News

ಮೋದಿ ಸರ್ಕಾರದಿಂದ ಪ್ರತಿ ಕುಟುಂಬಕ್ಕೂ ಸಿಗಲಿದೆಯೇ 10 ಸಾವಿರ ರೂ.? ಇದರ ಹಿಂದಿನ ಸತ್ಯವನ್ನು ತಿಳಿಯಿರಿ

  


Fact Check: ದೇಶದಲ್ಲಿ ಕೊರೊನಾವೈರಸ್ ಏಕಾಏಕಿ ಮಧ್ಯೆ ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಸುದ್ದಿಗಳ ಪ್ರವೃತ್ತಿ ಗಮನಾರ್ಹವಾಗಿ ಹೆಚ್ಚಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಇಂತಹ ವದಂತಿಗಳನ್ನು ನಂಬಬೇಡಿ ಎಂದು ಸರ್ಕಾರದ ಪರವಾಗಿ ಪದೇ ಪದೇ ಮನವಿ ಮಾಡಲಾಗಿದೆ. ಅಧಿಕೃತ ಪ್ರಕಟಣೆ ಬರುವವರೆಗೂ ಇಂತಹ ದಾರಿತಪ್ಪಿಸುವ ಸುದ್ದಿಗಳನ್ನು ನಂಬಬೇಡಿ ಎಂದು ಜನರಿಗೆ ತಿಳಿಸಲಾಗಿದೆ. ಇದಕ್ಕಾಗಿ ಸರ್ಕಾರದ ಪಿಐಬಿಯಿಂದ ಫ್ಯಾಕ್ಟ್ ಚೆಕ್ ಅನ್ನು ಸಹ ಪ್ರಾರಂಭಿಸಲಾಗಿದೆ. ಸರಿಯಾದ ಮಾಹಿತಿಯನ್ನು ಜನರಿಗೆ ತಲುಪಿಸುವುದು ಮತ್ತು ದಾರಿತಪ್ಪಿಸುವ ಸುದ್ದಿಗಳ ವಿರುದ್ಧ ಎಚ್ಚರಿಕೆ ನೀಡುವುದು ಇದರ ಉದ್ದೇಶ.

ಮತ್ತೊಂದೆಡೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಪೋಸ್ಟ್ನಲ್ಲಿ ಭಾರತ ಸರ್ಕಾರವು ‘ಪಿಎಂ ಫಂಡ್ಸ್’ ( PM Funds) ಅಡಿಯಲ್ಲಿ ಪ್ರತಿ ಕುಟುಂಬಕ್ಕೆ 10,000 ರೂ.

ಹಣವನ್ನು ನೀಡುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಪಿಐಬಿಯ ಫ್ಯಾಕ್ಟ್ ಚೆಕ್ (Fact Check) ನಲ್ಲಿ ಈ ಸುದ್ದಿ ನಕಲಿ ಎಂದು ಕಂಡುಬಂದಿದೆ ಮತ್ತು ಅಂತಹ ಯಾವುದೇ ಘೋಷಣೆಯನ್ನು ಸರ್ಕಾರ ಮಾಡಿಲ್ಲ ಎಂದು ತಿಳಿಸಲಾಗಿದೆ.

ಈ ಕುರಿತಂತೆ ಪಿಐಬಿ ಫ್ಯಾಕ್ಟ್ ಚೆಕ್ ಟ್ವೀಟ್ ಮಾಡಿದ್ದು ‘ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿರುವ ಪೋಸ್ಟ್ನಲ್ಲಿ ಭಾರತ ಸರ್ಕಾರವು ‘ಪಿಎಂ ಫಂಡ್ಸ್’ ಅಡಿಯಲ್ಲಿ ಪ್ರತಿ ಕುಟುಂಬಕ್ಕೆ 10,000 ನೀಡುತ್ತಿದೆ ಎಂದು ಹೇಳಲಾಗುತ್ತಿದೆ. ಈ ಹಕ್ಕು ನಕಲಿ. ಭಾರತ ಸರ್ಕಾರ ಅಂತಹ ಯಾವುದೇ ಘೋಷಣೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ.
ಇದಕ್ಕೂ ಮೊದಲು ದೇಶದಲ್ಲಿ ಕರೋನಾ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು, ಡಿಸೆಂಬರ್ 1 ರಿಂದ ಇಡೀ ದೇಶದಲ್ಲಿ ಮತ್ತೆ ಲಾಕ್‌ಡೌನ್ ವಿಧಿಸಲಾಗುವುದು ಎಂದು ಹೇಳಲಾಗುತ್ತಿತ್ತು. ಆದಾಗ್ಯೂ ಇದೂ ಕೂಡ ಒಂದು ವದಂತಿಯಷ್ಟೇ ಎಂದು ಪಿಐಬಿ ಫ್ಯಾಕ್ಟ್ ಚೆಕ್ ತಿಳಿಸಿತ್ತು.

Leave a Reply

Your email address will not be published.