ಶಿಕ್ಷಣ ಸುದ್ದಿ

Schools Reopening: ದೇಶದಲ್ಲಿ ಯಾವೆಲ್ಲಾ ರಾಜ್ಯಗಳಲ್ಲಿ ಶಾಲಾ ಕಾಲೇಜುಗಳು ಆರಂಭಗೊಂಡಿದೆ ಗೊತ್ತಾ ?

 ದೇಶದೆಲ್ಲೆಡೆ ಕರೋನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಆರು ತಿಂಗಳ ಕಾಲ ಮುಚ್ಚಲ್ಪಟ್ಟ ಶಾಲಾ ಕಾಲೇಜುಗಳು ಇಂದಿನಿಂದ ಭಾಗಶಃ ಪುನರಾರಂಭಿಸಿವೆ.

ಸೆಪ್ಟೆಂಬರ್ 21 ರಿಂದ ಶಾಲೆಗಳು ಮತ್ತು ಕಾಲೇಜುಗಳನ್ನು ಭಾಗಶಃ ಪುನರಾರಂಭಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಕೇಂದ್ರದ ಆದೇಶದ ನಂತರ ಅನೇಕ ರಾಜ್ಯಗಳು ಶಿಕ್ಷಣ ಸಂಸ್ಥೆಗಳಿಗೆ ಶಾಲೆ ಕಾಲೇಜುಗಳನ್ನು ಇಂದಿನಿಂದ ಮತ್ತೆ ತೆರೆಯಲು ಅನುಮತಿ ನೀಡಿವೆ.

ಯಾವೆಲ್ಲಾ ರಾಜ್ಯಗಳಲ್ಲಿ ಆರಂಭ:

ಹರಿಯಾಣ, ಹಿಮಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ತಮಿಳುನಾಡು, ಮಧ್ಯಪ್ರದೇಶ ಮತ್ತು ನಾಗಾಲ್ಯಾಂಡ್ ಈ ಎಲ್ಲಾ ರಾಜ್ಯಗಳಲ್ಲಿ ಶಾಲೆಗಳು ಮತ್ತು ಕಾಲೇಜುಗಳನ್ನು ಇಂದಿನಿಂದ ತೆರೆಯಲಾಗಿದೆ.

ಲಾಕ್‌ಡೌನ್‌ ಘೋಷಿಸಿದ ಮೋದಿ:

ದೇಶದಲ್ಲಿ ಕರೋನವೈರಸ್ (COVID-19) ಹರಡುವುದನ್ನು ತಡೆಗಟ್ಟಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಿಸಿದ ನಂತರ ಮಾರ್ಚ್ 25 ರಿಂದ ಭಾರತದಾದ್ಯಂತ ಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚಲಾಗಿತ್ತು.

ಈಗ ಕೊರೋನಾ ಸೋಂಕಿನ ಪ್ರಮಾಣ ಹೇಗಿದೆ?:

ಕಳೆದ 24 ಗಂಟೆಗಳಲ್ಲಿ 92,605 ಹೊಸ ಸೋಂಕಿನ ಪ್ರಕರಣಗಳನ್ನು ಸೇರಿಸಿದರೆ ಭಾರತದ ಕರೋನವೈರಸ್ ಪ್ರಕರಣವು ಒಟ್ಟು 54 ಲಕ್ಷವನ್ನು ಮೀರಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಭಾನುವಾರ (ಸೆಪ್ಟೆಂಬರ್ 20) ತೋರಿಸಿದೆ.

Leave a Reply

Your email address will not be published.