ದೇಶದ ರೈತರಿಗೆ 'ಸಿಹಿ ಸುದ್ದಿ': ಶೀಘ್ರವೇ ನಿಮ್ಮ ಖಾತೆಗೆ ಜಮೆಯಾಗಲಿದೆ 2000 ರೂ.

November 07, 2020
Saturday, November 7, 2020

 ನವದೆಹಲಿ : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಥವಾ ಪಿಎಂ-ಕಿಸಾನ್ ಎಂಬ ಅತಿ ದೊಡ್ಡ ಕೃಷಿ ಯೋಜನೆ ಅಡಿಯಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ 2000 ರೂ. ಪ್ರಧಾನ ಮಂತ್ರಿ ಕಿಸಾನ್ ಸಮನ್ ನಿಧಿ ಯೋಜನೆಯ ಏಳನೇ ಕಂತು ಡಿಸೆಂಬರ್ 1ರಿಂದ ಆರಂಭವಾಗಲಿದೆ. ಅಂದರೆ, 25 ದಿನಗಳ ನಂತರ, ಕೇಂದ್ರ ಸರ್ಕಾರ ನಿಮ್ಮ ಖಾತೆಗೆ 2000 ರೂ ನೀಡಲಿದೆ.

ಈ ಯೋಜನೆಯಡಿ ವಾರ್ಷಿಕ ಮೂರು ಕಂತುಗಳಲ್ಲಿ 6000 ರೂ. ರೈತರಿಗೆ ಈವರೆಗೆ 6 ಕಂತುಗಳನ್ನು ಕಳುಹಿಸಲಾಗಿದೆ. ಕಳೆದ 23 ತಿಂಗಳಲ್ಲಿ ಕೇಂದ್ರ ಸರ್ಕಾರ 11.17 ಕೋಟಿ ರೈತರಿಗೆ 95 ಕೋಟಿ ರೂ.ಗೂ ಹೆಚ್ಚು ನೆರವು ನೀಡಿದೆಯಂತೆ.ಮೇಲೆ ತಿಳಿಸಿದಂತೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ಮೂರು ಕಂತುಗಳಲ್ಲಿ ಹಣ ವರ್ಗಾವಣೆ ಮಾಡುತ್ತದೆ. ಮೊದಲ ಕಂತು ಡಿಸೆಂಬರ್ 1 ರಿಂದ ಮಾರ್ಚ್ 31, ಎರಡನೇ ಕಂತು ಏಪ್ರಿಲ್ 1 ರಿಂದ ಜುಲೈ 31 ರ ನಡುವೆ ಮತ್ತು ಆಗಸ್ಟ್ 1 ರಿಂದ ನವೆಂಬರ್ 30 ರ ನಡುವೆ ಮೂರನೇ ಕಂತಿನ ಹಣ ಬರುತ್ತದೆ.

ನಿಮ್ಮ ಎಲ್ಲ ದಾಖಲೆಗಳು ಸರಿಯಾಗಿದ್ದರೆ 11.17 ಕೋಟಿ ನೋಂದಾಯಿತ ರೈತರಿಗೆ ಏಳನೇ ಕಂತಿನ ಲಾಭ ಸಿಗಲಿದೆ. ಆದ್ದರಿಂದ, ನಿಮ್ಮ ದಾಖಲೆಯನ್ನು ಇಂದೇ ಪರಿಶೀಲಿಸಿ, ಒಂದು ವೇಳೆ ನಿಮ್ಮ ದಾಖಲೆಯಲ್ಲಿ ಯಾವುದೇ ತೊಂದ್ರೆ ಇರದೇ ಹೋದ್ರೆ ನೀವು ಇದರಿಂದ ಹಣ ಪಡೆಯಲು ಯಾವುದೇ ತೊಂದರೆಯಿಲ್ಲ. ದಾಖಲೆಯಲ್ಲಿ ಏನಾದರೂ ಸಮಸ್ಯೆ ಇದ್ದರೆ ಖಂಡಿತ ನೀವು ಯೋಜನೆಯ ಪ್ರಯೋಜನ ವನ್ನು ಪಡೆಯುವುದಿಲ್ಲ. ಕೃಷಿ ಸಚಿವಾಲಯದ ಮೂಲಗಳ ಪ್ರಕಾರ, 1.3 ಕೋಟಿ ರೈತರು ಅರ್ಜಿ ಸಲ್ಲಿಸಿ, ಹಣ ಪಡೆದಿಲ್ಲ, ಇದಕ್ಕೆ ಕಾರಣ ಅವರ ದಾಖಲೆ ತಪ್ಪಾಗಿದೆ ಅಥವಾ ಆಧಾರ್ ಕಾರ್ಡ್ ಇಲ್ಲ. ಅಥಾವ ದಾಖಲೆಯಲ್ಲಿ ಕಾಗುಣಿತ ದೋಷವಿದ್ದರೆ ಹಣ ವರ್ಗಾವಣೆ ಯಾಗುವುದಿಲ್ಲ ಅಂತ ತಿಳಿಸಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಲಿಂಕ್ ಮಾಡಲಾಗಿದೆ. ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ರೈತರಿಗೆ ಮೂರು ದಾಖಲೆಗಳ ಅಗತ್ಯವಿರುತ್ತದೆ. ಆದ್ದರಿಂದ ಕೆಸಿಸಿಗೆ ಅರ್ಜಿ ಸಲ್ಲಿಸದವರು ಇದರ ಪ್ರಯೋಜನ ಪಡೆದುಕೊಳ್ಳಬೇಕು.

ಇದು ಮೋದಿ ಸರ್ಕಾರದ ಅತಿ ದೊಡ್ಡ ರೈತ ಯೋಜನೆಯಾಗಿರುವುದರಿಂದ ರೈತರಿಗೆ ಹಲವು ರೀತಿಯ ಸೌಲಭ್ಯಗಳನ್ನು ನೀಡಲಾಗಿದೆ. ರೈತರ ಅನುಕೂಲಕ್ಕಾಗಿ ಸರ್ಕಾರ ಹಲವು ಸಹಾಯವಾಣಿ ಸಂಖ್ಯೆಗಳನ್ನು ನೀಡಿದೆ. ಈ ಸಂಖ್ಯೆಗಳ ಮೂಲಕ ದೇಶದ ಯಾವುದೇ ಭಾಗದ ರೈತರು ನೇರವಾಗಿ ಕೃಷಿ ಸಚಿವಾಲಯವನ್ನು ಸಂಪರ್ಕಿಸಬಹುದು.

ಪಿಎಂ ಕಿಸಾನ್ ಟೋಲ್ ಫ್ರೀ ಸಂಖ್ಯೆ: 18001155266
ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ: 155261
ಪಿಎಂ ಕಿಸಾನ್ ಲ್ಯಾಂಡ್ ಲೈನ್ ಸಂಖ್ಯೆಗಳು: 011-23381092, 23382401
ಪಿಎಂ ಕಿಸಾನ್ ನ ಹೊಸ ಸಹಾಯವಾಣಿ: 011-24300606
ಪಿಎಂ ಕಿಸಾನ್ ಮತ್ತೊಂದು ಸಹಾಯವಾಣಿ: 0120-6025109
ಇಮೇಲ್ ID: pmkisan-ict@gov.in


Thanks for reading ದೇಶದ ರೈತರಿಗೆ 'ಸಿಹಿ ಸುದ್ದಿ': ಶೀಘ್ರವೇ ನಿಮ್ಮ ಖಾತೆಗೆ ಜಮೆಯಾಗಲಿದೆ 2000 ರೂ. | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ದೇಶದ ರೈತರಿಗೆ 'ಸಿಹಿ ಸುದ್ದಿ': ಶೀಘ್ರವೇ ನಿಮ್ಮ ಖಾತೆಗೆ ಜಮೆಯಾಗಲಿದೆ 2000 ರೂ.

Post a Comment