BIG BREAKING : ನ.17ರಿಂದ ಕಾಲೇಜುಗಳ ಆರಂಭಕ್ಕೆ ರಾಜ್ಯ ಸರ್ಕಾರದಿಂದ 'ಮಾರ್ಗಸೂಚಿ' ರಿಲೀಸ್ : ಈ ನಿಯಮ ಪಾಲನೆ ಕಡ್ಡಾಯ

November 09, 2020
Monday, November 9, 2020




 ಬೆಂಗಳೂರು : ನವೆಂಬರ್ 17ರಿಂದ ರಾಜ್ಯದಲ್ಲಿ ಕೊರೋನಾ ಸೋಂಕಿನ ಭೀತಿಯಿಂದ ಮುಚ್ಚಲ್ಪಟ್ಟಿದ್ದಂತ ಕಾಲೇಜುಗಳನ್ನು ಆರಂಭಗೊಳ್ಳಲಿವೆ. ಇಂತಹ ಕಾಲೇಜುಗಳು ಅನುಸರಿಸಬೇಕಾದಂತ ಮಾರ್ಗಸೂಚಿಯನ್ನು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಈಗಾಗಲೇ ತಿಳಿಸಿತ್ತು. ಇಂತಹ ಮಾರ್ಗಸೂಚಿ ಕ್ರಮಗಳನ್ನು ರಾಜ್ಯದಲ್ಲಿ ಜಾರಿಗೊಳಿಸಿ, ರಾಜ್ಯ ಸರ್ಕಾರ ಆದೇಶಿಸಿದೆ.

ಈ ಕುರಿತಂತೆ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಶೀತಲ್ ಎಂ ಹಿರೇಮಠ ಅವರು ಕೋವಿಡ್-19 ಹಿನ್ನಲೆಯಲ್ಲಿ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸಲು ಪ್ರಮಾಣಿತ ಕಾರ್ಯಾಚರಣಾ ವಿಧಾನದ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಈ ಮಾರ್ಗಸೂಚಿಯಂತೆ ಕಾಲೇಜುಗಳು ಈ ಕೆಳಕಂಡ ಸಾಮಾನ್ಯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ.

ಸಾಮಾನ್ಯ ಮಾರ್ಗಸೂಚಿಗಳು

  • ಕಾಲೇಜಿನ ಸಂಪೂರ್ಣ ಕಟ್ಟಡ, ಮುಖ್ಯದ್ವಾರ, ಶೌಚಾಲಯ ಹಾಗೂ ಎಲ್ಲಾ ಕೊಠಡಿಗಳಲ್ಲಿ ಪೀಠೋಪಕರಣ ಮತ್ತು ಪಠ್ಯ ಸಾಮಗ್ರಿಗಳನ್ನು ಸ್ಯಾನಿಟೈಸ್ ಮಾಡಿಸುವುದು.
  • ಬೋಧಕರು, ವಿದ್ಯಾರ್ಥಿಗಳು ಹಾಗೂ ಇತರೆ ಸಿಬ್ಬಂದಿ ಕಡ್ಡಾಯವಾಗಿ 3 ದಿನಗಳ ಮುಂಚೆ ಕೋವಿಡ್-19(RT-PCR) ಪರೀಕ್ಷೆಯನ್ನು ಮಾಡಿಸಿಕೊಂಡು, ಟೆಸ್ಟ್ ರಿಪೋರ್ಟ್ ನೆಗೆಟಿವ್ ಇದ್ದಲ್ಲಿ ಮಾತ್ರ ವಿಶ್ವವಿದ್ಯಾಲಯ, ಕಾಲೇಜುಗಳಿಗೆ ಹಾಜರಾಗುವುದು.
  • ಎಲ್ಲಾ ಕಾಲೇಜುಗಳು ತಮ್ಮ ತಮ್ಮ ಸಮೀಪವಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳೊಂದಿಗೆ ಮ್ಯಾಪಿಂಗ್ ಮಾಡಿಕೊಳ್ಳುವುದು.
  • ಪ್ರತಿ ತರಗತಿಯಿಂದ ಒಬ್ಬ ವಿದ್ಯಾರ್ಥಿಯನ್ನು ಗುರುತಿಸಿ, ತನ್ನ ಸಹಪಾಠಿಗಳಲ್ಲೇನಾದರೂ ಕೋವಿಡ್ ಗೆ ಸಂಬಂಧಿಸಿದ ಲಕ್ಷಣಗಳು ಕಂಡುಬಂದಲ್ಲಿ, ಅದನ್ನು ಕೋವಿಡ್ ಕಾರ್ಯಪಡೆ, ಸೆಲ್ ಗಮನಕ್ಕೆ ತರುವಂತೆ ಸೂಚಿಸುವುದು.
  • ಕಾಲೇಜುಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮನೆಯಿಂದಲೇ ಊಟ ಮತ್ತು ಕುಟುಯುವ ನೀರನ್ನು ಸ್ವತಹ ತಂದು, ಅವರೇ ಉಪಯೋಗಿಸುವುದು.
  • ಉಪನ್ಯಾಸಕರು ಕಡ್ಡಾಯವಾಗಿ ಮಾಸ್ಕ್ ಮತ್ತು ಫೇಸ್ ಶೀಲ್ಡ್ ಅನ್ನು ಧರಿಸುವುದು.
  • ಕಾಲೇಜುಗಳಲ್ಲಿ ಲೈಬ್ರರಿ ಮತ್ತು ಕ್ಯಾಂಟೀನ್ ಗಳನ್ನು ತೆರೆಯುವಂತಿಲ್ಲ.
  • ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಎನ್ ಸಿಸಿ ಹಾಗೂ ಎನ್ ಎಸ್ ಎಸ್ ಚಟುವಟಿಕೆಗಳನ್ನು ಪ್ರಾರಂಭಿಸುವಂತಿಲ್ಲ.
  • ಪ್ರವೇಶ ಹಾಗೂ ನಿರ್ಗಮನ ಕೇಂದ್ರಗಳ ಸುರಕ್ಷತಾ ಕ್ರಮಗಳು

    • ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಥರ್ಮಲ್ ಸ್ಕ್ಯಾನರ್ ಮತ್ತು ಸ್ಯಾನಿಟೈಸರ್ಗಳ ಸೂಕ್ತ ವ್ಯವಸ್ಥೆಗಳನ್ನು ಮಾಡಬೇಕು
    • ಪ್ರವೇಶ, ನಿರ್ಗಮನ ಸ್ಥಳಗಳಲ್ಲಿ ಜನಸಂದಣಿಯನ್ನು ತಪ್ಪಿಸಬೇಕು. ವಿವಿಧ ಕೋರ್ಸುಗಳಿಗೆ ಸೀಮಿತ ವಿದ್ಯಾರ್ಥಿಗಳ ಸಂಖ್ಯೆಯನ್ನು ನಿಗಧಿಗೊಳಿಸಿ, ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನದ ಸಮಯಗಳನ್ನು ಅನುಸರಿಸಬೇಕು.
    • ಆವರಣದ ಒಳಗೆ ಮತ್ತು ಹೊರಗೆ ಕ್ಯೂ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು, ನೆಲದ ಮೇಲೆ 6 ಅಡಿಗಳ ಅಂತವಿರುವ ನಿರ್ಧಿಷ್ಟ ಗುರುತುಗಳನ್ನು ಮಾಡುವುದು. ಅದನ್ನು ಪಾಲಿಸುವುದು.
    • ವಿದ್ಯಾರ್ಥಿಗಳ ಪ್ರವೇಶ ಮತ್ತು ನಿರ್ಗಮನದ ಮೇಲ್ವಿಚಾರಣೆಯನ್ನು ಮಾಡಬೇಕು.
    • ವಿದ್ಯಾರ್ಥಿ, ಬೋಧಕ, ಬೋಧಕೇತರ ಸಿಬ್ಬಂದಿಯ ಥರ್ಮಲ್ ತಪಾಸಣೆ ಮುಖಗವಸು, ಮಾಸ್ಕ್ ಧರಿಸುವುದು. ಕೈಗಳನ್ನು ಶುದ್ದಿಗೊಳಿಸುವುದನ್ನು ಎಲ್ಲಾ ಪ್ರವೇಶದಲ್ಲಿ ಖಚಿತಪಡಿಸಿಕೊಳ್ಳುವುದು.
    • ಜ್ವರ, ಕೆಮ್ಮು, ಉಸಿರಾಟದ ತೊಂದರೆಯ ಲಕ್ಷಣಗಳು ಹೊಂದಿರುವವರು ಶಿಕ್ಷಣ ಸಂಸ್ಥೆಯ ಆವರಣದೊಳಗೆ ಪ್ರವೇಶಿಸುವುದನ್ನು ನಿಷೇಧಿಸುವುದು.

    ಹೀಗೆ ಈ ಮೇಲಿನ ಸುರಕ್ಷಾ ಕ್ರಮಗಳನ್ನು ಅನುಸಿರಿಕೊಂಡು, ಕಾಲೇಜು ಆರಂಭಕ್ಕೆ ಶಿಕ್ಷಣ ಇಲಾಖೆ ಸೂಚಿಸಿದೆ.

Thanks for reading BIG BREAKING : ನ.17ರಿಂದ ಕಾಲೇಜುಗಳ ಆರಂಭಕ್ಕೆ ರಾಜ್ಯ ಸರ್ಕಾರದಿಂದ 'ಮಾರ್ಗಸೂಚಿ' ರಿಲೀಸ್ : ಈ ನಿಯಮ ಪಾಲನೆ ಕಡ್ಡಾಯ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on BIG BREAKING : ನ.17ರಿಂದ ಕಾಲೇಜುಗಳ ಆರಂಭಕ್ಕೆ ರಾಜ್ಯ ಸರ್ಕಾರದಿಂದ 'ಮಾರ್ಗಸೂಚಿ' ರಿಲೀಸ್ : ಈ ನಿಯಮ ಪಾಲನೆ ಕಡ್ಡಾಯ

Post a Comment