ಕ್ಯಾಪ್ಸೂಲ್ ನಲ್ಲಿತ್ತು ಪ್ರಥಮ ವಿಶ್ವ ಮಹಾಯುದ್ಧ ಕಾಲದ ಪತ್ರ.!

November 10, 2020
Tuesday, November 10, 2020

 ನೂರು ವರ್ಷಗಳ ಹಿಂದೆ ಸೈನಿಕರೊಬ್ಬರು ಸಂದೇಶವನ್ನು ಇಟ್ಟು ಕಳುಹಿಸಿದ್ದ ಕ್ಯಾಪ್ಸೂಲ್ ಒಂದು ವಾಕಿಂಗ್ ಮಾಡಲು ಹೊರಟಿದ್ದ ಹಿರಿಯ ದಂಪತಿಗೆ ಸಿಕ್ಕಿದೆ.

ಜರ್ಮನ್ ಭಾಷೆಯಲ್ಲಿ ಬರೆದಿರುವ ಈ ಸಂದೇಶವನ್ನು ಇಲ್ಲಿನ ಇಂಗರ್‌ಶಿಮ್‌ನಲ್ಲಿ ನೆಲೆಸಿದ್ದ ಪದಾತಿ ದಳ ಯೋಧರೊಬ್ಬರು ಬರೆದಿದ್ದರು. ಪ್ರಥಮ ವಿಶ್ವ ಮಹಾಯುದ್ಧದ ಕಾಲಘಟ್ಟದಲ್ಲಿ ಈ ಪತ್ರ ಬರೆಯಲಾಗಿದ್ದು, ಮಿಲಿಟರಿ ಪಡೆಗಳ ಚಲನೆ ಕುರಿತಂತೆ ವಿವರಿಸಲಾಗಿದೆ. ಈ ಕ್ಯಾಪ್ಸೂಲ್ ‌ಅನ್ನು ಪಾರಿವಾಳಕ್ಕೆ ಕಟ್ಟಿ ರವಾನೆ ಮಾಡಲಾಗುತ್ತಿತ್ತು ಎನ್ನಲಾಗಿದೆ.

ಜುಲೈ 16ರ ದಿನಾಂಕ ಇರುವ ಈ ಪತ್ರದಲ್ಲಿರುವ ಅಕ್ಷರಗಳು ಮಾಸಿ ಹೋಗಿದ್ದು ಓದಲು ಸಾಧ್ಯವಾಗಿಲ್ಲ. ಆದರೂ ಸಹ ಈ ಪತ್ರವನ್ನು ಕಿರಿಯ ಸೈನಿಕರೊಬ್ಬರು ತಮ್ಮ ಹಿರಿಯ ಅಧಿಕಾರಿಗೆ ಬರೆದಿದ್ದಾರೆ ಎಂದು ಆರ್ಬೆಯ ವಸ್ತು ಸಂಗ್ರಹಾಲಯದ ಕ್ಯುರೇಟರ್‌ ಡಾಮಿನಿಕ್ ಜಾರ್ಡಿ ತಿಳಿಸಿದ್ದಾರೆ.

Thanks for reading ಕ್ಯಾಪ್ಸೂಲ್ ನಲ್ಲಿತ್ತು ಪ್ರಥಮ ವಿಶ್ವ ಮಹಾಯುದ್ಧ ಕಾಲದ ಪತ್ರ.! | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಕ್ಯಾಪ್ಸೂಲ್ ನಲ್ಲಿತ್ತು ಪ್ರಥಮ ವಿಶ್ವ ಮಹಾಯುದ್ಧ ಕಾಲದ ಪತ್ರ.!

Post a Comment