ಸುಪ್ರೀಂ ಕೋರ್ಟ್'ನಿಂದ 'CBSEಯ 10, 12ನೇ ತರಗತಿ ಶುಲ್ಕ ವಿನಾಯಿತಿ' ಕೋರಿ ಸಲ್ಲಿಸಿದ್ದ ಅರ್ಜಿ ವಜಾ

November 17, 2020
Tuesday, November 17, 2020

 


ನವದೆಹಲಿ : ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸಿಬಿಎಸ್ ಇ ಮತ್ತು ದೆಹಲಿ ಸರ್ಕಾರಕ್ಕೆ ಸಿಬಿಎಸ್ ಇ 10ನೇ ತರಗತಿ ಮತ್ತು 12ನೇ ತರಗತಿ ಪರೀಕ್ಷಾ ಶುಲ್ಕ ಗಳನ್ನು ಮನ್ನಾ ಮಾಡುವಂತೆ ನಿರ್ದೇಶನ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ದೆಹಲಿ ಹೈಕೋರ್ಟ್ ನ ಸೆಪ್ಟೆಂಬರ್ 28ರ ಆದೇಶದ ವಿರುದ್ಧ ಎನ್ ಜಿಒ 'ಸೋಷಿಯಲ್ ಜುರಿಸ್ಟ್' ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್.ಸುಭಾಷ್ ರೆಡ್ಡಿ ಮತ್ತು ಎಂ.ಆರ್. ಶಾ ನ್ಯಾಯಪೀಠವು ಇಂದು ವಿಚಾರಣೆ ಕೈಗೆತ್ತಿಕೊಂಡಿತು. ಇಂತಹ ಸಿಬಿಎಸ್‌ಇ ಮತ್ತು ದೆಹಲಿ ಸರ್ಕಾರಕ್ಕೆ ಸಿಬಿಎಸ್‌ಇ 10 ಹಾಗೂ 12ನೇ ತರಗತಿಯ ಶುಲ್ಕವನ್ನು ಕೋವಿಡ್ ಕಾರಣಕ್ಕಾಗಿ ಮನ್ನಾ ಮಾಡುವಂತ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಪೀಠ, ಸೂಕ್ತ ಪ್ರಾಧಿಕಾರವನ್ನು ಸಂಪರ್ಕಿಸುವಂತೆ ಸುಪ್ರೀಂಕೋರ್ಟ್ ಪೀಠ ಸೂಚಿಸಿದೆ.

ಅಲ್ಲದೇ 'ಈ ರೀತಿ ಮಾಡುವಂತೆ ಸರ್ಕಾರಕ್ಕೆ ಕೋರ್ಟ್ ಹೇಗೆ ನಿರ್ದೇಶನ ನೀಡಬಹುದು ಎಂಬುದಾಗಿ ಅರ್ಜಿದಾರ ಪರ ವಕೀಲರನ್ನು ಪ್ರಶ್ನಿಸಿದಂತ ನ್ಯಾಯಪೀಠವು, ಸುಪ್ರೀಂ ಕೋರ್ಟ್ ನ್ಯಾಯಪೀಠಕ್ಕೆ ಅರ್ಜಿ ಸಲ್ಲಿಸುವ ಬದಲಾಗಿ, ನೀವು ಸರ್ಕಾರಕ್ಕೆ ಒಂದು ಮನವಿಯನ್ನು ನೀಡಿ ಎಂಬುದಾಗಿ ಸಲಹೆ ನೀಡಿ, ಪೀಸ್ ವಿನಾಯಿತಿಯ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್.ಸುಭಾಷ್ ರೆಡ್ಡಿ ಮತ್ತು ಎಂ.ಆರ್. ಶಾ ನ್ಯಾಯಪೀಠವು ವಜಾಗೊಳಿಸಿದೆ.


Thanks for reading ಸುಪ್ರೀಂ ಕೋರ್ಟ್'ನಿಂದ 'CBSEಯ 10, 12ನೇ ತರಗತಿ ಶುಲ್ಕ ವಿನಾಯಿತಿ' ಕೋರಿ ಸಲ್ಲಿಸಿದ್ದ ಅರ್ಜಿ ವಜಾ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಸುಪ್ರೀಂ ಕೋರ್ಟ್'ನಿಂದ 'CBSEಯ 10, 12ನೇ ತರಗತಿ ಶುಲ್ಕ ವಿನಾಯಿತಿ' ಕೋರಿ ಸಲ್ಲಿಸಿದ್ದ ಅರ್ಜಿ ವಜಾ

Post a Comment