News

ಕ್ಯಾಪ್ಸೂಲ್ ನಲ್ಲಿತ್ತು ಪ್ರಥಮ ವಿಶ್ವ ಮಹಾಯುದ್ಧ ಕಾಲದ ಪತ್ರ.!

 


ನೂರು ವರ್ಷಗಳ ಹಿಂದೆ ಸೈನಿಕರೊಬ್ಬರು ಸಂದೇಶವನ್ನು ಇಟ್ಟು ಕಳುಹಿಸಿದ್ದ ಕ್ಯಾಪ್ಸೂಲ್ ಒಂದು ವಾಕಿಂಗ್ ಮಾಡಲು ಹೊರಟಿದ್ದ ಹಿರಿಯ ದಂಪತಿಗೆ ಸಿಕ್ಕಿದೆ.

ಜರ್ಮನ್ ಭಾಷೆಯಲ್ಲಿ ಬರೆದಿರುವ ಈ ಸಂದೇಶವನ್ನು ಇಲ್ಲಿನ ಇಂಗರ್‌ಶಿಮ್‌ನಲ್ಲಿ ನೆಲೆಸಿದ್ದ ಪದಾತಿ ದಳ ಯೋಧರೊಬ್ಬರು ಬರೆದಿದ್ದರು. ಪ್ರಥಮ ವಿಶ್ವ ಮಹಾಯುದ್ಧದ ಕಾಲಘಟ್ಟದಲ್ಲಿ ಈ ಪತ್ರ ಬರೆಯಲಾಗಿದ್ದು, ಮಿಲಿಟರಿ ಪಡೆಗಳ ಚಲನೆ ಕುರಿತಂತೆ ವಿವರಿಸಲಾಗಿದೆ. ಈ ಕ್ಯಾಪ್ಸೂಲ್ ‌ಅನ್ನು ಪಾರಿವಾಳಕ್ಕೆ ಕಟ್ಟಿ ರವಾನೆ ಮಾಡಲಾಗುತ್ತಿತ್ತು ಎನ್ನಲಾಗಿದೆ.

ಜುಲೈ 16ರ ದಿನಾಂಕ ಇರುವ ಈ ಪತ್ರದಲ್ಲಿರುವ ಅಕ್ಷರಗಳು ಮಾಸಿ ಹೋಗಿದ್ದು ಓದಲು ಸಾಧ್ಯವಾಗಿಲ್ಲ. ಆದರೂ ಸಹ ಈ ಪತ್ರವನ್ನು ಕಿರಿಯ ಸೈನಿಕರೊಬ್ಬರು ತಮ್ಮ ಹಿರಿಯ ಅಧಿಕಾರಿಗೆ ಬರೆದಿದ್ದಾರೆ ಎಂದು ಆರ್ಬೆಯ ವಸ್ತು ಸಂಗ್ರಹಾಲಯದ ಕ್ಯುರೇಟರ್‌ ಡಾಮಿನಿಕ್ ಜಾರ್ಡಿ ತಿಳಿಸಿದ್ದಾರೆ.

Leave a Reply

Your email address will not be published.