News

ದೇಶ ಕಾಯುವ ವೀರ ಯೋಧರೊಂದಿಗೆ ಪ್ರಧಾನಿ ಮೋದಿ ದೀಪಾವಳಿ ಆಚರಣೆ

 


ನವದೆಹಲಿ
: ಪ್ರತೀ ವರ್ಷದಂತೆ ಈ ವರ್ಷವೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೀಪಾವಳಿ ಹಬ್ಬವನ್ನು ದೇಶದ ಗಡಿ ಕಾಯುವ ವೀರ ಯಧರೊಂದಿಗೆ ಆಚರಿಸಿಕೊಳ್ಳಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನದ ಜೈಸಲ್ಮೇರ್‌ನ ಲಾಂಗ್‌ವಾಲಾದಲ್ಲಿ ಸೈನಿಕರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಲಿದ್ದಾರೆಂದು ತಿಳಿದುಬಂದಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ರಕ್ಷಣಾ ಸಚಿವ ಬಿಪಿನ್ ರಾವತ್, ಭಾರತೀಯ ಸೇನಾ ಮುಖ್ಯಸ್ಥ ಎಂಎಂ ನರವಾಣೆ ಹಾಗೂ ಬಿಎಸ್‌ಎಫ್ ಮಹಾಪ್ರಧಾನ ನಿರ್ದೇಶಗ ರಾಕೇಶ್ ಆಸ್ತಾನಾ ಅವರು ಸಾಥ್ ನೀಡಲಿದ್ದಾರೆಂದು ವರದಿಗಳು ತಿಳಿಸಿವೆ.

2014ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಮೋದಿಯವರು ಯೋಧರ ಜೊತೆಗೆ ದೀಪಾವಳಿ ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸಾಮಾನ್ಯವಾದಿ ಮೋದಿಯವರು ಇಷ್ಟು ವರ್ಷ ಕಾಶ್ಮೀ ಮತ್ತು ದೇಶದ ಉತ್ತರ ಗಡಿ ಪ್ರದೇಶಗಳಿಗೆ ಭೇಟಿ ನೀಡಿ ಯೋಧರಿಗೆ ಸಿಹಿ ನೀಡಿ, ಅವರೊಂದಿಗೆ ಕಾಲ ಕಳೆಯುತ್ತಿದ್ದರು.

Leave a Reply

Your email address will not be published.