ಡಿಸೆಂಬರ್ 31 ರವರೆಗೆ ಶಾಲೆಗಳು ಬಂದ್ : ಸರ್ಕಾರದಿಂದ ಮಹತ್ವದ ನಿರ್ಧಾರ

November 06, 2020
Friday, November 6, 2020

 ಒಡಿಶಾ : ಹಲವು ರಾಜ್ಯಗಳು ಶಾಲೆಗಳನ್ನು ಪುನರಾರಂಭಿಸಲು ಕ್ರಮ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಡಿಸೆಂಬರ್ 31ರ ವರೆಗೆ ರಾಜ್ಯದಲ್ಲಿ ಶಾಲೆಗಳನ್ನು ಮುಚ್ಚಲಾಗುವುದು ಎಂದು ಒಡಿಶಾ ರಾಜ್ಯ ಸರ್ಕಾರ ಘೋಷಿಸಿದೆ. ಡಿಸೆಂಬರ್ ಮಧ್ಯಭಾಗದಲ್ಲಿ ಕೊವಿಡ್-19 ನ ಎರಡನೇ ಅಲೆ ಯು ದೇಶಕ್ಕೆ ಅಪ್ಪಳಿಸಲಿದೆ ಎಂಬ ಭೀತಿ ಇದೆ.

ಒಡಿಶಾದ ಶಾಲೆಗಳು ಮತ್ತು ಸಮೂಹ ಶಿಕ್ಷಣ ಇಲಾಖೆ (ಎಸ್ ಅಂಡ್ ಎಂಇ) ಇಲಾಖೆ ಇತ್ತೀಚೆಗೆ ಹೊರಡಿಸಿದ ಆದೇಶದಲ್ಲಿ, '… ಮತ್ತು 2020ರ ಡಿಸೆಂಬರ್ 31ರವರೆಗೆ ರಾಜ್ಯದ ಎಲ್ಲ ಶಾಲೆಗಳು ಮುಚ್ಚಬೇಕು ಎಂದು ರಾಜ್ಯ ಸರ್ಕಾರ ಈ ಮೂಲಕ ನಿರ್ದೇಶನ ನೀಡಿದೆ,' ಎಂದು ಹೇಳಿದರು. ಎಸ್&ಎಂಇ ಕಾರ್ಯದರ್ಶಿ ಸತ್ಯಬ್ರತಾ ಸಾಹು ಮಾತನಾಡಿ, ಇಲಾಖೆ ವಿವಿಧ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿ, ಅವರ ಮಾಹಿತಿ ಪಡೆದುಕೊಂಡಿರುವುದಾಗಿ ತಿಳಿಸಿದರು.

ಈ ಅವಧಿಯಲ್ಲಿ ಆನ್ ಲೈನ್ ದೂರ ಕಲಿಕೆಗೆ ಅವಕಾಶ ಮತ್ತು ಪ್ರೋತ್ಸಾಹ ನೀಡಲಾಗುವುದು ಎಂದು ಎಸ್ ಆಯಂಡ್ ಎಂಇ ಹೇಳಿದೆ. ಪ್ರವೇಶ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆ, ಮೌಲ್ಯಮಾಪನ ಮತ್ತಿತರ ಆಡಳಿತಾತ್ಮಕ ಚಟುವಟಿಕೆಗಳನ್ನು ಶಿಕ್ಷಣ ಸಂಸ್ಥೆಗಳಲ್ಲಿ ನಡೆಸಲು ಅನುಮತಿ ನೀಡಲಾಗಿದೆ.


Thanks for reading ಡಿಸೆಂಬರ್ 31 ರವರೆಗೆ ಶಾಲೆಗಳು ಬಂದ್ : ಸರ್ಕಾರದಿಂದ ಮಹತ್ವದ ನಿರ್ಧಾರ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಡಿಸೆಂಬರ್ 31 ರವರೆಗೆ ಶಾಲೆಗಳು ಬಂದ್ : ಸರ್ಕಾರದಿಂದ ಮಹತ್ವದ ನಿರ್ಧಾರ

Post a Comment