ಉದ್ಯೋಗಾಕಾಂಕ್ಷಿಗಳೇ ಗಮನಿಸಿ : ಕೆನರಾ ಬ್ಯಾಂಕ್‌ನಲ್ಲಿ ಖಾಲಿಯಿರುವ `ಸ್ಪೆಷಲಿಸ್ಟ್ ಆಫೀಸರ್‌' ಹುದ್ದೆಗಳಿಗೆ ಅರ್ಜಿ ಆಹ್ವಾನ

November 24, 2020


 ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಕೆನೆರಾ ಬ್ಯಾಂಕ್ ಸಿಹಿಸುದ್ದಿ ನೀಡಿದ್ದು, 220 ಕೆನರಾ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆ ಹೆಸರು: ಕೆನರಾ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ ಆನ್ ಲೈನ್ ಫಾರ್ಮ್ 2020

ಅರ್ಜಿ ಆಹ್ವಾನಿಸಿದ ದಿನಾಂಕ : 21-11-2020, ಕೆನರಾ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ ಹುದ್ದೆ 2020 ಅಡ್ವ್ಟ್ ನಂ. CB/ R/ 2/2020

ಒಟ್ಟು ಹುದ್ದೆ: 220

ಸಂಕ್ಷಿಪ್ತ ಮಾಹಿತಿ: ಕೆನರಾ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ (ಬ್ಯಾಕ್ ಅಪ್ ಅಡ್ಮಿನಿಸ್ಟ್ರೇಟರ್ , ಬಿಐ ಸ್ಪೆಷಲಿಸ್ಟ್ , ಆಯಂಟಿವೈರಸ್ ಅಡ್ಮಿನಿಸ್ಟ್ರೇಟರ್ , ಮ್ಯಾನೇಜರ್ , ಚಾರ್ಟರ್ಡ್ ಅಕೌಂಟೆಂಟ್ & ಇತರೆ) ಹುದ್ದೆಗಳ ನೇಮಕಾತಿಗೆ ಉದ್ಯೋಗ ಅಧಿಸೂಚನೆ ಹೊರಡಿ

ಖಾಲಿ ಹುದ್ದೆಯ ವಿವರಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಬಹುದು ಮತ್ತು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಶುಲ್ಕ: ಇತರ ಎಲ್ಲರಿಗೂ: ರೂ. 600/- + GST
ಸ್ ಸಿ/ ಎಸ್ ಟಿ/ ಪಿಡಬ್ಲ್ಯೂಡಿಗೆ: ರೂ. 100/- + ಜಿಎಸ್ ಟಿ [ಮಾಹಿತಿ ಶುಲ್ಕ ಗಳು ಮಾತ್ರ]
ಪಾವತಿ ವಿಧಾನ: ಡಿಮ್ಯಾಂಡ್ ಡ್ರಾಫ್ಟ್ / ಚೆಕ್ / ಮನಿ ಆರ್ಡರ್ಸ್ / ಪೋಸ್ಟಲ್ ಆರ್ಡರ್ಗಳು ಇತ್ಯಾದಿ.

ಪ್ರಮುಖ ದಿನಾಂಕಗಳು
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ ಮತ್ತು ಶುಲ್ಕ ಪಾವತಿ: 25-11-2020
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಶುಲ್ಕ ಪಾವತಿ: 15-12-2020
ಆನ್ ಲೈನ್ ಪರೀಕ್ಷೆ ದಿನಾಂಕ: ಜನವರಿ/ ಫೆಬ್ರವರಿ 2021 (ತಾತ್ಕಾಲಿಕ)

ವಯಸ್ಸಿನ ಮಿತಿ (01-10-2020 ಕ್ಕೆ)
ಸಂಖ್ಯೆ 01 ರಿಂದ 09: 20 -30 ವರ್ಷಗಳಿಗೆ ವಯಸ್ಸಿನ ಮಿತಿ
ಸಂಖ್ಯೆ 10 ರಿಂದ 24: 22 -35 ವರ್ಷಗಳಿಗೆ ವಯಸ್ಸಿನ ಮಿತಿ
ಸಂಖ್ಯೆ 25: 25 -38 ವರ್ಷಗಳಿಗೆ ವಯಸ್ಸಿನ ಮಿತಿ
ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ.

ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಪೂರ್ಣ ಅಧಿಸೂಚನೆಯನ್ನು ಓದಬಹುದು : ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು 25-11-2020 ರಿಂದ ಲಭ್ಯ

ಸರ್ಕಾರಿ ಶಾಲೆ, ಅಂಗನವಾಡಿ ಮಕ್ಕಳಿಗೆ ಭರ್ಜರಿ ಗುಡ್ ನ್ಯೂಸ್

November 24, 2020

 


ಬೆಂಗಳೂರು : ರಾಜ್ಯದ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಮಕ್ಕಳಿಗೆ ಭರ್ಜರಿ ಸಿಹಿಸುದ್ದಿಯೊಂದು ಸಿಕ್ಕಿದ್ದು, ಸರ್ಕಾರಿ ಶಾಲೆ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಬದಲಾಗಿ ಪಡಿತರ ಜೊತೆಗೆ ಭತ್ಯೆ ಸಹ ನೀಡಬೇಕಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಲಾಕ್ ಡೌನ್ ನಿಂದಾಗಿ ಸಾರ್ವಜನಿಕರಿಗೆ ಉಂಟಾದ ಅನಾನುಕೂಲತೆ ಬಗೆಹರಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಅವರ ನೇತೃತ್ವದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.Dailyhunt

ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ ಬಗ್ಗೆ ಮುಖ್ಯ ಮಾಹಿತಿ

November 17, 2020ಧಾರವಾಡ: 2020-21 ನೇ ಸಾಲಿಗೆ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು, ತತ್ಸಮಾನ ವೃಂದದ ಶಿಕ್ಷಕರ ಸಾಮಾನ್ಯ ವರ್ಗಾವಣೆಗಳನ್ನು ಕಡ್ಡಾಯವಾಗಿ ಗಣಕೀಕೃತ ಕೌನ್ಸೆಲಿಂಗ್ ಮೂಲಕ ನಡೆಸಲಾಗುವುದು.

Advertisment

ಪ್ರಾಥಮಿಕ ಶಾಲಾ ಶಿಕ್ಷಕರ ಕೋರಿಕೆ ವರ್ಗಾವಣೆಯನ್ನು ಅಂತಿಮ ಆದ್ಯತಾ ಪಟ್ಟಿಯಂತೆ ಜನವರಿ 19, 2021 ರಿಂದ ಜನವರಿ 23, 2021 ರ ವರೆಗೆ, ಪರಸ್ಪರ ವರ್ಗಾವಣೆ ಜನವರಿ 27 ರಿಂದ ಹಾಗೂ ಪ್ರೌಢ ಶಾಲಾ ಶಿಕ್ಷಕರ ವೃಂದದ ಕಡ್ಡಾಯ, ಹೆಚ್ಚುವರಿ(2019-20 ರ) ವರ್ಗಾವಣೆಗಳನ್ನು ಡಿಸೆಂಬರ್ 18 ಹಾಗೂ 19, 2020 ಮತ್ತು ಕೋರಿಕೆ ವರ್ಗಾವಣೆಯನ್ನು ಜನವರಿ 29, 2021 ರಿಂದ ಫೆಬ್ರವರ 2 ರವರೆಗೆ, ಪರಸ್ಪರ ವರ್ಗಾವಣೆಯನ್ನು ಫೆಬ್ರವರಿ 6 ರಂದು ಗಣಕೀಕೃತ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸಲಾಗುವುದು.

ಈ ಕುರಿತು ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ಇವರ ಇಲಾಖಾ ಜಾಲತಾಣದಲ್ಲಿ ವಿವರವಾದ ಸೂಚನೆಗಳುಳ್ಳ ಅಧೀಕೃತ ಜ್ಞಾಪನದ ಮೂಲಕ ವಿವರವಾದ ವೇಳಾ ಪಟ್ಟಿ ಪ್ರಕಟಿಸಲಾಗಿದೆ.

ಅದರಂತೆ ಬೆಳಗಾವಿ ವಿಭಾಗದ ಆಸಕ್ತ ಅಧಿಕಾರಿಗಳು ಆನ್‍ಲೈನ್ ಶಿಕ್ಷಕ ಮಿತ್ರ, ಇಇಡಿಎಸ್ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಜಿಲ್ಲೆಯ ಉಪನಿರ್ದೇಶಕರನ್ನು ಹಾಗೂ ಸಂಬಂಧಿಸಿದ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹನಿರ್ದೇಶಕರು ತಿಳಿಸಿದ್ದಾರೆ.

ʼಶಿಕ್ಷಕ ಹುದ್ದೆʼಯ ನಿರೀಕ್ಷಿತರಿಗೆ ಗುಡ್‌ ನ್ಯೂಸ್:‌ ʼಶಿಕ್ಷಣ ಸಚಿವʼರಿಂದ ಖಾಲಿ ಇರುವ ʼಹುದ್ದೆಗಳ ಭರ್ತಿʼಗೆ ಆದೇಶ..!

November 17, 2020

 


ಬೆಂಗಳೂರು: ಕಲ್ಯಾಣ ಕರ್ನಾಟಕ (ಹೈದರಾಬಾದ್ ಕರ್ನಾಟಕ) ಪ್ರದೇಶದ ಶಿಕ್ಷಕ ಹುದ್ದೇಯ ನಿರೀಕ್ಷಿತರಿಗೆ ಫ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಸಿಹಿ ಸುದ್ದಿ ನೀಡಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಲ್ಲಿ ಖಾಲಿಯಿರುವ ಶಿಕ್ಷಕರ ಹುದ್ದೆಗಳನ್ನ ಆದ್ಯತೆ ಮೇರೆಗೆ ಭರ್ತಿ ಮಾಡಲು ಆಧಿಕಾರಿಗಳಿಗೆ ಸೂಚನೆ ನೀಡಿದರು.

ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಯ ನಂತರ ಮಾತನಾಡಿದ ಸಚಿವರು, 'ಇತ್ತೀಚೆಗಷ್ಟೇ ಇಲಾಖೆಯು ಶಿಕ್ಷಕರಿಗೆ ಅರ್ಹತಾ ಪರೀಕ್ಷೆ (ಟಿಇಟಿ) ನಡೆಸಿದೆ. ವೃಂದ -ನೇಮಕಾತಿ ನಿಯಮಗಳ ತಿದ್ದುಪಡಿಗೂ ಅವಕಾಶ ಕಲ್ಪಿಸಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿರುವ ಹೆಚ್ಚು ಖಾಲಿ ಹುದ್ದೆಗಳಿದ್ದು, ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲು ಪ್ರಸ್ತಾವ ಸಲ್ಲಿಸಿ' ಎಂದು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ' ಎಂದರು

ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಕ ಹುದ್ದೆ ಭರ್ತಿ: ಸುರೇಶ್ ಕುಮಾರ್

November 17, 2020


 

ಬೆಂಗಳೂರು: ಕಲ್ಯಾಣ ಕರ್ನಾಟಕ (ಹೈದರಾಬಾದ್ ಕರ್ನಾಟಕ) ಪ್ರದೇಶದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಲ್ಲಿ ಖಾಲಿಯಿರುವ ಶಿಕ್ಷಕರ ಹುದ್ದೆಗಳನ್ನು ಆದ್ಯತೆ ಮೇರೆಗೆ ಭರ್ತಿ ಮಾಡಲು ಸಚಿವ ಸುರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದಲ್ಲಿ ಮ‌ಂಗಳವಾರ ಅಧಿಕಾರಿಗಳ ಸಭೆ ನಡೆಸಿದ ಅವರು, 'ಇತ್ತೀಚೆಗಷ್ಟೇ ಇಲಾಖೆಯು ಶಿಕ್ಷಕರಿಗೆ ಅರ್ಹತಾ ಪರೀಕ್ಷೆ (ಟಿಇಟಿ) ನಡೆಸಿದೆ. ವೃಂದ -ನೇಮಕಾತಿ ನಿಯಮಗಳ ತಿದ್ದುಪಡಿಗೂ ಅವಕಾಶ ಕಲ್ಪಿಸಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿರುವ ಹೆಚ್ಚು ಖಾಲಿ ಹುದ್ದೆಗಳು ಇದ್ದು, ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲು ಪ್ರಸ್ತಾವ ಸಲ್ಲಿಸಿ' ಎಂದು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

JOB:ಗ್ರಂಥಾಲಯಗಳ ಮೇಲ್ವಿಚಾರಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

November 17, 2020


 

 ಬೆಂಗಳೂರು: ಬೀದರ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಖಾಲಿ ಇರುವ ಗ್ರಾಮ ಪಂಚಾಯತ ಗ್ರಂಥಾಲಯಗಳ ಮೇಲ್ವಿಚಾರಕರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಭಾಲ್ಕಿ ತಾಲೂಕಿನ ಧನ್ನೂರಾ ಗ್ರಾಮ ಪಂಚಾಯಿತಿಗೆ (ಎಸ್)ಗೆ ಪರಿಶಿಷ್ಟ ಜಾತಿ, ಬೀದರ ತಾಲೂಕಿನ ಗಾದಗಿ ಗ್ರಾಮ ಪಂಚಾಯಿತಿಗೆ ಸಾಮಾನ್ಯ ಅಭ್ಯರ್ಥಿ, ಹುಮನಾಬಾದ ತಾಲೂಕಿನ ಹಳ್ಳೀಖೇಡ (ಕೆ) ಗ್ರಾಮ ಪಂಚಾಯಿತಿಗೆ ಪರಿಶಿಷ್ಟ ಪಂಗಡ., ಮಾಣಿಕನಗರ ಗ್ರಾಮ ಪಂಚಾಯಿತಿಗೆ ಸಾಮಾನ್ಯ ಅಭ್ಯರ್ಥಿ(ಮಹಿಳಾ)., ತಾಳಮಡಗಿ ಗ್ರಾಮ ಪಂಚಾಯಿತಿಗೆ ಸಾಮಾನ್ಯ ಅಭ್ಯರ್ಥಿ (ಗ್ರಾಮೀಣ) ಮತ್ತು ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಪಂಗೆ ಪ್ರವರ್ಗ-1 ಮೀಸಲಾತಿ ನಿಗದಿಪಡಿಸಲಾಗಿದೆ.

ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಮುಖ್ಯ ಗ್ರಂಥಾಲಯಾಧಿಕಾರಿ ಕಛೇರಿ, ಜಿಲ್ಲಾ ಕೇಂದ್ರ ಗ್ರಂಥಾಲಯ, ಜನವಾಡ ರೋಡ್, ಬೀದರ ಇಲ್ಲಿ ಅರ್ಜಿ ನಮೂನೆ ತೆಗೆದುಕೊಳ್ಳಬೇಕು.

ಅಭ್ಯರ್ಥಿಗಳು ಆಧಾರ ಕಾರ್ಡ್, ರೇಷನ್ ಕಾರ್ಡ್ ಮತ್ತು ಓಟರ್ ಐಡಿಯನ್ನು ಸ್ವಯಂ ದೃಢೀಕರಿಸಿ ಲಗತ್ತಿಸಬೇಕು.

ಭರ್ತಿ ಮಾಡಿದ ಅರ್ಜಿಯನ್ನು ಮುಚ್ಚಿದ/ಸಿಲ್ ಮಾಡಿದ ಲಕೋಟೆಯಲ್ಲಿ ಸಂಬಂಧಪಟ್ಟ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಕಛೇರಿಗೆ ನಿಗದಿಪಡಿಸಿದ ಕೊನೆಯ ದಿನಾಂಕದ ಒಳಗಾಗಿ ಅಥವಾ ಮುಖ್ಯ ಗ್ರಂಥಾಲಯಾಧಿಕಾರಿಗಳ ಕಛೇರಿ, ಜಿಲ್ಲಾ ಕೇಂದ್ರ ಗ್ರಂಥಾಲಯ ಬೀದರ ಇಲ್ಲಿ ನೇರವಾಗಿ ಇಲ್ಲವೇ ಅಂಚೆ ಮೂಲಕ ಸಲ್ಲಿಸಲು ಸೂಚಿಸಿದೆ.

ಲಕೋಟೆಯ ಮೇಲೆ ದಪ್ಪ ಅಕ್ಷರದಲ್ಲಿ ಗ್ರಾಮ ಪಂಚಾಯತ ಗ್ರಂಥಾಲಯ ಮೇಲ್ವಿಚಾರಕ ನೇಮಕಾತಿಗಾಗಿ ಅರ್ಜಿ ಎಂದು ನಮೂದಿಸಿ ಸಲ್ಲಿಸಲು ತಿಳಿಸಿದೆ. ಗ್ರಂಥಾಲಯ ಪೀಠೋಪಕರಣ, ಪುಸ್ತಕ ಮತ್ತು ನಿಯತಕಾಲಿಕೆ ಜವಾಬ್ದಾರಿ ಮೇಲ್ವಿಚಾರಕರು ವಹಿಸಬೇಕಾಗುತ್ತದೆ ಹಾಗೂ ಸದರಿ ಮೇಲ್ವಿಚಾರಕರಿಗೆ ಪ್ರತಿ ತಿಂಗಳಿಗೆ ರೂ.7000=00 ಗೌರವ ಸಂಭಾವನೆ ಮೇಲೆ ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ವಯೋಮಿತಿ : ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು 18 ವರ್ಷ ವಯಸ್ಸು ಪೂರೈಸಿರತಕ್ಕದ್ದು. ಹಾಗೂ ಗರಿಷ್ಠ ವಯೋಮಿತಿ ಈ ಕೆಳನಂತಿರತಕ್ಕದ್ದು. ಸಾಮಾನ್ಯ ವರ್ಗ - 33 ವಷ., 2ಎ, 2ಬಿ, 3ಎ, 3ಬಿ - 36 ವರ್ಷ., ಪ.ಜಾತಿ/ಪ.ಪಂಗಡ/ಪ್ರವರ್ಗ-1 -38 ವರ್ಷ.

ಷರತ್ತುಗಳು: ಅಭ್ಯರ್ಥಿಯು ಸ್ಥಳೀಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು. (ದೃಢೀಕರಣ ಪತ್ರ ಲಗತ್ತಿಸಿರಬೇಕು. ಸ್ಥಳೀಯ ಮತದಾರರ ಪಟ್ಟಿಯ ಉದೃತ ಭಾಗ ಲಗತ್ತಿಸಿರಬೇಕು.)ನಿಗದಿಪಡಿಸಲಾದ ಮೀಸಲಾತಿಗೆ ಒಳಪಡುವ ಅಭ್ಯರ್ಥಿ ಮಾತ್ರ ಅರ್ಜಿಯನ್ನು ಸಲ್ಲಿಸತಕ್ಕದ್ದು. ಭರ್ತಿ ಮಾಡಿದ ಅರ್ಜಿಗಳನ್ನು ಸೂಕ್ತ ದಾಖಲಾತಿ ಎಸ್.ಎಸ್.ಎಲ್.ಸಿ ಅಂಕಪಟ್ಟಿ ಟಿ.ಸಿ., ಮೀಸಲಾತಿ ಪ್ರಮಾಣ ಪತ್ರ, ಸ್ಥಳೀಯ ವಾಸಿ ದೃಢೀಕರಣ ಪತ್ರ ಅಂಗವಿಕಲತೆ (ಇದ್ದಲ್ಲಿ) ದೃಢೀಕರಣ ಪತ್ರ ಹಾಗೂ ಇನ್ನೀತರ ವಿದ್ಯಾರ್ಹತೆ (ಇದ್ದಲ್ಲಿ) ಇತ್ಯಾದಿಗಳೊಂದಿಗೆ ಸ್ವಯಂ ದೃಢೀಕೃತ ದಾಖಲೆಗಳನ್ನು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ದಿನಾಕ 18-12-2020ರ ಸಂಜೆ 5:30 ರೊಳಗಾಗಿ ಸಲ್ಲಿಸಬೇಕು. ವಯಸ್ಕರ ಶಿಕ್ಷಣದಡಿ ನಡೆಯುತ್ತಿರುವ ಮುಂದುವರಿಕಾ ಕಲಿಕಾ ಕೇಂದ್ರಗಳ ಪ್ರೇರಕ/ಉಪಪ್ರೇರಕರು ಇವರಿಗೂ ಮೀಸಲಾತಿ ಅನ್ವಯಿಸುತ್ತದೆ. ಪ್ರೇರಕ/ಉಪಪ್ರೇರಕರು ಮೇಲ್ವಿಚಾರಕರಾಗಿ ನೇಮಕಗೊಂಡ ನಂತರ ಪ್ರೇರಕ/ಉಪಪ್ರೇರಕರ ಹುದ್ದೆಗೆ ರಾಜೀನಾಮೆ ನೀಡತಕ್ಕದ್ದು ಹಾಗೂ ಬಿಡುಗಡೆ ಪತ್ರವನ್ನು ಸಂಬಂಧಿಸಿದ ಇಲಾಖೆಯಿಂದ ಪಡೆದು ಈ ಕಛೇರಿಗೆ ಸಲ್ಲಿಸತಕ್ಕದ್ದು. ಗ್ರಂಥಾಲಯ ವಿಜ್ಞಾನದಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08482-226401 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಖಾಲಿಯಿರುವ ಶಿಕ್ಷಕರ ಹುದ್ದೆಗಳನ್ನು ತುಂಬಲು ಶಿಕ್ಷಣ ಸಚಿವರ ಸೂಚನೆ

November 17, 2020

 


ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಲ್ಲಿ ಖಾಲಿಯಿರುವ ಶಿಕ್ಷಕರ ಹುದ್ದೆಗಳನ್ನು ಆದ್ಯತೆ ಮೇರೆಗೆ ಭರ್ತಿ ಮಾಡಲು ಶಿಕ್ಷಣ ಸಚಿವ ಸುರೇಶ್‌ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇತ್ತೀಚೆಗಷ್ಟೇ ಟಿಇಟಿ ನಡೆಸಲಾಗಿದ್ದು, ವೃಂದ-ನೇಮಕಾತಿ ನಿಯಮಗಳ ತಿದ್ದುಪಡಿಗೂ ಅವಕಾಶ ಕಲ್ಪಿಸಲಾಗಿದೆ. ಕಲ್ಯಾಣ ಕರ್ನಾಟಕ (ಹೈ.ಕ) ಭಾಗದಲ್ಲಿ ಹೆಚ್ಚು ಖಾಲಿ ಹುದ್ದೆಗಳಿದ್ದು, ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲು ಪ್ರಸ್ತಾವ ಸಲ್ಲಿಸಿ' ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ.

ಜೇನು ತುಪ್ಪದಿಂದ ಎಷ್ಟು ಕಾಯಿಲೆಗಳನ್ನು ಗುಣ ಮಾಡಬಹುದು ಗೊತ್ತಾ

November 17, 2020


 

ಜೇನು ತುಪ್ಪವನ್ನ ಈಗಾಗಲೇ ಸಾಕಷ್ಟು ಜನ ದಿನನಿತ್ಯದ ಪದಾರ್ಥವಾಗಿ ಬಳಸುತ್ತಾರೆ. ದಪ್ಪ ಇರುವವರು ಸಣ್ಣ ಆಗೋದಕ್ಲೆ ಇದನ್ನ ಹೆಚ್ಚು ಉಪಯೋಗಿಸುತ್ತಾರೆ. ಅಷ್ಟೇ ಅಲ್ಲ ಇನ್ನು ಹಲವು ಗುಣಗಳನ್ನ ಇದು ಹೊಂದಿದೆ.

* ಜೇನು ತುಪ್ಪವನ್ನು ಕ್ರಮಬದ್ಧವಾಗಿ ಸೇವಿಸುವುದರಿಂದ ಮಲಬದ್ಧತೆ ಉಂಟಾಗುವ ಸಂಭವವಿರುವುದಿಲ್ಲ.

* ವಸಡುಗಳು ಊದಿಕೊಂಡು ಹಲ್ಲುನೋವು ಉಂಟಾದರೆ, ಜೇನು ತುಪ್ಪದಲ್ಲಿ ನೆನೆಸಿದ ಹತ್ತಿಯನ್ನು ನಾಲ್ಕಾರು ಬಾರಿ ದಿನವೂ ಇಟ್ಟುಕೊಂಡರೆ ಹಲ್ಲುನೋವು ಮತ್ತು ವಸಡಿನ ಊತವು ನಿವಾರಣೆಯಾಗುವುದು

* ಹುಳುಕಡ್ಡಿ, ಇಸುಬು ಮುಂತಾದ ಚರ್ಮರೋಗಗಳಿಗೆ ಮತ್ತು ಹುಣ್ಣುಗಳ ಮೇಲೆ ಜೇನು ತುಪ್ಪವನ್ನು ಸವರುವುದರಿಂದ ಅವು ಗುಣ ಕಂಡು ಬರುವುದು.

* ಜೇನು ತುಪ್ಪವನ್ನು ಪ್ರತಿದಿನವೂ ಬೆಳಿಗ್ಗೆ ಎದ್ದ ತಕ್ಷಣ ಬಾಯಿ ತೊಳೆದುಕೊಂಡು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಚೆನ್ನಾಗಿ ಜೀರ್ಣವಾಗುವುದು.

ದೈಹಿಕ ಶಕ್ತಿ ಹೆಚ್ಚುವುದು. ಆಯಾಸ ಮತ್ತು ಆಲಸಿಕೆ ದೂರವಾಗಿ ಧಾರಣ ಶಕ್ತಿ ಅಧಿಕಗೊಳ್ಳವುದು.

* ಮಧುಮೇಹ ರೋಗಿಗಳು ಹಾಗೂ ಕ್ಷಯ ರೋಗಿಗಳು ಜೇನುತುಪ್ಪವನ್ನು ಸೇವಿಸುವುದರಿಂದ ಶಾರೀರಿಕ ಕ್ರಿಯೆಗಳು ಮಾಮೂಲಿ ಆರೋಗ್ಯವಂತರಂತೆ ನಡೆದು ಆರೋಗ್ಯ ಸುಧಾರಣೆ ಉಂಟಾಗುವುದು.

* ಎಳೆ ಮಕ್ಕಳಿಗೆ ಸಾಧಾರಣ ಕೆಮ್ಮು ಮತ್ತು ಜ್ವರ ಬಂದಾಗ ಒಂದು ಟೀ ಚಮಚ ತುಳಸಿ ರಸದಲ್ಲಿ ಹತ್ತಾರು ತೊಟ್ಟು ಜೇನುತುಪ್ಪವನ್ನು ಬೆರೆಸಿ ಕುಡಿಸಬೇಕು. ದಿನದ ಎರಡು ಬಾರಿ ಕುಡಿಸಿದರೆ ಮೂರೇ ದಿನಗಳಲ್ಲಿ ಗಮನಾರ್ಹ ಬದಲಾವಣೆ ಉಂಟಾಗಿ ಮಕ್ಕಳು ಗುಣವಾಗುತ್ತೆ.

* ಕೀಲುಗಳಲ್ಲಿ ನೋವುಂಟಾಗಿದ್ದರೆ ಆ ಸ್ಥಳಕ್ಕೆ ಸುಣ್ಣ ಮತ್ತು ಜೇನು ತುಪ್ಪವನ್ನು ಮಿಶ್ರಮಾಡಿ ಹಚ್ಚಿದರೆ ಶೀಘ್ರವೇ ಪರಿಣಾಮ ಉಂಟಾಗಿ ನೋವು ಮಾಯವಾಗುತ್ತದೆ.

* ಶುದ್ಧವಾದ ಜೇನು ತುಪ್ಪವನ್ನು ಊಟವಾದ ನಂತರ ಮಲಗುವುದಕ್ಕೆ ಮುಂಚೆ ಮೂರು ಟೀ ಚಮಚ ಸೇವಿಸುತ್ತಾ ಬಂದರೆ ಬಹುಮೂತ್ರ ರೋಗವೇ ಇಲ್ಲವಾಗುವುದು.

* ಬಜೆ ಪುಡಿಯೊಂದಿಗೆ ಜೇನು ತುಪ್ಪ ಕೊಡುವುದರಿಂದ ವಿದ್ಯಾರ್ಥಿಗಳ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ.

* ಪಪ್ಪಾಯಿ ಹಣ್ಣು, ಜೇನುತುಪ್ಪ ಮತ್ತು ಅರಿಶಿನ ಪುಡಿ ಮುಖಕ್ಕೆ ಲೇಪಿಸುವುದರಿಂದ ಮುಖದ ಮೊಡವೆಗಳು ದೂರವಾಗಿ ಮುಖದ ಕಾಂತಿ ಹೆಚ್ಚಾಗುತ್ತದೆ.

* ಹಸಿ ಕರಬೇವಿನೊಂದಿಗೆ ಜೇನು ತುಪ್ಪ ತಿನ್ನುವುದರಿಂದ ದೃಷ್ಟಿ ದೋಷಗಳು, ಕಣ್ಣಿನ ತೊಂದರೆಗಳು ಇಲ್ಲವಾಗುತ್ತದೆ.

ದಿನಭವಿಷ್ಯ: ಈ ರಾಶಿಯವರಿಗೆ ಮನೆಯಲ್ಲಿ ಮನಸ್ತಾಪ ಏರ್ಪಡುವ ಸಂಭವವಿದೆ ಜಾಗ್ರತೆ!

November 17, 2020


 

ಮೇಷ ರಾಶಿ

ಜೀವನ ನಿಂತ ನೀರಾಗಿದೆ ಏನೇ ಮಾಡಿದರೂ ನೆಮ್ಮದಿ ಇಲ್ಲ ಎಂಬ ಭಾವನೆ ತೊರೆದು ಮುನ್ನುಗ್ಗಿ. ಧೈರ್ಯಶಾಲಿಗೆ ಭಗವಂತನೂ ಸಹಾಯ ಮಾಡುವನು. ವಿವಿಧ ಮೂಲಗಳಿಂದ ಹಣ ಹರಿದು ಬರುವುದು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ 5 ದಿನದಲ್ಲಿ ಶಾಶ್ವತವಾದ ಪರಿಹಾರ. ಶ್ರೀ ತೇಜಸ್ವಿ ನಾರಾಯಣಭಟ್ call/ WhatsApp PH:- 9945665025

ವೃಷಭ ರಾಶಿ
ಎದುರಾಳಿಗಳು ವೃಥಾ ವಾದ ಮಾಡಿ ನಿಮ್ಮ ದಿಕ್ಕನ್ನು ತಪ್ಪಿಸುವ ಸಾಧ್ಯತೆ ಇದೆ. ಆದರೆ ಆತ್ಮವಿಶ್ವಾಸದಿಂದ ನೀವು ಅಂದುಕೊಂಡ ಕಾರ್ಯವನ್ನು ಯಶಸ್ವಿಯಾಗಿ ಪೂರೈಸುವಿರಿ. ಕೀಳರಿಮೆ ಬಿಟ್ಟು ಎಲ್ಲರೊಂದಿಗೂ ಬೆರೆಯಿರಿ. ಅದು ಹೆಚ್ಚು ಕ್ರಿಯಾಶೀಲತೆ ತಂದುಕೊಡುವುದು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ 5 ದಿನದಲ್ಲಿ ಶಾಶ್ವತವಾದ ಪರಿಹಾರ. ಶ್ರೀ ತೇಜಸ್ವಿ ನಾರಾಯಣಭಟ್ call/ WhatsApp PH:- 9945665025

ಮಿಥುನ ರಾಶಿ
ಪದೇ ಪದೆ ದೇಹಾಲಸ್ಯ, ಅನಾರೋಗ್ಯಗಳಿದ್ದರೆ ತುಸು ವಿಶ್ರಾಂತಿ ಪಡೆಯಿರಿ.

ವೈದ್ಯರ ಸಲಹೆಯಂತೆ ಸಕಾಲದಲ್ಲಿ ಔಷಧೋಪಚಾರ ತೆಗೆದುಕೊಳ್ಳಿ. ಇದರಿಂದ ಒಳಿತಾಗುವುದು. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳಲು ಕುಲದೇವರನ್ನು ಪ್ರಾರ್ಥನೆ ಮಾಡಿ.ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ 5 ದಿನದಲ್ಲಿ ಶಾಶ್ವತವಾದ ಪರಿಹಾರ. ಶ್ರೀ ತೇಜಸ್ವಿ ನಾರಾಯಣಭಟ್ call/ WhatsApp PH:- 9945665025

ಕರ್ಕಾಟಕ ರಾಶಿ
ನಿಮ್ಮ ಮನಸ್ಸಂಕಲ್ಪಗಳ ಪ್ರಕಾರದಂತೆಯೇ ಜೀವನ ಮುಂದುವರಿಸಬೇಕೆಂಬ ಹಠ ಬೇಡ. ಎಲ್ಲಾ ಭಾನುವಾರವೂ ರಜಾ ದಿನವಾಗಿರಬಹುದು. ಆದರೆ ಎಲ್ಲಾ ರಜಾ ದಿನಗಳು ಭಾನುವಾರ ಆಗಲಿಕ್ಕೆ ಸಾಧ್ಯವಿಲ್ಲ. ಹಾಗಾಗಿ ವ್ಯವಹರಿಸುವಾಗ ತಾಳ್ಮೆಯಿರಲಿ.
ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ 5 ದಿನದಲ್ಲಿ ಶಾಶ್ವತವಾದ ಪರಿಹಾರ. ಶ್ರೀ ತೇಜಸ್ವಿ ನಾರಾಯಣಭಟ್ call/ WhatsApp PH:- 9945665025

ಸಿಂಹ ರಾಶಿ
ವಿನಾಕಾರಣ ಮನೆಯಲ್ಲಿ ಮನಸ್ತಾಪದ ಸಂದರ್ಭಗಳು ಎದುರಾಗುವ ಸಂದರ್ಭವಿರುತ್ತದೆ. ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡಬೇಡಿ. ತಪ್ಪು ಮಾಡುವುದು ಮನುಜ ಸ್ವಭಾವ. ಅಂತಹ ವ್ಯಕ್ತಿಗಳನ್ನು ಕ್ಷ ಮಿಸಿಬಿಡಿ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ 5 ದಿನದಲ್ಲಿ ಶಾಶ್ವತವಾದ ಪರಿಹಾರ. ಶ್ರೀ ತೇಜಸ್ವಿ ನಾರಾಯಣಭಟ್ call/ WhatsApp PH:- 9945665025

ಕನ್ಯಾ ರಾಶಿ
ವಿಶೇಷವಾಗಿ ನಿಮಗೆ ತಿಳಿಯಲಾಗದಂತಹ ಅನಿವಾರ್ಯ ಖರ್ಚಿನ ಪ್ರಸಂಗಗಳು ಎದುರಾಗುವುದು. ಅತ್ಯಂತ ಆಪ್ತವಾದ ಗೆಳೆಯ ನಿಮಗೆ ಹಣಕಾಸಿನ ನೆರವನ್ನು ನೀಡುವನು. ಸಂಗಾತಿಯ ಆರೋಗ್ಯದ ಕಡೆ ಗಮನ ಹರಿಸಿ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ 5 ದಿನದಲ್ಲಿ ಶಾಶ್ವತವಾದ ಪರಿಹಾರ. ಶ್ರೀ ತೇಜಸ್ವಿ ನಾರಾಯಣಭಟ್ call/ WhatsApp PH:- 9945665025

ತುಲಾ ರಾಶಿ
ಪ್ರತಿದಿನವೂ ನಿಮ್ಮ ಜವಾಬ್ದಾರಿಗಳು ಮಾನಸಿಕ ಒತ್ತಡವನ್ನು ತರುತ್ತಿವೆ. ಒಂದು ಸಮಸ್ಯೆಯನ್ನು ಬಗೆಹರಿಸುವಷ್ಟರಲ್ಲಿ ಮತ್ತೊಂದು ಸಮಸ್ಯೆ ಎದುರಾಗುವುದು. ಈ ಜವಾಬ್ದಾರಿ ಕೆಲಸ ಬೇಡವೇ ಬೇಡಪ್ಪ ಎಂದು ಅಂದುಕೊಳ್ಳುವಿರಿ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ 5 ದಿನದಲ್ಲಿ ಶಾಶ್ವತವಾದ ಪರಿಹಾರ. ಶ್ರೀ ತೇಜಸ್ವಿ ನಾರಾಯಣಭಟ್ call/ WhatsApp PH:- 9945665025

ವೃಶ್ಚಿಕ ರಾಶಿ
ಸದ್ಯದ ಪರಿಸ್ಥಿತಿಯಲ್ಲಿ ಸ್ವತಂತ್ರ ನಿರ್ಣಯ ತೆಗೆದುಕೊಳ್ಳಲು ಆಗುತ್ತಿಲ್ಲ. ಈ ಬಗ್ಗೆ ಸ್ನೇಹಿತರ ಮತ್ತು ಬಂಧುಗಳಿಂದ ಸಲಹೆಗಳನ್ನು ಸ್ವೀಕರಿಸಲು ಹಿಂಜರಿಯಬೇಡಿ. ಪರರ ಸಲಹೆ ಪಡೆಯುವುದು ಅವಮಾನದ ಪ್ರಸಂಗವಲ್ಲ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ 5 ದಿನದಲ್ಲಿ ಶಾಶ್ವತವಾದ ಪರಿಹಾರ. ಶ್ರೀ ತೇಜಸ್ವಿ ನಾರಾಯಣಭಟ್ call/ WhatsApp PH:- 9945665025

ಧನಸ್ಸು ರಾಶಿ
ಅತ್ಯಂತ ಭಾವುಕರಾಗುವ ನೀವು ಕೆಲವೊಮ್ಮೆ ನಿಮ್ಮ ಮನಸ್ಸಿನ ಎಲ್ಲ ವಿಚಾರವನ್ನು ಪರರ ಮುಂದೆ ಹೇಳಿಕೊಳ್ಳುವಿರಿ. ಇದರಿಂದ ಬೇರೊಂದು ಅರ್ಥವೇ ಪ್ರಚಾರಕ್ಕೆ ದೊರೆಯುವುದು. ಆದ್ದರಿಂದ ದುರ್ಗಾ ಜಪ ಮಾಡಿ. ಹಣಕಾಸಿನ ತೊಂದರೆ ಇರುವುದಿಲ್ಲ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ 5 ದಿನದಲ್ಲಿ ಶಾಶ್ವತವಾದ ಪರಿಹಾರ. ಶ್ರೀ ತೇಜಸ್ವಿ ನಾರಾಯಣಭಟ್ call/ WhatsApp PH:- 9945665025

ಮಕರ ರಾಶಿ
ಈದಿನ ನಿಮ್ಮ ಮಡದಿಯ ಮಾತು ಕೇಳುವುದರಿಂದ ಅಧಿಕ ಲಾಭಾಂಶವನ್ನೇ ಹೊಂದುವಿರಿ. ಪತ್ನಿ-ಪುತ್ರರಲ್ಲಿಯ ಅಸಮಾಧಾನ ತಿಳಿಗೊಳ್ಳುವುದು. ಆರೋಗ್ಯ ಉತ್ತಮ.ಬೇಡದ ವಿಚಾರಗಳು ನಿಮಗೆ ಘಾಸಿ ಮಾಡುವುದು. ಪ್ರಯಾಣದಲ್ಲಿ ಎಚ್ಚರ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ 5 ದಿನದಲ್ಲಿ ಶಾಶ್ವತವಾದ ಪರಿಹಾರ. ಶ್ರೀ ತೇಜಸ್ವಿ ನಾರಾಯಣಭಟ್ call/ WhatsApp PH:- 9945665025

ಕುಂಭ ರಾಶಿ
ಹಳೆಯ ವೈಭವಗಳನ್ನು ನೆನೆಯುತ್ತ ಕೂತರೆ ಭವಿಷ್ಯ ಉಜ್ವಲವಾಗದು. ಭವಿಷ್ಯದ ಬಗ್ಗೆ ನೀವೀಗ ದಿಟ್ಟ ನಿರ್ಧಾರಗಳನ್ನು ಕೈಕೊಳ್ಳಬೇಕು. ಮುಖ್ಯವಾಗಿ ಆಲಸ್ಯದಿಂದ ಈ ದಿನ ಹೊರ ಬರಬೇಕು. ಗಟ್ಟಿ ನಿರ್ಧಾರ ಮಾಡಿ ಮುಂದಡಿ ಇಡಿ. ಸ್ಥಾನಮಾನಗಳು ನಿಮ್ಮನ್ನು ಹುಡುಕಿಕೊಂಡು ಬರುವುದು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ 5 ದಿನದಲ್ಲಿ ಶಾಶ್ವತವಾದ ಪರಿಹಾರ. ಶ್ರೀ ತೇಜಸ್ವಿ ನಾರಾಯಣಭಟ್ call/ WhatsApp PH:- 9945665025

ಮೀನಾ ರಾಶಿ
ನಡೆಯುವ ವ್ಯಕ್ತಿ ಎಡವುವಂತೆ ಈ ದಿನ ಕೆಲಸ ಕಾರ್ಯಗಳಲ್ಲಿ ಹಿನ್ನಡೆ. ಅಧಿಕ ಖರ್ಚು ಎದುರಾಗುವುದು. ಸಕಾರಾತ್ಮಕ ಚಿಂತನೆಯಿಂದ ಮಾಡುವ ಕೆಲಸಗಳು ನಿಮಗೆ ಗೌರವ ತೋರುವುದು.ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ 5 ದಿನದಲ್ಲಿ ಶಾಶ್ವತವಾದ ಪರಿಹಾರ. ಶ್ರೀ ತೇಜಸ್ವಿ ನಾರಾಯಣಭಟ್ call/ WhatsApp PH:- 9945665025

ಸುಪ್ರೀಂ ಕೋರ್ಟ್'ನಿಂದ 'CBSEಯ 10, 12ನೇ ತರಗತಿ ಶುಲ್ಕ ವಿನಾಯಿತಿ' ಕೋರಿ ಸಲ್ಲಿಸಿದ್ದ ಅರ್ಜಿ ವಜಾ

November 17, 2020

 


ನವದೆಹಲಿ : ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸಿಬಿಎಸ್ ಇ ಮತ್ತು ದೆಹಲಿ ಸರ್ಕಾರಕ್ಕೆ ಸಿಬಿಎಸ್ ಇ 10ನೇ ತರಗತಿ ಮತ್ತು 12ನೇ ತರಗತಿ ಪರೀಕ್ಷಾ ಶುಲ್ಕ ಗಳನ್ನು ಮನ್ನಾ ಮಾಡುವಂತೆ ನಿರ್ದೇಶನ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ದೆಹಲಿ ಹೈಕೋರ್ಟ್ ನ ಸೆಪ್ಟೆಂಬರ್ 28ರ ಆದೇಶದ ವಿರುದ್ಧ ಎನ್ ಜಿಒ 'ಸೋಷಿಯಲ್ ಜುರಿಸ್ಟ್' ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್.ಸುಭಾಷ್ ರೆಡ್ಡಿ ಮತ್ತು ಎಂ.ಆರ್. ಶಾ ನ್ಯಾಯಪೀಠವು ಇಂದು ವಿಚಾರಣೆ ಕೈಗೆತ್ತಿಕೊಂಡಿತು. ಇಂತಹ ಸಿಬಿಎಸ್‌ಇ ಮತ್ತು ದೆಹಲಿ ಸರ್ಕಾರಕ್ಕೆ ಸಿಬಿಎಸ್‌ಇ 10 ಹಾಗೂ 12ನೇ ತರಗತಿಯ ಶುಲ್ಕವನ್ನು ಕೋವಿಡ್ ಕಾರಣಕ್ಕಾಗಿ ಮನ್ನಾ ಮಾಡುವಂತ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಪೀಠ, ಸೂಕ್ತ ಪ್ರಾಧಿಕಾರವನ್ನು ಸಂಪರ್ಕಿಸುವಂತೆ ಸುಪ್ರೀಂಕೋರ್ಟ್ ಪೀಠ ಸೂಚಿಸಿದೆ.

ಅಲ್ಲದೇ 'ಈ ರೀತಿ ಮಾಡುವಂತೆ ಸರ್ಕಾರಕ್ಕೆ ಕೋರ್ಟ್ ಹೇಗೆ ನಿರ್ದೇಶನ ನೀಡಬಹುದು ಎಂಬುದಾಗಿ ಅರ್ಜಿದಾರ ಪರ ವಕೀಲರನ್ನು ಪ್ರಶ್ನಿಸಿದಂತ ನ್ಯಾಯಪೀಠವು, ಸುಪ್ರೀಂ ಕೋರ್ಟ್ ನ್ಯಾಯಪೀಠಕ್ಕೆ ಅರ್ಜಿ ಸಲ್ಲಿಸುವ ಬದಲಾಗಿ, ನೀವು ಸರ್ಕಾರಕ್ಕೆ ಒಂದು ಮನವಿಯನ್ನು ನೀಡಿ ಎಂಬುದಾಗಿ ಸಲಹೆ ನೀಡಿ, ಪೀಸ್ ವಿನಾಯಿತಿಯ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್.ಸುಭಾಷ್ ರೆಡ್ಡಿ ಮತ್ತು ಎಂ.ಆರ್. ಶಾ ನ್ಯಾಯಪೀಠವು ವಜಾಗೊಳಿಸಿದೆ.


KPSCಯ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ

November 17, 2020

 


ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದಿಂದ ಕರೆಯಲ್ಪಟ್ಟಿದ್ದಂತ ವಿವಿಧ ಹುದ್ದೆಗಳ ನೇಮಕಾತಿಗೆ ಇದೀಗ ಆಯೋಗವು ಸ್ಪರ್ಧಾತ್ಮಕ ಪರೀಕ್ಷಾ ದಿನಾಂಕವನ್ನು ಪ್ರಕಟಿಸಿದೆ. ಆಯೋಗದಿಂದ ಅಧಿಸೂಚಿಸಲಾದ ವಿವಿಧ ವೃಂದದ ಹುದ್ದೆಗಳ ನೇಕಾತಿ ಪರೀಕ್ಷೆಗಳ ವೇಳಾ ಪಟ್ಟಿ ಈ ಕೆಳಗಿನಂತಿದೆ.

ಕೆಪಿಎಸ್ಸಿಯ ವಿವಿಧ ವೃಂದದ ಹುದ್ದೆಗಳ ನೇಮಕಾತಿ ಸಂಬಂಧ ಪರೀಕ್ಷಗಳ ವೇಳಾಪಟ್ಟಿ

 1. ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯಲ್ಲಿನ ಸಮೂಹ ಎ ವೃಂದದ ಸಹಾಯಕ ನಿಯಂತ್ರಕರ ಹುದ್ದೆಗಳಿಗೆ ಮುಖ್ಯ ಪರೀಕ್ಷೆ ದಿನಾಂಕ 21-12-2020 ರಿಂದ ದಿನಾಂಕ 24-12-2020ರವರೆಗೆ 4 ದಿನ ನಡೆಯಲಿದೆ.
 2. ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ಎ ಮತ್ತು ಬಿ ವೃಂದದ ಹುದ್ದೆಗಳಿಗೆ ಮುಖ್ಯ ಪರೀಕ್ಷೆ ದಿನಾಂಕ 02-01-2021 ರಿಂದ ದಿನಾಂಕ 05-01-2021ರವರೆಗೆ ನಾಲ್ಕು ದಿನ ನಡೆಯಲಿದೆ.
 3. ರಾಜ್ಯದ ವಿವಿಧ ಇಲಾಖೆಗಳಲ್ಲಿನ ಮತ್ತು ಕರ್ನಾಟಕ ಭವನ, ದೆಹಲಿಯ ಉಳಿಕೆ ಮೂಲ ವೃಂದದ ಮತ್ತು ಹೈದರಾಬಾದ್ ಕರ್ನಾಟಕ ವೃಂದದ ಸಹಾಯಕರು, ಪ್ರಥಮ ದರ್ಜೆ ಸಹಾಯಕರ ಹುದ್ದೆಗಳಿಗೆ ದಿನಾಂಕ 23-01-2021ರ ಶನಿವಾರ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. ದಿನಾಂಕ 24-01-2021ರ ಭಾನುವಾರದಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ.
 4. ಕರ್ನಾಟಕ ರಾಜ್ಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯಲ್ಲಿನ ಸಮೂಹ ಎ ವೃಂದದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಹುದ್ದೆಗಳಿಗೆ ಮುಖ್ಯ ಪರೀಕ್ಷೆಯು ದಿನಾಂಕ 27-01-2021 ರಿಂದ ದಿನಾಂಕ 30-01-2021ರವರೆಗೆ ನಾಲ್ಕು ದಿನ ನಡೆಯಲಿದೆ.
 5. ರಾಜ್ಯದ ವಿವಿಧ ಇಲಾಖೆಗಳಲ್ಲಿನ ಉಳಿಕೆ ಮೂಲ ವೃಂದದ ಮತ್ತು ಹೈದರಾಬಾದ್ ಕರ್ನಾಟಕ ವೃಂದದ ಕಿರಿಯ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ ದಿನಾಂಕ 13-02-2021ರ ಶನಿವಾರ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. ದಿನಾಂಕ 14-02-2021ರ ಭಾನುವಾರ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ.

BIG BREAKING : 'ಯುಪಿಎಸ್ಸಿ, ಕೆಪಿಎಸ್ಸಿ ಉದ್ಯೋಗಾಕಾಂಕ್ಷಿ'ಗಳಿಗೆ ಗುಡ್ ನ್ಯೂಸ್ : 'KPSC ಪರೀಕ್ಷೆ 1 ತಿಂಗಳು ಮುಂದೂಡಿಕೆ' ಸಿಎಂ ಯಡಿಯೂರಪ್ಪ ಸೂಚನೆ

November 17, 2020


 

ಬೆಂಗಳೂರು : ಯುಪಿಎಸ್ಸಿ ಹಾಗೂ ಕೆಪಿಎಸ್ಸಿ ಪರೀಕ್ಷೆಗಳು ಒಂದೇ ದಿನ ನಿಗಧಿಯಾಗಿತ್ತು. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಗೊಂದಲಕ್ಕೆ ಕಾರಣವಾಗಿತ್ತು. ಇಂತಹ ಡಿಸೆಂಬರ್ ನಲ್ಲಿ ನಿಗಧಿಯಾಗಿದ್ದಂತ ಕೆಪಿಎಸ್ಸಿ ಪರೀಕ್ಷೆಯನ್ನು ಒಂದು ತಿಂಗಳು ಮುಂದೂಡಿಕೆ ಮಾಡಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೂಚಿಸಿದ್ದಾರೆ. ಈ ಮೂಲಕ ಕೆಪಿಎಸ್ಸಿ ಹಾಗೂ ಯುಪಿಎಸ್ಸಿ ಪರೀಕ್ಷಾ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.

ಕೇಂದ್ರ ಲೋಕಸೇವಾ ಅಯೋಗ ಪರೀಕ್ಷೆಗಳು 2021 ರ ಜನವರಿ 8 ರಿಂದ 10 ರವರೆ ಹಾಗೂ 16, 17 ರಂದು ನಡೆಯಲಿವೆ. ಕರ್ನಾಟಕ ಲೋಕಸೇವಾ ಆಯೋಗ ಪರೀಕ್ಷೆಗಳು 2020 ರ ಡಿಸೆಂಬರ್ 21 ರಿಂದ 24 ಮತ್ತು ಜನವರಿ 02 ರಿಂದ 05 ರವರೆಗೆ ನಿಗದಿಯಾಗಿವೆ.

ಕೆಪಿಎಸ್‌ಸಿ ಮತ್ತು ಯುಪಿಎಸ್‌ಸಿ ಪರೀಕ್ಷೆಗಳ ನಡುವೆ ಅಂತರ ಕಡಿಮೆ ಇರುವ ಕಾರಣ ಎರಡೂ ಪರೀಕ್ಷೆ ತೆಗೆದುಕೊಂಡ ಅಭ್ಯರ್ಥಿಗಳಿಗೆ ಸಿದ್ಧತೆ ನಡೆಸಲು ಕಷ್ಟವಾಗುತ್ತಿದೆ.

ಈ ಹಿನ್ನೆಲೆ ಅಭ್ಯರ್ಥಿಗಳು 'ಕೆಪಿಎಸ್‌ಸಿ ವೇಳಾಪಟ್ಟಿಯನ್ನು ಪರಿಷ್ಕರಿಸಿ ಪರೀಕ್ಷೆಯನ್ನು ಕನಿಷ್ಠ ಒಂದು ತಿಂಗಳು ಮುಂದೂಡಬೇಕೆಂದು' ಅಭ್ಯರ್ಥಿಗಳು ಆಗ್ರಹಿಸಿದ್ದರು.

ಯುಪಿಎಸ್‌ಸಿ ಸಿವಿಲ್ ಪರೀಕ್ಷೆಗಳಿಗೆ ತಯಾರಿ ನಡೆಸುವವರು ಕೆಎಎಸ್‌ ಪರೀಕ್ಷೆಗಳಿಗೂ ಸಿದ್ಧತೆ ನಡೆಸುತ್ತಿರುತ್ತಾರೆ. ಆದರೆ ಸಿದ್ಧತೆ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ನಿರಂತರವಾಗಿ ಪರೀಕ್ಷೆಗಳನ್ನು ಎದುರಿಸಬೇಕಾದಾಗ ತಯಾರಿಯಲ್ಲಿ ಭಿನ್ನತೆ ಕಾರಣ, ಕೆಪಿಎಸ್‌ಸಿ ಗಮನದಲ್ಲಿಟ್ಟುಕೊಂಡು ವೇಳಾಪಟ್ಟಿ ನಿಗದಿ ಪಡಿಸಬೇಕಿತ್ತು ಎಂಬುದು ಅಭ್ಯರ್ಥಿಗಳ ಆಗ್ರಹಿದ್ದರು.

ಇಂತಹ ಉದ್ಯೋಗಾಕಾಂಕ್ಷಿಗಳ ಆಗ್ರಹಕ್ಕೆ ಮಣಿದಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಯುಪಿಎಸ್ಸಿ ಪರೀಕ್ಷೆಗಳ ಜೊತೆಗೆ ನಿಗಧಿಯಾಗಿದ್ದಂತ ಕೆಪಿಎಸ್ಸಿಯ ಪರೀಕ್ಷೆಗಳನ್ನು ಒಂದು ತಿಂಗಳು ಮುಂದೂಡಿಕೆ ಮಾಡಲು ಸೂಚನೆ ನೀಡಿದ್ದಾರೆ. ಈ ಮೂಲಕ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.


SSLC ಪಾಸಾದವರು ಕೂಡ LPG ಗ್ಯಾಸ್ ಏಜೆನ್ಸಿ ಆರಂಭಿಸಬಹುದು... ಹೀಗೆ Applay ಮಾಡಿ

November 17, 2020

 


ನವದೆಹಲಿ: ಪ್ರತಿಯೊಬ್ಬರೂ LPG ಗ್ಯಾಸ್ ಏಜೆನ್ಸಿಯನ್ನು ತೆರೆಯಲು ಅವಕಾಶದ ಹುಡುಕಾಟದಲ್ಲಿರುತ್ತಾರೆ. ಈ ಲಾಭದಾಯಕ ವ್ಯವಹಾರವನ್ನು (Business Opportunity) ಸುಲಭವಾಗಿ ಪ್ರಾರಂಭಿಸಲು ಸಾಧ್ಯವಿಲ್ಲ, ಆದರೆ ಮೊದಲ ದಿನದಿಂದ ಅದು ಗಳಿಕೆಯ ಮಾರ್ಗವನ್ನು ತೆರೆಯುತ್ತದೆ. ನೀವೂ ಕೂಡ ಗ್ಯಾಸ್ ಏಜೆನ್ಸಿಯನ್ನು ತೆರೆಯಲು ಬಯಸಿದರೆ, ನೀವು ಎಲ್ಲಾ ನಿಯಮಗಳನ್ನು ತಿಳಿದಿರಬೇಕು. ಅನಿಲ ಕಂಪನಿಗಳು ಕಾಲಕಾಲಕ್ಕೆ ಎಲ್‌ಪಿಜಿ ಮಾರಾಟಗಾರರ ಕಾರ್ಯಕ್ರಮಗಳನ್ನು ನಡೆಸುತ್ತವೆ. ವಿತರಣಾ ಜಾಲವನ್ನು ಹೆಚ್ಚಿಸಲು, ಅವರಿಗೆ ನಗರದಲ್ಲಿ ವಿತರಕರು ಬೇಕು. ಮಾರ್ಚ್ 2021 ರ ಹೊತ್ತಿಗೆ, ಅನಿಲ ಕಂಪನಿಗಳು ಹೊಸ ವಿತರಕರನ್ನು ನೇಮಕ ಮಾಡಬೇಕಾಗಿದೆ.

ಈ ಕುರಿತು ಶೀಘ್ರದಲ್ಲಿಯೇ ಜಾಹೀರಾತುಗಳು ಬಿಡುಗಡೆಯಾಗಲಿವೆ.


ನಿಮ್ಮ ಬಳಿಯೂ ಕೂಡ ಒಂದು ನಿಯಮಿತ ಆದಾಯ ಬರುವ ಬಿಸಿನೆಸ್ ಆರಂಭಿಸುವ ಒಂದು ಉತ್ತಮ ಅವಕಾಶವಿದೆ. ಲೈಸನ್ಸ್ ಪಡೆದ ನಂತರವೂ ಕೂಡ ಗ್ಯಾಸ್ ಏಜೆನ್ಸಿ ಸೆಟ್ ಅಪ್ ಮಾಡಲು ಸುಮಾರು 1 ವರ್ಷಗಳ ಕಾಲಾವಕಾಶ ಬೇಕಾಗುತ್ತದೆ. ಏಕೆಂದರೆ ಹಲವು ಕಡೆಗಳಿಂದ ನೀವು ಇದಕ್ಕಾಗಿ ಅನುಮೋದನೆಗಳನ್ನು ಪಡೆಯಬೇಕಾಗುತ್ತದೆ. ಯುಪಿ, ಬಿಹಾರ, ಪಶ್ಚಿಮ ಬಂಗಾಳ, ಓಡಿಷಾ ಹಾಗೂ ಮಹಾರಾಷ್ಟ್ರರಾಜ್ಯಗಳಲ್ಲಿ ಹೆಚ್ಚಿನ ಅವಕಾಶಗಳಿವೆ. ಈ ರಾಜ್ಯಗಳಲ್ಲಿ ಕಂಪನಿ ಸಂಭವನೀಯತೆಗಳ ಹುಡುಕಾಟದಲ್ಲಿದೆ

ಹೇಗೆ ಸಿಗಲಿದೆ ಗ್ಯಾಸ್ ಏಜೆನ್ಸಿ?
ದೇಶದ ಮೂರು ಸರ್ಕಾರಿ ಅನಿಲ ಕಂಪನಿಗಳು ಇಂಡೇನ್, ಭಾರತ್ ಗ್ಯಾಸ್ ಮತ್ತು ಭಾರತ್ ಗ್ಯಾಸ್. ಈ ಮೂರು ಕಂಪನಿಗಳು ದೇಶಾದ್ಯಂತ ವಿತರಕರ ಹುಡುಕಾಟದಲ್ಲಿರುತ್ತವೆ. ಇದಕ್ಕಾಗಿ, ಕಾಲಕಾಲಕ್ಕೆ ಜಾಹೀರಾತುಗಳು ಮತ್ತು ಅಧಿಸೂಚನೆಗಳನ್ನು ಹೊರಡಿಸಲಾಗುತ್ತದೆ. ಕಂಪನಿಗಳು ಜಾಹೀರಾತುಗಳ ಮೂಲಕ ಅರ್ಜಿಗಳನ್ನು ಹುಡುಕುತ್ತವೆ. ಪತ್ರಿಕೆಗಳು ಮತ್ತು ಕಂಪನಿಗಳ ವೆಬ್‌ಸೈಟ್‌ನಲ್ಲಿ ಜಾಹೀರಾತುಗಳನ್ನು ನೀಡಲಾಗುತ್ತದೆ. ಅರ್ಜಿ ಸಲ್ಲಿಸುವವರು ನಿರ್ದಿಷ್ಟ ಸ್ವರೂಪದಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಪ್ರಕ್ರಿಯೆಯ ನಂತರ, ಲಾಟರಿ ವ್ಯವಸ್ಥೆಯಿಂದ ವಿತರಕರನ್ನು ಆಯ್ಕೆ ಮಾಡಲಾಗುತ್ತದೆ. ಲಾಟರಿಯಲ್ಲಿ, ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಜನರ ಹೆಸರನ್ನು ಮುಂದಿನ ಪ್ರಕ್ರಿಯೆಗೆ ಕರೆಯಲಾಗುತ್ತದೆ.

ಗ್ಯಾಸ್ ಏಜೆನ್ಸಿ ಯಾರು ಆರಂಭಿಸಬಹುದು?
ಗ್ಯಾಸ್ ಏಜೆನ್ಸಿ ತೆರೆಯಲು ಶೈಕ್ಷಣಿಕ ಅರ್ಹತೆಯನ್ನು ಈ ಮೊದಲು ಪದವಿಗೆ ನಿಗದಿಪಡಿಸಲಾಗಿತ್ತು. ಆದರೆ, ಇದೀಗ ಅದನ್ನು ತಗ್ಗಿಸಿ 10ನೆ ತರಗತಿಗೆ ನಿಗದಿಪಡಿಸಲಾಗಿದೆ. ಜನರಲ್ ಕೆಟಗರಿಯವರು ಈಗ ಕನಿಷ್ಠ 10 ನೆ ತರಗತಿ ಪಾಸಾಗಿರಬೇಕು. ಆಯಲ್ ಮಾರ್ಕೆಟಿಂಗ್ ಕಂಪನಿಗಳವತಿಯಿಂದ ಜಾರಿಗೊಳಿಸಲಾಗಿರುವ ನೂತನ ಮಾರ್ಗ ಸೂಚಿಗಳ ಪ್ರಕಾರ 60 ವರ್ಷ ವಯಸ್ಸಿಯವರೆಗೆ ಯಾವುದೇ ವ್ಯಕ್ತಿ ಗ್ಯಾಸ್ ಏಜೆನ್ಸಿಗೆ ಅರ್ಜಿ ಸಲ್ಲಿಸಬಹುದು. ಈ ಮೊದಲು ಇದು 21 ರಿಂದ 45 ವರ್ಷದವರೆಗೆ ಇತ್ತ

ಫ್ಯಾಮಿಲಿ ಯುನಿಟ್ ಡೆಫಿನೇಶನ್ ಕೂಡ ಬದಲಾಗಿದೆ
ಕಂಪನಿಗಳು 'ಫ್ಯಾಮಿಲಿ ಯುನಿಟ್' ವ್ಯಾಖ್ಯೆಯಲ್ಲಿಯೂ ಕೂಡ ಬದಲಾವಣೆ ಮಾಡಿವೆ. ಅರ್ಜಿದಾರರನ್ನು ಹೊರತುಪಡಿಸಿ ಪತಿ ಅಥವಾ ಪತ್ನಿ, ಪೋಷಕರು, ಅಣ್ಣ, ಸಹೋದರ ಸೇರಿದಂತೆ ಮಲಸಹೊದರ-ಸಹೋದರಿ, ದತ್ತು ಪಡೆದ ಮಗು, ಅಳಿಯ, ಅತ್ತಿಗೆ, ಅತ್ತೆ-ಮಾವ, ಅಜ್ಜ-ಅಜ್ಜಿ ಈ ಪಟ್ಟಿಯಲ್ಲಿ ಶಾಮೀಲುಗೊಳಿಸಲಾಗಿದೆ. ಅವಿವಾಹಿತ ಅರ್ಜಿದಾರರ ವಿಷಯದಲ್ಲಿ ಪೋಷಕರು, ಅವಿವಾಹಿತರ ಸಹೋದರ-ಸಹೋದರಿ ಬರುತ್ತಾರೆ. ವಿಚ್ಛೇದನೆ ಪಡೆದವರು/ ವಿಧವಾಗಳ ವಿಷಯದಲ್ಲಿ ಕೇವಲ ವೈಯಕ್ತಿಕ ಹಾಗೂ ಅವಿವಾಹಿತ ಮಕ್ಕಳು ಮಾತ್ರ ಬರುತ್ತಾರೆ.

L7th Pay Commission:ಈ ಸರ್ಕಾರಿ ನೌಕರರಿಗೆ ಶೀಘ್ರವೇ ಸಿಗಲಿದೆ Big Gift

November 17, 2020

 


ಮುಂಬೈ: ಮಹಾರಾಷ್ಟ್ರ ಸರ್ಕಾರ ಹಬ್ಬದ ಋತುವಿನಲ್ಲಿ ವಿದ್ಯುತ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು ಒಂದು ಲಕ್ಷಕ್ಕೂ ಅಧಿಕ ನೌಕರರಿಗೆ ಬೋನಸ್ (Bonus) ನೀಡುವುದಾಗಿ ಘೋಷಿಸಿದೆ. ರಾಜ್ಯದ ಇಂಧನ ಖಾತೆ ಸಚಿವ ನಿತಿನ್ ರಾವುತ್ ಈ ಘೋಷಣೆಯನ್ನು ಮಾಡಿದ್ದಾರೆ. ಸಾರ್ವಜನಿಕ ಕ್ಷೇತ್ರದ ಇಂಧನ ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರಿಗೆ ಈ ಘೋಷಣೆಯ ಲಾಭ ಸಿಗಲಿದೆ ಎಂದು ರಾವುತ್ ಹೇಳಿದ್ದಾರೆ.


ಬೋನಸ್ ಬೇಡಿಕೆಯ ಬಗ್ಗೆ ವಿದ್ಯುತ್ ಕಾರ್ಮಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಮುಷ್ಕರಕ್ಕೆ ಹೋಗುವಂತೆ ಎಚ್ಚರಿಕೆ ನೀಡಿದ ಸಮಯದಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರವನ್ನು ಪ್ರಕಟಿಸಿರುವುದು ಇಲ್ಲಿ ಗಮನಾರ್ಹ.

ಸರ್ಕಾರದ ಈ ಪ್ರಕಟಣೆಯು ಪ್ರಸರಣ ಕಂಪನಿ ಮಹತ್ರಾನ್ಸ್ಕೊ, ವಿತರಣಾ ಕಂಪನಿ ಎಂಎಸ್‌ಇಡಿಸಿಎಲ್ ಮತ್ತು ವಿದ್ಯುತ್ ಉತ್ಪಾದನಾ ಕಂಪನಿ ಮಹಾಗೆಂಕೊ ನೌಕರರಿಗೆ ಅನುಕೂಲವಾಗಲಿದೆ. ಬೋನಸ್ ಪಾವತಿಸದಿದ್ದರೆ ಮುಷ್ಕರ ನಡೆಸುವುದಾಗಿ ಈ ಕಂಪನಿಗಳ ನೌಕರರು ಎಚ್ಚರಿಸಿದ್ದಾರೆ. ಕಳೆದ ವರ್ಷ, ಮೂರು ಕಂಪನಿಗಳ ಉದ್ಯೋಗಿಗಳಿಗೆ 9000 ರಿಂದ 15000 ರೂ.ಗಳ ಬೋನಸ್ ನೀಡಲಾಗಿತ್ತು.

ನವೆಂಬರ್ 9 ರಂದು ರಾಜಸ್ಥಾನ ಸರ್ಕಾರ ಸುಮಾರು 7.30 ಲಕ್ಷ ಉದ್ಯೋಗಿಗಳಿಗೆ ದೀಪಾವಳಿ ಬೋನಸ್ ನೀಡಿದೆ. ಇದೇ ವೇಳೆ ಉತ್ತರಾಖಂಡ ಸರ್ಕಾರವು ಸುಮಾರು ಒಂದೂವರೆ ಲಕ್ಷ ಉದ್ಯೋಗಿಗಳಿಗೆ ದೀಪಾವಳಿ ಬೋನಸ್ ನೀಡುವುದಾಗಿ ಘೋಷಿಸಿದೆ. ಉತ್ತರಾಖಂಡ ಸರ್ಕಾರದ ಈ ನಿರ್ಧಾರವು ಗೆಜೆಟೆಡ್ ಅಲ್ಲದ ನೌಕರರಿಗೆ, ದೈನಂದಿನ ವೇತನ ನೌಕರರಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತದೆ. ಉತ್ತರಪ್ರದೇಶದಲ್ಲಿ ಯೋಗಿ ಸರ್ಕಾರವು 15 ಲಕ್ಷ ಉದ್ಯೋಗಿಗಳಿಗೆ ಬೋನಸ್ ಘೋಷಿಸಿದೆ

ಭಾರತೀಯ ರೈಲು ಇಲಾಖೆ ಮೊದಲು ಬೋನಸ್ ಘೋಷಿಸಿದೆ
ಇದಕ್ಕೂ ಮೊದಲು ಭಾರತೀಯ ರೈಲು ಇಲಾಖೆಯಲ್ಲಿ ಕೆಲಸ ಮಾಡುವ ನೌಕರರಿಗೆ ಲಾಟರಿ ಸಿಕ್ಕಿದೆ. ವಿಭಾಗದ ನೌಕರರಿಗೆ 78 ದಿನಗಳ ಪ್ರೊಡಕ್ಷನ್ ಲಿಂಕ್ಡ್ ಬೋನಸ್ ಘೋಷಣೆಯಾಗಿದೆ. ಈ ಬೋನಸ್ FY 2019-20ನೆ ಆರ್ಥಿಕ ವರ್ಷಕ್ಕೆ ಸಂಬಂಧಿಸಿದೆ. ಇದರಿಂದ ರೇಲ್ವೆ ವಿಭಾಗದ ನಾನ್ ಗೆಜೆಟೆಡ್ ನೌಕರರ ಖಾತೆಗೆ ವೇತನ ಹೆಚ್ಚಾಗಿ ಜಮೆಯಾಗಿದೆ

12 ಲಕ್ಷ ನೌಕರರಿಗೆ ಇದರಿಂದ ಲಾಭವಾಗಿದೆ
ಅಕ್ಟೋಬರ್ 21ರಂದು ಹೊರಡಿಸಲಾಗಿರುವ ಈ ಆದೇಶದ ಪ್ರಕಾರ ಈ ಬಾರಿಯ ಬೋನಸ್ ಲಾಭ RPF/RPSF ನೌಕರರಿಗೆ ಸಿಗುವುದಿಲ್ಲ. ಇದರಲ್ಲಿ ನಾನ್-ಗೆಜೆಟೆಡ್ ರೇಲ್ವೆ ನೌಕರರಿಗೆ 17951 ರೂ. ಬೋನಸ್ ಲಭಿಸಿದೆ. ಈ ಲಾಭ ವಿಭಾಗದ ಸುಮಾರು 12 ಲಕ್ಷ ನಾನ್-ಗೆಜೆಟೆಡ್ ನೌಕರರಿಗೆ ಲಭಿಸಿದೆ.

PUC ಪಾಸಾದವರಿಗೆ ಸಿಹಿ ಸುದ್ದಿ: ಅಂಚೆ ಇಲಾಖೆಯಲ್ಲಿ ಉದ್ಯೋಗಾವಕಾಶ -ಇಲ್ಲಿದೆ ಮಾಹಿತಿ

November 17, 2020

 


ಸೆಕೆಂಡ್ ಪಿಯುಸಿ/ 12 ನೇ ತರಗತಿ ಪಾಸ್ ಆದವರಿಗೆ ಸಿಹಿ ಸುದ್ದಿ ಇಲ್ಲಿದೆ. ಅಂಚೆ ಇಲಾಖೆ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಕ್ಲೆರಿಕಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

Advertisment

ಅಂಚೆ ಸಹಾಯಕರು, ಸಾರ್ಟಿಂಗ್ ಸಹಾಯಕರು, ಲೋಯರ್ ಡಿವಿಜನ್ ಕ್ಲರ್ಕ್, ಜೂನಿಯರ್ ಸೆಕ್ರೆಟರಿಯಟ್ ಅಸಿಸ್ಟೆಂಟ್, ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ವೇತನ 25,500 ರೂ. ನಿಂದ 81,100 ರೂ., ದ್ವಿತೀಯ ಪಿಯುಸಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 15 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 18 ರಿಂದ 27 ವರ್ಷ, ಒಬಿಸಿಗೆ 18 ರಿಂದ 30 ವರ್ಷ ಹಾಗೂ ಪರಿಶಿಷ್ಟ ಜಾತಿ ವರ್ಗದವರಿಗೆ 18 ರಿಂದ 32 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ನವೆಂಬರ್ 6 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು ಡಿಸೆಂಬರ್ 15 ರ ವರೆಗೆ ಅರ್ಜಿ ಸಲ್ಲಿಸಬಹುದು. 2021 ರ ಏಪ್ರಿಲ್ 12 ರಂದು ಪರೀಕ್ಷೆ ನಡೆಯಲಿದೆ ಹೆಚ್ಚಿನ ಮಾಹಿತಿಗಾಗಿ ಸ್ಟಾಪ್ ಸೆಲೆಕ್ಷನ್ ಕಮಿಷನ್ ವೆಬ್ ಸೈಟ್ https://ssc.nic.in/ ಗೆ ಗಮನಿಸಬಹುದಾಗಿದೆ ಎಂದು ಹೇಳಲಾಗಿದೆ.

ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ : ಶೀಘ್ರದಲ್ಲೇ ನಿರ್ಮಾಣವಾಗಲಿದೆ ಲಕ್ಷಾಂತರ ಉದ್ಯೋಗಗಳು

November 17, 2020

 

ನವದೆಹಲಿ : ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಮೂಲಕ ವೇತನ ಸಬ್ಸಿಡಿ ಕೇಂದ್ರಕ್ಕೆ, 6,000 ಕೋಟಿ ವೆಚ್ಚ ನೀಡಲಿದೆ ಮತ್ತು ಮುಂದಿನ ಎರಡು ವರ್ಷಗಳಲ್ಲಿ ಒಂದು ದಶಲಕ್ಷಕ್ಕೂ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.

ಉದ್ಯೋಗ ಸೃಷ್ಟಿ ಗುರಿಯು ವೇತನ ಪಿರಮಿಡ್‌ನ ಕೆಳ ಹಂತದ ನೌಕರರನ್ನು ಗುರಿಯಾಗಿರಿಸಿಕೊಂಡಿದೆ, ಆದರೆ ಔಪಚಾರಿಕೀಕರಣಕ್ಕೆ ತಳ್ಳುತ್ತದೆ ಎಂದು ಇಬ್ಬರು ಸರ್ಕಾರಿ ಅಧಿಕಾರಿಗಳು ಹೇಳಿದ್ದಾರೆ. ಆದಾಗ್ಯೂ, ಕೆಲವು ಸಂಸ್ಥೆಗಳ ಹಕ್ಕುಗಳ ವಿರುದ್ಧ ಹೊಸ ಉದ್ಯೋಗಗಳ ಸಂಖ್ಯೆಯನ್ನು ಮೇಲ್ವಿಚಾರಣೆ ಮಾಡುವುದು ಕಠಿಣವಾಗಿರುತ್ತದೆ ಎಂದು ಅವರು ಹೇಳಿದರು.

'ಒಂದು ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುವುದು ಉಪಕ್ರಮದಿಂದ ಸಾಧಿಸುವುದು ಕಷ್ಟವೇನಲ್ಲ.

20 ಅಥವಾ ಅದಕ್ಕಿಂತ ಹೆಚ್ಚಿನ ಕಾರ್ಮಿಕರನ್ನು ಹೊಂದಿರುವ ಕನಿಷ್ಠ 500,000 ಸಂಸ್ಥೆಗಳು ಇಪಿಎಫ್‌ಒನಲ್ಲಿ ನೋಂದಾಯಿಸಲ್ಪಟ್ಟಿವೆ ಮತ್ತು ಅವರು ತಮ್ಮ ವೇತನದಾರರ ಪಟ್ಟಿಯಲ್ಲಿ ತಲಾ ಇಬ್ಬರು ಉದ್ಯೋಗಿಗಳನ್ನು ಸೇರಿಸಿದರೆ, ಒಂದು ಮಿಲಿಯನ್ ಸಂಖ್ಯೆಯನ್ನು ಸುಲಭವಾಗಿ ಸಾಧಿಸಬಹುದು 'ಎಂದು ಮೇಲೆ ತಿಳಿಸಿದ ಅಧಿಕಾರಿಗಳಲ್ಲಿ ಒಬ್ಬರು ಹೇಳಿದರು.

'ನೆನಪಿಡಿ, ಮೊದಲ ತ್ರೈಮಾಸಿಕದ ನೀರಸ ಕಾರ್ಯಕ್ಷಮತೆಯಿಂದ ಆರ್ಥಿಕತೆಯು ಕ್ರಮೇಣ ಪುಟಿಯುವ ನಿರೀಕ್ಷೆಯಿದೆ. ನಿರ್ಮಾಣ, ರಿಯಲ್ ಎಸ್ಟೇಟ್ ಮತ್ತು ಸಿಮೆಂಟ್ ಮತ್ತು ವಾಹನ ಕ್ಷೇತ್ರಗಳಲ್ಲಿನ ಬೇಡಿಕೆ ಪುನರುಜ್ಜೀವನಗೊಳ್ಳುತ್ತಿದೆ. ಲಾಕ್‌ಡೌನ್ ಸಮಯದಲ್ಲಿ ಕೆಲಸ ಕಳೆದುಕೊಂಡ ನೌಕರರನ್ನು ವಾಪಸ್ ತೆಗೆದುಕೊಳ್ಳುವ ಸಂಸ್ಥೆಗಳು ಇಪಿಎಫ್ ಸಬ್ಸಿಡಿಯನ್ನು 24% ವರೆಗೆ ಪಡೆಯುತ್ತವೆ ಎಂದು ಆತ್ಮನಿರ್ಭಾರ ಭಾರತ್ ರೊಜ್ಗರ್ ಯೋಜನೆ (ಎಬಿಆರ್‌ವೈ) ಮಾಹಿತಿ ಒದಗಿಸುತ್ತದೆ. ಹಳೆಯ ಉದ್ಯೋಗಿಗಳನ್ನು ಈಗಾಗಲೇ ಹಿಂದಕ್ಕೆ ತೆಗೆದುಕೊಳ್ಳಲಾಗುತ್ತಿದೆ. ಒಳ್ಳೆಯದಕ್ಕಾಗಿ ವಿಷಯಗಳು ಬದಲಾಗುತ್ತವೆ 'ಎಂದು ಇತರ ಅಧಿಕಾರಿ ಹೇಳಿದರು.

ಮಾರ್ಚ್ 1 ರಿಂದ ಸೆಪ್ಟೆಂಬರ್ 30 ರ ನಡುವೆ ಉದ್ಯೋಗ ಕಳೆದುಕೊಂಡ ಕಾರ್ಮಿಕರಿಗೆ ಕೇಂದ್ರವು ಎರಡು ವರ್ಷಗಳ ಕಾಲ ಸಬ್ಸಿಡಿ ನೀಡಲಿದೆ, ಆದರೆ ಈಗ ಮತ್ತೆ ಸೇರುತ್ತಿದೆ, ಹಾಗೆಯೇ ಎಬಿಆರ್ವೈ ಅಡಿಯಲ್ಲಿ ಅಕ್ಟೋಬರ್ 1 ರಿಂದ ಜೂನ್ 30, 2021 ರವರೆಗೆ ಕೆಲಸ ಮಾಡುವ ಹೊಸ ಕಾರ್ಮಿಕರಿಗೆ ಎರಡೂ ವಿಭಾಗಗಳಿಗೆ, ವೇತನವನ್ನು ತಿಂಗಳಿಗೆ ₹ 15,000 ಎಂದು ನಿಗದಿಪಡಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಕೊನೆಯದಾಗಿ ಹೇಳಿದರು.

ಭಾಗಶಃ ಇಪಿಎಫ್ ಸಬ್ಸಿಡಿ ಯೋಜನೆ, ಪಿಎಂ ರೋಜರ್ ಪ್ರೊತ್ಸಾಹಂ ಯೋಜನೆ, ಮೂರು ವರ್ಷಗಳ ಶೆಲ್ಫ್ ಜೀವಿತಾವಧಿಯೊಂದಿಗೆ 2016 ರಲ್ಲಿ ಘೋಷಿಸಿದ್ದು, 3 8,300 ಕೋಟಿಗಿಂತ ಹೆಚ್ಚಿನ ವೆಚ್ಚಕ್ಕೆ ಕಾರಣವಾಗಿದೆ ಎಂದು ಮೊದಲ ಅಧಿಕಾರಿ ಹೇಳಿದರು. ಎಬಿಆರ್ವೈ ಹೆಚ್ಚು ವಿಸ್ತಾರವಾಗಿದೆ ಆದರೆ ಎರಡು ವರ್ಷಗಳವರೆಗೆ. 'ಔಪಚಾರಿಕ ಲೆಕ್ಕಾಚಾರವನ್ನು ಇನ್ನೂ ಮಾಡಲಾಗಿಲ್ಲ ಆದರೆ ಸರಿಸುಮಾರು ಖರ್ಚು, 500 5,500-6,000 ಕೋಟಿಗಿಂತ ಕಡಿಮೆಯಿಲ್ಲ' ಎಂದು ಮೊದಲ ಅಧಿಕಾರಿ ಹೇಳಿದರು.

ಕಳೆದ ಬಾರಿ, 153,000 ಕಂಪನಿಗಳು ಲಾಭವನ್ನು ಪಡೆದಿವೆ, ಆದರೆ ಈ ಬಾರಿ ಈ ಸಂಖ್ಯೆಯು 'ಕಾರ್ಮಿಕರನ್ನು ಮರಳಿ ಸ್ವಾಗತಿಸುವುದನ್ನು ನಾವು ನಿರೀಕ್ಷಿಸುತ್ತೇವೆ, ಅದರಲ್ಲೂ ವಿಶೇಷವಾಗಿ ಲಾಕ್‌ಡೌನ್ ಸಮಯದಲ್ಲಿ ವ್ಯಾಪಾರ ನಷ್ಟದಿಂದಾಗಿ ಉದ್ಯೋಗ ಕಳೆದುಕೊಂಡವರನ್ನು ಸ್ವಾಗತಿಸುತ್ತೇವೆ' ಎಂದು ಎರಡನೇ ಅಧಿಕಾರಿ ಹೇಳಿದರು.

ನವೆಂಬರ್ 12 ರಂದು, ಹೊಸ ಉದ್ಯೋಗಿಗಳ ಸೇರ್ಪಡೆ ಸೆಪ್ಟೆಂಬರ್ ನೌಕರರ ಸಂಖ್ಯೆಗಿಂತ ಹೆಚ್ಚಿರುತ್ತದೆ ಮತ್ತು ಸೆಪ್ಟೆಂಬರ್ ಅಂತ್ಯದ ವೇಳೆಗೆ ಒಂದು ಕಂಪನಿಯು 50 ಕಾರ್ಮಿಕರನ್ನು ಹೊಂದಿದ್ದರೆ, ಇಪಿಎಫ್ ಸಬ್ಸಿಡಿಗೆ ಅರ್ಹರಾಗಲು ಕನಿಷ್ಠ ಎರಡು ಉದ್ಯೋಗಗಳನ್ನು ರಚಿಸಬೇಕಾಗಿದೆ. 50 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳು ಪ್ರಯೋಜನಗಳನ್ನು ಪಡೆಯಲು ಐದು ಹೊಸ ಉದ್ಯೋಗಿಗಳನ್ನು ಸೇರಿಸುವ ಅಗತ್ಯವಿದೆ. 1,000 ಕಾರ್ಮಿಕರನ್ನು ಹೊಂದಿರುವ ಇಪಿಎಫ್‌ಒನಲ್ಲಿ ನೋಂದಾಯಿತ ಸಂಸ್ಥೆಗಳಿಗೆ 24% ಇಪಿಎಫ್ ಸಬ್ಸಿಡಿ, 12% ಉದ್ಯೋಗದಾತರ ಪಾಲು ಮತ್ತು 12% ಉದ್ಯೋಗಿಗಳ ಪಾಲು ಸಿಗುತ್ತದೆ. ಕಂಪನಿಯು 1,000 ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದರೆ, ಹೊಸ ಉದ್ಯೋಗಿಗಳ 12% ಪಾಲನ್ನು ಸರ್ಕಾರ ಮರುಪಾವತಿ ಮಾಡುತ್ತದೆ.

KSRTC ಬಸ್ ಪಾಸ್' ಬಗ್ಗೆ ವಿದ್ಯಾರ್ಥಿಗಳಿಗೆ ಬಹುಮುಖ್ಯ ಮಾಹಿತಿ : ಹೀಗಿದೆ 'ವಿದ್ಯಾರ್ಥಿ ಪಾಸು ದರ'

November 16, 2020

 


ಬೆಂಗಳೂರು : 2020-21ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಗಳನ್ನು ವಿತರಿಸುವ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಸುತ್ತೋಲೆ ಹೊರಡಿಸಿದೆ. ತರಗತಿಗಳಿಗೆ ಅನುಸಾರವಾಗಿ ವಿದ್ಯಾರ್ಥಿಗಳಿಗೆ ಬಸ್ ಪಾಸ್ ದರವನ್ನು ನಿಗದಿ ಪಡಿಸಿ, ಸುತ್ತೋಲೆಯಲ್ಲಿ ತಿಳಿಸಿದೆ.

ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಸುತ್ತೋಲೆ ಹೊರಡಿಸಿದ್ದು, ಹಿಂದಿನ ವರ್ಷಗಳಂತೆ 2020-21ನೇ ಸಾಲಿನಲ್ಲಿ ವಿದ್ಯಾರ್ಥಿಗಳ ಬಸ್ ಪಾಸುಗಳನ್ನು ವಿತರಿಸಲಿದ್ದು, ಈ ವಿಷಯದಲ್ಲಿ ಕೆಳಕಂಡ ನಿರ್ದೇಶನಗಳನ್ನು ಅನುಸರಿಸಲು ಆದೇಶಿಸಿದೆ.

2020-21ನೇ ಸಾಲಿಗೆ ವಿದ್ಯಾರ್ಥಿ ಪಾಸು ದರಗಳು ಈ ಕೆಳಕಂಡಂತಿವೆ

 • ಪ್ರಾಥಮಿಕ ಶಾಲೆ - 10 ತಿಂಗಳ ಅವಧಿಗೆ ಎಲ್ಲರಿಗೂ ಉಚಿತವಾಗಿದ್ದರೂ, ಪಾಸಿನ ಸಂಸ್ಕರಣಾ ಶುಲ್ಕವಾಗಿ ರೂ.150 ಶುಲ್ಕವನ್ನು ನೀಡಬೇಕಿದೆ.
 • ಪ್ರೌಢಾಲೆ ಬಾಲಕರು - 10 ತಿಂಗಳ ಅವಧಿಗೆ ಸಾಮಾನ್ಯ ವಿದ್ಯಾರ್ಥಿಗಳಿಗೆ ರೂ.600 ಜೊತೆಗೆ ಸಂಸ್ಕರಣಾ ಶುಲ್ಕ ರೂ.750. ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಉಚಿತವಾಗಿದ್ದರೂ ಸಂಸ್ಕರಣಾ ಶುಲ್ಕವಾಗಿ ರೂ.150 ಶುಲ್ಕ ನೀಡಬೇಕಿದೆ.
 • ಪ್ರೌಢಶಾಲೆಯ ಬಾಲಕಿಯರು - 10 ತಿಂಗಳ ಅವಧಿಗೆ ಸಾಮಾನ್ಯ ವಿದ್ಯಾರ್ಥಿಗಳಿಗೆ ರೂ.550. ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪಾಸ್ ವಿತರಿಸಿದರೂ, ರೂ.150 ಸಂಸ್ಕರಣಾ ಶುಲ್ಕವನ್ನು ಪಾವತಿಸಬೇಕಿದೆ.
 • ಪಿಯುಸಿ, ಪದವಿ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ - 10 ತಿಂಗಳ ಅವಧಿಗೆ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ರೂ.1050. ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪಾಸ್ ವಿತರಿಸಿದರೂ, ರೂ.150 ಸಂಸ್ಕರಣಾ ಶುಲ್ಕವನ್ನು ಪಾವತಿಸಬೇಕಿದೆ.
 • ಐಟಿಐ ವಿದ್ಯಾರ್ಥಿಗಳಿಗೆ - 12 ತಿಂಗಳ ಅವಧಿಗೆ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ರೂ.1310. ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪಾಸ್ ವಿತರಿಸಿದರೂ, ರೂ.150 ಸಂಸ್ಕರಣಾ ಶುಲ್ಕವನ್ನು ಪಾವತಿಸಬೇಕಿದೆ.
 • ವೃತ್ತಿಪರ ಕೋರ್ಸುಗಳ ವಿದ್ಯಾರ್ಥಿಗಳಿಗೆ - 10 ತಿಂಗಳ ಅವಧಿಗೆ ರೂ.1550. ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪಾಸ್ ವಿತರಿಸಿದರೂ, ರೂ.150 ಸಂಸ್ಕರಣಾ ಶುಲ್ಕವನ್ನು ಪಾವತಿಸಬೇಕಿದೆ.
 • ಸಂಜೆ ಕಾಲೇಜು, ಪಿಹೆಚ್ ಡಿ ವಿದ್ಯಾರ್ಥಿಗಳಿಗೆ - 10 ತಿಂಗಳ ಅವಧಿಗೆ ರೂ.1350. ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪಾಸ್ ವಿತರಿಸಿದರೂ, ರೂ.150 ಸಂಸ್ಕರಣಾ ಶುಲ್ಕವನ್ನು ಪಾವತಿಸಬೇಕಿದೆ.

ಇನ್ನೂ ಸಂಸ್ಕರಣಾ ಶುಲ್ಕವಾಗಿ ರೂ.100 ಪಡೆಯುವುದನ್ನು ಮುಂದುವರೆಸಿರುವ ನಿಗಮವು, ಅಪಘಾತ ಪರಿಹಾರ ನಿಧಿ ವಂತಿಕೆ ಮಾಸಿಕ ರೂ.5ರಂತೆ, 10 ತಿಂಗಳಿಗೆ ರೂ.50 ಮತ್ತು 12 ತಿಂಗಳಿಗೆ ರೂ.60 ಪಡೆಯುವುದನ್ನು ಮುಂದುವರೆಸಿದೆ.

ವಿದ್ಯಾರ್ಥಿಗಳು ಪಾಸ್ ಗಾಗಿ ಅರ್ಜಿ ಸಲ್ಲಿಸುವ ವಿಧಾನ

 • ಪ್ರಸಕ್ತ ಸಾಲಿನಿಂದ ವಿದ್ಯಾರ್ಥಿಗಳಿಗೆ ಆನ್ ಲೈನ್ ನಲ್ಲಿ ಸರ್ಕಾರ ನಿಗದಿಪಡಿಸಿರುವ ಸೇವಾಸಿಂಧು ಪೋರ್ಟಲ್ ನಲ್ಲಿ ಅರ್ಜಿಯನ್ನು ವಿದ್ಯಾರ್ಥಿ ಬಸ್ ಪಾಸ್ ಪಡೆಯಲು ಸಲ್ಲಿಸಬೇಕು.
 • ವಿದ್ಯಾರ್ಥಿಗಳು ಆನ್ ಲೈನ್ ನಲ್ಲಿ ಸಲ್ಲಿಸಿರುವ ಅರ್ಜಿಗೆ ಶಾಲಾ, ಕಾಲೇಜುಗಳ ಮುಖ್ಯಸ್ಥರಿಂದ ರುಜುಗೊಳಿಸಿ, ನೇರವಾಗಿ ಬಸ್ ನಿಲ್ದಾಣದ ಪಾಸ್ ಕೌಂಟರ್ ನಲ್ಲಿ ಹಣ ಪಾವತಿಸಿ, ಪಡೆಯಬಹುದು.
 • ಇಲ್ಲವೇ ವಿದ್ಯಾರ್ಥಿಗಳು ಆನ್ ಲೈನ್ ನಲ್ಲಿ ತಮ್ಮ ವಿವರಗಳನ್ನು ಭರ್ತಿಗೊಳಿಸಿ, ತದನಂತರ ಭರ್ತಿಗೊಳಿಸಿದ ಅರ್ಜಿಯನ್ನು ಮುದ್ರಣಗೊಳಿಸಿ, ತಾವು ಅಭ್ಯಸಿಸುತ್ತಿರುವ ಶಾಲೆ, ಕಾಲೇಜುಗಳಲ್ಲಿ ನಿಗದಿತ ಫೀ ಸಹಿತ ಸಲ್ಲಿಸುವುದು. ಶಾಲಾ, ಕಾಲೇಜುಗಳಿಂದ ಅರ್ಜಿಗಳನ್ನು ಪರಿಶೀಲಿಸಿ, ಮುದ್ರಿತ ಅರ್ಜಿಗಳ ಮೇಲೆ ಶಾಲಾ, ಕಾಲೇಜು ಮುಖ್ಯಸ್ಥರಿಂದ ಮೇಲು ರುಜುಗೊಳಿಸಿ, ಶಾಲಾ, ಕಾಲೇಜುಗಳ ಮುಖಾಂತರ ಬಸ್ ಪಾಸ್ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.
 • ವಿದ್ಯಾರ್ಥಿಗಳು ಪಾಸಿನ ಶುಲ್ಕವನ್ನು ಸಂಬಂಧಪಟ್ಟ ಶಾಲಾ, ಕಾಲೇಜಿನಲ್ಲಿ ಅಥವಾ ಕೆಎಸ್ ಆರ್ ಟಿ ಸಿ ನಿಗಮದ ಬಸ್ ನಿಲ್ದಾಣದ ಪಾಸ್ ಕೌಂಟರ್ ನಗಳಲ್ಲಿ ಪಾವತಿಸಲು ಅವಕಾಶವಿರುತ್ತದೆ.
 • ಮುಂದುವರೆದು ಸೇವಾಸಿಂಧು Online Payment ವ್ಯವಸ್ಥೆ ಸದ್ಯದಲ್ಲಿಯೇ ಜಾರಿಯಾಗಲಿದ್ದು, ವಿವರಗಳನ್ನು ನಂತ್ರದ ದಿನಗಳಲ್ಲಿ ಸಂಸ್ಥೆ ತಿಳಿಸಲಿದೆ.

ಈ ರೀತಿಯಾಗಿ ವಿದ್ಯಾರ್ಥಿಗಳು ವಿದ್ಯಾರ್ಥಿ ಬಸ್ ಪಾಸ್ ಪಡೆಯಬಹುದಾಗಿದ್ದು, ಪಾಸ್ ಪಡೆಯುವಾಗ ಕೊರೋನಾ ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಪಾಲಿಸುವಂತೆಯೂ ಕೆ ಎಸ್ ಆರ್ ಟಿ ಸಿ ಸುತ್ತೋಲೆಯಲ್ಲಿ ಸೂಚನೆ ನೀಡಿದೆ.

ವರದಿ : ವಸಂತ ಬಿ ಈಶ್ವರಗೆರೆ


BIG NEWS: 15 ನೇ ಹಣಕಾಸು ಆಯೋಗದಿಂದ ಪ್ರಧಾನಿ ಮೋದಿಗೆ ವರದಿ ಸಲ್ಲಿಕೆ

November 16, 2020

 


ನವದೆಹಲಿ: 15ನೇ ಹಣಕಾಸು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು 2021 -22 ರಿಂದ 2025 - 26 ರ ಅವಧಿಯ ವರದಿಯ ಪ್ರತಿಯನ್ನು ಇಂದು ಪ್ರಧಾನಿ ಮೋದಿ ಅವರಿಗೆ ಸಲ್ಲಿಸಿದ್ದಾರೆ.

Advertisment

ಆಯೋಗವು ತನ್ನ ವರದಿಯನ್ನು 4 ನವೆಂಬರ್, 2020 ರಂದು ರಾಷ್ಟ್ರಪತಿಯವರಿಗೆ ಸಲ್ಲಿಸಿದ್ದು, ಇಂದು ಪ್ರಧಾನಿಯವರಿಗೆ ಸಲ್ಲಿಸಲಾಗಿದೆ. ನಾಳೆ ಆಯೋಗದ ವರದಿಯನ್ನು ಕೇಂದ್ರ ಹಣಕಾಸು ಸಚಿವರಿಗೆ ಸಲ್ಲಿಸಲಾಗುತ್ತದೆ.

ಆಯೋಗದ ಅಧ್ಯಕ್ಷ ಎನ್.ಕೆ. ಸಿಂಗ್, ಸದಸ್ಯರಾದ ಅಜಯ್ ನಾರಾಯಣ್ ಝಾ, ಪ್ರೊ. ಅನೂಪ್ ಸಿಂಗ್, ಡಾ.ಅಶೋಕ್ ಲಹಿರಿ ಮತ್ತು ಡಾ. ರಮೇಶ್ ಚಂದ್ ಹಾಗೂ ಆಯೋಗದ ಕಾರ್ಯದರ್ಶಿ ಅರವಿಂದ್ ಮೆಹತಾ ಈ ಸಂದರ್ಭದಲ್ಲಿ ಇದ್ದರು.

ಸಂವಿಧಾನದಡಿ ನಿಗದಿಪಡಿಸಿದಂತೆ ಈ ವರದಿಯನ್ನು ಕ್ರಮಕೈಗೊಂಡ ವರದಿ ರೂಪದ ವಿವರಣಾತ್ಮಕ ಜ್ಞಾಪಕ ಪತ್ರದೊಂದಿಗೆ ಸದನದಲ್ಲಿ ಮಂಡಿಸಲಾಗುವುದು.

ಕಾಲೇಜಿಗೆ ಬಂದ ಒಬ್ಬಳೇ ವಿದ್ಯಾರ್ಥಿನಿ : ಪಾಠ ಮಾಡಿದ ಶಿಕ್ಷಕರು

November 16, 2020

 


ರಾಯಚೂರು(ನ.17): ಇಂದಿನಿಂದ ರಾಜ್ಯದಲ್ಲಿ ಕಾಲೇಜುಗಳು ಮತ್ತೆ ತೆರೆದಿವೆ. ಆದರೆ ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸಿಲ್ಲ.


ಕಾಲೇಜುಗಳು ಆರಂಭವಾದರೂ ವಿದ್ಯಾರ್ಥಿಗಳು ಕ್ಲಾಸ್ ಬಂದಿಲ್ಲ. ರಾಯಚೂರಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಬ್ಬಳೇ ವಿದ್ಯಾರ್ಥಿನಿ ಆಗಮಿಸಿದ್ದು, ಆಕೆಗೆ ಉಪನ್ಯಾಸಕರು ಪಾಠ ಮಾಡಿದ್ದಾರೆ.

ಒಬ್ಬ ಬಿ.ಕಾಂ. ವಿದ್ಯಾರ್ಥಿನಿಗೆ ಶಿಕ್ಷಕರು ಪಾಠ ಮಾಡಿದ್ದಾರೆ. ಮಾಸ್ಕ್ ಹಾಕಿಕೊಂಡು ಕುಳಿತ ವಿದ್ಯಾರ್ಥಿನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಉಪನ್ಯಾಸಕರು ಸಹ ಮಾಸ್ಕ್ ಹಾಕಿಕೊಂಡು ಕೋವಿಡ್ ನಿಯಮ ಪಾಲಿಸಿ ಬೋಧನೆ ಮಾಡಿದ್ದಾರೆ.

ರಾಜ್ಯದೆಲ್ಲೆಡೆ ಆರಂಭವಾದ ಕಾಲೇಜು : ಹೇಗಿದೆ ಸಿದ್ಧತೆ? .

ಈ ಕಾಲೇಜಿನಲ್ಲಿ ಒಟ್ಟು ಪದವಿ ಅಂತಿಮ ವರ್ಷದಲ್ಲಿ 1200 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.

ಅದರೆ ಯಾರೂ ಬಾರದೇ ಒಬ್ಬಳೆ ವಿದ್ಯಾರ್ಥಿನಿ ಆಗಮಿಸಿದ್ದಾಳೆ.

ರಾಜ್ಯದ ಎಲ್ಲೆಡೆ ಕಾಲೇಜುಗಳು ತೆರೆದರೂ ಕೂಡ ಎಲ್ಲಿಯೂ ಕೂಡ ವಿದ್ಯಾರ್ಥಿಗಳು ಆಗಮಿಸಿಲ್ಲ. ಇನ್ನೂ ಕೊರೋನಾ ಮಹಾಮಾರಿ ಆತಂಕ ಜನರಲ್ಲಿ ಹೆಚ್ಚಾಗಿಯೇ ಇದ್ದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಆಗಮಿಸಿಲ್ಲ.

ರಾಜ್ಯ ಬಿಜೆಪಿಗೆ 'ಸ್ಟಾರ್‌' ಬಲ: 'ರಾಜ್ಯಸಭಾ ಅಖಾಡ'ಕ್ಕಿಳಿಯಲಿದ್ದರಾ ತಲೈವಾ..!?

November 16, 2020

 


ಬೆಂಗಳೂರು: ಕರ್ನಾಟಕ ಬಿಜೆಪಿಗೆ ಸ್ಟಾರ್‌ ಬಲ ಸಿಗುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ. ಬಹಳ ವರ್ಷಗಳಿಂದ ಸೂಪರ್ ಸ್ಟಾರ್ ರಜನಿಕಾಂತ್‌ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎನ್ನುವ ಮಾತುಗಳು ಕೇಳಿಸುತ್ತಲೇ ಇವೆ. ಸಧ್ಯ ತಲೈವಾ ರಾಜಕೀಯ ಎಂಟ್ರಿಗೆ ಕಾಲ ಕೂಡಿ ಬಂದಂತಿದ್ದು,ಕರ್ನಾಟಕ ರಾಜಕೀಯದಲ್ಲಿ ದುಮುಕಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಹೌದು, ಇಂತಹದ್ದೊಂದು ಅನುಮಾನ ಸದ್ಯ ಮನೆ ಮಾಡಿದ್ದು, ಬಿಜೆಪಿ ಅಭ್ಯರ್ಥಿಯಾಗಿ ರಜನೀಕಾಂತ್(Rajinikanth) ರಾಜ್ಯಸಭಾ ಅಖಾಡಕ್ಕಿಳಿಯಲಿದ್ದಾರೆಂಬ ಮಾತುಗಳು ಜೋರಾಗಿವೆ. ಈ ಮೂಲಕ ಅಶೋಕ್ ಗಸ್ತಿ ನಿಧನದಿಂದ ತೆರವಾದ ಸ್ಥಾನಕ್ಕೆ ರಜನೀಕಾಂತ್ ಸ್ಪರ್ಧಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಆದ್ರೆ, ಈ ಪಟ್ಟಿನಲ್ಲಿ ಖುಷ್ಬೂ ಹೆಸರು ಕೂಡಾ ಇದ್ದು, ಇಂದು ಅಭ್ಯರ್ಥಿಯ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ.

ರಾಜ್ಯ ಸರ್ಕಾರದಿಂದ 'ಸಾರಿಗೆ ನೌಕರ'ರಿಗೆ ಗುಡ್ ನ್ಯೂಸ್..!

ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ ನಾವು ಯಾವುದೇ ಅಭ್ಯರ್ಥಿಯನ್ನ ಕಣಕ್ಕೆ ಇಳಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಈ ಸ್ಥಾನಕ್ಕೆ ಡಿಸೆಂಬರ್ 1 ಕ್ಕೆ ಚುನಾವಣೆ ನಡೆಯಲಿದೆ.

ಮಸ್ಕಿ ಮತ್ತು ಬಸವಕಲ್ಯಾಣ ಉಪಚುನಾವಣೆ ಗೆಲ್ಲಲು ಸಿಎಂ ಬಿಎಸ್ ವೈ ರಣತಂತ್ರ..!

ಇತ್ತೀಚಿಗೆ ರಜನೀಕಾಂತ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡ್ತೀನಿ ಅಂದಿದ್ದಕ್ಕೆ ಎಲ್ಲರು ಅವರು ಬಿಜೆಪಿ ಸೇರುತ್ತಾರೆ ಅನ್ನುವ ಮಾತುಗಳು ಕೇಳಿಬಂದಿದ್ದವು.ಇದಕ್ಕೆ ಕಾರಣ ರಜನೀಕಾಂತ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಅಲ್ಲದೆ ಇತ್ತೀಚಿಗೆ ರಜನೀಕಾಂತ್ ಅವರು ಆರ್ ಎಸ್ ಎಸ್ ನ ಗುರುಮೂರ್ತಿಯನ್ನುವವರನ್ನ ಭೇಟಿಯಾಗಿದ್ದಾರೆ. ಹೀಗಾಗಿ ತಲೈವಾ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ? ಎಂಬುದನ್ನ ಕಾಡು ನೋಡಬೇಕಾಗಿದೆ.

ಮಹಿಳೆಯರಿಗೆ 'ಗುಡ್ ನ್ಯೂಸ್': ₹ 3 ಲಕ್ಷ ಸಾಲ ಸೌಲಭ್ಯ- ಇಂದೇ ಅರ್ಜಿ ಹಾಕಿ

ಕಾಲೇಜು ವಿದ್ಯಾರ್ಥಿಗಳಿಗೆ ಸಚಿವ ಸುಧಾಕರ್ ಮಹತ್ವದ ಸಲಹೆ

November 16, 2020

 


ಬೆಂಗಳೂರು, ನ.17- ಕೋವಿಡ್-19 ಹಿನ್ನೆಲೆಯಲ್ಲಿ ಕಳೆದ ಏಳು ತಿಂಗಳಿನಿಂದ ರಾಜ್ಯದಲ್ಲಿ ಮುಚ್ಚಲ್ಪಟ್ಟಿದ್ದ ಪದವಿ ಕಾಲೇಜುಗಳು ಇಂದಿನಿಂದ ಪುನರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ಕಾಲೇಜುಗಳ ಆಡಳಿತ ವರ್ಗದವರು, ವಿದ್ಯಾರ್ಥಿಗಳು ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ತಪ್ಪದೆ ಪಾಲಿಸಬೇಕೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ಮಾಸ್ಕ್ ಧರಿಸುವುದು, ಕೈಗಳ ಶುಚಿತ್ವ, ಭೌತಿಕ ಅಂತರ ಕಾಪಾಡಲು ಮರೆಯದಿರಿ. ಆತಂಕ ಬೇಡ, ಆದರೆ ಎಚ್ಚರಿಕೆ ಇರಲಿ ಎಂದು ಅವರು ಸಲಹೆ ನೀಡಿದ್ದಾರೆ. ಇಂದಿನಿಂದ ರಾಜ್ಯಾದ್ಯಂತ ಅಂತಿಮ ವರ್ಷದ ಪದವಿ ತರಗತಿಗಳು ಆರಂಭವಾಗಿದ್ದು, ವಿದ್ಯಾರ್ಥಿಗಳು ತರಗತಿಗೆ ಹಾಜರಾಗುವ ಮುನ್ನ ಕೋವಿಡ್-19 ಪರೀಕ್ಷೆಮಾಡಿಸಿಕೊಂಡು ನೆಗೆಟಿವ್ ವರದಿ ಹಾಗೂ ಪೋಷಕರ ಒಪ್ಪಿಗೆ ಪತ್ರದೊಂದಿಗೆ ಬರುವಂತೆ ಸೂಚಿಸಲಾಗಿತ್ತು.

ಅಂತಹವರು ಮಾತ್ರ ತರಗತಿಯೊಳಗೆ ಬರಲು ಅವಕಾಶ ಕಲ್ಪಿಸಲಾಗಿದೆ. ಡಿಪ್ಲೊಮಾ, ಇಂಜನಿಯರಿಂಗ್ ಹಾಗೂ ವಿವಿಧ ಪದವಿಯ ಅಂತಿಮ ವರ್ಷದ ತರಗತಿಗಳು ಮಾತ್ರ ಇಂದಿನಿಂದ ಆರಂಭಗೊಂಡಿವೆ. ವಿದ್ಯಾರ್ಥಿಗಳಿಗೆ ತರಗತಿಗೆ ಹಾಜರಾಗುವುದು ಕಡ್ಡಾಯವಲ್ಲ. ಕಾಲೇಜುಗಳ ಆಡಳಿತ ಮಂಡಳಿ ವಿದ್ಯಾರ್ಥಿಗಳ ಹಾಜರಾತಿಯನ್ನು ಕಡ್ಡಾಯಗೊಳಿಸುವಂತಿಲ್ಲ.

ಕಾಲೇಜಿಗೆ ಹಾಜರಾಗುವುದು ವಿದ್ಯಾರ್ಥಿಗಳು ಹಾಗೂ ಅವರ ಪಾಲಕರ ಆಯ್ಕೆಗೆ ಬಿಟ್ಟಿದ್ದು. ಆಫ್‍ಲೈನ್ ಮತ್ತು ಆನ್‍ಲೈನ್ ತರಗತಿಗಳು ಮುಂದುವರೆಯಲಿವೆ. ಕಾಲೇಜಿಗೆ ಹಾಜರಾಗಿದ್ದರೆ ಆನ್‍ಲೈನ್ ತರಗತಿ ಮೂಲಕ ತಮ್ಮ ಅಭ್ಯಾಸ ಮುಂದುವರಿಸಬಹುದು ಎಂದು ಉನ್ನತ ಶಿಕ್ಷಣ ಇಲಾಖೆ ತಿಳಿಸಿದೆ.

ಕಲ್ಲುಸಕ್ಕರೆ ಸೇವಿಸುವುದರಿಂದ ಇದೆ ಇಷ್ಟೆಲ್ಲಾ ಪ್ರಯೋಜನ

November 16, 2020

 


ಹಾಲು ಕುಡಿಯುವ ಮಕ್ಕಳಿಗೆ ಅದರೊಂದಿಗೆ ಸಕ್ಕರೆ ಬದಲು ಕಲ್ಲು ಸಕ್ಕರೆ ಬಳಸಿ ಕೊಡುವುದನ್ನು ನೀವು ಗಮನಿಸಿರಬಹುದು. ಇದಕ್ಕೆ ಮುಖ್ಯ ಕಾರಣ ಇದರಲ್ಲಿರುವ ಖನಿಜಾಂಶಗಳು. ಸಕ್ಕರೆ ಮತ್ತು ಬೆಲ್ಲದಲ್ಲಿರುವ ಸತ್ವಕ್ಕಿಂತ ಹೆಚ್ಚಿನ ಉತ್ತಮ ಗುಣಗಳು ಕಲ್ಲುಸಕ್ಕರೆಯಲ್ಲಿವೆ.

Advertisment@a

ಇದರ ತಯಾರಿ ವೇಳೆ ಕೆಮಿಕಲ್ಸ್ ಬಳಸುವುದಿಲ್ಲ, ಹಾಗೂ ಇದನ್ನು ರಿಫೈನ್ ಮಾಡಲಾಗುವುದಿಲ್ಲ. ಹಾಗಾಗಿ ಮಧುಮೇಹಿಗಳು ನಿಯಮಿತ ಪ್ರಮಾಣದಲ್ಲಿ ಇದನ್ನು ಸೇವಿಸಬಹುದು. ಮಕ್ಕಳಿಗೆ ಕೆಮ್ಮು ಮೊದಲಾದ ಸಮಸ್ಯೆ ಉಂಟಾದಾಗ ಬಿಸಿನೀರಿಗೆ ಕಲ್ಲುಸಕ್ಕರೆ ಹಾಕಿ ಕರಗಿಸಿ ಬೆಚ್ಚಗಿರುವಂತೆಯೇ ಕುಡಿಸಿದರೆ ಕೆಮ್ಮಿನ ಸಮಸ್ಯೆ ದೂರವಾಗುತ್ತದೆ.

ನಾರಿನಂಶ ಇರುವ ಕಲ್ಲುಸಕ್ಕರೆಯನ್ನು ಆಯುರ್ವೇದ ಮಳಿಗೆಗಳಿಂದಲೇ ಕೊಂಡು ತರುವುದು ಒಳ್ಳೆಯದು. ಪಿತ್ತ ಸಮಸ್ಯೆಯಿಂದ ಬಳಲುವವರು ಅದರ ಪರಿಹಾರಕ್ಕೆ ಕಲ್ಲುಸಕ್ಕರೆಯನ್ನು ಬಳಸಬಹುದು.

ಚಿಕ್ಕ ಗಾತ್ರದ ಕಲ್ಲುಸಕ್ಕರೆಗೆ ಪಾಲಿಶ್ ಮಾಡುವುದರಿಂದ ಇದರ ಉತ್ತಮ ಗುಣಗಳು ನಾಶವಾಗುತ್ತವೆ. ಹಾಗಾಗಿ ನೀವು ಕೊಳ್ಳುವಾಗ ದೊಡ್ಡ ಗಾತ್ರ ಕಲ್ಲುಸಕ್ಕರೆಯನ್ನೇ ಕೊಳ್ಳಿ.

ಚಿತ್ರಮಂದಿರಕ್ಕೆ ಮತ್ತೆ ಬನ್ನಿ ಸಂಭ್ರಮಿಸೋಣ': ಕನ್ನಡದ ಈ ವಿಡಿಯೋ ನೋಡಿ ಕಣ್ಣೀರಿಟ್ಟ ಪುರಿ ಜಗನ್ನಾಥ್

November 16, 2020

 '


ಚಿತ್ರಮಂದಿರಕ್ಕೆ ಮತ್ತೆ ಬನ್ನಿ ಸಂಭ್ರಮಿಸೋಣ' ಎನ್ನುವ ಹೆಸರಿನಲ್ಲಿ ಕನ್ನಡದ ಕಲಾವಿದರು ಒಂದು ಅಭಿಯಾನ ಪ್ರಾರಂಭಿಸಿದ್ದಾರೆ. ಸ್ಯಾಂಡಲ್ ವುಡ್ ನಿರ್ಮಾಪಕ ಕಾರ್ತಿಕ್ ಗೌಡ ನೇತೃತ್ವದಲ್ಲಿ ಚಿತ್ರಮಂದಿರಗಳ ಬಗ್ಗೆ ಮತ್ತೆ ಜನರನ್ನು ವಾಪಸ್ ಚಿತ್ರಮಂದಿರಕ್ಕೆ ಕರೆತರುವ ಬಗ್ಗೆ ಒಂದು ಭಾವನಾತ್ಮಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಈ ವಿಡಿಯೋಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ವಿಡಿಯೋ ನೋಡಿ ಅನೇಕರು ಭಾವುಕರಾಗುತ್ತಿದ್ದಾರೆ. ಕೊರೊನಾ ಲಾಕ್ ಡೌನ್ ಆದ ಬಳಿಕ ಚಿತ್ರಮಂದಿರಗಳು ಸಹ ಬಂದ್ ಆಗಿದ್ದವು. ಸುಮಾರು ಏಳು ತಿಂಗಳ ಬಳಿಕ ಚಿತ್ರಮಂದಿರಗಳು ಓಪನ್ ಆಗಿವೆ. ಅಷ್ಟು ಕಾಲ ಕೆಲಸವಿಲ್ಲದೆ ಬರಿಗೈಯಲ್ಲಿ ಕುಳಿತಿದ್ದ ಎಷ್ಟು ಸಿನಿಮಾ ಕಾರ್ಮಿಕರಿಗೆ ಜೀವಬಂದ ಹಾಗಾಗಿದೆ.

'ಚಿತ್ರಮಂದಿರಕ್ಕೆ ಮತ್ತೆ ಬನ್ನಿ ಸಂಭ್ರಮಿಸೋಣ' ಎಂದು ಆಹ್ವಾನಿಸಿದ ಸ್ಟಾರ್ ನಟರು

ಇದೀಗ ಚಿತ್ರಮಂದಿರಗಳು ಓಪನ್ ಆಗಿವೆ.

ಈಗಲಾದರೂ ಪ್ರೇಕ್ಷಕರು ಚಿತ್ರಮಂದಿರಗಳ ಕಡೆ ಬರಲಿ ಎಂದು ಸಿನಿಮಾಮಂದಿ ಕಾಯುತ್ತಿದ್ದಾರೆ. ಅಭಿಮಾನಿಗಳ ಸಂಭ್ರಮ, ಚಪ್ಪಾಳೆ, ಶಿಳ್ಳೆ, ಕೂಗು, ಕುಣಿತ ಇದನ್ನೆಲ್ಲ ಮತ್ತೆ ಚಿತ್ರಮಂದಿರಗಳಲ್ಲಿ ಕಣ್ತುಂಬಿ ಕೊಳ್ಳಬಹುದಾ? ಮತ್ತೆ ಹಳೆಯ ದಿನಗಳು ಮರುಕಳಿಸುತ್ತಾ? ಎನ್ನುವ ಬಗ್ಗೆ ವಿಡಿಯೋದಲ್ಲಿ ತೋರಿಸಲಾಗಿದೆ.

ಈ ವಿಡಿಯೋ ನೋಡಿ ಅನೇಕರು ಕಣ್ಣೀರಿಟ್ಟಿದ್ದಾರೆ. ತೆಲುಗಿನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಕನ್ನಡದ ಈ ವಿಡಿಯೋ ಶೇರ್ ಮಾಡಿ ಭಾವುಕರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪುರಿ ಜಗನ್ನಾಥ್, 'ಈ ವಿಡಿಯೋ ನೋಡಿ ಕಣ್ಣೀರು ಬಂತು. ಆ ದಿನಗಳು ಮರುಕಳಿಸಬೇಕು, ಶಿಳ್ಳೆಯ ಶಬ್ದ ಮತ್ತೆ ಕೇಳಿಸಬೇಕು, ಸಿನಿಮಾ ಪೋಸ್ಟರ್ ಗಳು ರಾರಾಜಿಸಬೇಕು, ಶರ್ಟ್ ಹರಿದು ಹೋಗುವ ಹಾಗೆ ಸಂಭ್ರಮಿಸುವುದನ್ನ ನೋಡಬೇಕು. ಸಿನಿಮಾ ಚಿತ್ರಮಂದಿರಗಳು, ನಮ್ಮ ತಾಯಿ' ಎಂದು ಭಾವುಕರಾಗಿದ್ದಾರೆ.

ಈ ವಿಡಿಯೋದಲ್ಲಿ ಶಿವರಾಜ್ ಕುಮಾರ್, ದುನಿಯಾ ವಿಜಯ್, ಪುನೀತ್ ರಾಜ್ ಕುಮಾರ್, ಧನಂಜಯ್, ಶ್ರೀಮುರಳಿ ಹಾಗೂ ಗಣೇಶ್ ಪ್ರೇಕ್ಷಕರನ್ನು ಆಹ್ವಾನಿಸಿದ್ದಾರೆ. ಪ್ರೇಕ್ಷಕರು ಮೊದಲಿನಂತೆ ಚಿತ್ರಮಂದಿರಕ್ಕೆ ಬರ್ತಾರೆ ಎನ್ನುವ ಆತ್ಮವಿಶ್ವಾಸವನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ.

ಪಿಂಚಣಿದಾರರಿಗೆ EPFO ಮತ್ತೊಂದು ಗುಡ್ ನ್ಯೂಸ್: ಇಲ್ಲಿದೆ ಡಿಟೇಲ್ಸ್

November 16, 2020
ನವದೆಹಲಿ: ನೌಕರರ ಪಿಂಚಣಿ ಯೋಜನೆ ಇಪಿಎಸ್ ಅನ್ವಯ ಎಲ್ಲಾ ಪಿಂಚಣಿದಾರರು ಪ್ರತಿವರ್ಷ ಪಿಂಚಣಿ ಪಡೆಯಲು ಜೀವನ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ನೌಕರರ ಭವಿಷ್ಯ ನಿಧಿ ಸಂಘಟನೆ ಇಪಿಎಫ್‌ಒ ಡಿಜಿಟಲ್ ಜೀವಿತ ಪ್ರಮಾಣ ಪತ್ರ ಸಲ್ಲಿಸಲು ತನ್ನ ಪಿಂಚಣಿದಾರರಿಗೆ ಬಹು ಆಯ್ಕೆಗಳ ಅವಕಾಶ ಕಲ್ಪಿಸಿದೆ.

Advertisment

ಪಿಂಚಣಿದಾರರು ತಮ್ಮ ಮನೆಯ ಸಮೀಪ ಅಥವಾ ಮನೆಯ ಬಾಗಿಲಲ್ಲಿ ಜೀವನ ಪ್ರಮಾಣಪತ್ರ ಸಲ್ಲಿಸಬಹುದಾಗಿದೆ. ಹಲವು ವಿಧಾನ ಮತ್ತು ಏಜೆನ್ಸಿಗಳ ಆಯ್ಕೆಯ ಮೂಲಕ ಸಲ್ಲಿಕೆಯಾಗುವ ಜೀವಿತ ಪ್ರಮಾಣಪತ್ರಗಳು ಮಾನ್ಯವಾಗಿರುತ್ತದೆ ಎಂದು ಹೇಳಲಾಗಿದೆ.

ದೇಶಾದ್ಯಂತ ಇಪಿಎಫ್ ಹೊಂದಿರುವ 117 ಜಿಲ್ಲಾ ಕಛೇರಿಗಳು, 135 ಪ್ರಾದೇಶಿಕ ಕಚೇರಿಗಳ ಜೊತೆಗೆ ಇಪಿಎಸ್ ಪಿಂಚಣಿದಾರರು ಸಮೀಪದ ಅಂಚೆ ಕಚೇರಿ, ಪಿಂಚಣಿ ವಿತರಿಸುವ ಬ್ಯಾಂಕ್ ಶಾಖೆಗಳಲ್ಲಿ ಜೀವನ ಪ್ರಮಾಣಪತ್ರ ಸಲ್ಲಿಸಬಹುದು.

ಇದರೊಂದಿಗೆ 3.65 ಲಕ್ಷಕ್ಕಿಂತ ಹೆಚ್ಚಿನ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಜೀವಿತ ಪ್ರಮಾಣ ಪತ್ರ ಸಲ್ಲಿಸಬಹುದಾಗಿದೆ.

'ಉಮಾಂಗ್ ಆಪ್' ಬಳಸಿ ಕೂಡ ಜೀವಿತ ಪ್ರಮಾಣ ಪತ್ರ ಸಲ್ಲಿಸಲು ಅವಕಾಶವಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಡಿಜಿಟಲ್ ಲೈವ್ ಸರ್ಟಿಫಿಕೇಟ್ ಸಲ್ಲಿಸಲು ಪಿಂಚಣಿದಾರರಿಗೆ ಮನೆ ಬಾಗಿಲ ಸೇವೆಯನ್ನು ಆರಂಭಿಸಿದೆ. ಪಿಂಚಣಿದಾರರು ಈ ಸೇವೆಯನ್ನು ಪಡೆಯಬಹುದು. ಇದಕ್ಕಾಗಿ ಅತ್ಯಲ್ಪ ಶುಲ್ಕ ವಿಧಿಸಲಾಗುತ್ತದೆ. ಅಂಚೆ ಕಚೇರಿಯ ಸಿಬ್ಬಂದಿ ಪಿಂಚಣಿದಾರರ ಮನೆಬಾಗಿಲಿಗೆ ಹೋಗಿ ಸೇವೆ ನೀಡುತ್ತಾರೆ.

ಪಿಂಚಣಿದಾರರಿಗೆ ಅನುಕೂಲವಾಗುವಂತೆ ವರ್ಷದ ಯಾವುದೇ ಸಮಯದಲ್ಲಿ ಜೀವಿತ ಪ್ರಮಾಣ ಪತ್ರವನ್ನು ಸಲ್ಲಿಸಲು ಅವಕಾಶ ನೀಡಲಾಗಿದ್ದು, ಸಲ್ಲಿಸಿದ ದಿನದಿಂದ ಒಂದು ವರ್ಷದವರೆಗೆ ಅದು ಮಾನ್ಯತೆ ಹೊಂದಿರುತ್ತದೆ. 2020ರಲ್ಲಿ ಅಂದರೆ ಈ ವರ್ಷ ಪಿಂಚಣಿ ಪಾವತಿ ಆದೇಶ ಸ್ವೀಕರಿಸಿದ ಪಿಂಚಣಿದಾರರು ಒಂದು ವರ್ಷ ಪೂರ್ಣವಾಗುವವರೆಗೆ ಜೀವಿತ ಪ್ರಮಾಣ ಪತ್ರ ಅಪ್ಲೋಡ್ ಮಾಡುವ ಅಗತ್ಯವಿಲ್ಲ. ಮೊದಲು ಎಲ್ಲಾ ಪಿಂಚಣಿದಾರರು ನವೆಂಬರ್ ತಿಂಗಳಿನಲ್ಲಿ ಜೀವನ್ ಪ್ರಮಾಣ ಪತ್ರ ಸಲ್ಲಿಸಬೇಕಿತ್ತು. ಪಿಂಚಣಿದಾರರಿಗೆ ಅನುಕೂಲವಾಗುವಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಾರ್ಮಿಕ ಸಚಿವಾಲಯದಿಂದ ಮಾಹಿತಿ ನೀಡಲಾಗಿದೆ.

PV Web Exclusive | ಮನುಕುಲದ ಅಗೋಚರ ಶತ್ರು ಮಧುಮೇಹ

November 14, 2020

 ಬಹಳ ವರ್ಷಗಳ ಹಿಂದಿನ ಮಾತು. ಆಗ 40 ವರ್ಷ ವಯಸ್ಸಿನವರಿಗೆ ಹೃದಯಾಘಾತವಾದರೆ, 'ಇಷ್ಟು ವಯಸ್ಸಿಗೇ ಈ ರೀತಿ ಆಯಿತೇ' ಎಂದು ಅಚ್ಚರಿಯಿಂದ ಕೇಳುತ್ತಿದ್ದ ಸಮಯವದು. ಈಗ ನೋಡಿ 25 ವರ್ಷ ವಯಸ್ಸಿನ ಯುವಕರಿಗೇ ಹೃದಯಾಘಾತ! ಇಂಥ ಆಘಾತಕಾರಿ ಸುದ್ದಿಗಳು ಆಗಾಗ್ಗೆ ಕೇಳಿಬರುತ್ತಲೇ ಇರುತ್ತವೆ.

ಇದಕ್ಕೆ ಕಾರಣ ಬದಲಾಗಿರುವ ಜೀವನ ಶೈಲಿ. ಜೀವನಶೈಲಿಯ ಕಾಯಿಲೆಗಳಲ್ಲಿ ಪ್ರಮುಖ ಸ್ಥಾನದಲ್ಲಿರುವುದು ಮಧುಮೇಹ (ಡಯಾಬಿಟಿಸ್)! ಈ ವ್ಯಾಧಿಯೊಂದಿಗೆ ತಳಕು ಹಾಕಿಕೊಂಡಿರುವ ನಾನಾ ಬಗೆಯ ಸಮಸ್ಯೆಗಳಿಂದ ನರಳುವವರ ಪ್ರಮಾಣ ಭಾರತದಲ್ಲಿ ಕ್ಷಿಪ್ರಗತಿಯಲ್ಲಿ ಏರುತ್ತಿದೆ.ಹಿಂದೆ ಶ್ರೀಮಂತರಿಗೆ, ನಗರವಾಸಿಗಳಿಗೆ ಹಾಗೂ ವಯೋವೃದ್ಧರಿಗೆ ಬರುತ್ತಿದ್ದ ಮಧುಮೇಹ ಈಗ ಬಡವರು ಹಾಗೂ ಚಿಕ್ಕ ಮಕ್ಕಳಲ್ಲೂ ಕಾಣಿಸಿಕೊಳ್ಳುತ್ತಿದೆ

ಹಳ್ಳಿಗಳಿಗೂ ಕಾಲಿಡುತ್ತಿದೆ. ಹಳ್ಳಿಗರ ಜೀವನಶೈಲಿಯೂ ನಿಧಾನವಾಗಿ ಬದಲಾಗುತ್ತಿರುವುದರ ಸಂಕೇತವಿದು. ಇದು ಆತಂಕಕಾರಿ ಬೆಳವಣಿಗೆ.

ಮಧುಮೇಹದ ಜೊತೆ ಹಲವು ರೋಗಗಳು ಸೇರಿಕೊಂಡು ಅಗೋಚರ ಶತ್ರುಗಳಾಗಿ ಕಾಡುತ್ತಿವೆ. ಮಧುಮೇಹಿಗಳು ಮೂರು ಪಟ್ಟು ರಕ್ತದೊತ್ತಡ, ನಾಲ್ಕು ಪಟ್ಟು ಹೃದ್ರೋಗ ಮತ್ತು ನಾಲ್ಕು ಪಟ್ಟು ಹೆಚ್ಚು ಪಾರ್ಶ್ವವಾಯು ವ್ಯಾಧಿಗೆ ಒಳಗಾಗುತ್ತಿದ್ದಾರೆ.

ಅಂದಹಾಗೆ; ನ.14ರಂದು ವಿಶ್ವ ಮಧುಮೇಹ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮಧುಮೇಹದ ಸುತ್ತಮುತ್ತಲಿನ ಚಿತ್ರಣ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ. ಮಧುಮೇಹ ತಜ್ಞ ಮೈಸೂರಿನ ಡಾ.ವಿ.ಲಕ್ಷ್ಮೀನಾರಾಯಣ ಅವರು ಹಲವು ವಿಚಾರಗಳನ್ನು ತೆರೆದಿಟ್ಟಿದ್ದಾರೆ. ಇವರನ್ನು 'ಕಾಮನ್‌ ಮ್ಯಾನ್ಸ್‌ ಸ್ವೀಟ್‌ ಡಾಕ್ಟರ್‌' ಎಂದೂ ಕರೆಯುತ್ತಾರೆ. ಮಧುಮೇಹಕ್ಕೆ ಕಾರಣ ಹಾಗೂ ಅದಕ್ಕೆ ಪರಿಹಾರದ ಬಗ್ಗೆ ವಿವರಿಸಿದ್ದಾರೆ. ಬನ್ನಿ, ತಿಳಿದುಕೊಳ್ಳೋಣ.

ಮಧುಮೇಹ ಎನ್ನುವುದು ಜೀವನವನ್ನು ದುರ್ಬಲಗೊಳಿಸುವ ಸಾಂಕ್ರಾಮಿಕ ಸ್ವರೂಪದ ನ್ಯೂನತೆ. ಇದಕ್ಕೆ ಕಾರಣ ಜೀವನ ಶೈಲಿಯ ಬದಲಾವಣೆ.

21ನೇ ಶತಮಾನದಲ್ಲಿ ಬೊಜ್ಜು ದೇಹ, ಚಟುವಟಿಕೆ ಇಲ್ಲದ ಜೀವನ ಶೈಲಿ ಸರ್ವರೋಗಗಳಿಗೂ ಮೂಲವಾಗಿ ಪರಿಣಮಿಸುತ್ತಿದೆ. ಸಾಂಕ್ರಾಮಿಕ ರೂಪದ ಮಧುಮೇಹಕ್ಕೆ ಮೊದಲನೇ ಕಾರಣ ಪರಿಸರ ಮತ್ತು ಜೀವನ ಶೈಲಿ ಹಾಗೂ ಇವುಗಳ ಪರಸ್ಪರ ಸಂಬಂಧ. ಅದರಲ್ಲೂ ಭಾರತೀಯರಲ್ಲಿ ಹೊಟ್ಟೆ ಭಾಗದ ಸ್ಥೂಲಕಾಯ ಕಾರಣ (Visceral fat).

ದುರದೃಷ್ಟಕರ ಸಂಗತಿ ಎಂದರೆ ಎಲ್ಲಿ ಹೊಟ್ಟೆಯ ಬೊಜ್ಜು ಇರುತ್ತದೆಯೋ ಅಲ್ಲಿ ಇನ್ಸುಲಿನ್‌ ಪ್ರತಿರೋಧ ಇರುತ್ತದೆ. ಪ್ರತಿರೋಧ ಇರುವುದರಿಂದ ದೇಹದ ಸಕ್ಕರೆ ಅಂಶ ಕ್ರಮೇಣ ಏರುತ್ತಾ ಹೋಗುತ್ತದೆ.

ಸ್ವಾತಂತ್ರ್ಯ ಬಂದ ಆಸುಪಾಸಿನಲ್ಲಿ ದೇಶದ ಜನಸಂಖ್ಯೆ 37 ಕೋಟಿ ಇತ್ತು. 1947ರಲ್ಲಿ ಜೀವಿತಾವಧಿ ಸರಾಸರಿ 30 ವರ್ಷ ಇತ್ತು. ಈಗ 70 ವರ್ಷದ ಆಸುಪಾಸಿಗೆ ಬಂದಿದೆ. ಅಂದರೆ ಜೀವಿತಾವಧಿ ಎರಡು ಪಟ್ಟು ಹೆಚ್ಚಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆ, ಹೆಚ್ಚುತ್ತಿರುವ ಜೀವಿತಾವಧಿಯಿಂದ ಮಧುಮೇಹಿಗಳ ಸಂಖ್ಯೆ ಏರುತ್ತಲೇ ಇದೆ.

ಅನಾರೋಗ್ಯಕರವಾದ ಅತಿಯಾದ ಆಹಾರ ಸೇವನೆ, ಶ್ರಮರಹಿತ ಜೀವನ ಶೈಲಿಯ ಸಂಗಮದಿಂದ ಬಂದೊದಗುವ ಸ್ಥೂಲಕಾಯ, ಬೊಜ್ಜು ಮಧುಮೇಹಕ್ಕೆ ದಾರಿ ಮಾಡಿಕೊಡುತ್ತಿವೆ.

ಯುವ ಜನಾಂಗದಲ್ಲಿ ಮಾನಸಿಕ ಒತ್ತಡಗಳಿಂದ ಮಧುಮೇಹ ಕಾಡುತ್ತಿರುವುದು ಕಂಡುಬರುತ್ತಿದೆ. ಇದೊಂದು ಅಗೋಚರ ವೇದನೆ. ಅಡ್ರಿನಲಿನ್‌ ಎಂಬ ಹಾರ್ಮೋನ್‌ ಭಯದ ವಾತಾವರಣದಲ್ಲಿ ಉತ್ಪತ್ತಿ ಆಗುತ್ತದೆ. ಜೊತೆಗೆ ಎಪಿನೆಫ್ರಿನ್ ಎಂಬ ಹಾರ್ಮೋನ್‌ ಮಾನಸಿಕ ಒತ್ತಡಗಳಿಂದ ಉತ್ಪತ್ತಿ ಆಗುತ್ತದೆ. ಇದರ ಹೆಸರೇ ಸ್ಟ್ರೆಸ್‌ ಹಾರ್ಮೋನ್‌. ಈ ಸ್ಟ್ರೆಸ್‌ ಹಾರ್ಮೋನ್‌ಗಳು ಶರೀರದ ಉಗ್ರಾಣಗಳಿಂದ ಗ್ಲುಕೋಸ್‌ ಅಂಶವನ್ನು ಹೆಚ್ಚು ಹೆಚ್ಚು ಬಿಡುಗಡೆ ಮಾಡುತ್ತಾ ಹೋಗುತ್ತವೆ. ಹೀಗಾಗಿ, ರಕ್ತದಲ್ಲಿ ಗ್ಲುಕೋಸ್‌ ಅಂಶ ಏರುತ್ತದೆ. ಕೊನೆಗೆ ಮಧುಮೇಹವಾಗಿ ದೇಹದಲ್ಲಿ ಸ್ಥಾನ ಪಡೆಯುತ್ತದೆ.

ದೇಶದ ಯುವ ಜನಾಂಗದಲ್ಲಿ 20 ವರ್ಷ ದಾಟಿದವರು 70 ಕೋಟಿ ಇದ್ದಾರೆ. ಇವರಲ್ಲಿ ಶೇ 12 ಮಂದಿಯಲ್ಲಿ ಮಧುಮೇಹ ಗುಪ್ತವಾಗಿ ಅಡಗಿರುವ ಸಾಧ್ಯತೆ ಇದೆ. ಈ 70 ಕೋಟಿ ಯುವ ಜನತೆಯನ್ನು ಗ್ಲುಕೋಸ್‌ ಪಂಥ ಪರೀಕ್ಷೆಗೆ (GCT) ಒಳಪಡಿಸಿದರೆ ಗುಪ್ತವಾಗಿರುವ ಗ್ಲುಕೋಸ್‌ ಗಣನೀಯವಾಗಿ ಮೇಲಕ್ಕೆ ಬರುತ್ತದೆ.

ವಂಶವಾಹಿನಿಯೂ ಕಾರಣ: ಮಧುಮೇಹಕ್ಕೆ ವಂಶವಾಹಿನಿಯೂ ಕಾರಣ. ಕಳೆದ 20 ವರ್ಷಗಳಲ್ಲಿ ಮಧುಮೇಹಿಗಳು ಸಂಖ್ಯೆಯಲ್ಲಿ 20 ಪಟ್ಟು ಹೆಚ್ಚಾಗಿದ್ದಾರೆ. ಆದರೆ, ಇದೇ ವಂಶವಾಹಿನಿಗಳು 20 ವರ್ಷಗಳ ಹಿಂದೆ ಏನು ಮಾಡುತ್ತಿದ್ದವು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದಕ್ಕೆ ಉತ್ತರ; ವಂಶವಾಹಿನಿಗಳು ಹೊಸದಾಗಿ ಬಂದಿಲ್ಲ. ಅವು ಮಾನವ ಸೃಷ್ಟಿಯಷ್ಟೆ ಪ್ರಾಚೀನ.

ಮಾನವ ದೇಹವು ವಂಶವಾಹಿನಿಗಳನ್ನು ಹೊತ್ತಿರುವ ರೆಫ್ರಿಜಿರೇಟರ್‌. ರಕ್ತಕಣಗಳು ಮತ್ತು ಇದರಲ್ಲಿರುವ ವಂಶವಾಹಿನಿಗಳು ವ್ಯಾಧಿಗಳ ಸ್ವರೂಪವನ್ನು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಮುಂದುವರಿಸುತ್ತಿವೆ. ಭಾರತೀಯರು Asian phenotype ಆಗಿರುವುದರಿಂದ ಮಧುಮೇಹ ಮಿತಿಮೀರಿ ಏರಲು ಕಾರಣವಾಗಿದೆ.

20 ವರ್ಷಗಳಿಂದೀಚೆಗೆ ಮಧುಮೇಹ ದಿಢೀರನೇ ಹೆಚ್ಚಾಗಲು ಶ್ರಮ ರಹಿತ ಜೀವನ ಶೈಲಿಯೇ ಕಾರಣ ಎಂಬುದು ಪ್ರಮುಖವಾಗಿ ಗೊತ್ತಾಗುತ್ತದೆ. ವಂಶವಾಹಿನಿಗಳ ಜೊತೆ ಪರಿಸರ ಅಂಶಗಳೂ ಕೈ ಜೋಡಿಸಿರುವುದರಿಂದ ಮಧುಮೇಹಕ್ಕೆ ಸಾಂಕ್ರಾಮಿಕ ಸ್ವರೂಪ ಬಂದಿದೆ. ಇವೆರಡರ ಸಂಯೋಗದಿಂದ ವಿನೂತನ ಇಂಧನ ರಾಸಾಯನಿಕ ಕ್ರಿಯೆಗಳು ಪ್ರಾರಂಭವಾಗಿ ಸ್ಥೂಲಕಾಯ ಬೆಳೆಯುತ್ತಿದೆ.

ವಂಶವಾಹಿಗಳು ಬಂದೂಕಿನಲ್ಲಿರುವ ಮದ್ದುಗುಂಡುಗಳಂತೆ, ಮಾನವ ಪರಿಸರ ಮತ್ತು ಜೀವನಶೈಲಿಯು ಬಂದೂಕಿನ ಟ್ರಿಗರ್‌ನಂತೆ. ಮಧುಮೇಹಕ್ಕೆ ಸಂಬಂಧಿಸಿದ ವಂಶವಾಹಿನಿಗಳು ವ್ಯಾಧಿಯನ್ನು ಸೃಷ್ಟಿಸಬೇಕಾದರೆ ಅದಕ್ಕೆ ಸೂಕ್ತವಾದ ಮಾನವ ಪರಿಸರ ಬೇಕು. ಮಾನವ ಪರಿಸರ ಎಂದರೆ ಸ್ಥೂಲಕಾಯ ಮತ್ತು ಐಷಾರಾಮಿ ಜೀವನಶೈಲಿ. ಈ ಅಂಶಗಳ ಪ್ರಭಾವ ಬಂದೂಕಿನ ಟ್ರಿಗರ್‌ ಮೇಲೆ ಯಾವಾಗ ಪೂರ್ತಿ ಒತ್ತಡ ತರುತ್ತದೆಯೋ ಆಗ ಮಾನವ ಶರೀರದ ರಾಸಾಯನಿಕ ಕ್ರಿಯೆಯಲ್ಲಿ ಆಗುವ ವ್ಯತ್ಯಾಸದಿಂದ ಅವಕಾಶವಾದಿ ವಂಶವಾಹಿಗಳು ಮಧುಮೇಹ ಮೇಲೇರುವುದಕ್ಕೆ ಕಾರಣವಾಗುತ್ತವೆ. ಹೀಗಾಗಿ, ನಮ್ಮ ಮಾನವ ಪರಿಸರವನ್ನು ಹತೋಟಿಯಲ್ಲಿ ಇಟ್ಟುಕೊಂಡಿರಬೇಕು. ಆಗ ಮಧುಮೇಹ ತಡೆಯಬಹುದು.

ಮಕ್ಕಳಲ್ಲಿ ಮಧುಮೇಹ: ದೊಡ್ಡವರಲ್ಲಿ ಬರುವ 2ನೇ ನಮೂನೆಯ ಮಧುಮೇಹ (ಟೈಪ್‌ 2) 10ರಿಂದ 14 ವರ್ಷದ ಮಕ್ಕಳಲ್ಲೂ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಮಿಶ್ರ ಮಧುಮೇಹವೆಂದೂ, ಜೋಡಿ ಮಧುಮೇಹವೆಂದೂ ಕರೆಯಲಾಗುತ್ತದೆ. ಇದೊಂದು ಗಂಭೀರ ಸಮಸ್ಯೆ. ಇದಕ್ಕೆ ಕಾರಣಗಳೆಂದರೆ,

1) ಜೀವನ ಶೈಲಿ, 2) ಮಕ್ಕಳಲ್ಲಿ ಬೊಜ್ಜು ಬೆಳೆಯುತ್ತಿರುವುದು, 3) ಮಕ್ಕಳು ತಿನ್ನುವುದು ಹೆಚ್ಚಾಗಿರುವುದು, 4) ಕಸರತ್ತು ಕಡಿಮೆ ಆಗಿರುವುದು, 5) ಫಾಸ್ಟ್‌ ಫುಡ್‌ ಸೇವನೆ, 6) ಟಿ.ವಿ ಮುಂದೆ ಕುಳಿತು ತಿನ್ನುವುದು, 7) ಮೈದಾನಕ್ಕಿಳಿದು ಆಟವಾಡದಿರುವುದು, 8) ವಿಡಿಯೋ ಗೇಮ್‌, ಮೊಬೈಲ್‌ ಗೇಮ್‌ನಲ್ಲಿ ತೊಡಗಿರುವುದು.

ಇದರಿಂದ ಮಕ್ಕಳಲ್ಲಿ ಬೊಜ್ಜು ಬೆಳೆಯುತ್ತಿದೆ. 2ನೇ ನಮೂನೆಯ ಮಧುಮೇಹ ಇರುವ ಹೆಚ್ಚಿನ ಮಕ್ಕಳಲ್ಲಿ ಬೊಜ್ಜು ದೇಹ ಇರುತ್ತದೆ. ಇಂಥ ಸುಮಾರು 12ರಿಂದ 15 ಪ್ರತಿಶತ ಮಕ್ಕಳಲ್ಲಿ ತಮ್ಮ ಶರೀರಕ್ಕೆ ವಿರುದ್ಧವಾಗಿ ವರ್ತಿಸಬಲ್ಲ ಆಟೊ ಆಯಂಟಿ ಬಾಡೀಸ್‌ ಕಂಡುಬಂದಿವೆ. ದುರದೃಷ್ಟಕರ ಸಂಗತಿ ಎಂದರೆ ಇಂಥವರಲ್ಲಿ ಇನ್ಸುಲಿನ್‌ ತಯಾರಾಗುವ ಕ್ರಿಯೆ ಕ್ಷೀಣಿಸುತ್ತಿದೆ. ಇದರಿಂದ ಮಕ್ಕಳೂ ಇನ್ಸುಲಿನ್‌ ಮೊರೆ ಹೋಗಬೇಕಾಗಿದೆ.

ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದರೆ ಅದು ನಮಗೆ ಏನೂ ತೊಂದರೆ ಕೊಡಲು ಸಾಧ್ಯವಿಲ್ಲ. ಆದರೆ, ಅದನ್ನು ಅನೇಕ ವರ್ಷಗಳು ನಿರ್ಲಕ್ಷಿಸಿದರೆ ದಶವ್ಯಾಧಿಗಳಿಗೆ ಮೂಲವಾಗುತ್ತದೆ. ಅಂಥ ಸಮಸ್ಯೆಗಳೆಂದರೆ 1) ಹೃದ್ರೋಗ, 2) ಅತಿರಕ್ತದೊತ್ತಡ ಮತ್ತು ಕೊಬ್ಬಿನಂಶದ ಏರುಪೇರು, 3) ಕಿಡ್ನಿ ವೈಫಲ್ಯ, 4) ಅಕ್ಷಿಪಟಲ ವೈಫಲ್ಯ ಮತ್ತು ಮ್ಯೂಕುಲದ ತೇವಾಂಶ, 5) ಗ್ಯಾಂಗ್ರಿನ್‌, 6) ನರದೌರ್ಬಲ್ಯ ಮತ್ತು ಪಾರ್ಶ್ವವಾಯು, 7) ಲೈಂಗಿಕ ಕ್ರಿಯಾಲೋಪ, 8) ಚರ್ಮವ್ಯಾಧಿಗಳು ಮತ್ತು ಸೋಂಕುಗಳು, 9) ಸ್ನಾಯು ಕೀಲು ವೇದನೆ, 10) ಜೀರ್ಣಾಂಗ ವ್ಯವಸ್ಥೆಯ ಕಾರ್ಯ ದೌರ್ಬಲ್ಯ.

ಮಧುಮೇಹಕ್ಕೆ ಪರಿಹಾರ: ಮಧುಮೇಹವನ್ನು ಉತ್ತಮ ಜೀವನ ಶೈಲಿಯಿಂದ ಆರಂಭದಿಂದಲೇ ಹಿಮ್ಮೆಟ್ಟಿಸಬಹುದು. ದೇಹದಲ್ಲಿ ಇದ್ದರೂ ಹಿಮ್ಮೆಟ್ಟಿಸಬಹುದು. ಸ್ವಸ್ಥ ಜೀವನಕ್ಕೆ ಜೀವನಶೈಲಿಯ ನಿಯಮಗಳೇನು ಎಂಬುದು 2,300 ವರ್ಷಗಳ ಹಿಂದೆ 'ಚರಕ ಸಂಹಿತೆ'ಯಲ್ಲಿ ಹೇಳಿರುವುದನ್ನು ಈ ನಾಲ್ಕು ಪದಗಳಿಂದ ಅರ್ಥೈಸಬಹುದು.

1) ಆಚಾರ: ನಮ್ಮ ದೈನಂದಿನ ಆಚಾರಗಳು, 2) ಆಹಾರ: ಸೇವಿಸುವ ಪೌಷ್ಟಿಕ ಹಾಗೂ ಸಮತೋಲಿತ ಆಹಾರ, 3) ವ್ಯಾಯಾಮ, 4) ಯೋಗ

ಮನಸ್ಸು ಹಾಗೂ ಇಂದ್ರೀಯಗಳನ್ನು ನಿಗ್ರಹಿಸುವುದರ ಮೂಲಕ ನಿಯಂತ್ರಣಕ್ಕೆ ತರಬಹುದು. ಜಗತ್ತಿನಾದ್ಯಂತ ಯಾರು ಈ ನಾಲ್ಕು ನಿಯಮಗಳನ್ನು ಅನುಸರಿಸುವವರೋ ಅಂಥವರಿಗೆ ಆಧುನಿಕ ಪ್ರಪಂಚದಲ್ಲಿ ವ್ಯಾಧಿಗಳು ವಿರಳ. ವಿಶೇಷವಾಗಿ ಮಧುಮೇಹ ಹತ್ತಿರ ಸುಳಿಯುವುದಿಲ್ಲ.

ಮಧುಮೇಹ ನಿಯಂತ್ರಣ ಕುರಿತು ಅನೇಕ ಸಂಶೋಧನೆಗಳು ನಡೆದಿದ್ದರೂ ಆದಿಯಿಂದ ಇರುವ ಮುಕ್ಕೂಟ (Triad of treatment) ಇಂದಿಗೂ ಪ್ರಸ್ತುತ. ಏಕೆಂದರೆ ಈ ಮುಕ್ಕೂಟವು ತ್ರಿಯೋಗ ಶಕ್ತಿಯಂತೆ ಕಾರ್ಯನಿರ್ವಹಿಸುತ್ತದೆ. ಮುಕ್ಕೂಟದ ಆಧಾರಸ್ತಂಭಗಳೆಂದರೆ 1) ಆಹಾರ, 2) ವ್ಯಾಯಾಮ, 3) ಔಷಧ. ಆಹಾರದಿಂದ ಉತ್ಪತ್ತಿಯಾಗುವ ಗ್ಲುಕೋಸ್‌ಅನ್ನು ವ್ಯಾಯಾಮವು ಭಸ್ಮ ಮಾಡಿ ಶರೀರಕ್ಕೆ ಅಗತ್ಯವಾದ ಇಂಧನ ಶಕ್ತಿ ಒದಗಿಸುತ್ತದೆ. ಔಷಧಗಳಿಂದಲೂ ವ್ಯಾಧಿ ನಿಯಂತ್ರಿಸಬಹುದು.

ಚಿಕಿತ್ಸೆ, ಸವಾಲು: ಮಧುಮೇಹವೆಂದರೆ ಮಧುವಿನಂತೆ ಸಿಹಿಯಾಗಿರುವ ಸಕ್ಕರೆ ಅಂಶ ಮೂತ್ರದ ಮೂಲಕ ವಿಸರ್ಜನೆ ಆಗುತ್ತಿರುವುದು ಎಂದರ್ಥ.

ಅನೇಕರಲ್ಲಿ ಮಧುಮೇಹ ಚಿಕಿತ್ಸೆ ಬೇಕೇ ಅಥವಾ ಬೇಡವೇ ಎಂಬ ಜಿಜ್ಞಾಸೆ ಇದೆ. ಈ ವ್ಯಾಧಿಗೆ ಚಿಕಿತ್ಸೆ ಬೇಕು. ಏಕೆಂದರೆ ಮಿತಿ ಮೀರಿದ ಸಕ್ಕರೆ, ಅಂಶ ದೇಹದಲ್ಲಿರುವ ಸಮಗ್ರ ಅಂಗಾಂಗಗಳಿಗೆ ಹಾನಿ ಮಾಡುವುದರಿಂದ ಮಾನವನಲ್ಲಿ ಹತ್ತು ಹಲವು ವ್ಯಾಧಿಗಳು ಹುಟ್ಟುತ್ತವೆ.

ಮಧುಮೇಹ ಕುರಿತಂತೆ ಉತ್ತಮ ಚಿಕಿತ್ಸೆ ಹಾಗೂ ಸವಾಲು ಅಥವಾ ಸಲಹೆಗಳು

1) ಸರಿಯಾದ ಮಟ್ಟದಲ್ಲಿ ರಕ್ತದಲ್ಲಿ ಗ್ಲುಕೋಸ್‌ ಅಂಶವನ್ನೂ, ರಕ್ತದೊತ್ತಡವನ್ನು, ಜಿಡ್ಡಿನ ಅಂಶವನ್ನು ಇಟ್ಟುಕೊಂಡಿದ್ದರೆ ಆಗ ಮಧುಮೇಹದಿಂದ ಆಗಬಹುದಾದ ಹಲವು ತೊಡಕುಗಳನ್ನು ಕಡಿಮೆ ಮಾಡಬಹುದು. 2) ಮಧುಮೇಹ ಕುರಿತು ಮಧುಮೇಹಿಗಳಿಗೆ ತಿಳಿವಳಿಕೆ ಕೊಡುವುದರಿಂದ ಮಧುಮೇಹ ಎದುರಿಸಲು ಸಿದ್ಧಗೊಳಿಸಬಹುದು. 3) ಮಧುಮೇಹಿಗಳ ಜೀವನಶೈಲಿ ಉತ್ತಮಪಡಿಸುವುದು, ಮಧುಮೇಹಿಗಳು ಮಧುಮೇಹದೊಂದಿಗೆ ಸಹ ಜೀವನ ನಡೆಸುವ ಕಲೆಯನ್ನು ತಿಳಿಸಿಕೊಡಬೇಕು. 4) ನೂರು ಮಂದಿ ಯುವ ಜನಾಂಗದಲ್ಲಿ ಒಬ್ಬರು ಪೂರ್ವಭಾವಿ ಮಧುಮೇಹಿ ಇದ್ದಾರೆ ಎಂಬ ನಿಜಾಂಶ ಶೇ 7ರಿಂದ 10 ಮಂದಿಗೆ ಮಾತ್ರ ತಿಳಿದಿರುತ್ತದೆ. ಆದ್ದರಿಂದ ಅವರು ಮುಂದಿನ ಮೂರು ವರ್ಷಗಳಲ್ಲಿ ಮಧುಮೇಹಿಗಳಾಗುತ್ತಾರೆ. ಇದನ್ನು ತಿಳಿವಳಿಕೆಯಿಂದ ಹಿಮ್ಮೆಟ್ಟಿಸಬಹುದು, 5) ಮಧುಮೇಹದ ಔಷಧಿಗಳನ್ನು ಕ್ರಮಬದ್ಧವಾಗಿ ಅನುಸರಿಸಬೇಕು. ಇದರಿಂದ ಆರೋಗ್ಯ ಲಾಭ ಸಿಗುತ್ತದೆ

ಕೋವಿಡ್‌ ಮತ್ತು ಮಧುಮೇಹ

ಕೋವಿಡ್‌ನಿಂದ ಮೃತರಾದ ಬಹುತೇಕ ಮಂದಿಯಲ್ಲಿ ಮಧುಮೇಹ ಇರುವುದು ಗೊತ್ತಾಗಿದೆ. ಸೋಂಕಿತರಾಗಲು ಹಾಗೂ ಸೋಂಕಿನಿಂದ ಪ್ರಾಣಹಾನಿ ಉಂಟಾಗಲು ಪ್ರಮುಖ ಕಾರಣ ರೋಗ ನಿರೋಧಕ ಶಕ್ತಿ ದುರ್ಬಲವಾಗಿರುವುದು. ಹೀಗಾಗಿ, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಅವಶ್ಯವಿದೆ.

ದೀರ್ಘಕಾಲ ಗ್ಲುಕೋಸ್‌ ನಿಯಂತ್ರಣದಲ್ಲಿಲ್ಲದ ಸ್ಥಿತಿಯಲ್ಲಿರುವ ಮಧುಮೇಹವು, ರೋಗ ನಿರೋಧಕ ಪ್ರಕ್ರಿಯೆ ನಡೆಯದಂತೆ ತಡೆಯೊಡ್ಡುತ್ತದೆ. ಇದರಿಂದ ದೇಹ ಮತ್ತಷ್ಟು ದುರ್ಬಲವಾಗುತ್ತದೆ.

ಸಮತೋಲಿತ ಆಹಾರ, ಚಟುವಟಿಕೆಯಿಂದ ಕೂಡಿದ ಜೀವನ ಶೈಲಿ, ವ್ಯಾಯಾಮ ಹಾಗೂ ಯೋಗದಿಂದ ರೋಗ ನಿರೋಧಕ ಶಕ್ತಿಯನ್ನು ಪಡೆಯಬಹುದು. ಜಂಕ್‌ಫುಡ್‌, ಅತಿಯಾದ ಸಕ್ಕರೆ ಅಂಶವಿರುವ ಆಹಾರ, ಪಾನೀಯದಿಂದ ದೂರ ಇರಬೇಕು.

ಮಧುಮೇಹ ಕೈಪಿಡಿ

ಮಧುಮೇಹ ತಜ್ಞ ಮೈಸೂರಿನ ಡಾ.ವಿ.ಲಕ್ಷ್ಮೀನಾರಾಯಣ ಅವರು 'ಮಧುಮೇಹ-ಮನುಕುಲದ ಅಗೋಚರ ಶತ್ರು' ಎಂಬ ಪುಸ್ತಕ ಕೂಡ ಬರೆದಿದ್ದಾರೆ. ಮಧುಮೇಹ ಕುರಿತ ಸಮಗ್ರ ಕೈಪಿಡಿ ಕೂಡ. ಇದಕ್ಕೆ ಅವರ ಪುತ್ರ ಡಾ.ಸೂರಜ್‌ ತೇಜಸ್ವಿ ಕೂಡ ಕೈಜೋಡಿಸಿದ್ದಾರೆ. ಇದು ಆರು ಮುದ್ರಣ ಕಂಡಿದೆ.

320 ಪುಟಗಳ ಈ ಪುಸ್ತಕದ ಬೆಲೆ ₹ 250. ಸ್ವಪ್ನ ಬುಕ್‌ ಹೌಸ್‌ನಿಂದ ಈ ಕೃತಿ ಪ್ರಕಟಿಸಲಾಗಿದೆ. ಮಧುಮೇಹದ ನಿವಾರಣೋಪಾಯಗಳು ಈ ಕೃತಿಯಲ್ಲಿವೆ. ಮಧುಮೇಹಿಗಳಿಗೆ ಹಾಗೂ ಮಧುಮೇಹ ಬಾರದಂತೆ ತಡೆಯಲು ಬಯಸುವವರಿಗೆ ಉಪಯುಕ್ತ. ಜನಸಾಮಾನ್ಯರಿಗೆ ಅರ್ಥವಾಗುವಂತೆ ವಿವರಿಸಿದ್ದಾರೆ.ವೇತನ ಇಲ್ಲ; ಕತ್ತಲೆಯ ದೀಪಾವಳಿ ಆಚರಿಸುವ ದೌರ್ಭಾಗ್ಯವಿದೆ: KSRTC ಸಿಬ್ಬಂದಿ ಆಕ್ರೋಶ

November 14, 2020

 


ಕೊರೊನಾ ಹಾವಳಿಯಲ್ಲೂ ಧೃತಿಗೆಡದೆ ಕೆಲಸ ನಿರ್ವಾಹಿಸಿದ KSRTC ಸಿಬ್ಬಂದಿಗೆ ಕತ್ತಲೆಯ ದೀಪಾವಳಿ ಆಚರಿಸುವ ದೌರ್ಭಾಗ್ಯ ಎದುರಾಗಿದೆ.

ನೌಕರರಿಂದ ಹಗಲು ರಾತ್ರಿ ದುಡುಸಿಕೊಂಡ ಸಾರಿಗೆ ನಿಗಮಗಳು ದೀಪಾವಳಿ ಹಬ್ಬ ಇದ್ರೂ, ಇನ್ನೂ ಸಹ ನೌಕರರಿಗೆ ಸಂಬಳದ ಭಾಗ್ಯ ಕರುಣಿಸಿಲ್ಲ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಿಬ್ಬಂದಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಆಫೀಸ್ ಸಿಬ್ಬಂದಿಗಳಿಗೆ ಒಂದನೇ ತಾರೀಖಿನಂದೆ ಸಂಬಳವಾಗ್ತಿತ್ತು. ನಾಲ್ಕರಂದು ಡಿಪೋ ಮೆಕ್ಯಾನಿಕ್ಸ್​ಗೆ ಹಾಗೂ ಏಳನೇ ತಾರೀಖಿನಂದು ಡ್ರೈವರ್ ಕಂಡಕ್ಟರ್ ಗಳಿಗೆ ಸಂಬಳವಾಗ್ತಿತ್ತು. ಆದರೆ ಈ ಬಾರಿ 14ನೇ ತಾರೀಖಾದ್ರು ಸಂಬಳವಾಗಿಲ್ಲ.

1 ಲಕ್ಷದ 20 ಸಾವಿರ ಸಿಬ್ಬಂಧಿಗಳಿಗೆ ಸಂಬಳವಾಗಿಲ್ಲ..
KSRTC ಯಲ್ಲಿ 38 ಸಾವಿರ ನೌಕರರು ಮತ್ತು ಸಿಬ್ಬಂದಿಗಳಿದ್ದಾರೆ.

ಅಲ್ಲದೆ KSRTC, BMTC, NEKRTC ಹಾಗೂ NEKRTC ಸೇರಿ 1 ಲಕ್ಷದ 20 ಸಾವಿರ ನೌಕರರು ಮತ್ತು ಸಿಬ್ಬಂದಿಗಳಿದ್ದಾರೆ. ರಾಜ್ಯದಲ್ಲಿ ಕೋವಿಡ್ ಹೆಚ್ಚಾಗಿರುವ ಕಾರಣದಿಂದ ಸರಿಯಾದ ಸಮಯಕ್ಕೆ ಸಂಬಳವಾಗ್ತಿಲ್ಲ. ಈ ಬಾರಿ ಹಬ್ಬ ಇರೋದ್ರಿಂದ ಸರಿಯಾದ ಸಮಯಕ್ಕೆ ಸಾರಿಗೆ ಸಿಬ್ಬಂದಿಗಳು ಸಂಬಳದ ನಿರೀಕ್ಷೆಯಲ್ಲಿದ್ದರು. ಆದರೆ ಈ ಬಾರಿಯೂ ಇಲ್ಲಿಯವರೆಗೆ ನಿಗಮಗಳು ಸಂಬಳ ಕರುಣಿಸಿಲ್ಲ.

ಬಿಎಂಟಿಸಿಯಲ್ಲೂ ಇದೆ ಗೋಳು..
ಇದು ಕೆಎಸ್‌ಆರ್ಟಿಸಿ ಕಥೆಯಾದ್ರೆ ಇತ್ತ ಬಿಎಂಟಿಸಿಯಲ್ಲೂ ಇದೆ ಗೋಳು. ಬಿಎಂಟಿಸಿಯಲ್ಲಿ 38 ಸಾವಿರ ಸಿಬ್ಬಂದಿಗಳು ಹಾಗೂ ನೌಕರರಿದ್ದಾರೆ. ಬಿಎಂಟಿಸಿಯಲ್ಲಿ ಪ್ರತಿ ತಿಂಗಳು ಏಳನೇ ತಾರೀಖಿನಂದು ಸಂಬಳ ನೀಡ್ತಿದ್ರು. ಆದರೆ ಈ ಬಾರಿ ಇಲ್ಲಿಯವರೆಗೂ ಸಂಬಳವಾಗಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಿಬ್ಬಂದಿಗಳು ನೋವು ತೋಡಿಕೊಳ್ತಿದ್ದಾರೆ. ಕೋವಿಡ್ ಬಳಿಕ ಸಂಬಳಕ್ಕೆ ಸಾರಿಗೆ ನಿಗಮಗಳು ಸರ್ಕಾರವನ್ನೇ ನೆಚ್ಚಿಕೊಂಡಿವೆ. ಹೀಗಾಗಿ ಸರ್ಕಾರ ಕೊಟ್ರೆ ಮಾತ್ರ ನಾವು ನೌಕರರಿಗೆ ಸಂಬಳ ನೀಡಲು ಸಾಧ್ಯ ಎಂದು ನಿಗಮಗಳು ಸಬೂಬು ಹೇಳುತ್ತಿವೆ.

ಬಿಡುಗಡೆಯಾಯ್ತು ರಚಿತಾ ರಾಮ್ ಹೊಸ ಚಿತ್ರದ ಟೈಟಲ್ ಫೋಸ್ಟರ್

November 14, 2020

 


ಸಾಲು ಸಾಲು ಸಿನಿಮಾಗಳು ನಟಿ ರಚಿತಾ ರಾಮ್ ಅವರಿಗೆ ಕೈ ಬೀಸಿ ಕರೆಯುತ್ತಲೇ ಇವೆ. ಇದೀಗ ದೀಪಾವಳಿ ಹಬ್ಬದ ಪ್ರಯುಕ್ತ 'ಪಂಕಜ ಕಸ್ತೂರಿ' ಎಂಬ ಹೆಸರಿನೊಂದಿಗೆ ಹೊಸ ಸಿನಿಮಾದ ಫೋಸ್ಟರ್ ಬಿಡುಗಡೆ ಮಾಡಿದ್ದಾರೆ. ಮಯೂರ ರಾಘವೇಂದ್ರ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ರಚಿತಾ ರಾಮ್ ಟೈಟಲ್ ಫೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವಿಶೇಷ ಪ್ರಕಟಣೆ ಟೈಟಲ್ ಹೇಳಿದ್ಮೇಲೆ 1st ಲುಕ್ ಬಿಡ್ದೆ ಇದ್ರೆ ಹೆಂಗೇ? ನಾನು 'ಪಂಕಜ ಕಸ್ತೂರಿ'ಯಾಗಿ ನಿಮ್ಮುಂದೆ ಬರ್ತಿದೀನಿ. ನಿಮ್ಮ ಮನೆ ಮನಸ್ಸಿಗೆ ಬರ ಮಾಡ್ಕೊಳ್ಳಿ ದೀಪಾವಳಿಯನ್ನ ಸೆಲೆಬ್ರೇಟ್ ಮಾಡ್ಕೋಳಿ. ಎಲ್ರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಆಹ್ ಆಮೇಲೆ ಟಿಫನ್ ಬಾಕ್ಸ್ ನಲ್ಲಿ ಏನಿದೆ ಅಂತ ಗೆಸ್ ಮಾಡ್ತಿರಿ ನಿಮ್ಮ ರಚಿತಾ ರಾಮ್ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಜಿಲ್ಲೆಯ 12 ಕೇಂದ್ರಗಳಲ್ಲಿ ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿ

November 14, 2020

 


ಚಿತ್ರದುರ್ಗ: ಜಿಲ್ಲೆಯಲ್ಲಿ ಹೆಚ್ಚಾಗಿ ಶೇಂಗಾ ಬೆಳೆಯನ್ನು ಬೆಳೆಯಲಾಗಿದ್ದು ರೈತರಿಂದ ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದ್ದಾರೆ.

ಶೇಂಗಾ ಉತ್ಪನ್ನವನ್ನು ರೈತರಿಂದ ನೇರವಾಗಿ ಖರೀದಿಸಲಾಗುತ್ತಿದ್ದು ಕರ್ನಾಟಕ ಆಯಿಲ್ ಫೆಡರೇಷನ್ ಮೂಲಕ ಕೆಓಎಫ್ ಪ್ರತಿ ಕ್ವಿಂಟಾಲ್‍ಗೆ 5275 ರೂ.ಗಳಿಗೆ ಖರೀದಿ ಮಾಡಲಾಗುತ್ತಿದೆ.

ಶೇಂಗಾ ಖರೀದಿಗಾಗಿ ಜಿಲ್ಲೆಯ 12 ಕೇಂದ್ರಗಳ ಮೂಲಕ ಖರೀದಿಸಲಾಗುತ್ತಿದೆ. ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ, ನಿ. ಮೂಲಕ ಖರೀದಿಸಲಾಗುತ್ತಿದೆ. ಚಳ್ಳಕೆರೆ ತಾ; ತಿಮ್ಮಣ್ಣನಾಯಕನಕೋಟೆ, ರಾಮಜೋಗಿಹಳ್ಳಿ, ದೇವರೆಡ್ಡಿಹಳ್ಳಿ, ತಿಮ್ಮಪ್ಪಯ್ಯನಹಳ್ಳಿ, ಸಾಣೆಕೆರೆ ಹಾಗೂ ಎಪಿಎಂಸಿ ಚಳ್ಳಕೆರೆ, ಹಿರಿಯೂರು ತಾ; ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ.ನಿ ಯರಬಳ್ಳಿ, ಆರನಕಟ್ಟೆ, ಧರ್ಮಪುರ, ಚಿತ್ರದುರ್ಗ ತಾ; ತುರುವನೂರು ಹಾಗೂ ಮೊಳಕಾಲ್ಮುರು ತಾ; ಚಿಕ್ಕೋಬನಹಳ್ಳಿ, ಎ.ಪಿ.ಎಂ.ಸಿ ರಾಂಪುರ ಈ ಖರೀದಿ ಕೇಂದ್ರಗಳಲ್ಲಿ ಶೇಂಗಾ ಖರೀದಿಸಲಾಗುತ್ತ್ತಿದೆ.

ರೈತರು ನವಂಬರ್ 21 ರೊಳಗಾಗಿ ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಬೇಕು.

ಇದರ ಜೊತೆಯಲ್ಲಿ ಖರೀದಿ ಮಾಡಲಿದ್ದು 2021 ರ ಜನವರಿ 1 ರ ವರೆಗೆ ಖರೀದಿ ಮಾಡಲಾಗುತ್ತದೆ. ಪ್ರತಿ ಎಕರೆಗೆ ಗರಿಷ್ಠ 3 ಕ್ವಿಂಟಾಲ್‍ನಂತೆ ಪ್ರತಿ ರೈತರಿಂದ ಗರಿಷ್ಠ 15 ಹದಿನೈದು ಕ್ವಿಂಟಾಲ್ ಶೇಂಗಾ ಖರೀದಿಸಲಾಗುತ್ತದೆ. ಆಯಾ ರೈತರ ಹೆಸರಿಗೆ ಮಾತ್ರ ಅವರ ಬ್ಯಾಂಕ್ ಖಾತೆಗೆ ಖರೀದಿ ಹಣವನ್ನು ವರ್ಗಾವಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ

ನೆಹರೂ: ಮಹಾನ್‌ ಮಾನವತಾವಾದಿಯ ನೆನಪು

November 14, 2020

 


ಒಂದು ಸುಂದರ ಕನಸು ನುಚ್ಚುನೂರಾಗಿದೆ. ಒಂದು ಸಂಗೀತ ಮೌನವಾಗಿದೆ. ಜ್ಯೋತಿಯೊಂದು ಅನಂತದಲ್ಲಿ ಲೀನವಾಗಿದೆ. ಅದೊಂದು ಭೀತಿ ರಹಿತ, ಉಪವಾಸರಹಿತ ಜಗತ್ತಿನ ಕನಸಾಗಿತ್ತು. ಅದೊಂದು ಮಹಾಕಾವ್ಯದಲ್ಲಿನ, ಗೀತೆಯ ಪ್ರತಿಧ್ವನಿಯಾಗಿತ್ತು ಮತ್ತು ಅದು ಗುಲಾಬಿ ಹೂವಿನ ಸುವಾಸನೆಯಾಗಿತ್ತು. ಅದು ರಾತ್ರಿಯೆಲ್ಲ ಬೆಳಗಿದ, ಎಲ್ಲ ತರಹದ ಕಗ್ಗತ್ತಲನ್ನು ಓಡಿಸುವ ದೀಪದ ಜ್ವಾಲೆಯಾಗಿತ್ತು. ನಮಗೆ ದಾರಿದೀಪವಾಗಿತ್ತು.

ಅವರು ವ್ಯಕ್ತಿ ಸ್ವಾತಂತ್ರ್ಯದ ಪ್ರತಿಪಾದಕರಾಗಿದ್ದರು. ಆರ್ಥಿಕ ಸಮಾನತೆಯ ನಿಷ್ಠುರ ವಚನ ಬದ್ಧರಾಗಿದ್ದರು. ಅವರು ಯಾರೊಂದಿಗೂ ಸಂಧಾನಗೈಯುವುದರಲ್ಲಿ ಹಿಂಜರಿಯುತ್ತಿ ರಲಿಲ್ಲ. ಆದರೆ ಯಾರೊಂದಿಗೂ ಭಯ, ಹೆದರಿಕೆಗಳಿಂದ ಸಂಧಾನಗೈಯುತ್ತಿರಲೂ ಇರಲಿಲ್ಲ. ನೆಹರೂ ನಿಧನ ಪ್ರಜಾಸತ್ತೆಗೆ ಇನ್ನಿಲ್ಲದಂತಹ ನಷ್ಟ. ಮುಂದೆ ಇಂತಹ ವ್ಯಕ್ತಿತ್ವವನ್ನು ಕಾಣಲಾರೆವು

.ನಮ್ಮೊಳಗೆ ಇರುವ ವೈರುಧ್ಯ ಧೋರಣೆಗಳ ನಡು ವೆಯೂ ಅವರ ಆದರ್ಶಗಳು, ದೇಶಪ್ರೇಮ, ಧೈರ್ಯ, ಸ್ಥೈರ್ಯಗಳ ಬಗ್ಗೆ ಗೌರವಾದರಗಳಿವೆ ಎಂಬುದಾಗಿ ತಿಳಿಸುತ್ತ ವಿನಮ್ರನಾಗಿ ಅವರ ಆತ್ಮಕ್ಕೆ ಗೌರವವನ್ನು ಅರ್ಪಿಸುತ್ತೇನೆ’

-ಅಟಲ್‌ ಬಿಹಾರಿ ವಾಜಪೇಯಿ

ಜವಾಹರಲಾಲ್‌ ನೆಹರೂ ನಿಧನ ಹೊಂದಿದ ಬಳಿಕ ರಾಜ್ಯ ಸಭೆಯಲ್ಲಿ ಶೋಕಸಭೆ ಜರಗಿದಾಗ, ಸದಸ್ಯರಾಗಿದ್ದ ವಾಜಪೇಯಿ ಆಡಿದ ಮಾತುಗಳು ಅಂದಿನ ಮತ್ತು ಇಂದಿನ ಪೀಳಿಗೆಯ ಭಾರತೀಯರ ಮನಸ್ಸುಗಳಲ್ಲಿ ಸದಾ ಪ್ರತಿಧ್ವನಿ ಸುತ್ತಲಿರುತ್ತವೆ.

ಹೌದು. ಭಾರತದ ಪ್ರಥಮ ಪ್ರಧಾನಿ ಪಂ| ನೆಹರೂ ನಡೆದು ಬಂದ ಹಾದಿ ಹಾಗೆಯೇ ಇತ್ತು. ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಿದ್ದ ವ್ಯಕ್ತಿ ಮುಂದೆ ಮಹಾತ್ಮಾ ಗಾಂಧೀಜಿಯವರ ಸಂಪರ್ಕಗಳಿಂದ ಜನ ಸಾಮಾನ್ಯರಾಗಿ ವ್ಯವಹರಿಸುತ್ತ ಅವರ ದುಃಖ ದುಮ್ಮಾನಗಳನ್ನು ಬಗೆಹರಿಸುವಲ್ಲಿ ತೊಡಗಿಸಿಕೊಂಡರು. ಗಾಂಧೀಜಿಯವರನ್ನು ಅನುಸರಿಸಿ ಪಂ| ನೆಹರೂ, ಅಂದು ವಿದೇಶಗಳಲ್ಲಿ ತನಗಾಗಿ ಹೊಲಿಸಿಕೊಂಡು ಬರುತ್ತಲಿದ್ದ ಆಗಿನ ಕಾಲದಲ್ಲಿ ಲಕ್ಷ ಲಕ್ಷ ರೂ. ಬೆಲೆಬಾಳುವ ಬಟ್ಟೆಗಳನ್ನು ತೊರೆದು, ದೊರಗು ಖಾದಿ ಬಟ್ಟೆ ತೊಡಲಾರಂಭಿಸಿದರು. ಮುಂದೆ ಪಂಥ ಪ್ರಧಾನರಾಗಿ ದೇಶ, ವಿದೇಶಗಳನ್ನು ಸಂದರ್ಶಿಸುವಾಗಲೂ ಖಾದಿ ಬಟ್ಟೆಗಳನ್ನೇ ತೊಡುತ್ತಿದ್ದರು.

ದೇಶದ ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಮಹಾತ್ಮಾ ಗಾಂಧೀಜಿ ಮಾರ್ಗದರ್ಶನದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಹಲವಾರು ಬಾರಿ ಭೇಟಿ ನೀಡಿದ ಸಂದರ್ಭಗಳಲ್ಲಿ ಪಂ| ನೆಹರೂ ಹಳ್ಳಿಗರೊಂದಿಗೆ, ನಿರಕ್ಷರಕುಕ್ಷಿಗಳೊಡನೆ ಮಾತನಾಡು ವಾಗ ಅವರ ಜನಜೀವನ, ವಿವಿಧ ಸಂಸ್ಕೃತಿಗಳ, ನಡೆ ನುಡಿಗಳ, ಬಡತನದ ಬೇಗೆಯನ್ನು ಹತ್ತಿರದಿಂದ ಕಂಡು ಅನುಭವ ಪಡೆದಿದ್ದರು. ಇವೆಲ್ಲವನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಜರಗಿದ ವಿವಿಧ ಚಳವಳಿಗಳ ಕಾಲಮಧ್ಯದಲ್ಲಿ ಸುಮಾರು 10 ವರ್ಷಗಳ ಕಾಲದ ಜೈಲುವಾಸದ ದಿನಗಳಲ್ಲಿ ತಾವು ಬರೆದ The Discovery of India, Glimpses of world History, An Autobiography, Letter to a Daughter ಮೊದಲಾದ ಕೃತಿಗಳಲ್ಲಿ ಉಲ್ಲೇಖೀಸಿದ್ದಾರೆ. ಪವಿತ್ರ ಗಂಗಾ ನದಿಯನ್ನು ಗಂಗಾಮಾತೆಯೆಂದು ಕರೆದ ನೆಹರೂ, ಭಾರತೀಯ ದರ್ಶನಗಳ ಕುರಿತಾಗಿ ವಿವಿಧ ಜನಾಂಗಗಳ ಸಾಂಸ್ಕೃತಿಕ, ಗ್ರಂಥಗಳು, ಚಾರಿತ್ರಿಕ, ಜಾನಪದ ವಿಷಯಗಳ ಅನುಭವವನ್ನು ವಿವರಿಸಿದ್ದರು. ಈ ಉತ್ಕೃಷ್ಟ ಕೃತಿಗಳು ಜಗತ್ತಿನ ಸಾಹಿತ್ಯ ಕ್ಷೇತ್ರದಲ್ಲಿ ಇಂದಿಗೂ ಉಚ್ಚ ಸ್ಥಾನವನ್ನು ಪಡೆದಿವೆ (ಅವರು ಕಾಪಿಟ್ಟ ತನ್ನ ಪತ್ನಿ ಕಮಲಾ ಚಿತಾ ಭಸ್ಮವನ್ನು ತನ್ನ ಚಿತಾಭಸ್ಮದೊಂದಿಗೆ ಗಂಗಾನದಿಯಲ್ಲಿ ಬಿಡಬೇಕೆಂದು ನೆಹರೂ ಅಪೇಕ್ಷಿಸಿದ್ದರು).

ಮಹಾತ್ಮಾ ಗಾಂಧೀಜಿ ಮಾರ್ಗದರ್ಶನದಲ್ಲಿ, ಸ್ವಾತಂತ್ರ್ಯ ಚಳವಳಿಗೆ ಧುಮುಕಿದ ನಾಯಕರಲ್ಲಿ ಪಂ| ನೆಹರೂ, ಸುಭಾಸ್‌ಚಂದ್ರ ಭೋಸ್‌, ಸರ್ದಾರ್‌ ವಲ್ಲಭಭಾಯಿ ಪಟೇಲ್‌, ರಾಜೇಂದ್ರ ಪ್ರಸಾದ್‌, ಮೌಲಾನಾ ಅಬ್ದುಲ್‌ ಕಲಾಂ ಆಜಾದ್‌ ಮುಂತಾದ ಹಲವಾರು ಶ್ರೇಷ್ಠ ನಾಯಕರು ವಿವಿಧ ಮನೋಭಾವದವರಾಗಿದ್ದರು. ಆದರೆ ಅವರೆಲ್ಲರನ್ನು ವೈಯಕ್ತಿಕವಾಗಿ ಹತ್ತಿರದಿಂದ ಬಲ್ಲ ಗಾಂಧೀಜಿ ಅವರು ಪಂ. ನೆಹರೂ ಅವರನ್ನು ತನ್ನ ಉತ್ತರಾಧಿಕಾರಿಯೆಂದು ಜಗತ್ತಿಗೇ ಸಾರಿ, “ನಾನು ಜಗತ್ತಿನಿಂದ ತೆರಳಿದ ಬಳಿಕ ಜವಾಹರ ಲಾಲ್‌ ನನ್ನ ಭಾಷೆಯನ್ನು ಮಾತನಾಡುತ್ತಾನೆ’ ಎಂದು ಘೋಷಿಸಿದ್ದರು ಮತ್ತು ಅದನ್ನು ಆ ನಾಯಕರೆಲ್ಲರೂ ಪ್ರಾಂಜಲವಾಗಿ ಒಪ್ಪಿ ಕೊಂಡಿದ್ದರು. ಅಂತೆಯೇ ಸುಭಾಸ್‌ಚಂದ್ರ ಭೋಸ್‌ ಅವರು, ಭಾರತವನ್ನು ಬಿಟ್ಟು ವಿದೇಶಗಳಿಗೆ ಹೋಗಿ ಜರ್ಮನಿ ಮತ್ತು ಜಪಾನಿಯರ ಬೆಂಬಲದಿಂದ ಇಂಡಿಯನ್‌ ನ್ಯಾಷನಲ್‌ ಆರ್ಮಿ (INA)ಯನ್ನು ಕಟ್ಟಿದಾಗ, ಒಂದು ತುಕಡಿಗೆ ನೆಹರೂ ಬೆಟಾಲಿಯನ್‌ ಎಂದು ಹೆಸರನ್ನಿಟ್ಟಿದ್ದರು.

ಭಾರತ ದೇಶ ವಿಭಜನೆಗೊಂಡು ಸ್ವತಂತ್ರವಾದಾಗ, ಪಂಜಾಬ್‌, ಸಿಂಧ್‌ ಪ್ರಾಂತ್ಯಗಳಿಂದ ಬಂದ ಲಕ್ಷಾಂತರ ಜನರಿಗೆ ವಸತಿ, ಆಹಾರ, ನೀರು, ಬಟ್ಟೆ ಬರೆಗಳನ್ನು ನೀಡುವಲ್ಲಿ ಪಂ| ನೆಹರೂ ರಾತ್ರಿ ಹಗಲೆನ್ನದೇ ದುಡಿದರು. ತಾನಿರುವ ಪ್ರಧಾನಮಂತ್ರಿಗಳ ಮನೆಯ ಅಂಗಳದಲ್ಲಿ ಮತ್ತು ದಿಲ್ಲಿಯ ನೆರೆಕರೆಗಳಲ್ಲಿ ಬೀಡುಬಿಟ್ಟ ನಿರಾಶ್ರಿತರ ದುಃಖ-ದುಮ್ಮಾನಗಳನ್ನು ಪರಿಹರಿಸುವಲ್ಲಿ ತಾನೇ ಸ್ವತಃ ಓಡಾಡಿ ಅವರಲ್ಲಿ ಧೈರ್ಯ, ಸ್ಥೈರ್ಯಗಳನ್ನು ತುಂಬಿಸಲು ಹೆಣಗಾಡಿದ್ದರು.

ಸ್ವಾತಂತ್ರ್ಯ ಸಿಕ್ಕಿದ ಬಳಿಕ ನಡುಗಾಲ ಸರಕಾರ ನೇಮಕವಾದಾಗ ನೆಹರೂ ಅಪೇಕ್ಷೆಯಂತೆ ಸರ್ದಾರ್‌ ಪಟೇಲರು ಉಪ ಪ್ರಧಾನಮಂತ್ರಿಗಳಾಗಿ ಸೇರಿಕೊಂಡಿದ್ದರು. ರಾಜೇಂದ್ರ ಪ್ರಸಾದ್‌ ಪ್ರಥಮ ಲೋಕಸಭೆಯ ಅಧ್ಯಕ್ಷರಾಗಲು ಒಪ್ಪಿದ್ದರು. ಮತ್ತೆ ಮುಂದೆ ಭಾರತದ ಪ್ರಥಮ ರಾಷ್ಟ್ರಾಧ್ಯಕ್ಷರೂ ಆದರು. ಸ್ವತಂತ್ರ ಭಾರತದ ಈ ನಡುಗಾಲ ಸರಕಾರದಲ್ಲಿ ಪಂ| ನೆಹರೂ ಕಾಂಗ್ರೆಸ್‌ ಪಕ್ಷದ ವರಿಷ್ಠರನ್ನು ಮಾತ್ರವಲ್ಲದೇ ತನ್ನ ಬಹಳಷ್ಟು ಧೋರಣೆ ಗಳನ್ನು ಒಪ್ಪದ ಡಾ| ಭೀಮರಾವ್‌ ಅಂಬೇಡ್ಕರ್‌, ಡಾ| ಶ್ಯಾಮಪ್ರಸಾದ್‌ ಮುಖರ್ಜಿ ಒಳಗೊಂಡ ಸರಕಾರವನ್ನು ರಚಿಸಿ ದ್ದರು. ಅದು ಅವರ ವಿಶಾಲ ಮನೋಭೂಮಿಕೆಯನ್ನು ಸಾರಿತು.

ಸ್ವತಂತ್ರ ಭಾರತದ ಸರ್ವಾಂಗೀಣ ಬೆಳವಣಿಗೆಗೆ ಪಂಚವಾರ್ಷಿಕ ಯೋಜನೆಗಳಿಗೆ ಅಡಿಪಾಯ ಹಾಕಿದರು. ಅಮೆರಿಕದಲ್ಲಿ ಉದ್ಯೋಗದಲ್ಲಿದ್ದ ವಿಜ್ಞಾನಿ ಸಿ.ಎಚ್‌.ಬಾಬಾರನ್ನು ಆಮಂತ್ರಿಸಿ ಅಣು ವಿಜ್ಞಾನ ಸಂಸ್ಥೆಯನ್ನು ಹುಟ್ಟು ಹಾಕಿದರು. ಅದಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಒಂದೊಂದಾಗಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಅಂತೆಯೇ ವಿಶಾಖಪಟ್ಟಣದಲ್ಲಿ ಮೊದಲ ಹಡಗು ನಿರ್ಮಾಣ ಕೇಂದ್ರವನ್ನು ಹುಟ್ಟುಹಾಕಿ ಬೆಳೆಸಿದರು. ದೇಶದಲ್ಲಿ ಮಾದರಿಯಾಗಿ ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ) ಭಾರತೀಯ ವಿಜ್ಞಾನ ಸಂಸ್ಥೆ, ಪ್ರಾದೇಶಿಕ ತಾಂತ್ರಿಕ ಕಾಲೇಜುಗಳನ್ನು ಸ್ಥಾಪಿಸಲಾಯಿತು. ಅಲ್ಲದೇ ಕೇಂದ್ರ ಸಾಹಿತ್ಯ ಅಕಾಡೆಮಿ, ನ್ಯಾಷನಲ್‌ ಬುಕ್‌ ಟ್ರಸ್ಟ್‌ಗಳನ್ನು ಸ್ಥಾಪಿಸಲಾಯಿತು. ಅಲ್ಲದೇ ನ್ಯಾಷನಲ್‌ ಸ್ಕೂಲ್‌ ಆಫ್ ಡ್ರಾಮಾ (NSD), ಫಿಲಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಸಂಸ್ಥೆಗಳಲ್ಲಿ ಯುವ ಕಲಾಗಾರರಿಗೆ ತರಬೇತಿ ನೀಡುವ ವ್ಯವಸ್ಥೆ ಮಾಡಲಾಯಿತು.

ದೇಶ ವಿದೇಶಗಳಲ್ಲಿ ವಾಸಿಸುತ್ತಿರುವ ಭಾರತದ ವಿಜ್ಞಾನಿಗಳು, ಸಾಹಿತ್ಯ, ಸಂಗೀತ ಇತರ ಕಲಾ ಕ್ಷೇತ್ರಗಳ ಕಲಾವಿದರು ಅಲ್ಲದೇ ವಿವಿಧ ಕ್ಷೇತ್ರಗಳಲ್ಲಿ ದುಡಿದು ಹೆಸರು ಗಳಿಸಿದ ಮತ್ತು ತೆರೆಯ ಮರೆಯಲ್ಲಿರುವವರನ್ನೂ ಗುರುತಿಸಿ ಸಮ್ಮಾನಿಸುವ ಭಾರತ ರತ್ನ ಮತ್ತು ಪದ್ಮ ಪ್ರಶಸ್ತಿಗಳನ್ನು ನೀಡಿ ಸತ್ಕರಿಸುವ ಪರಿಪಾಠವನ್ನು ನೆಹರೂ ಹುಟ್ಟು ಹಾಕಿದರು. ಅಂದು ಪಂ| ನೆಹರೂ ಹಾಕಿದ ಭದ್ರ ಅಡಿಪಾಯದಿಂದಾಗಿ ಪ್ರಜಾಪ್ರಭುತ್ವ ಮುಂದೆಯೂ ಹೀಗೆಯೇ ಮುನ್ನಡೆಯಲಿದೆ ಎಂಬ ವಿಶ್ವಾಸ ನಮ್ಮೆಲ್ಲರದಾಗಿದೆ.

ಕುತೂಹಲ ಮೂಡಿಸಿದ ಬಿಎಸ್‌ವೈ-ಎಚ್‌ಡಿಕೆ ಭೇಟಿ

November 14, 2020

 


ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಶುಕ್ರವಾರ ಭೇಟಿ ಮಾಡಿದ್ದು, ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಉಪಚುನಾವಣೆ ಬಳಿಕ ಇಬ್ಬರು ನಾಯಕರ ಮುಖಾಮುಖಿಯಾಗಿದ್ದು, ಜತೆಗೆ ಮೇಲುಕೋಟೆ ಶಾಸಕ ಸಿ.ಎಸ್‌.ಪುಟ್ಟರಾಜು ಜತೆಗಿದ್ದರು. ಇಬ್ಬರೂ ನಾಯಕರು ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆಸಿದರು ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

ಈ ಹಿಂದೆಯೂ ಕುಮಾರಸ್ವಾಮಿ, ತಮ್ಮ ಪಕ್ಷದ ಶಾಸಕರ ಕ್ಷೇತ್ರಗಳ ಅಭಿವೃದ್ಧಿ ಕಾಮಗಾರಿಗಳಿಗಾಗಿ ಅನುದಾನ ಬಿಡುಗಡೆ ಮನವಿ ಮಾಡಿದ್ದರು. ಅದಕ್ಕೆ ಯಡಿಯೂರಪ್ಪ ಸ್ಪಂದಿಸಿ ಅನುದಾನ ಬಿಡುಗಡೆ ಮಾಡಿದ್ದರು.

ಜೆಡಿಎಸ್‌ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳ ಅಭಿವೃದ್ಧಿ ಹಾಗೂ ಅನುದಾನಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಮುಖ್ಯಮಂತ್ರಿ ಅವರನ್ನು ಕುಮಾರಸ್ವಾಮಿ ಭೇಟಿಯಾಗಿದ್ದರು.

ಅದನ್ನು ಬಿಟ್ಟರೆ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಕುಮಾರಸ್ವಾಮಿ ಆಪ್ತ ಮೂಲಗಳು ತಿಳಿಸಿವೆ.