ರಾಜ್ಯಸಭೆಗೆ ಸ್ಪರ್ಧಿಸದಿರಲು ಕಾಂಗ್ರೆಸ್ ನಿರ್ಧಾರ

November 13, 2020
Friday, November 13, 2020

 


ಬೆಂಗಳೂರು, ನ.14- ರಾಜ್ಯಸಭೆಯ ಒಂದು ಕ್ಷೇತ್ರಕ್ಕೆ ನಡೆಯುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ನಿರ್ಧರಿಸಿದೆ. ಬಿಜೆಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಅಶೋಕ್ ಗಸ್ತಿ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಡಿ.1ರಂದು ಚುನಾವಣೆ ನಡೆಯುತ್ತಿದೆ.

ಸಂಖ್ಯಾಬಲದಲ್ಲಿ ಬಿಜೆಪಿ ಸ್ಥಾನಗಳನ್ನು ಹೊಂದಿದೆ. ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡರೂ ಸಹ ಕಾಂಗ್ರೆಸ್ ಗೆಲ್ಲಲು ಸಾಧ್ಯವಿಲ್ಲದ ವಾತಾವರಣವಿದೆ.ರಾಜ್ಯಸಭೆಗೆ ಹಾಕುವ ಮತವನ್ನು ಪಕ್ಷದ ವೀಕ್ಷಕರಿಗೆ ತೋರಿಸಬೇಕಿರುವುದರಿಂದ ಅಡ್ಡಮತದಾನ ಮಾಡಿಸುವುದು ಬಹಳ ಕಷ್ಟ. ಆಡಳಿತಾರೂಢ ಬಿಜೆಪಿಯನ್ನು ಈ ಚುನಾವಣೆಯಲ್ಲಿ ಸೋಲಿಸುವುದು ಕಷ್ಟವಾಗಿರುವುದರಿಂದ ಕಾಂಗ್ರೆಸ್ ಅನಗತ್ಯವಾಗಿ ಕ್ರಮ ತೆಗೆದುಕೊಳ್ಳದೇ ಇರಲು ನಿರ್ಧರಿಸಿದೆ

ಜೆಡಿಎಸ್ ಕೂಡ ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿ ಹಾಕದಿರಲು ನಿರ್ಧರಿಸಿದ್ದು, ಬಿಜೆಪಿ ಅಭ್ಯರ್ಥಿ ಸುಲಭವಾಗಿ ಅವಿರೋಧ ಆಯ್ಕೆಯಾಗುವ ನಿರೀಕ್ಷೆಗಳಿವೆ. ಪ್ರತಿಪಕ್ಷಗಳ ಸ್ಪರ್ಧೆ ಇಲ್ಲದೇ ಇರುವುದರಿಂದ ಚುನಾವಣೆ ನಡೆಯದೇ ಇರುವ ಸಾಧ್ಯತೆ ಇದೆ.

Thanks for reading ರಾಜ್ಯಸಭೆಗೆ ಸ್ಪರ್ಧಿಸದಿರಲು ಕಾಂಗ್ರೆಸ್ ನಿರ್ಧಾರ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ರಾಜ್ಯಸಭೆಗೆ ಸ್ಪರ್ಧಿಸದಿರಲು ಕಾಂಗ್ರೆಸ್ ನಿರ್ಧಾರ

Post a Comment