆಚ್ಚು ಹಣ ಖರ್ಚು ಮಾಡಿ ಈ ಸಿನಿಮಾ ಮಾಡಲಾಗಿತ್ತು. ಹಡಗು ಮುಳುಗುವಾಗ 2 ವರ್ಷದ ಒಂದು ಮಗುವನ್ನು ಉಳಿಸಲಾಗಿತ್ತು. ಆಕೆಯ ಹೆಸರೇ ಮಿಲ್ವಿನಾ ಡೀನ್.. ಇವರು 2009ರಂದು ಸಾವನ್ನಪ್ಪಿದ್ರು. ಟೈಟಾನಿಕ್ ದುರಂತದಲ್ಲಿ ಬದುಕುಳಿದವರಲ್ಲಿ ಮಿಲ್ವಿನಾ ಡೀನ್ ಅವರೇ ಕೊನೆಯವರಾಗಿದ್ದರು.

ಬಹುದಿನಗಳ ಬಳಿಕ ಮತ್ತೆ ಸೀಲ್ ಡೌನ್ - ಕ್ವಾರಂಟೈನ್ ಶುರು.!

December 29, 2020

 


ಮಾರಣಾಂತಿಕ ಕೊರೊನಾ ಭಾರತಕ್ಕೆ ಕಾಲಿಟ್ಟ ಸಂದರ್ಭದಲ್ಲಿ ದೇಶದಾದ್ಯಂತ ಜಾರಿಗೊಳಿಸಿದ್ದು, ಜೊತೆಗೆ ಕೊರೊನೊ ಸೋಂಕಿತರು ಪತ್ತೆಯಾದ ಸ್ಥಳಗಳನ್ನು ಸೀಲ್ ಡೌನ್ ಮಾಡಲಾಗುತ್ತಿತ್ತು. ಜೊತೆಗೆ ಶಂಕಿತ ಸೋಂಕಿತರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗುತ್ತಿತ್ತು.

ಆದರೆ ಆ ಬಳಿಕ ಲಾಕ್ ಡೌನ್ ಹಂತಹಂತವಾಗಿ ಸಡಿಲಿಕೆಯಾಗಿದ್ದು, ಇದರ ಜೊತೆಗೆ ಸೀಲ್ ಡೌನ್, ಕ್ವಾರಂಟೈನ್ ನಿಯಮಗಳನ್ನು ಸಹ ಸಡಿಲಿಕೆ ಮಾಡಲಾಗಿತ್ತು. ಹೀಗಾಗಿ ಸಾರ್ವಜನಿಕರು ಈ ಪದಗಳ ಬಳಕೆಯನ್ನೇ ಮರೆತುಬಿಟ್ಟಿದ್ದರು.

ಇದೀಗ ರಾಜ್ಯಕ್ಕೆ ಕೊರೊನಾ ರೂಪಾಂತರ ಬ್ರಿಟನ್ ವೈರಸ್ ಕಾಲಿಟ್ಟಿದ್ದು, ಇದು ಹಿಂದಿನ ವೈರಸ್ ಗಿಂತ ಶೇಕಡ 70ರಷ್ಟು ವೇಗದಲ್ಲಿ ಹರಡುತ್ತದೆ ಎನ್ನಲಾಗಿದೆ. ಹೀಗಾಗಿ ಮತ್ತೆ ಸೀಲ್ ಡೌನ್, ಕ್ವಾರಂಟೈನ್ ಪದಗಳು ಚಾಲ್ತಿಗೆ ಬಂದಿವೆ.

ಬೆಂಗಳೂರಿನ ವಸಂತಪುರ ವಾರ್ಡ್ನ ವಿಠ್ಠಲ ನಗರದಲ್ಲಿನ ಅಪಾರ್ಟ್ಮೆಂಟ್ ನಿವಾಸಿ ಮಹಿಳೆ ಮತ್ತು ಅವರ ಮಗುವಿಗೆ ಬ್ರಿಟನ್ ವೈರಸ್ ತಗುಲಿದೆ ಎನ್ನಲಾಗಿದ್ದು, ಹೀಗಾಗಿ ಅವರಿದ್ದ ಅಪಾರ್ಟ್ಮೆಂಟ್ ಸೀಲ್ ಡೌನ್ ಮಾಡಲಾಗಿದೆ.

ಬ್ರಿಟನ್ ನಿಂದ ತಾಯಿ - ಮಗು ಬೆಂಗಳೂರಿಗೆ ಬಂದಿದ್ದು, ಇವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಕ್ವಾರಂಟೈನ್ ಮಾಡಲಾಗಿದೆ.

ರಾಜ್ಯದ ರೈತರೇ ಗಮನಿಸಿ : 'ಹಿಂಗಾರು ಬೆಳೆ ವಿವರ' ದಾಖಲೆಗೆ ಡಿ.31 ಕೊನೆಯ ದಿನ

December 29, 2020

 


ಬಾಗಲಕೋಟೆ : ಜಿಲ್ಲೆಯಲ್ಲಿ 2020-21 ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿ ಇದ್ದು, 'ಹಿಂಗಾರು ರೈತರ ಬೆಳೆ ಸಮೀಕ್ಷೆ 2020-21' ಆಯಪ್ ಮೂಲಕ ಬೆಳೆ ವಿವರ ದಾಖಲಿಸಲು ಡಿಸೆಂಬರ 31 ಕೊನೆಯದಿನವಾಗಿದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ತಿಳಿಸಿದ್ದಾರೆ.

ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ, ಸರ್ವೇ ನಂಬರ್, ಹಿಸ್ಸಾ, ಮಾಲಿಕರ ಹೆಸರು ಆಯ್ಕೆ ಮಾಡಿ ಕ್ಷೇತ್ರವನ್ನು ನಮೂದಿಸಿ ಸರ್ವೇ ನಂಬರ್‍ಗಳಡಿ ರೇಖೆಯೊಳಗೆ ನಿಂತು ವಿವರವನ್ನು ದಾಖಲಿಸಿ ಫೋಟೋ ತೆಗೆದು ಮಾಹಿತಿಯನ್ನು ಅಪ್‍ಲೋಡ್ ಮಾಡಬೇಕು. ಬೆಳೆ ಸಮೀಕ್ಷೆಯ ದತ್ತಾಂಶವನ್ನು ಬೆಳೆ ವಿಮಾ ಯೋಜನೆ, ಕನಿಷ್ಠ ಬೆಂಬಲ ಬೆಲೆ ಯೋಜನೆ, ಪ್ರಕೃತಿ ವಿಕೋಪ ಸಂಭವಿಸಿದಾಗ ಪರಿಹಾರ ವಿತರಿಸಲು ಹಾಗೂ ಆರ್.ಟಿ.ಸಿ.ಯಲ್ಲಿ ಬೆಳೆ ವಿವರ ದಾಖಲಾತಿಗಾಗಿ ಬಳಸ ಬಹುದಾಗಿದೆ.

ಆದ್ದರಿಂದ ಜಿಲ್ಲೆಯ ರೈತ ಬಾಂಧವರು ತಪ್ಪದೇ ತಮ್ಮ ಜಮೀನಲ್ಲಿರುವ ಬೆಳೆಗಳ ವಿವರವನ್ನು ದಾಖಲಿಸಲು ಸರಕಾರದಿಂದ ಸುವರ್ಣಾವಕಾಶವನ್ನು ಕಲ್ಪಿಸಿದ್ದು, ಜಿಲ್ಲೆಯ ರೈತ ಬಾಂಧವರು ತಪ್ಪದೇ ತಮ್ಮ ಜಮೀನಲ್ಲಿರುವ ಬೆಳೆಗಳ ವಿವರವನ್ನು ನಿಗಧಿತ ದಿನಾಂಕದೊಳಗೆ ದಾಖಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು, ಸಹಾಯಕ ತೋಟಗಾರಿಕೆ ಅಧಿಕಾರಿಗಳು ಮತ್ತು ರೇಷ್ಮೆ ಅಧಿಕಾರಿಗಳನ್ನು ಸಂಪರ್ಕಿಸ ಬಹುದಾಗಿದೆ.

'ಹೊಸ ಕೊರೋನಾ ರೂಪಾಂತರ ವೈರಸ್'ಗೆ ಹತ್ತಾರು ಲಕ್ಷಣಗಳು : ಈ ಲಕ್ಷಣಗಳಿದ್ರೆ 'ಹೊಸ ವೈರಸ್' ಸೋಂಕು ಪಕ್ಕಾ.?!

December 29, 2020

 


ಬೆಂಗಳೂರು : ರಾಜ್ಯದಲ್ಲೀಗ ಕೊರೋನಾ ರೂಪಾಂತರ ವೈರಸ್ ಭೀತಿ ಶುರುವಾಗಿದೆ. ರಾಜ್ಯಕ್ಕೆ ಯುಕೆಯಿಂದ ಬಂದಂತ ಮೂವರಿಗೆ ಕೊರೋನಾ ರೂಪಾಂತರ ವೈರಸ್ ಸೋಂಕು ದೃಢಪಡುವ ಮೂಲಕ ಮತ್ತೆಷ್ಟು ಆತಂಕವನ್ನು ಹೆಚ್ಚಿಸಿದೆ. ಇದರ ಮಧ್ಯೆ ಹೊಸ ವೈರಸ್ ಗೆ ಹತ್ತಾರು ಲಕ್ಷಣಗಳಿವೆ. ಆ ಲಕ್ಷಣಗಳಿದ್ರೆ ಹೊಸ ವೈರಸ್ ಪಕ್ಕಾ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ರಾಜ್ಯಕ್ಕೆ ಕಾಲಿಟ್ಟಿರುವಂತ ಬ್ರಿಟನ್ ವೈರಸ್ ಲಕ್ಷಣಗಳು ಹೀಗೆ ಎಂದು ಹೇಳೋದಕ್ಕೆ ಕಷ್ಟ ಎನ್ನಲಾಗುತ್ತಿದೆ. ಹೊಸ ವೈರಸ್ ಗೆ ಹತ್ತಾರು ಲಕ್ಷಣಗಳಿವೆ ಎನ್ನಲಾಗುತ್ತಿದೆ. ಅಂತಹ ಲಕ್ಷಣಗಳಲ್ಲಿ ಬ್ರಿಟನ್ ವೈರಸ್ ಅಟ್ಯಾಕ್ ಆದ್ರೇ ಹಸಿವಾಗಲ್ಲ ಎಂದು ಹೇಳಲಾಗುತ್ತಿದೆ. ಸಿಕ್ಕಾಪಟ್ಟೆ ಜ್ವರ ಬರುತ್ತಂತೆ. ಜ್ವರ ಹೆಚ್ಚಾಗಿ ಮೈ ಮೇಲೆ ಗುಳ್ಳೆ ಏಳುತ್ತೆವೆ ಎನ್ನಲಾಗಿದೆ.

ಇನ್ನೂ ಮುಂದುವರೆದು ವಾಸನೆ ಗೊತ್ತಾಗಲ್ಲ, ರುಚಿ ಸಿಗೋದೇ ಇಲ್ಲ ಅಂತೆ. ಒಣ ಕಫ ಆದ್ರೆ ಅದು ಹೊಸ ಕೊರೋನಾ ರೂಪಾಂತರ ವೈರಲ್ ಲಕ್ಷಣ ಎನ್ನಲಾಗಿದೆ. ತಲೆ ನೋವು, ಸ್ನಾಯು ನೋವು ಕಾಣಿಸಿಕೊಳ್ಳುತ್ತೆಂತೆ. ಈ ಮೊದಲಾದಂತ ಹತ್ತಾರು ಲಕ್ಷಣಗಳು ಹೊಸ ಕೊರೋನಾ ರೂಪಾಂತರ ವೈರಸ್ ಲಕ್ಷಣಗಳು ಎನ್ನಲಾಗುತ್ತಿದೆ. ಹೀಗಾಗಿ ಜನರು ಎಚ್ಚರಿಕೆ ವಹಿಸುವಂತ ತುರ್ತು ಅಗತ್ಯ ಇದೀಗ ನಿಮ್ಮ ಮುಂದೆಯಿದೆ.

ಚೆಕ್‌ ಬಳಸುವ SBI ಗ್ರಾಹಕರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

December 29, 2020

 


ದೇಶದ ಪ್ರಮುಖ ಬ್ಯಾಂಕ್​ಗಳಲ್ಲೊಂದಾದ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ತನ್ನ ಚೆಕ್​ಗಳಿಗೆ ಸಕಾರಾತ್ಮಕ ವೇತನ ವ್ಯವಸ್ಥೆ ರೂಪಿಸಲು ಸಜ್ಜಾಗಿದೆ. ಹೊಸ ನಿಯಮದ ಪ್ರಕಾರ 50 ಸಾವಿರ ರೂಪಾಯಿಗಿಂತಲೂ ಹೆಚ್ಚಿನ ಪಾವತಿಗೆ ಪ್ರಮುಖ ವಿವರಗಳನ್ನ ಬ್ಯಾಂಕ್​​ಗೆ ನೀಡುವ ಅಗತ್ಯ ಬೀಳಬಹುದು. ಈ ಹೊಸ ಚೆಕ್​ ಪಾವತಿ ನಿಯಮವು ಜನವರಿ 1ರಿಂದ ಜಾರಿಗೆ ಬರಲಿದೆ.

ಆರ್​ಬಿಐ ಮಾರ್ಗಸೂಚಿಗಳ ಪ್ರಕಾರ ಚೆಕ್​ ನೀಡುವವರಿಂದ ಹೆಚ್ಚಿನ ವಿವರಗಳನ್ನ ಪಡೆಯುವ ಮೂಲಕ ವ್ಯವಹಾರ ಸುರಕ್ಷತೆಯನ್ನ ಇನ್ನಷ್ಟು ಹೆಚ್ಚಿಸಲಿದ್ದೇವೆ. ಖಾತೆ ಸಂಖ್ಯೆ, ಚೆಕ್​ ಸಂಖ್ಯೆ, ಚೆಕ್​ ಮೊತ್ತ , ಚೆಕ್​​​ ಪಾವತಿಗೆ ಸಂಬಂಧಿಸಿದ ವಿವರಗಳನ್ನ ವೆಬ್​ಸೈಟ್​ನಲ್ಲಿ ಉಲ್ಲೇಖಿಸಲಾಗಿದೆ. ಇನ್ನಷ್ಟು ಮಾಹಿತಿ ಬೇಕಿದ್ದಲ್ಲಿ ನೀವು ಹತ್ತಿರದ ಶಾಖೆಯನ್ನ ಭೇಟಿ ಮಾಡಬಹುದಾಗಿದೆ.

ಕೆಲ ತಿಂಗಳ ಹಿಂದೆಯಷ್ಟೇ ರಿಸರ್ವ್ ಬ್ಯಾಂಕ್​​ ಪಾಸಿಟಿವ್​ ಪೇ ವ್ಯವಸ್ಥೆಯನ್ನ ಪರಿಚಯಿಸಿತ್ತು.

ಗ್ರಾಹಕರ ಸುರಕ್ಷೆ ಹಾಗೂ ಮೋಸದ ಜಾಲದಿಂದ ತಪ್ಪಿಸಿಕೊಳ್ಳಲು ಈ ವ್ಯವಸ್ಥೆ ಬ್ಯಾಂಕ್​​ಗಳಲ್ಲಿ ಜಾರಿಗೆ ಬರಲಿದೆ ಎಂದು ಆರ್​​ಬಿಐ ಗವರ್ನರ್​​ ಶಕ್ತಿಕಾಂತ್​ ದಾಸ್​ ಹೇಳಿದ್ದರು.

ಪಾಸಿಟಿವ್​ ಪೇ ಎಂದರೇನು..?
ಭಾರೀ ಮೊತ್ತದ ಚೆಕ್​ಗಳನ್ನ ನೀಡುವ ಗ್ರಾಹಕರ ದಾಖಲೆಯನ್ನ ಮತ್ತೊಮ್ಮೆ ಪರಿಶೀಲನೆ ಮಾಡುವ ವ್ಯವಸ್ಥೆಯೇ ಪಾಸಿಟಿವ್​ ಪೇ. ಈ ವ್ಯವಸ್ಥೆಯಡಿಯಲ್ಲಿ ಚೆಕ್​ ನೀಡುವವರು ಬ್ಯಾಂಕ್​ಗೆ ದಿನಾಂಕ, ಚೆಕ್​ ಪಾವತಿದಾರರ ವಿವರ, ಸ್ವೀಕರಿಸುವವರ ವಿವರ, ಮೊತ್ತ ಇತ್ಯಾದಿಗಳ ಬಗ್ಗೆ ಕೆಲ ದಾಖಲೆಗಳನ್ನ ಸಲ್ಲಿಸಬೇಕಾಗುತ್ತೆ.


ಮಂಡಿನೋವು ತಕ್ಷಣ ಕಡಿಮೆಯಾಗಬೇಕೆ.? ಎಕ್ಕೆ ಗಿಡದ ಎಲೆಗಳಿಂದ ಹೀಗೆ ಮಾಡಿ

December 29, 2020

 


ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಮಂಡಿನೋವು ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದರಿಂದ ನಡೆಯಲು ಓಡಾಡಲು ಕಷ್ಟವಾಗುತ್ತದೆ. ಅಂತವರು ಈ ಮನೆಮದ್ದನ್ನು ಬಳಸಿದರೆ ತಕ್ಷಣ ನೋವು ಕಡಿಮೆಯಾಗುತ್ತದೆ.


ಅಲೊವೆರಾ ಲೋಳೆ, 1 ಚಮಚ ಅರಶಿನ, ಎಳ್ಳೆಣ್ಣೆ 1 ಚಮಚ ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ. ಬಳಿಕ ಎಕ್ಕೆ ಗಿಡದ ಎಲೆಗಳನ್ನು ತೆಗೆದುಕೊಂಡು ಬಂದು ಅದನ್ನು ತವಾ ಮೇಲೆ ಎಳ್ಳೆಣ್ಣೆ ಹಾಕಿ ಬಿಸಿ ಮಾಡಿಕೊಳ್ಳಬೇಕು. ಬಳಿಕ ಮೊದಲೇ ತಯಾರಿಸಿದ ಮಂಡಿಗಳಿಗೆ ಹಚ್ಚಿ ಬಿಸಿಯಾದ ಎಕ್ಕೆ ಎಲೆಗಳನ್ನು ಅದರ ಮೇಲಿಟ್ಟು ದಾರದಿಂದ ಕಟ್ಟಬೇಕು. ಬಳಿಕ ಬಟ್ಟೆ ಸುತ್ತಬೇಕು. ಹೀಗೆ ಪ್ರತಿದಿನ ಮಾಡಿದರೆ ಮಂಡಿನೋವು ಕಡಿಮೆಯಾಗುತ್ತದೆ.


10 ವರ್ಷದ ಹಿಂದೆ ಶಾಲಾ ವಿದ್ಯಾರ್ಥಿ ನುಡಿದಿದ್ದ 2020ರ ಭವಿಷ್ಯ ಈಗ ಫುಲ್ ವೈರಲ್!

December 29, 2020

 


ನವದೆಹಲಿ(ಡಿ.29): 2020ರಲ್ಲಿ ಪರಿಸ್ಥಿತಿ ಹೇಗಿರಲಿದೆ ಎಂದು ಬಹುಶಃ ಯಾರೂ ಈ ಹಿಂದೆ ಊಹಿಸಿರಲಿಕ್ಕಿಲ್ಲ. ಈ ವರ್ಷದ ಆರಂಭ ಪ್ರಿನ್ಸ್ ಹ್ಯಾರಿ ಹಾಗೂ ಮೇಘನ್ ರಾಜವಂಶದಿಂದ ಬೇರ್ಪಡುವ ಸುದ್ದಿಯಿಂದ ಆರಂಭವಾಗಿತ್ತು. ಇದಾಧ ಬಳಿಕ ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚಿನ ಅಬ್ಬರ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು. ಇದಾದ ಬಳಿಕ ಬಂದೆರಗಿತ್ತು ಮಹಾಮಾರಿ ಕೊರೋನಾ. 2020ನೇ ವರ್ಷ ಜಗತ್ತಿನಲ್ಲಿ ಜನರ ಬದುಕನ್ನು ಸಂಪೂರ್ಣವಾಗಿ ಬದಲಾಯಿಸಿದ ವರ್ಷವೆಂದೇ ಹೇಳಬಹುದು. ಸದ್ಯ ಶಾಲಾ ವಿದ್ಯಾರ್ಥಿಯೊಬ್ಬ 10 ವರ್ಷದ ಹಿಂದೆ 2020ರ ಕುರಿತಾಗಿ ಬರೆದಿದ್ದ ಭವಿಷ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಆತ ಬರೆದಿದ್ದೇನು? ನೀವೇ ನೋಡಿ

ಸದ್ಯ ಟ್ವಿಟರ್‌ನಲ್ಲಿ ಕೇವಿನ್ ಸಿಂಗ್ ಫುಲ್ ಫೇಮಸ್ ಆಗಿದ್ದಾನೆ. ಆತ ಹತ್ತು ವರ್ಷದ ಹಿಂದೆ 2020 ರ ಬಗ್ಗೆ ಭವಿಷ್ಯ ನುಡಿದಿದ್ದ.

ಅದರಲ್ಲಿ ಆತ ಈ ವರ್ಷ ಪ್ರತಿಯೊಬ್ಬರು ಶಾಂತಿಯುತವಾಗಿ ಜೀವನ ಸಾಗಿಸಲಿದ್ದಾರೆ ಹಾಗೂ ಮಾನವೀಯತೆ 2020 ರಲ್ಲಿ ಪ್ರತಿಯೊಂದು ರೋಗಕ್ಕೂ ಚಿಕಿತ್ಸೆಯಾಗಲಿದೆ ಎಂದಿದ್ದರು. ಆದರೆ ಹೀಗಾಗಲೇ ಇಲ್ಲ.

ಕೆವಿನ್ ಸಿಂಗ್ ತಮ್ಮ ಶಾಲಾ ವಾರ್ಷಿಕ ಪುಸ್ತಕದಲ್ಲಿ ಈ ಭವಿಷ್ಯ ನುಡಿದಿದ್ದರು. ಸದ್ಯ ಈ ಪುಸ್ತಕದ ಆ ಪುಟದ ಫೋಟೋ ಎಲ್ಲರೂ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಅನೇಕ ಮಂದಿ ಆ ಬಾಲಕನ ಮುಗ್ಧತೆಗೆ ತಲೆದೂಗಿದರೆ, ಇನ್ನು ಕೆಲವರು ತಮಾಷೆ ಮಾಡಿದ್ದಾರೆ. ಅದೇನಿದ್ದರೂ ಆ ಬಾಲಕ ನುಡಿದಿದ್ದ ಭವಿಷ್ಯ ನಿಜವಾಗಿರುತ್ತಿದ್ದರೆ, ಅದೆಷ್ಟು ಚೆನ್ನಾಗಿರುತ್ತಿತ್ತಲ್ಲಾ...!

1ನೇ ಜನವರಿ 2021 ರಿಂದ ವಾಟ್ಸಾಪ್ ಈ ಫೋನ್‌ಗಳಲ್ಲಿ ಕೆಲಸ ಮಾಡುವುದಿಲ್ಲ, ನಿಮ್ಮ ಫೋನ್ ಈ ಪಟ್ಟಿಯಲ್ಲಿದೆಯೇ?

December 28, 2020

 


ಅತಿ ಶೀಘ್ರದಲ್ಲೇ ಈ 2020 ವರ್ಷ ಕೊನೆಗೊಂಡು ಹೊಸ 2021 ಬರಲಿದೆ. ಈ ಹೊಸ ವರ್ಷವು ಕೆಲವು ಜನರಿಗೆ ಉತ್ತಮ ಮತ್ತು ಅದ್ಭುತವಾದದ್ದಾಗಿದ್ದರೂ ಕೆಲವು ವಾಟ್ಸಾಪ್ ಬಳಕೆದಾರರಿಗೆ ತುಂಬಾ ಬೇಸರವಾಗಲಿದೆ ಏಕೆಂದರೆ ಜನವರಿ 1 ರಿಂದ ವಾಟ್ಸಾಪ್ ಈ ಫೋನ್ಗಳಲ್ಲಿ ಕೆಲಸ ಮಾಡುವುದಿಲ್ಲ. ಆದ್ದರಿಂದ ಕೆಲವು ಆಂಡ್ರಾಯ್ಡ್ ಮತ್ತು ಐಒಎಸ್ ಫೋನ್ಗಳಲ್ಲಿ ವಾಟ್ಸಾಪ್ ಚಾಲನೆಯಲ್ಲಿ ನಿಲ್ಲುತ್ತದೆ. ನೀವು ಐಒಎಸ್ 9 ರ ಕಡಿಮೆ ಆವೃತ್ತಿಯನ್ನು ಹೊಂದಿದ್ದರೆ ಮತ್ತು ನೀವು ಆಂಡ್ರಾಯ್ಡ್ 4.0.3 ಆಪರೇಟಿಂಗ್ ಸಿಸ್ಟಂನಲ್ಲಿ ಕೆಲಸ ಮಾಡುತ್ತಿದ್ದರೆ ವಾಟ್ಸಾಪ್ ನಿಮ್ಮ ಫೋನ್ನಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ.

ಈ ಮಾದರಿಗಳಿಗೆ ಬೆಂಬಲವನ್ನು ಕೊನೆಗೊಳಿಸುವ ನಿರ್ಧಾರವು ನಿಮಗೆ ಸಮಸ್ಯೆಯಾಗಿರಬಾರದು ಏಕೆಂದರೆ ಹೆಚ್ಚಿನ ಐಫೋನ್ಗಳು ಮತ್ತು ಆಂಡ್ರಾಯ್ಡ್ ಫೋನ್ಗಳು ಹೊಸ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತವೆ.

ಆದಾಗ್ಯೂ ನೀವು ಇನ್ನೂ ಹಳೆಯ ಆಪರೇಟಿಂಗ್ ಸಿಸ್ಟಂನಲ್ಲಿ ಚಾಲನೆಯಲ್ಲಿರುವ ಸ್ಮಾರ್ಟ್ಫೋನ್ ಬಳಸುತ್ತಿದ್ದರೆ ಈ ಸೇವೆ ಅಡ್ಡಿಪಡಿಸುವ ಮೊದಲು ಬನಿಮ್ಮ ಹಳೆಯ ಮೊಬೈಲ್ ಫೋನನ್ನು ಅಪ್ಗ್ರೇಡ್ ಮಾಡಲು ವಾಟ್ಸಾಪ್ ಶಿಫಾರಸು ಮಾಡುತ್ತದೆ. ಅಂದ್ರೆ ಈ ವರ್ಷ ಮುಗಿಯುವ ಮುಂಚೆಯೇ ಹೊಸ ಫೋನನ್ನು ಬಳಸಿರಿ.


ಈ ಐಒಎಸ್ ಫೋನ್ಗಳಲ್ಲಿ ವಾಟ್ಸಾಪ್ ಬಂದ್

ಎಲ್ಲಾ ವೈಶಿಷ್ಟ್ಯಗಳ ಸೇವೆಗಳನ್ನು ಆನಂದಿಸಲು ನಿಮ್ಮ ಆಪರೇಟಿಂಗ್ ಸಿಸ್ಟಮ್ ಅನ್ನು ಇತ್ತೀಚಿನ ಆವೃತ್ತಿಗೆ ನವೀಕರಿಸಲು ವಾಟ್ಸಾಪ್ ಬೆಂಬಲ ಪುಟವು ನಿಮಗೆ ಸಲಹೆ ನೀಡುತ್ತಿದೆ. ಐಫೋನ್ಗಾಗಿ ವಾಟ್ಸಾಪ್ಗೆ ಐಒಎಸ್ 9 ಅಥವಾ ನಂತರದ ಅಗತ್ಯವಿದೆ ಎಂದು ವಾಟ್ಸಾಪ್ ಹೇಳಿದರೆ ಆಂಡ್ರಾಯ್ಡ್ಗಾಗಿ ವಾಟ್ಸಾಪ್ ಆಂಡ್ರಾಯ್ಡ್ 4.0.3 ಮತ್ತು ಹೊಸದನ್ನು ಚಾಲನೆ ಮಾಡುತ್ತಿದೆ. ಆದಾಗ್ಯೂ ಈ ಪಟ್ಟಿಯಲ್ಲಿ ಹೆಚ್ಚಿನ ಫೋನ್ಗಳಿಲ್ಲ ಆದರೆ ಆಗಲೂ ಸಹ ಹಲವಾರು ಫೋನ್ಗಳು ವಾಟ್ಸಾಪ್ ಹೊಸ ವರ್ಷದಿಂದ ಕೆಲಸ ಮಾಡುವುದನ್ನು ನಿಲ್ಲಿಸಲಿವೆ. ಐಫೋನ್ಗಳಿಗಾಗಿ ಐಫೋನ್ 4 ವರೆಗಿನ ಎಲ್ಲಾ ಐಫೋನ್ ಮಾದರಿಗಳು ವಾಟ್ಸಾಪ್ ಬೆಂಬಲವನ್ನು ಕಳೆದುಕೊಳ್ಳುತ್ತವೆ. ಇದರರ್ಥ iPhone 4S, iPhone 5, the iPhone 5S, the iPhone 6, and the iPhone 6S ಅನ್ನು ಬಳಸುವ ಜನರು ತಮ್ಮ ಆಪರೇಟಿಂಗ್ ಸಿಸ್ಟಮ್ ಅನ್ನು ಐಒಎಸ್ 9 ಅಥವಾ ನಂತರ ವಾಟ್ಸಾಪ್ ಬಳಕೆಯನ್ನು ಮುಂದುವರಿಸಲು ನವೀಕರಿಸಬೇಕಾಗುತ್ತದೆ.

ಈ ಆಂಡ್ರಾಯ್ಡ್ ಫೋನ್ಗಳಲ್ಲಿ ವಾಟ್ಸಾಪ್ ಬಂದ್


ನೀವು ಆಂಡ್ರಾಯ್ಡ್ ಸಾಧನಗಳ ಬಗ್ಗೆ ಮಾತನಾಡಿದರೆ ಇಲ್ಲಿಯೂ ಸಹ ಆಂಡ್ರಾಯ್ಡ್ 4.0.3 ಮತ್ತು ಅದಕ್ಕಿಂತಲೂ ಮುಂಚೆಯೇ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತೇವೆ. ಇಲ್ಲಿಯೂ ಸಹ ಹೆಚ್ಚಿನ ಆಂಡ್ರಾಯ್ಡ್ ಫೋನ್ಗಳು ಈ ವಿಭಾಗದಲ್ಲಿ ಬರುವುದಿಲ್ಲ ಎಂದು ನಾವು ನೋಡಿದ್ದೇವೆ ಆದರೆ ಶೀಘ್ರದಲ್ಲೇ ವಾಟ್ಸಾಪ್ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು. ಈ ಪಟ್ಟಿಯಲ್ಲಿ ಹೆಚ್ಟಿಸಿ ಡಿಸೈರ್, ಎಲ್ಜಿ ಆಪ್ಟಿಮಸ್ ಬ್ಲ್ಯಾಕ್, ಮೊಟೊರೊಲಾ ಡ್ರಾಯಿಡ್ ರೇಜರ್ ಮತ್ತು ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 2 ( HTC Desire, LG Optimus Black, Motorola Droid Razr ಮತ್ತು Samsung Galaxy S2) ಸೇರಿವೆ.

ನಿಮ್ಮ ಮೊಬೈಲ್ ಫೋನ್ ಯಾವ ಆಪರೇಟಿಂಗ್ ಸಿಸ್ಟಮ್ ಚಾಲನೆಯಲ್ಲಿದೆ ಎಂಬುದನ್ನು ನೀವು ಪರಿಶೀಲಿಸಬಹುದು. ನಿಮ್ಮ ಐಫೋನ್ ಯಾವ ಓಎಸ್ ಅನ್ನು ಸೆಟ್ಟಿಂಗ್ಗಳ ಮೆನುಗೆ ನಂತರ ಸಾಮಾನ್ಯ ಮತ್ತು ಮಾಹಿತಿ ಆಯ್ಕೆ ಸಾಫ್ಟ್ವೇರ್ಗೆ ಚಲಿಸುತ್ತದೆ ಎಂಬುದನ್ನು ಪರಿಶೀಲಿಸಲು ಮತ್ತು ನಿಮ್ಮ ಐಫೋನ್ ಚಾಲನೆಯಲ್ಲಿರುವ ಓಎಸ್ ಅನ್ನು ನೀವು ನೋಡಲು ಸಾಧ್ಯವಾಗುತ್ತದೆ. ಆಂಡ್ರಾಯ್ಡ್ ಬಳಕೆದಾರರು ತಮ್ಮ ಸ್ಮಾರ್ಟ್ಫೋನ್ ಯಾವ ಆಂಡ್ರಾಯ್ಡ್ ಆವೃತ್ತಿಯಲ್ಲಿ ಚಾಲನೆಯಲ್ಲಿದೆ ಎಂಬುದನ್ನು ನೋಡಲು ಸೆಟ್ಟಿಂಗ್ಗಳತ್ತ ಹೋಗಬಹುದು ನಂತರ ಫೋನ್ ಬಗ್ಗೆ ಹೆಚ್ಚಾಗಿ ನೋಡಬವುದು.SSLC ಪರೀಕ್ಷಾಭಿಮುಖವಾದ ಪಠ್ಯ ಬೋಧನೆಗೆ ಒತ್ತು: ಸುರೇಶ್ ಕುಮಾರ್

December 28, 2020

 


ಬೆಂಗಳೂರು: ಎಸ್‌ಎಸ್‌ಎಲ್ ಸಿ ಪರೀಕ್ಷಾಭಿಮುಖವಾದ ಪಠ್ಯ ಬೋಧನೆಗೆ ಒತ್ತು ನೀಡಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಎಸ್‌ಎಸ್‌ಎಲ್ ಸಿ ತರಗತಿಗೆ ಸಂಬಂಧಿಸಿದಂತೆ ಮುಂದಿನ ಪದವಿಪೂರ್ವ ಶಿಕ್ಷಣಕ್ಕೆ ಅವಶ್ಯಕವಾಗುವ ಕನಿಷ್ಟ ಜ್ಞಾನ ಹಾಗೂ ಪರೀಕ್ಷಾಭಿಮುಖವಾಗಿ ಅವಶ್ಯಕ‌ವಾಗುವ ಪಠ್ಯವನ್ನು ನಿರ್ಧರಿಸಿ ಬೋಧನೆಗೆ ನಿರ್ಣಯಿಸಲಾಗಿದೆ.ಬೋಧನೆಗೆ ಲಭ್ಯವಾಗುವ ಸಮಯದ ಆಧಾರದಲ್ಲಿ ರೂಪರೇಷೆಗಳನ್ನು ಮುಂದಿನ ಒಂದು ವಾರದ ಅವಧಿಯಲ್ಲಿ ಪ್ರಕಟಿಸಲಾಗುತ್ತದೆ‌ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಮುಖ್ಯಮಂತ್ರಿಗಳು ಈಗಾಗಲೇ‌ ಘೋಷಿಸಿರುವಂತೆ ಜನವರಿ ಒಂದಕ್ಕೆ ಶಾಲೆಗಳು ಆರಂಭವಾಗಲಿವೆ.ತಾಂತ್ರಿಕ‌ ಸಲಹಾ‌ ಸಮಿತಿಯ ಅಭಿಪ್ರಾಯ ಹಾಗೂ ಈ ನಿಟ್ಟಿನಲ್ಲಿ ಮಾನ್ಯ ಮುಖ್ಯಮಂತ್ರಿಗಳ ಸೂಚನೆ ಹಿನ್ನೆಲೆಯಲ್ಲಿ‌ ಶಾಲಾರಂಭಕ್ಕೆ‌ ಅಗತ್ಯ ಸಿದ್ಧತೆಗಳನ್ನ ಮಾಡಿಕೊಳ್ಳಲಾಗುತ್ತಿದೆ‌ ಎಂದು‌ ಅವರು ಹೇಳಿದ್ದಾರೆ.

ಜ.1ಕ್ಕೆ ಶಾಲಾರಂಭ
ಮುಖ್ಯಮಂತ್ರಿಗಳು ಈಗಾಗಲೇ ಘೋಷಿಸಿರುವಂತೆ ಜನವರಿ ಒಂದಕ್ಕೆ ಶಾಲೆಗಳು ಆರಂಭವಾಗಲಿವೆ. ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯ ಹಾಗೂ ಈ ನಿಟ್ಟಿನಲ್ಲಿ ಮಾನ್ಯ ಮುಖ್ಯಮಂತ್ರಿಗಳ ಸೂಚನೆ ಹಿನ್ನೆಲೆಯಲ್ಲಿ ಶಾಲಾರಂಭಕ್ಕೆ ಅಗತ್ಯ ಸಿದ್ಧತೆಗಳನ್ನ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಜನವರಿ ಒಂದಕ್ಕೆ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳನ್ನು ಪ್ರಾರಂಭಿಸಲಾಗುತ್ತಿದ್ದು, ಅದರ ಯಶಸ್ಸಿನ ಆಧಾರದಲ್ಲಿ ಜ.15 ರಿಂದ ಉಳಿದ ತರಗತಿಗಳ ಪ್ರಾರಂಭಕ್ಕೆ ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುವುದು. ಈಗಾಗಲೇ ತಿಳಿಸಲಾದ ರೀತಿಯಲ್ಲಿ ಜನವರಿ ಒಂದರಿಂದ ಆಯ್ದ ತರಗತಿಗಳ ವಿದ್ಯಾಗಮ ಕಾರ್ಯಕ್ರಮವೂ ಆರಂಭವಾಗಲಿದೆ ಎಂದು ಅವರು ಖಚಿತಪಡಿಸಿದ್ದಾರೆ.

ಜ. 1ರಿಂದ 10, 12ನೇ ತರಗತಿ ಆರಂಭ; ಸಿಎಂಗೆ ಸಚಿವರ ಪತ್ರ
ಮುಖ್ಯಮಂತ್ರಿಯವರ ಸೂಚನೆ ಮತ್ತು ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸಲಹೆ ಮತ್ತು ಮಾರ್ಗದರ್ಶನದಂತೆ ಜ. 1ರಿಂದ ಎಸ್ಸೆಸ್ಸೆಲ್ಸಿ ಮತ್ತು 12ನೇ ತರಗತಿ ಮತ್ತು ವಿದ್ಯಾಗಮ ಕಾರ್ಯಕ್ರಮ ಆರಂಭಿಸುತ್ತಿದ್ದು, ಸಹಕಾರ ನೀಡಬೇಕು ಎಂದು ರಾಜ್ಯದ ಎಲ್ಲ ವಿಧಾನಸಭಾ ಸದಸ್ಯರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಪ್ರತ್ಯೇಕ ಪತ್ರ ಬರೆದಿದ್ದಾರೆ.

ಶಾಲೆಗಳ ಆರಂಭಿಸುವ ಕುರಿತಂತೆ ಸಂಬಂಧಿಸಿದ ಇಲಾಖೆಗಳ ಸಮನ್ವಯದೊಂದಿಗೆ ಅಧಿಕಾರಿಗಳಿಗೆ ಸೂಕ್ತ, ಸಲಹೆ, ಸೂಚನೆ, ಮಾರ್ಗದರ್ಶನಗಳನ್ನು ನೀಡಿ ಹೆಚ್ಚಿನ ಸಹಕಾರ ನೀಡಬೇಕು ಎಂದು ಪತ್ರದಲ್ಲಿ ಸಚಿವರು ಕೋರಿದ್ದಾರೆ. ತಮ್ಮ ಕ್ಷೇತ್ರ ಮತ್ತು ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಳೆದ ಎಸ್ಸೆಎಸ್ಸೆಲ್ಸಿ ಪರೀಕ್ಷೆ ಸಂದರ್ಭದಲ್ಲಿ ನೀಡಿದಂತೆ ಶಾಲೆಗಳ ಆರಂಭಕ್ಕೆ ಸಹಕಾರ ನೀಡಬೇಕು. ಮಕ್ಕಳ ಸುಲಲಿತ ವಿದ್ಯಾಭ್ಯಾಸಕ್ಕೆ ನೆರವಾಗಬೇಕು ಎಂದೂ ಅವರು ಕೋರಿದ್ದಾರೆ.

ಹೃದಯಾಘಾತದಿಂದ ಮೃತಪಟ್ಟರೂ ಸಾರಿಗೆ ನೌಕರರಿಗೆ ಪರಿಹಾರ : ಹೈಕೋರ್ಟ್ ನಿಂದ ಮಹತ್ವದ ತೀರ್ಪು

December 28, 2020

 


ಬೆಂಗಳೂರು : ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತದಿಂದ ಸಾರಿಗೆ ನೌಕರರು ಮೃತಪಟ್ಟರೆ ಅಂತಹ ಪ್ರಕರಣವನ್ನು ಅಪಘಾತವೆಂದು ಪರಿಗಣಿಸಬೇಕೆಂದು ಹೈಕೋರ್ಟ್ ಕಲಬುರಗಿ ವಿಭಾಗೀಯ ಪೀಠ ಮಹತ್ವದ ತೀರ್ಪು ನೀಡಿದೆ.

ಎನ್‌ಇಕೆಆರ್​ಟಿಸಿ ಚಾಲಕ ವಿಜಯಕುಮಾರ್​​ ಸತತ 11 ಗಂಟೆ ಕರ್ತವ್ಯ ನಿರ್ವಹಣೆ ಮಾಡಿದ್ದರು. ಈ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಹೃದಯಾಘಾತ ಕೂಡ ಅಪಘಾತವೆಂದು ಪರಿಗಣಿಸಿ 21,98,090 ರೂಪಾಯಿ ಪರಿಹಾರಕ್ಕೆ ಕಾರ್ಮಿಕ ಆಯುಕ್ತರು ಆದೇಶಿಸಿದ್ದರು. ಈ ಬಗ್ಗೆ ಎನ್‌ಇಕೆಆರ್​ಟಿಸಿ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್. ಸುನಿಲ್ ದತ್ ಯಾದವ್, ಪಿ.ಎನ್. ದೇಸಾಯಿರವರಿದ್ದ ಪೀಠ ವಜಾಗೊಳಿಸಿತು.

ಸಾರಿಗೆ ನೌಕರರು ಕರ್ತವ್ಯದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದರೆ ಅದನ್ನು ಅಪಘಾತವೆಂದು ಪರಿಗಣಿಸಬೇಕು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್: ಸಿಲೆಬಸ್​ ಕಟ್..!

December 28, 2020ಬೆಂಗಳೂರು, (ಡಿ.28): ಕೊರೊನಾ ವೈರಸ್​ ಹಿನ್ನೆಲೆಯಲ್ಲಿ ಈ ವರ್ಷ ಪ್ರತಿ ಬಾರಿಯಂತೆ ಶಾಲೆ ನಡೆದಿಲ್ಲ. ಹೀಗಾಗಿ, 1ರಿಂದ 10ನೇ ತರಗತಿವರೆಗಿನ ಪಠ್ಯ ಕಡಿತಗೊಳಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಕರ್ನಾಟಕ ಪಠ್ಯ ಪುಸ್ತಕ ಸಂಘದಿಂದ ಸಿಲೆಬಸ್​ ಕಡಿತ ಮಾಡಿರುವ ಬಗ್ಗೆ ಅಧಿಕೃತ ಸುತ್ತೋಲೆ ಹೊರಡಿಸಲಾಗಿದೆ. ಸೆ. 1ರಿಂದ ಮಾರ್ಚ್ 31ಕ್ಕೆ ಅನ್ವಯವಾಗುವಂತೆ ಬೋಧನಾ ಅವಧಿಯನ್ನು 220 ಗಂಟೆಯ ಅವಧಿಯಿಂದ 120 ಗಂಟೆಗೆ ಇಳಿಕೆ ಮಾಡಲಾಗಿದೆ.

ರಾಜ್ಯದಲ್ಲಿ ಶಾಲಾ-ಕಾಲೇಜು ಪ್ರಾರಂಭ ಬಗ್ಗೆ ಸ್ಪಷ್ಟನೆ ಕೊಟ್ಟ ಸಿಎಂ ಯಡಿಯೂರಪ್ಪ

ಕೊರೋನಾ ವೈರಸ್​ ಹಿನ್ನೆಲೆಯಲ್ಲಿ ಈವರೆಗೆ ಶಾಲೆಗಳು ಪ್ರಾರಂಭವಾಗಿಲ್ಲ. ಎಲ್ಲ ಕಡೆಗಳಲ್ಲೂ ಆನ್​ಲೈನ್​ ಮೂಲಕವೇ ಶಿಕ್ಷಣ ನೀಡಲಾಗುತ್ತಿದೆ. ಇದನ್ನು ಅರಿತ ಶಿಕ್ಷಣ ಇಲಾಖೆ ಪ್ರತಿ ವಿಷಯಗಳಲ್ಲೂ ಕೆಲ ಪಠ್ಯ ಕಡಿತಗೊಳಿಸಿದೆ.

ಕೆಲ ಪ್ರಮುಖ ಪಠ್ಯವನ್ನು ಮಾತ್ರ ಬೋಧಿಸಲು ಸೂಚನೆ ನೀಡಲಾಗಿದೆ.

ಕೊರೋನಾ ಇರುವ ಕಾರಣ ಮಕ್ಕಳು ಶಾಲೆಗೆ ತೆರಳದೇ ಆನ್​​ಲೈನ್​ ಮೂಲಕವೇ ಶಿಕ್ಷಣ ಪಡೆಯತ್ತಿದ್ದಾರೆ. ಆನ್​ಲೈನ್​ನಲ್ಲಿ ಅಂದುಕೊಂಡ ಮಟ್ಟಿಗೆ ಮಾರ್ಗದರ್ಶನ ಪಡೆಯಲಾಗುತ್ತಿಲ್ಲ ಎನ್ನುವುದು ಕೆಲ ವಿದ್ಯಾರ್ಥಿಗಳ ಆರೋಪವಾಗಿತ್ತು. ಅಲ್ಲದೆ, ಎಲ್ಲ ಸಿಲೆಬಸ್​ ಪೂರ್ಣಗೊಳಿಸೋದು ಅಸಾಧ್ಯ ಎನ್ನುವ ಮಾತನ್ನು ಶಿಕ್ಷಕರು ಹೇಳಿದ್ದರು. ಹೀಗಾಗಿ ಪಠ್ಯ ಕಡಿತಗೊಳಿಸಿರುವುದು ವಿದ್ಯಾರ್ಥಿಗಳಿಗೆ ಭಾರೀ ಅನುಕೂಲವಾಗಿದೆ.

ಗಣಿತ - 180 ರಿಂದ 120 ಅವಧಿಗೆ ಇಳಿಕೆ.

ಪರಿಸರ ಅಧ್ಯಯನ - 120 ಅವಧಿ.

ವಿಜ್ಞಾನ - 120 ಅವಧಿ.

ಸಮಾಜ ವಿಜ್ಞಾನ- 120 ಅವಧಿ.

ಶಿಕ್ಷಕರೇ ಹೆಚ್ಚಿನ ಸಂಖ್ಯೆಯಲ್ಲಿರುವ ರಾಜ್ಯದ ಈ ಗ್ರಾಮ ಯಾವುದು ಗೊತ್ತಾ?

December 28, 2020

 


ರಾಮನಗರ: ಇಲ್ಲೊಂದು ಗ್ರಾಮವಿದೆ. ಈ ಗ್ರಾಮದಲ್ಲಿ ಪ್ರತಿ ಮೂರ್ನಾಲ್ಕು ಮನೆಗಳಿಗೆ ಒಬ್ಬರಾದರೂ ಶಿಕ್ಷಕರು ಇದ್ದಾರೆ. ಅತೀ ಹೆಚ್ಚು ಶಿಕ್ಷಕರಿರುವ ಹಿನ್ನೆಲೆಯಲ್ಲಿ ಈ ಗ್ರಾಮವನ್ನು ಶಿಕ್ಷಕರ ಗ್ರಾಮ ಎಂದು ಸಹ ಕರೆಯುತ್ತಾರೆ. ಅಷ್ಟೇ ಅಲ್ಲದೇ ಅತೀ ಹೆಚ್ಚು ಅಕ್ಷರಸ್ಥರಿರುವ ಈ ಗ್ರಾಮವು ಇಬ್ಬರು ಕುಲಪತಿಗಳನ್ನು ಮೈಸೂರು ವಿಶ್ವವಿದ್ಯಾನಿಲಯಕ್ಕೆ

ಕೊಡುಗೆಯಾಗಿ ನೀಡಿದೆ. ಇದ್ಯಾವ ಗ್ರಾಮ ಅಂತೀರಾ ನೀವೇ ನೋಡಿ.

ಅಂದ ಹಾಗೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮ ಇಂತಹದೊಂದು ಹೆಗ್ಗಳಿಕೆಗೆ ಪಾತ್ರವಾಗಿದ್ದು, ಈ ಗ್ರಾಮದಲ್ಲಿ ಹುಟ್ಟಿದ ಅನೇಕರು ಶಿಕ್ಷಕರಾಗಿ, ಅಧ್ಯಾಪಕರಾಗಿ, ಪ್ರೊಫೆಸರ್‌ಗಳಾಗಿ ರಾಜ್ಯ ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳಾಗಿ ಹಾಗೂ ಸಾಹಿತ್ಯ ಕ್ಷೇತ್ರದ ದಿಗ್ಗಜರುಗಳಾಗಿ ಕರುನಾಡಿನಲ್ಲಿ ಮೆರೆದಿದ್ದಾರೆ.

ಸ್ವಾತಂತ್ರ ಪೂರ್ವದಿಂದಲೂ ಶಿಕ್ಷಕರ ವೃತ್ತಿಯನ್ನೇ ಉದ್ಯೋಗವನ್ನಾಗಿ ಮಾಡಿಕೊಂಡಿರುವ ಈ ಗ್ರಾಮಸ್ಥರ ಪೈಕಿ ಶೇ 30ರಷ್ಟು ಮಂದಿ ಮಾತ್ರವೇ ಇನ್ನಿತರ ಕಾಯಕಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನುವುದು ವಿಶೇಷ.

ಚಕ್ಕೆರೆ ಗ್ರಾಮದವರೇ ಆಗಿರುವ ದಿವಂಗತ ದೇ. ಜವರೇಗೌಡರು ಹಾಗೂ ಅವರ ಮಗ ಶಶಿಧರ್ ಪ್ರಸಾದ್ ಇಬ್ಬರು ಸಹ ಸಾಂಸ್ಕೃತಿಕ ನಗರಿ ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಅದಲ್ಲದೇ ಪ್ರಸ್ತುತ ಈ ಗ್ರಾಮದಲ್ಲಿ ಶಿಕ್ಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಾಹಿತಿಗಳು ಸೇರಿದಂತೆ ಅನೇಕರು ಇಂದಿಗೂ
ಕರುನಾಡಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಇಡೀ ಗ್ರಾಮದ ಶೇ. 90ರಷ್ಟು ಮಂದಿಯು ಶಿಕ್ಷಕರೇ ಆಗಿದ್ದರು. ಆದರೀಗ ಶೇ. 70ಕ್ಕೆ ಇದು ಕುಸಿದಿದೆ ಎಂಬುವುದು ಬದಲಾದ ಕಾಲಘಟ್ಟಕ್ಕೆ ಹಿಡಿದ ಕನ್ನಡಿಯಾಗಿದೆ.


ಚಕ್ಕೆರೆ ಗ್ರಾಮದ ಶಾಲೆ

ಇನ್ನು ಚಕ್ಕೆರೆ ಗ್ರಾಮದಲ್ಲಿ ಇದೀಗ 25 ಮಂದಿ ಶಿಕ್ಷಕರಿದ್ದಾರೆ. ಅಲ್ಲದೇ ರಾಜ್ಯದ ವಿವಿಧೆಡೆಯಲ್ಲೂ ಕೂಡ ಹಲವು ಮಂದಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂದಿಗೂ ಚೆಕ್ಕರೆ ಮೇಸ್ಟ್ರು ಎಂದರೆ ಏನೋ ಸಂತಸ. ನಮ್ಮೂರಿನ ಹಿರಿಯರು ಹಾಕಿಕೊಟ್ಟ ಮೇಲ್ಪಂಕ್ತಿಯಿಂದ ನಾವು ಸಹ ರಾಷ್ಟ್ರ ಕಟ್ಟುವಂತಹ ಮಹತ್ವ ಹೊಣೆಗಾರಿಕೆ ಇರುವ ಶಿಕ್ಷಕ ಕ್ಷೇತ್ರಕ್ಕೆ ಬಂದಿದ್ದೇವೆ ಎಂಬುವುದು ಸಂತಸ ತಂದಿದ್ದು, ಇದೇ ಗ್ರಾಮದಲ್ಲಿ ಹುಟ್ಟಿ ಬೆಳೆದು ಇದೇ ಗ್ರಾಮದಲ್ಲಿ ಶಿಕ್ಷಕರಾಗಿರುವುದು ತುಂಬ ಸಂತೋಷವಾಗಿದೆ ಎನ್ನುತ್ತಾರೆ ಇಲ್ಲಿಯ ಶಿಕ್ಷಕರುಗಳು.


ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿರುವ ಗ್ರಾಮದ ದೃಶ್ಯ

ಇನ್ನು ಬಿಜೆಪಿ ಮಾಜಿ ಎಂಎಲ್​ಸಿ ಸಚಿವ, ಸಿ.ಪಿ.ಯೋಗೇಶ್ವರ್ ಸಹಾ ಇದೇ ಊರಿನವರಾಗಿದ್ದು, ಅವರ ತಂದೆ ಸಹಾ ಶಿಕ್ಷಕರಾಗಿದ್ದರು. ಕೇವಲ ಶಿಕ್ಷಕರಷ್ಟೇ ಅಲ್ಲದೇ ಸಾಕಷ್ಟು ಜನ ವಿದ್ವಾಂಸರು, ನಾಟಕರಾರರು ಈ ಗ್ರಾಮದಲ್ಲಿ ಇದ್ದು, ಇದು ಗ್ರಾಮದವರಿಗೆ ಹೆಮ್ಮೆಯ ವಿಚಾರವಾಗಿದೆ. ಈ ಹಿಂದಿನಿಂದಲೂ ಶಿಕ್ಷಕ, ಶಿಕ್ಷಣ ಕ್ಷೇತ್ರದಲ್ಲಿ ಚಕ್ಕೆರೆ ಗ್ರಾಮ ಬಹಳಷ್ಟು ಸಾಧನೆ ಮಾಡಿ, ಗುರುತರ ಹೆಜ್ಜೆ ಮೂಡಿಸಿಕೊಂಡು ಬರುತ್ತಿದೆ. ನಾನು ಕೂಡ ಈ ಗ್ರಾಮದ ಶಿಕ್ಷಕನಾಗಿರುವುದು ಹೆಮ್ಮೆಯ ವಿಚಾರ ಎಂದು ಗ್ರಾಮದ ಶಿಕ್ಷಕ ಯೋಗೇಶ್ ಹೇಳಿದ್ದಾರೆ.


ಶಿಕ್ಷಣ ಅಭಿಯಾನ

ನನ್ನ ಗ್ರಾಮದ ಬಗ್ಗೆ, ನನಗೆ ಸಾಕಷ್ಟು ಹೆಮ್ಮೆ ಎನಿಸುತ್ತದೆ. ನಮ್ಮ ಗ್ರಾಮದ ಬಹುತೇಕರು ಶಿಕ್ಷಕರಾಗಿದ್ದು, ಕೇವಲ ಶಿಕ್ಷಕರಷ್ಟೆ ಅಲ್ಲ ಬೇರೆ ಬೇರೆ ಕ್ಷೇತ್ರಕ್ಕೂ ಗ್ರಾಮ ಕೊಡುಗೆ ಕೊಟ್ಟಿದೆ. ಈ ಗ್ರಾಮದಲ್ಲಿ ಹುಟ್ಟಿರುವುದೇ ನನ್ನ ಪುಣ್ಯ ಎಂದು ಸ್ಥಳೀಯ ರಾಜಶೇಖರ್ ಹೇಳಿದ್ದಾರೆ.


ಗ್ರಾಮದ ಚಿತ್ರಣ

ಒಟ್ಟಾರೆ ಇಡೀ ಗ್ರಾಮವೇ ಶಿಕ್ಷಕರಿಂದ ತುಂಬಿರುವುದರಿಂದ ಇಲ್ಲಿನ ಮಕ್ಕಳು ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ತೇರ್ಗಡೆ ಹೊಂದಿದ್ದಾರೆ. ಇನ್ನು ಗ್ರಾಮದಲ್ಲಿ ಅವಿದ್ಯಾವಂತರನ್ನು ಹುಡುಕುವುದು ಕಷ್ಟ. ಒಟ್ಟಿನಲ್ಲಿ ಅಕ್ಷರ ಕಲಿಸುವ ಗುರುಗಳಿಗೆ ವಿಶೇಷ ಆದ್ಯತೆ ನೀಡಿರುವ ಈ ಗ್ರಾಮದಲ್ಲಿ ಇನ್ನಷ್ಟು ಗುರುಗಳು ಜನಿಸಲಿ ಎಂಬುದು ಟಿವಿ9 ಆಶಯ.

ಜ.1ರಿಂದ ಶಾಲಾ-ಕಾಲೇಜು, ವಿದ್ಯಾಗಮ ಆರಂಭ : ಶಾಸಕರು, ಸಚಿವರಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪತ್ರ

December 28, 2020ಬೆಂಗಳೂರು : ರಾಜ್ಯದಲ್ಲಿ ಜನವರಿ.1ರಿಂದ ಶಾಲಾ-ಕಾಲೇಜು, ವಿದ್ಯಾಗಮ ಆರಂಭವಾಗಲಿದೆ. ಇಂತಹ ಶಾಲಾ-ಕಾಲೇಜು, ವಿದ್ಯಾಗಮ ಆರಂಭದ ಬಗ್ಗೆ ಶಿಕ್ಷಣ ಇಲಾಖೆಗೆ ಮಾರ್ಗದರ್ಶನ, ಸಹಕಾರ ನೀಡುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು, ಶಾಸಕರು, ಸಚಿವರಿಗೆ ಪತ್ರ ಬರೆದು, ಮನವಿ ಮಾಡಿದ್ದಾರೆ.

ಈ ಕುರಿತಂತೆ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದಿರುವಂತ ಅವರು, ರಾಜ್ಯದಲ್ಲಿ ಜನವರಿ 1ರಿಂದ ಶಾಲೆ ಆರಂಭ ವಿಚಾರದಲ್ಲಿ ಸಮನ್ವಯ ಅಗತ್ಯವಾಗಿದೆ. ಹಾಗಾಗಿ ಅಧಿಕಾರಿಗಳಿಗೆ ಸೂಕ್ತ ಸಲಹೆ ನೀಡಬೇಕು. ಶಿಕ್ಷಣ ಇಲಾಖೆಗೆ ಮಾರ್ಗದರ್ಶನ, ಸಹಕಾರ ನೀಡಿ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರಿಗೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಇಂದು ರಾಜ್ಯದಲ್ಲಿ ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಕೊರೋನಾ..?

December 28, 2020

 


ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 911 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, 11 ಜನ ಮೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 9.16 ಲಕ್ಷ ದಾಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 12,062 ಆಗಿದೆ. ಕಳೆದ 24 ಗಂಟೆಯಲ್ಲಿ 1214 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 8.91 ಲಕ್ಷ ದಾಟಿದೆ. ರಾಜ್ಯದಲ್ಲಿ ಇನ್ನೂ ಕೂಡ 13,080 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದ್ರಲ್ಲಿ 209 ಸೋಂಕಿತರು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇಂದು ಕೊರೋನಾಗೆ ಯಾವ ಜಿಲ್ಲೆಯಲ್ಲಿ ಎಷ್ಟು ಬಲಿ..?

ಬೆಂಗಳೂರು ನಗರ- 8

ಮೈಸೂರು-2

ಕೋಲಾರ- 1

ಇಂದು ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಕೊರೋನಾ..?

ಬಾಗಲಕೋಟೆ- 4

ಬಳ್ಳಾರಿ- 11

ಬೆಳಗಾವಿ- 18

ಬೆಂಗಳೂರು ಗ್ರಾಮಾಂತರ- 20

ಬೆಂಗಳೂರು ನಗರ- 542

ಬೀದರ್- 7

ಚಾಮರಾಜನಗರ- 11

ಚಿಕ್ಕಬಳ್ಳಾಪುರ- 32

ಚಿಕ್ಕಮಗಳೂರು- 9

ಚಿತ್ರದುರ್ಗ- 21

ದಕ್ಷಿಣ ಕನ್ನಡ- 18

ದಾವಣಗೆರೆ- 15

ಧಾರವಾಡ- 17

ಗದಗ- 4

ಹಾಸನ- 34

ಹಾವೇರಿ- 3

ಕಲಬುರಗಿ-12

ಕೊಡಗು- 7

ಕೋಲಾರ- 9

ಕೊಪ್ಪಳ- 3

ಮಂಡ್ಯ -19

ಮೈಸೂರು- 40

ರಾಯಚೂರು- 5

ಶಿವಮೊಗ್ಗ- 12

ತುಮಕೂರು- 20

ಉಡುಪಿ- 1

ಉತ್ತರ ಕನ್ನಡ- 11

ವಿಜಯಪುರ- 5

ಯಾದಗಿರಿ- 1

ವಿವಾಹ ವಾರ್ಷಿಕೋತ್ಸವಕ್ಕಾಗಿ ಪತ್ನಿಗೆ ಚಂದ್ರನ ಮೇಲೆ 3 ಎಕರೆ ಪ್ರದೇಶ ಉಡುಗೊರೆ ನೀಡಿದ ಪತಿ ಮಹಾಶಯ!

December 27, 2020

 


ಅಜ್ಮೀರ್: ಹಲವು ಮಂದಿ ತಮ್ಮ ಸಂಗಾತಿಗೆ ಅತ್ಯಮೂಲ್ಯ ಉಡುಗೊರೆಗಳನ್ನು ಕೊಡಬೇಕೆಂದಿರುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಸಂಗಾತಿಗೆ ಚಂದ್ರನ ಮೇಲೆ 3 ಎಕರೆ ಪ್ರದೇಶವನ್ನು ಖರೀದಿಸಿ ಉಡುಗೊರೆಯಾಗಿ ನೀಡಿದ್ದಾರೆ.

ಅಜ್ಮೀರ್ ನ ಸಪ್ನಾ ಅನಿಜಾಗೆ ಅವರ ಪತಿ ಧರ್ಮೇಂದ್ರ ಅನಿಜಾ ಚಂದ್ರನ ಮೇಲೆ 3 ಎಕರೆ ಪ್ರದೇಶವನ್ನು ಉಡುಗೊರೆಯಾಗಿ ನೀಡಿದ್ದಾರೆ.

ವಿವಾಹ ವಾರ್ಷಿಕೋತ್ಸವಕ್ಕೆ ವಿಶೇಷವಾದದ್ದನ್ನು ಮಾಡಬೇಕೆನಿಸಿತು. ಆದ್ದರಿಂದ ಚಂದ್ರನ ಮೇಲೆ ಜಾಗವನ್ನು ಖರೀದಿಸಿದ್ದಾಗಿ ಧರ್ಮೇಂದ್ರ ಎಎನ್‌ಐ ಗೆ ಹೇಳಿದ್ದಾರೆ.

ಡಿ.24 ರಂದು ವಿವಾಹ ವಾರ್ಷಿಕೋತ್ಸವವಿತ್ತು. ಪ್ರತಿಯೊಬ್ಬರೂ ಕಾರು ಹಾಗೂ ಚಿನ್ನಾಭರಣಗಳನ್ನು ಉಡುಗೊರೆಯಾಗಿ ನೀಡುತ್ತಾರೆ, ಆದರೆ ನಾನು ವಿಶೇಷವಾದದ್ದನ್ನು ನೀಡಬೇಕು ಎಂದುಕೊಂಡು ಚಂದ್ರನ ಮೇಲೆ ಜಾಗ ಖರೀದಿಸಿದೆ ಎನ್ನುತ್ತಾರೆ ಧರ್ಮೇಂದ್ರ

ನ್ಯೂಯಾರ್ಕ್ ನಗರದಲ್ಲಿರುವ ಲೂನ ಸೊಸೈಟಿ ಇಂಟರ್ನ್ಯಾಷನಲ್ ನಿಂದ ಧರ್ಮೇಂದ್ರ ಅವರು ಚಂದ್ರನ ಮೇಲೆ ಜಾಗ ಖರೀದಿಸಿದ್ದು, ಪ್ರಕ್ರಿಯೆ ಪೂರ್ಣಗೊಳ್ಳುವುದಕ್ಕೆ ಒಂದು ವರ್ಷ ಬೇಕಾಯಿತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಧರ್ಮೇಂದ್ರ ಪತ್ನಿ, ಈ ರೀತಿಯ ವಿಶೇಷ ಉಡುಗೊರೆಯನ್ನು ನಾನೆಂದೂ ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.

ಈ ಬ್ಯಾಂಕ್ ನಲ್ಲಿ ಖಾತೆ ತೆರೆದಿದ್ದೀರಾ? ಹಾಗಿದ್ರೆ ಈಗಲೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿ.

December 27, 2020

 


ನವದೆಹಲಿ : ನಿಮ್ಮ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಬ್ಯಾಲೆನ್ಸ್ ಅನ್ನು ಟ್ರ್ಯಾಕ್ ಮಾಡುವುದು ಸುಲಭದ ಕೆಲಸವಲ್ಲ. ಮಿಸ್ಡ್ ಕಾಲ್ ಮತ್ತು ಎಸ್ ಎಂಎಸ್ ಮೂಲಕ ಬ್ಯಾಲೆನ್ಸ್ ತಿಳಿದುಕೊಳ್ಳುವ ಸೌಲಭ್ಯವಿದ್ದರೂ, ನಾವು ಅದನ್ನು ಆಗಾಗ ಕಡೆಗಣಿಸುತ್ತೇವೆ.

ಆದರೆ, ಬ್ಯಾಂಕ್ ಗಳು ವಿಫಲವಾದ ಎಟಿಎಂ ವಹಿವಾಟಿಗೆ ಶುಲ್ಕ ವಿಧಿಸುವುದರಿಂದ, ಅರಿವಿಲ್ಲದ ಅಥವಾ ಅಲಕ್ಷಿಸುವ ಗ್ರಾಹಕರು ಖಾತೆಯಿಂದ ಹಣ ಡ್ರಾ ಮಾಡಲು ತೊಂದರೆ ಯನ್ನು ಎದುರಿಸಬಹುದು. ಆದ್ದರಿಂದ ಹಣ ಹಿಂಪಡೆಯುವ ಮುನ್ನ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ತಿಳಿದುಕೊಳ್ಳುವುದು ಒಳ್ಳೆಯದು.

ಅಲ್ಲದೆ, ಇಂತಹ ವಿಫಲ ವಹಿವಾಟಿನ ಮೇಲೆ ವಿವಿಧ ಬ್ಯಾಂಕುಗಳು ಹೇಗೆ ಶುಲ್ಕ ವಿಧಿಸುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ), ಐಸಿಐಸಿಐ ಬ್ಯಾಂಕ್, ಎಚ್ ಡಿಎಫ್ ಸಿ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಯೆಸ್ ಬ್ಯಾಂಕ್ ಮುಂತಾದ ಪ್ರಮುಖ ಬ್ಯಾಂಕ್ ಗಳು ನಿಮ್ಮ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಇಲ್ಲದ ಕಾರಣ ವಿಫಲವಾದ ಎಟಿಎಂ ವಹಿವಾಟು ಶುಲ್ಕವನ್ನು ವಿಧಿಸುತ್ತದೆ.

ಐಸಿಐಸಿಐ ಬ್ಯಾಂಕ್
ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಇಲ್ಲದ ಕಾರಣ ಇತರ ಬ್ಯಾಂಕ್ ಎಟಿಎಂಗಳಲ್ಲಿ ಅಥವಾ ಪಾಯಿಂಟ್ ಆಫ್ ಸೇಲ್ (ಪಿಒಎಸ್)ನಲ್ಲಿ ವಹಿವಾಟು ಆಗದೆ ಇದ್ದರೆ, ಪ್ರತಿ ವ್ಯವಹಾರಕ್ಕೆ 25 ರೂ. ಶುಲ್ಕ ವಿಧಿಸುತ್ತದೆ.

ಆಕ್ಸಿಸ್ ಬ್ಯಾಂಕ್
ಆಕ್ಸಿಸ್ ಬ್ಯಾಂಕ್ ಇತರ ಬ್ಯಾಂಕಿನ ಆಂತರಿಕ ಎಟಿಎಂಗಳಲ್ಲಿ ಸಾಕಷ್ಟು ಹಣವಿಲ್ಲದ್ದರಿಂದ ಎಟಿಎಂ ವಹಿವಾಟುಗಳಿಗೆ ₹25 ರಷ್ಟು ಫ್ಲ್ಯಾಟ್ ಚಾರ್ಜ್ ವಿಧಿಸುತ್ತದೆ.

ಎಸ್.ಬಿ.ಐ.
ಅಸಮರ್ಪಕ ಬ್ಯಾಲೆನ್ಸ್ ಗೆ ಇಳಿಕೆ ಶುಲ್ಕ: ಸಾಕಷ್ಟು ಬ್ಯಾಲೆನ್ಸ್ ಇಲ್ಲದ ಕಾರಣ ವಹಿವಾಟು ಕುಸಿತಕ್ಕೆ ₹20 ಪ್ಲಸ್ ಜಿಎಸ್ ಟಿ ಶುಲ್ಕ ವಿಧಿಸುತ್ತದೆ.

ಕೋಟಕ್ ಮಹೀಂದ್ರಾ ಬ್ಯಾಂಕ್
ವಿಫಲ ATM ವಹಿವಾಟು ಶುಲ್ಕ- ₹ 25

YES ಬ್ಯಾಂಕ್
ಸಾಕಷ್ಟು ಹಣವಿಲ್ಲದ್ದರಿಂದ ಪ್ರತಿ ವ್ಯವಹಾರಕ್ಕೆ ₹25 ಶುಲ್ಕ ಗಳನ್ನು ಬ್ಯಾಂಕ್ ವಿಧಿಸುವುದು

ಹಾಗಾಗಿ, ಇನ್ನು ಮುಂದೆ ಎಟಿಎಂನಿಂದ ಹಣ ಡ್ರಾ ಮಾಡಲು ಹೋದಾಗಲೆಲ್ಲಾ ನಿಮ್ಮ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇದೆ ಎಂದು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ, ನೀವು ಯಾವುದೇ ಕಾರಣವಿಲ್ಲದೆ ನರಳಬೇಕಾಗುತ್ತದೆ.

ಎಚ್ ಡಿಎಫ್ ಸಿ ಬ್ಯಾಂಕ್
ಅಸಮರ್ಪಕ ಬ್ಯಾಲೆನ್ಸ್ ಗೆ ಶುಲ್ಕ ಇಳಿಕೆ: ವಿಶ್ವದ ಯಾವುದೇ ಭಾಗದಲ್ಲಿ ಅಥವಾ ಭಾರತದ ಹೊರಗಿರುವ ವ್ಯಾಪಾರಿ ಔಟ್ ಲೆಟ್ ನಲ್ಲಿ ವಹಿವಾಟುಗಳು ಕಡಿಮೆಯಾಗಿದ್ದು, ಪ್ರತಿ ವಹಿವಾಟಿಗೆ ₹25 ರಂತೆ ಶುಲ್ಕ ವಿಧಿಸಲಾಗುತ್ತದೆ.

ಒಂದು ದೇಶ, ಒಂದು ಚುನಾವಣೆಗಾಗಿ ಬಿಜೆಪಿ ಶೀಘ್ರದಲ್ಲೇ ವೆಬಿನಾರ್‌

December 26, 2020

 


ನವದೆಹಲಿ(ಡಿ.27): ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೂಸಾಗಿರುವ 'ಒಂದು ದೇಶ, ಒಂದು ಚುನಾವಣೆ' ಪರಿಕಲ್ಪನೆಗೆ ಜನಬೆಂಬಲವನ್ನು ಸಂಗ್ರಹಿಸುವ ನಿಟ್ಟಿನಿಂದ ಮುಂದಿನ ಕೆಲವು ದಿನಗಳಲ್ಲಿ ಬಿಜೆಪಿ ದೇಶದೆಲ್ಲೆಡೆ 25 ವರ್ಚುವಲ್‌ ಕಾರ್ಯಕ್ರಮ (ವೆಬಿನಾರ್‌)ಗಳನ್ನು ಆಯೋಜಿಸಲು ಉದ್ದೇಶಿಸಿದೆ.

ಈ ವೆಬಿನಾರ್‌ಗಳಲ್ಲಿ ಪಕ್ಷದ ಹಿರಿಯ ಮುಖಂಡರು ಹಾಗೂ ತಜ್ಞರು ಭಾಗಿ ಆಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 2014ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಮೋದಿ ಅವರು ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಕುರಿತು ಪ್ರತಿಪಾದಿಸಿಕೊಂಡು ಬಂದಿದ್ದಾರೆ.

ರೂಪಾಂತರಗೊಂಡ ವೈರಸ್‌ ಭಾರತದಲ್ಲಿ ಮಾರ್ಚ್‌ನಲ್ಲೇ ಇತ್ತು: ಜೀನೋಮಿಕ್ಸ್

ಇತ್ತೀಚೆಗೆ ನಡೆದ ಚುನಾವಣಾ ಆಧಿಕಾರಿಗಳ ಸಮಾವೇಶದ ವೇಳೆಯೂ ಮೋದಿ ಅವರು ಒಂದು ದೇಶ, ಒಂದು ಚುನಾವಣೆಯ ಕುರಿತು ಪ್ರಸ್ತಾಪಿಸಿದ್ದರು.

ಏಕಕಾಲದಲ್ಲಿ ಚುನಾವಣೆಯ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿರುವ ವೆಬಿನಾರ್‌ನಲ್ಲಿ ಪಕ್ಷದ ಹಿರಿಯ ಮುಖಂಡರು ಮಾತನಾಡಲಿದ್ದಾರೆ. ಶಿಕ್ಷಣ ತಜ್ಞರು ಮತ್ತು ಕಾನೂನು ತಜ್ಞರು ಭಾಗವಹಿಸಲಿದ್ದಾರೆ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

Jio ಈಗ Vivo ಜೊತೆಗೂಡಿ ಅತಿ ಕಡಿಮೆ ಬೆಲೆಯ 4G ಸ್ಮಾರ್ಟ್ಫೋನ್ ಬಿಡುಗಡೆ, 4,550 ರೂಗಳ ಭಾರಿ ಲಾಭ ಪಡೆಯಬವುದು

December 26, 2020

 


ರಿಲಯನ್ಸ್ ಜಿಯೋ ಮತ್ತೊಮ್ಮೆ ಗ್ರಾಹಕರನ್ನು ಸೆಳೆಯಲು ಬ್ಲಾಸ್ಟ್ ಆಫರ್ ಅನ್ನು ತಂದಿದೆ. ಜಿಯೋ ಕಂಪನಿಯು ಇಂಟರ್ನೆಟ್ ಮಾರುಕಟ್ಟೆಯಲ್ಲಿ ಹಿಂದೆಂದೂ ಮಾಡದಂತಹದನ್ನು ಮಾಡಿದಾಗ ಸಂಭವಿಸಿದ. ಇದೇ ರೀತಿಯದ್ದನ್ನು ಇನ್ನೂ ಕಂಪನಿಯು ನೋಡುತ್ತಿದೆ. ರಿಲಯನ್ಸ್ ಜಿಯೋ ಮತ್ತು ವಿವೊ ಕಡಿಮೆ ಬೆಲೆಯ ಸ್ಮಾರ್ಟ್ಫೋನ್ ಅನ್ನು ಮಾರುಕಟ್ಟೆಗೆ ತರಲು ಹೊರಟಿದೆ ಎಂಬ ಸುದ್ದಿ ಇಲ್ಲಿಯವರೆಗೆ ಇತ್ತು ಈಗ ಅದು ನಿಜವಾಗಿದ್ದರೂ ರಿಲಯನ್ಸ್ ಜಿಯೋ ವಿವೊ ಜೊತೆ ಕೈಜೋಡಿಸಿದೆ. ಅತಿ ಕಡಿಮೆ ಬೆಲೆಯ 4G ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಮೊಬೈಲ್ ಫೋನ್ ಮೂಲಕ ನೀವು 4500 ರೂಗಳ ಧಾಸು ಪ್ರಯೋಜನಗಳನ್ನು ಸಹ ಪಡೆಯುತ್ತಿದ್ದೀರಿ. ಈ ಮೊಬೈಲ್ ಫೋನ್ನ ಬೆಲೆ ಏನು ಮತ್ತು ನೀವು ಅದನ್ನು ಪಡೆಯುತ್ತೀರಾ.

ಜಿಯೋ ಎಕ್ಸ್ಕ್ಲೂಸಿವ್ ವಿವೋ ಫೋನ್ ಬೆಲೆ

ನಾವು 91 ಮೊಬೈಲ್ಗಳ ವರದಿಯನ್ನು ನೋಡಿದರೆ ರಿಲಯನ್ಸ್ ಜಿಯೋ ಪ್ರಸ್ತಾಪವನ್ನು ಪರಿಚಯಿಸಿದೆ.

ಅದರ ಅಡಿಯಲ್ಲಿ ನೀವು ವಿವೊ ವೈ 1ಎಸ್ ಸ್ಮಾರ್ಟ್ಫೋನ್ ಅನ್ನು ಕೇವಲ 7,999 ರೂಗಳಿಗೆ ಪಡೆಯಲಿದ್ದೀರಿ. ಈ ಬೆಲೆಯಲ್ಲಿ ಇದು ಕಡಿಮೆ ಬೆಲೆಯ ಸ್ಮಾರ್ಟ್ಫೋನ್ ಎಂದು ಸಹ ಹೇಳಲಾಗುತ್ತಿದೆ. ವಿವೊ ವೈ 1ಎಸ್ ಎಂದು ಪರಿಚಯಿಸಲಾಗಿರುವ ಜಿಯೋ ಎಕ್ಸ್ಕ್ಲೂಸಿವ್ ವಿವೊದ ಸ್ಮಾರ್ಟ್ಫೋನ್ ಇದಾಗಿದೆ. ಆದರೂ ವಿವೊ ವೈ 1ಎಸ್ ಭಾರತೀಯ ಮಾರುಕಟ್ಟೆಯಲ್ಲಿ ಇದೇ ದರದಲ್ಲಿ ಮೊದಲೇ ಬಿಡುಗಡೆ ಮಾಡಲಾಗಿದೆ.

ಜಿಯೋ ಎಕ್ಸ್ಕ್ಲೂಸಿವ್ ವಿವೋ ಫೋನ್ಗಳ ಭಾರಿ ಆಫರ್

ಭಾರತದಲ್ಲಿ ವಿವೊ ವೈ 1 ಎಸ್ ಬೆಲೆ 7,990 ರೂಗಳಾಗಿವೆ. ಮತ್ತು ಅರೋರಾ ಬ್ಲೂ ಮತ್ತು ಆಲಿವ್ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ಸ್ಮಾರ್ಟ್ಫೋನ್ ಹಿಡಿಯಲಿದೆ. ಜಿಯೋ ನೆಟ್ವರ್ಕ್ ಲಾಕ್-ಇನ್ನೊಂದಿಗೆ ಗ್ರಾಹಕರು ಸ್ಮಾರ್ಟ್ಫೋನ್ ಅನ್ನು ಸಹ ಪಡೆಯಬಹುದು ಇದು 249 ಅಥವಾ ಅದಕ್ಕಿಂತ ಹೆಚ್ಚಿನ ರೂ ರೀಚಾರ್ಜ್ ಮಾಡುವ ಮೂಲಕ 4,550 ರೂಗಳ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತದೆ. ಜಿಯೋ ಪ್ರಯೋಜನಗಳು 90 ದಿನಗಳ ಶೆಮರೂ ಒಟಿಟಿ ಪ್ಲಾಟ್ಫಾರ್ಮ್ ಚಂದಾದಾರಿಕೆಯನ್ನು 99 ರೂಗಳಲ್ಲಿ ಒಳಗೊಂಡಿರುತ್ತದೆ. ಕಂಪನಿಯು ಒನ್ಆಸಿಸ್ಟ್ ಮೂಲಕ ಒನ್-ಟೈಮ್ ಸ್ಕ್ರೀನ್ ರಿಪ್ಲೇಸ್ಮೆಂಟ್ ಅನ್ನು 149 ರೂಗಳಿಗೆ ನೀಡುತ್ತಿದೆ. ಆದರೆ ಇದು ಆರು ತಿಂಗಳ ನಂತರದ ಖರೀದಿಗೆ ಮಾತ್ರ ಮಾನ್ಯವಾಗಿರುತ್ತದೆ.

ಅತಿ ಕಡಿಮೆ ಬೆಲೆಯ 4ಜಿ ವಿವೊ ವೈ1ಎಸ್ ವಿಶೇಷಣಗಳು

ವಿವೋ ವೈ ಸರಣಿಯ ಹೊಸ ಸದಸ್ಯ 1520 × 720 ಪಿಕ್ಸೆಲ್ಗಳ ರೆಸಲ್ಯೂಶನ್ನೊಂದಿಗೆ 6.22 ಇಂಚಿನ ಹ್ಯಾಲೊ ಫುಲ್ವ್ಯೂ ಎಚ್ಡಿ + ಡಿಸ್ಪ್ಲೇಯನ್ನು ಹೊಂದಿದೆ. ಪರದೆಯು ಸೆಲ್ಫಿ ಸೆನ್ಸರ್ಗೆ ಅನುಗುಣವಾಗಿ ವಾಟರ್ಡ್ರಾಪ್ ನಾಚ್ ಅನ್ನು ಸಹ ಹೊಂದಿದೆ. ಹುಡ್ ಅಡಿಯಲ್ಲಿ ವಿವೊ ವೈ 1 ಎಸ್ ಅನ್ನು ಮೀಡಿಯಾ ಟೆಕ್ ಹೆಲಿಯೊ ಪಿ 35 ಪ್ರೊಸೆಸರ್ ಹೊಂದಿದೆ. ಇದು 2ಜಿಬಿ RAM ಮತ್ತು 32ಜಿಬಿ ಆನ್ಬೋರ್ಡ್ ಸ್ಟೋರೇಜ್ ಅನ್ನು ಹೊಂದಿದೆ. ಮೈಕ್ರೊ ಎಸ್ಡಿ ಕಾರ್ಡ್ ಮೂಲಕ ಸ್ಟೋರೇಜ್ ಅನ್ನು ಮತ್ತಷ್ಟು ವಿಸ್ತರಿಸಬಹುದು. ಸಾಫ್ಟ್ವೇರ್ ಮುಂಭಾಗದಲ್ಲಿ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 10 ಆಪರೇಟಿಂಗ್ ಸಿಸ್ಟಮ್ ಅನ್ನು ಫಂಟೌಚ್ ಓಎಸ್ 10.5 ಕಸ್ಟಮ್ ಸ್ಕಿನ್ನೊಂದಿಗೆ ಚಾಲನೆ ಮಾಡುತ್ತದೆ.

ವಿವೊ ವೈ 1 ಎಸ್ 4030 ಎಮ್‌ಎಹೆಚ್ ಬ್ಯಾಟರಿಯಿಂದ ಉತ್ತೇಜಿಸಲ್ಪಟ್ಟಿದೆ ಮತ್ತು ಡ್ಯುಯಲ್ 4 ಜಿ ವೋಲ್ಟೆ, ವೈ-ಫೈ, ಬ್ಲೂಟೂತ್ 5.0, ಜಿಪಿಎಸ್ + ಗ್ಲೋನಾಸ್ ಡ್ಯುಯಲ್ 4 ಜಿ ವೋಲ್ಟೆ, ವೈ-ಫೈ, ಬ್ಲೂಟೂತ್ 5.0, ಜಿಪಿಎಸ್ + ಗ್ಲೋನಾಸ್ ಅನ್ನು ಕನೆಕ್ಟಿವಿಟಿ ಭಾಗದಲ್ಲಿ ಬೆಂಬಲಿಸುತ್ತದೆ. ಕ್ಯಾಮೆರಾಗಳಿಗೆ ಸಂಬಂಧಿಸಿದಂತೆ ವಿವೊ ವೈ 1 ಗಳು 13 ಮೆಗಾಪಿಕ್ಸೆಲ್ ಸಿಂಗಲ್ ರಿಯರ್ ಕ್ಯಾಮೆರಾ ಸೆಟಪ್ ಜೊತೆಗೆ ಎಲ್‌ಇಡಿ ಫ್ಲ್ಯಾಷ್ ಅನ್ನು ಒಳಗೊಂಡಿದೆ. ವಾಟರ್ಡ್ರಾಪ್ ವಿನ್ಯಾಸದಡಿಯಲ್ಲಿ ಸ್ಮಾರ್ಟ್ಫೋನ್ ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 5 ಮೆಗಾಪಿಕ್ಸೆಲ್ ಕ್ಯಾಮೆರಾ ಸಂವೇದಕವನ್ನು ಹೊಂದಿದೆ.

ಹೆಚ್ಚಿನ ಮಾಹಿತಿಗಾಗಿ Jio Vivo Exclusive 2020 Offer ಮೇಲೆ ಕ್ಲಿಕ್ ಮಾಡಿ.

ಹೃದಯದ ಆರೋಗ್ಯಕ್ಕೆ 'ನೆಲಗಡಲೆ'

December 26, 2020

 


ಫಲಾಹಾರದಲ್ಲಿ ಇಡ್ಲಿ, ದೋಸೆಗಳಿಗೆ ಮಾಡುವ ಚಟ್ನಿಗಳಿಗೆ ನೆಲಗಡಲೆ ಹಾಕುತ್ತಾರೆ. ಇದು ದೇಹಕ್ಕೆ ನೀಡುವ ಒಳಿತು ಅಲ್ಪಸ್ವಲ್ಪವಲ್ಲ.

ಇದರಲ್ಲಿ ಸ್ಯಾಚುರೇಟೆಡ್ ಮತ್ತು ಪಾಲಿ ಅನ್ ಸ್ಯಾಚುರೇಟೆಡ್ ಕೊಬ್ಬುಗಳಿವೆ. ಇವು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿನ ಒಲೈಕ್ ಆಸಿಡ್ ಕೆಟ್ಟ ಕೊಲೆಸ್ಟ್ರಾಲ್ ತಗ್ಗಿಸಿ ಒಳ್ಳೆಯ ಕೊಲೆಸ್ಟ್ರಾಲನ್ನು ಹೃದಯಕ್ಕೆ ನೀಡುತ್ತದೆ. ಅಷ್ಟೇ ಅಲ್ಲದೇ.

* ಕೆಲವು ಬಗೆಯ ಕ್ಯಾನ್ಸರ್ ನಿವಾರಣೆಯಲ್ಲಿ ಇದು ಉತ್ತಮವಾಗಿ ಕೆಲಸ ಮಾಡುತ್ತದೆ. ಇದರಲ್ಲಿ ಬೀಟಾ ಸಿಟೋಸ್ಟೆರಾಲ್ ಇರುತ್ತದೆ. ಇದು ಕ್ಯಾನ್ಸರ್ ಕಾರಕವನ್ನು ನಿವಾರಿಸುತ್ತದೆ. ವಾರದಲ್ಲಿ ಎರಡು ಬಾರಿಯಾದರೂ ನೆಲಗಡಲೆ ತಿನ್ನುವವರಲ್ಲಿ ಕ್ಯಾನ್ಸರ್ ಸಾಧ್ಯತೆ ಶೇಕಡಾ 27 ರಿಂದ 58 ರಷ್ಟು ತಗ್ಗಿರುವುದಾಗಿ ಅಧ್ಯಯನದಲ್ಲಿ ತಿಳಿಸಲಾಗಿದೆ.

* ಗರ್ಭಿಣಿಯರಿಗೆ ನೆಲಗಡಲೆ ಮಾಡುವ ಒಳಿತು ಅಷ್ಟಿಷ್ಟಲ್ಲ.

ಇದರಲ್ಲಿ ಫೋಲೆಟ್ ಕೂಡ ಇದೆ. ಅಲರ್ಜಿ, ಉಬ್ಬಸ ಬರುವುದು ಕೂಡ ಇದರಿಂದ ತಗ್ಗುತ್ತದೆ.

* ಮಗು ಬೆಳೆಯಲು ಮಾಂಸ ಪೇಸಿಗಳ ಬೆಳವಣಿಗೆಗೆ ಮುಖ್ಯ. ಅವು ನೆಲಗಡಲೆಯಿಂದ ಸಾಧ್ಯ. ಇದರಿಂದ ಮೆದುಳು ಚುರುಕಾಗುವುದಲ್ಲದೆ, ಆಲೋಚನಾಶಕ್ತಿ ಚೆನ್ನಾಗಿರುತ್ತದೆ.

* ತೂಕ ಸಮತೋಲನದಲ್ಲಿಡುವಲ್ಲಿ ಒಳ್ಳೆಯ ರೀತಿಯಲ್ಲಿ ಇದು ಕೆಲಸ ಮಾಡುತ್ತದೆ. ನಾರು, ಕೊಬ್ಬು, ಪಿಷ್ಟ ಇದನ್ನು ತಿನ್ನುವುದರಿಂದ ಹೊಟ್ಟೆ ತುಂಬಿದಂತಾಗುತ್ತದೆ. ಶರೀರಕ್ಕೆ ಅಗತ್ಯದ ಶಕ್ತಿ ದೊರೆಯುತ್ತದೆ.

2 ಕೋಟಿ ರೂ.ಮೌಲ್ಯದ ನಕಲಿ ನೋಟು ವಶ: ಪಾದರಾಯನಪುರದಲ್ಲಿ ಮುದ್ರಣ!

December 26, 2020

 


ಬೆಂಗಳೂರಿನ ನಾಲ್ಕು ಕಡೆಗಳಲ್ಲಿ ದಾಳಿ ಮಾಡಿದ ಸಿಸಿಬಿ ಪೊಲೀಸರು ಸುಮಾರು 2 ಕೋಟಿ ರೂ. ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ವಿವಾದಾತ್ಮಕ ಪ್ರದೇಶವಾದ ಪಾದರಾಯನಪುರ ಮತ್ತು ವಿಲ್ಸನ್ ಗಾರ್ಡನ್ ಸೇರಿದಂತೆ ನಾನಾ ಕಡೆ ದಾಳಿ ಮಾಡಿ 2000 ಮತ್ತು 200 ರೂ. ಮುಖಬೆಲೆಯ ನೋಟುಗಳು ಹಾಗೂ ತಯಾರಿಕಾ ಯಂತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ನಕಲಿ ನೋಟಿನ ಹಾವಳಿ ಪ್ರಾರಂಭವಾಗಿದ್ದು, ಈ ಸಂಬಂಧ ಪಾದರಾಯನಪುರದ ಇಮ್ರಾನ್ ಹಾಗೂ ಮುಬಾರ್ ಅವರನ್ನು ಬಂಧಿಸಲಾಗಿದೆ.

ನಗರದ ನಾಲ್ಕು ಕಡೆ ಇವರು ನಕಲಿ ನೋಟು ತಯಾರಿಸುತ್ತಿದ್ದರೆಂದು ಹೇಳಲಾಗಿದ್ದು ಪಾದರಾಯನಪುರದ ಅರಾಫತ್ ನಗರದಲ್ಲಿನ ನೋಟು ತಯಾರಿಕೆ ಘಟಕದ ಮೇಲೆ ವಿಲ್ಸನ್ ಗಾರ್ಡನ್ ಪೋಲೀಸರು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರು ನಗರದಲ್ಲಿ ನಕಲಿ ನೋಟು ಹಾವಳಿ ಪ್ರಕರಣದಲ್ಲಿ ನಿನ್ನೆ ಜಮಾಲ್ ಎಂಬಾತನನ್ನು ಬಂಧಿಸಲಾಗಿತ್ತು. ಇದೀಗ ಇನ್ನಿಬ್ಬರನ್ನು ಬಂಧಿಸಿದ ಪೋಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ವಿಷ್ಣುದಾದಗೆ ಅಪಮಾನ: ದುಷ್ಕರ್ಮಿಗಳ ವಿರುದ್ಧ ಸಿಡಿದೆದ್ದ ನಟ ದರ್ಶನ್​

December 26, 2020

 


ಬೆಂಗಳೂರು: ಮಾಗಡಿ ರಸ್ತೆಯ ಟೋಲ್​ಗೇಟ್ ಬಳಿ ಪ್ರತಿಷ್ಠಾಪಿಸಿದ್ದ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಪುತ್ಥಳಿಯನ್ನು ಧ್ವಂಸಗೊಳಿಸಿದ್ದಕ್ಕೆ ಅವರ ಅಭಿಮಾನಿಗಳು ಸಿಡಿದೆದ್ದಿದ್ದಾರೆ. ವಿಷ್ಣುದಾದಾರ ಪ್ರತಿಮೆಯನ್ನು ಧ್ವಂಸ ಮಾಡಿ ವಿಕೃತಿ ಮೆರೆದ ಕಿಡಿಗೇಡಿಗಳನ್ನು ಬಂಧಿಸಿ ತಕ್ಕ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಸಂಬಂಧ ಮೈಸೂರಿನಲ್ಲಿ ವಿಷ್ಣು ಅಭಿಮಾನಿಗಳು ಬೀದಿಗಿಳಿದು ಪ್ರತಿಭಟನೆ ಮಾಡಿದ್ದಾರೆ. ಯಾವುದೇ ವ್ಯಕ್ತಿಗೆ ಅಪಮಾನ ಆಗಬಾರದು. ವಿಷ್ಣು ಪುತ್ಥಳಿಯನ್ನು ಧ್ವಂಸ ಮಾಡಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಸಚಿವ ವಿ.ಸೋಮಣ್ಣ ಕೂಡ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲ ಕನ್ನಡ ಚಿತ್ರರಂಗ ಸೇರಿದಂತೆ ಕನ್ನಡಿಗರೂ ಕೂಡ ಈ ದುಷ್ಕೃತ್ಯವನ್ನು ಖಂಡಿಸಿದ್ದಾರೆ. ಇದೀಗ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಕೂಡ ವಿಷ್ಣು ಅವರಿಗೆ ಅಪಮಾನ ಮಾಡಿದ್ದಕ್ಕೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ.'ಕರ್ನಾಟಕದಲ್ಲಿ ಅತಿಯಾಗಿ ಪ್ರೀತಿಸೋ, ಆರಾಧಿಸೋ ವ್ಯಕ್ತಿಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ನಮ್ಮ ನಲ್ಮೆಯ ಸಾಹಸ ಸಿಂಹ ಡಾ. ವಿಷ್ಣು ಸರ್ ಪುತ್ಥಳಿಯನ್ನು ಕಿಡಿಗೇಡಿಗಳು ಯಾರೂ ಇಲ್ಲದ ಹೊತ್ತಿನಲ್ಲಿ ಧ್ವಂಸ ಮಾಡಿರುವುದು ನಾಚಿಕೆಯ ಸಂಗತಿ. ಇಂತಹ ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು' ಎಂದು ನಟ ದರ್ಶನ್​ ಟ್ವೀಟ್ ಮಾಡಿದ್ದಾರೆ.

ವಿಷ್ಣು ಅವರ ಅಳಿಯ ಅನಿರುದ್ಧ್​ ಕೂಡ ಈ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. 'ಇಂಥ ಘಟನೆಗಳು ಮರುಕಳಿಸಬಾರದು. ಈ ಕೃತ್ಯ ಎಸಗಿರುವ ಕಿಡಿಗೇಡಿಗಳ ವಿರುದ್ಧ ಪೊಲೀಸರು ಸೂಕ್ತ ಕ್ರಮ ಜರುಗಿಸಬೇಕು. ವಿಷ್ಣುವರ್ಧನ್​​ ತೋರುತ್ತಿದ್ದ ಪ್ರೀತಿಯ ಕಾರಣಕ್ಕೆ ಅವರು ಇನ್ನೂ ಕೋಟ್ಯಂತರ ಅಭಿಮಾನಿಗಳ ಮನಸು-ಹೃದಯದಲ್ಲಿ ನೆಲೆಸಿದ್ದಾರೆ. ಅಭಿಮಾನಿಗಳು ಕೂಡ ಪ್ರೀತಿಯಿಂದ ನಡೆದುಕೊಳ್ಳಬೇಕು, ದ್ವೇಷ ಬೇಡ. ಇನ್ನು ಬೇರೆ ಕಡೆಯಲ್ಲಿ ಪುತ್ಥಳಿ ಸ್ಥಾಪನೆ ಬಗ್ಗೆ ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ಅದರಂತೆ ಒಂದೊಳ್ಳೆಯ ಜಾಗದಲ್ಲಿ ಅದ್ದೂರಿಯಾಗಿಯೇ ಪುತ್ಥಳಿ ನಿರ್ಮಾಣವಾಗಲಿದೆ. ಆ ಮೂಲಕ ಇನ್ನಷ್ಟು ಸಮಾಜಮುಖಿ ಕೆಲಸಗಳು ನಡೆಯಲಿವೆ' ಎಂದು ಅನಿರುದ್ಧ್​ ಹೇಳಿದ್ದಾರೆ.

ಇತ್ತೀಚೆಗಷ್ಟೇ ತೆಲಗು ಚಿತ್ರರಂಗದ ಹಿರಿಯ ನಟ ವಿಜಯ್​ ರಂಗರಾಜು, ವಿಷ್ಣುವರ್ಧನ್​ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿ ಕನ್ನಡಿಗರು ಹಾಗೂ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿ ಕ್ಷಮೆಯಾಚಿಸಿದ್ದರು. ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ವಿಷ್ಣು ಅಭಿಮಾನಿಗಳ ಮನ ನೋಯಿಸುವ ಮತ್ತೊಂದು ಘಟನೆ ನಡೆದಿದೆ.