ಉಸಿರಿನ ದುರ್ವಾಸನೆ ದೂರ ಮಾಡಲು ಈ ಟಿಪ್ಸ್‌ ಅನುಸರಿಸಿ

November 06, 2020
Friday, November 6, 2020

 ಬಾಯಿ ಬಿಟ್ಟರೆ ಸಾಕು, ಜನ ಮಾರು ದೂರ ಓಡ್ತಾರೆ. ಕೆಲವರ ಬಾಯಿಯಿಂದ ಬರುವ ದುರ್ವಾಸನೆಯೇ ಇದಕ್ಕೆ ಕಾರಣ. ಇದನ್ನು ಹೋಗಲಾಡಿಸಲು ಮನೆ ಮದ್ದು ಇಲ್ಲಿದೆ.

ದಾಲ್ಚಿನಿ : ದಾಲ್ಚಿನಿಯಲ್ಲಿ ಬ್ಯಾಕ್ಟೀರಿಯ ನಿರೋಧಕ ಗುಣ ಇದೆ. 



ಇದು ಉಸಿರಿನ ದುರ್ವಾಸನೆಯನ್ನು ಹೋಗಲಾಡಿಸುತ್ತದೆ. ಇದನ್ನು ಹಾಗೆಯೇ ತಿನ್ನಬಹುದು. ಇಲ್ಲವೇ ಚಹಾದಲ್ಲಿ ಹಾಕಿ ಕುಡಿಯಬಹುದು. ಬಿಸಿ ನೀರಿಗೆ ಹಾಕಿಯೂ ಸೇವಿಸಬಹುದು.

ಸೋಂಪು : ಸೋಂಪು ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಊಟದ ನಂತರ ಇದನ್ನು ಸೇವಿಸುವುದರಿಂದ ಜೀರ್ಣ ಕ್ರಿಯೆ ಸುಲಭವಾಗುತ್ತದೆ. ಕೆಟ್ಟ ಉಸಿರಿಗೆ ಕಾರಣವಾಗುವ ಬ್ಯಾಕ್ಟೀರಿಯಾ ಸಾಯಿಸುವುದಲ್ಲದೇ, ಗ್ಯಾಸ್ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.

ಪುದೀನಾ : ಮೌತ್ ಪ್ರೆಶನರ್ ಗಳಲ್ಲಿ ಪುದೀನಾ ಬಳಸುತ್ತಾರೆ . ಅದು ತಂಪನೆ ಅನುಭವ ನೀಡುತ್ತದೆ . ಅದರ ಚಹಾ ಕುಡಿಯುವುದರಿಂದ ಅಥವಾ ಹಾಗೇ ಪುದಿನಾ ತಿನ್ನುವುದರಿಂದ ದುರ್ವಾಸನೆ ಹೋಗಲಾಡಿಸಬಹುದು .

ಏಲಕ್ಕಿ : ಇದರ ಕಾಳುಗಳನ್ನು ಬಾಯಲ್ಲಿ ಹಾಕಿ ಜಗಿಯುಬೇಕು . ಊಟದ ನಂತರ ಏಲಕ್ಕಿ ಚಹಾ ಕುಡಿಯಬಹುದು .

ಸಾಸಿವೆ ಎಣ್ಣೆ : ಒಂದು ಚಮಚ ಸಾಸಿವೆ ಎಣ್ಣೆಯನ್ನು ಬಾಯಲ್ಲಿ 30 ಸೆಕೆಂಡ್ ಇಟ್ಟುಕೊಂಡು ನಂತರ ಉಗಿಯಿರಿ .

ಗ್ರೀನ್ ಟೀ : ನಿಮ್ಮ ಉಸಿರನ್ನು ಸ್ವಚ್ಛವಾಗಿಟ್ಟುಕೊಳ್ಳಲು ಪ್ರತಿದಿನ ಒಂದು ಕಪ್ ಗ್ರೀನ್ ಟೀ ಸೇವಿಸಿ .

Dailyhunt

Thanks for reading ಉಸಿರಿನ ದುರ್ವಾಸನೆ ದೂರ ಮಾಡಲು ಈ ಟಿಪ್ಸ್‌ ಅನುಸರಿಸಿ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಉಸಿರಿನ ದುರ್ವಾಸನೆ ದೂರ ಮಾಡಲು ಈ ಟಿಪ್ಸ್‌ ಅನುಸರಿಸಿ

Post a Comment