ನವದೆಹಲಿ : ಕೇಂದ್ರ ಸರ್ಕಾರವು ಕಂಪನಿಯ ಕಾರ್ಮಿಕರು, ನೌಕರರಿಗೆ ಮತ್ತೊಂದು ಭರ್ಜರಿ ಸಿಹಿಸುದ್ದಿ ನೀಡಿದ್ದು, ಕಂಪನಿಗಳು 40 ವರ್ಷ ಮೇಲ್ಪಟ್ಟ ತಮ್ಮ ಎಲ್ಲ ಉದ್ಯೋಗಿಗಳಿಗೆ ವಾರ್ಷಿಕ ಉಚಿತ ಆರೋಗ್ಯ ತಪಾಸಣೆ ನಡೆಸಬೇಕು ಎಂಬ ಹೊಸ ಕಾರ್ಮಿಕ ನಿಯಮಗಳನ್ನು ರಚಿಸಲು ಮುಂದಾಗಿದೆ.
ಹೊಸ ಕಾರ್ಮಿಕ ನಿಯಮಗಳ ಸಂಬಂಧ ಅಕ್ಟೋಬರ್ 24 ರಂದು ನಡೆದ ಕಾರ್ಮಿಕ ಸಚಿವಾಲಯದ ಸಭೆಯಲ್ಲಿ ಚರ್ಚಿಸಲಾಇದ್ದು, ಶೀಘ್ರದಲ್ಲೇ ಇವುಗಳನ್ನು ಸಾರ್ವಜನಿಕರ ಮುಂದೆ ಇರಿಸಲಾಗುತ್ತಿದೆ ಎನ್ನಳಾಆಗಿದೆ.
ಉದ್ಯೋಗಾದಾತರು ಪ್ರತಿ ವರ್ಷ 40 ವರ್ಷ ಮೇಲ್ಪಟ್ಟ ಉದ್ಯೋಗಿಗಳ ಉಚಿತ ಆರೋಗ್ಯ ತಪಾಸಣೆಯನ್ನು ಅರ್ಹ ವೈದ್ಯರ ಮೂಲಕ ನಡೆಸಬೇಕು. ಆ ವರ್ಷ ಆರಂಭವಾದ 90 ದಿನದೊಳಗೆ ತಪಾಸಣೆ ಕೈಗೊಳ್ಳಬೇಕು ನಂತರ ಉದ್ಯೋಗಿಗಳಿಗೆ ಮೆಡಿಕಲ್ ಸರ್ಟಿಫಿಕೇಟ್ ನೀಡಬೇಕು ಎಂದು ತಿಳಿಸಿದೆ.