ಗಡಿಯಲ್ಲಿ ಇಬ್ಬರು ಉಗ್ರರು ಖತಂ

November 10, 2020

 



ಶ್ರೀನಗರ, ನ.10- ಜಮ್ಮು -ಕಾಶ್ಮೀರದ ಶೋಫಿಯಾನ್ ಜಿಲ್ಲೆಯಲ್ಲಿ ಗಡಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಗೆ ಇಬ್ಬರು ಅಪರಿಚಿತ ಉಗ್ರರು ಬಲಿಯಾಗಿದ್ದಾರೆ. ಕುಡ್‍ಪೋರಾ ಪ್ರದೇಶದಲ್ಲಿ ಉಗ್ರರು ತಲೆಮರೆಸಿಕೊಂಡಿದ್ದಾರೆ ಎಂಬ ಮಾಹಿತಿಯನ್ನಾದರಿಸಿ ಕಾರ್ಯಾಚರಣೆಗಿಳಿದ ಭದ್ರತಾ ಪಡೆಗಳು ಉಗ್ರರ ಬಂಧನಕ್ಕೆ ಮುಂದಾಯಿತು.

ಈ ಸಂದರ್ಭದಲ್ಲಿ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಪರಸ್ಪರ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾದರು ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಗುಂಡಿನ ದಾಳಿಗೆ ಬಲಿಯಾದ ಉಗ್ರರು ಯಾವ ಸಂಘಟನೆಗೆ ಸೇರಿದರು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ತಿಳಿದು ಬಂದಿಲ್ಲ ಎಂದು ಮಿಲಿಟರಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Dailyhunt

Related Articles

Advertisement
Previous
Next Post »