News

ಕೇಂದ್ರ ಸರ್ಕಾರದಿಂದ ಸಾಲಗಾರರಿಗೆ ಸಿಹಿಸುದ್ದಿ : ಖಾತೆಗೆ ಪರಿಹಾರ ಪ್ರೋತ್ಸಾಹಧನ ಪಾವತಿ

 ನವದೆಹಲಿ : ಕೇಂದ್ರ ಸರ್ಕಾರವು ಗೃಹ ಮತ್ತು ಸಣ್ಣ ಸಾಲಗಾರರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಇಎಂಐ ಮುಂದೂಡಿಕೆ ಸೌಲಭ್ಯ ನೀಡಿದ್ದ 6 ತಿಂಗಳ ಅವಧಿಗೆ ಅನ್ವಯಿಸುವಂತೆ ಚಕ್ರಬಡ್ಡಿ ಮರುಪಾವತಿ ಆರಂಭಿಸಿವೆ.

2 ಕೋಟಿ ರೂ.ಗಳಿಗಿಂತ ಕಡಿಮೆ ಮೊತ್ತದ ಗೃಹ ಸಾಲ, ಸಣ್ಣ ಉದ್ದಿಮೆಗಳ ಸಾಲ, ಶಿಕ್ಷಣ ಸಾಲ, ಕ್ರೆಡಿಟ್ ಕಾರ್ಡ್ ಸಾಲ, ವಾಹನ ಸಾಲ, ಗೃಹ ಬಳಕೆ ವಸ್ತುಗಳ ಖರೀದಿಗೆ ಮಾಡಿದ ಸಾಲ,ಚಿನ್ನಾಭರಣ ಅಡವಿಟ್ಟು ಮಾಡಿದ ಸಾಲವೂ ಸೇರಿದಂತೆ ಹಲವು ರೀತಿಯ ಸಾಲಕ್ಕೆ ಇದು ಅನ್ವಯಿಸಲಿದೆ.

ಇಎಂಐ ಮುಂದೂಡಿಕೆ ಸೌಲಭ್ಯ ಪಡೆದವರಿಗೂ ಬಡ್ಡಿಯಷ್ಟು ಮೊತ್ತದ ಪ್ರೋತ್ಸಾಹಧನವನ್ನು ಮರು ಪಾವತಿ ಮಾಡುವುದಾಗಿ ಕೇಂದ್ರ ಸರ್ಕಾರ ಇತ್ತೀಚಿಗೆ ಸುಪ್ರೀಂಕೋರ್ಟ್ ಗೆ ತಿಳಿಸಿತ್ತು.


Leave a Reply

Your email address will not be published.