'ಸರ್ಕಾರಿ ನೌಕರ'ರೇ ಗಮನಿಸಿ : ಇನ್ಮುಂದೆ ಬೇರೆ ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲೇ NOC ಪಡೆಯುವ ಅಗತ್ಯವಿಲ್ಲ

September 10, 2020
Thursday, September 10, 2020

 ಬೆಂಗಳೂರು : ಸರ್ಕಾರಿ ಹುದ್ದೆಯಲ್ಲಿದ್ದು, ಮತ್ತೊಂದು ಸರ್ಕಾರಿ ಹುದ್ದೆಗಾಗಿ ಅರ್ಜಿ ಸಲ್ಲಿಸಲು ತಾವು ಕರ್ತವ್ಯ ನಿರ್ವಹಿಸುತ್ತಿರುವ ಇಲಾಖೆಯಿಂದ ನೋ ಅಬ್ಜೆಕ್ಷನ್ ಪ್ರಮಾಣ ಪತ್ರ(NOC) ಪಡೆಯುವುದು ಕಡ್ಡಾಯವಾಗಿತ್ತು. ಆದ್ರೇ ಇನ್ಮುಂದೆ ಮತ್ತೊಂದು ಸರ್ಕಾರಿ ಹುದ್ದೆಗೆ ಆಯ್ಕೆಗಾಗಿ ಅರ್ಜಿ ಸಲ್ಲಿಸುವ ಮುನ್ನವೇ ಎನ್ ಒ ಸಿ ಪಡೆಯುವುದಕ್ಕೆ ವಿನಾಯಿತಿ ನೀಡಿದೆ. ಈ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ಅನ್ನು ರಾಜ್ಯ ಸರ್ಕಾರ ನೀಡಿದೆ.


ಈ ಕುರಿತಂತೆ ರಾಜ್ಯ ಸರ್ಕಾರ ವಿಶೇಷ ರಾಜ್ಯ ಪತ್ರ ಹೊರಡಿಸಿದ್ದು, ಸರ್ಕಾರಿ ನೌಕರರಾಗಿದ್ದು, ಮತ್ತೊಂದು ಸರ್ಕಾರಿ ಹುದ್ದೆಗಾಗಿ ಅರ್ಜಿ ಸಲ್ಲಿಸುವ ವೇಳೆಯಲ್ಲಿ ತಾವು ಕರ್ತವ್ಯ ನಿರ್ವಹಿಸುತ್ತಿದ್ದಂತ ಇಲಾಖೆಯಿಂದ ನಿರಾಪೇಕ್ಷಣ ಪ್ರಮಾಣ ಪತ್ರ(ಎನ್‌ಒಸಿ) ಪಡೆಯುವುದು ಕಡ್ಡಾಯವಾಗಿತ್ತು.


ಇಂತಹ ನೇಮಕಾತಿ ನಿಯಮವದಲ್ಲಿ ಬದಲಾವಣೆ ಮಾಡಲಾಗಿದ್ದು, ಕಲಂ 11ರಂತೆ ಸರ್ಕಾರಿ ಹುದ್ದೆ ಹೊಂದಿರುವ ವ್ಯಕ್ತಿಯು, ಮತ್ತೊಂದು ಸರ್ಕಾರಿ ಹುದ್ದೆಗೆ ನೇರವಾಗಿಯೇ ನೇಮಕಾತಿ ಪ್ರಾಧಿಕಾರಕ್ಕೆ ಅರ್ಜಿಯನ್ನು ಸಲ್ಲಿಸಬಹುದು ಎಂಬುದಾಗಿ ತಿಳಿಸಿದೆ.

ಆದ್ರೇ ಮತ್ತೊಂದು ಸರ್ಕಾರಿ ಹುದ್ದೆಗಾಗಿ ಅರ್ಜಿ ಸಲ್ಲಿಸಿದ ನಂತ್ರ ಸರ್ಕಾರಿ ನೌಕರ ಆ ಹುದ್ದೆಗೆ ನೇಮಕವಾದಲ್ಲಿ, ತಪ್ಪದೇ ತಮ್ಮ ಮಾತೃ ಇಲಾಖೆಗೆ ತಾವು ನೇಮಕಗೊಂಡಿರುವ ಬಗ್ಗೆ ಪ್ರಮಾಣಪತ್ರವನ್ನು ಸಲ್ಲಿಸಬೇಕು. ತಮ್ಮ ಮಾತೃ ಇಲಾಖೆಯ ಗಮನಕ್ಕೆ ತಂದು ನೇಮಕಗೊಂಡಿರುವ ಮತ್ತೊಂದು ಹುದ್ದೆಗೆ ರಿಪೋರ್ಟ್ ಮಾಡಿಕೊಳ್ಳಬಹುದಾಗಿದೆ ಎಂಬುದಾಗಿ ಹೇಳಿದೆ. ಈ ಮೂಲಕ ಇನ್ಮುಂದೆ ಸರ್ಕಾರಿ ನೌಕರರಾಗಿದ್ದೂ, ಮತ್ತೊಂದು ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲೇ ಎನ್ ಒ ಸಿ ಪಡೆಯುವ ಬಗ್ಗೆ ವಿನಾಯಿತಿ ನೀಡಿದೆ.


ಈ ಹಿನ್ನಲೆಯಲ್ಲಿ ಇನ್ಮುಂದೆ ಬೇರೆ ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲೇ NOC ಅಂದರೇ ನಿರಾಕ್ಷೇಪಣಾ ಪತ್ರ ಪಡೆಯುವ ಅಗತ್ಯವಿಲ್ಲ. ಆಯ್ಕೆಯಾದ ನಂತರ ಇಲಾಖೆಯಿಂದ NOC ಪಡೆದು, ಸಲ್ಲಿಸಬಹುದಾಗಿದೆ. ಈ ಮೂಲಕ ಸರ್ಕಾರಿ ನೌಕರರಾಗಿದ್ದು, ಮತ್ತೊಂದು ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವವರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ.

Thanks for reading 'ಸರ್ಕಾರಿ ನೌಕರ'ರೇ ಗಮನಿಸಿ : ಇನ್ಮುಂದೆ ಬೇರೆ ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲೇ NOC ಪಡೆಯುವ ಅಗತ್ಯವಿಲ್ಲ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on 'ಸರ್ಕಾರಿ ನೌಕರ'ರೇ ಗಮನಿಸಿ : ಇನ್ಮುಂದೆ ಬೇರೆ ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲೇ NOC ಪಡೆಯುವ ಅಗತ್ಯವಿಲ್ಲ

Post a Comment