Karnataka DCET 2020: ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ರಿಲೀಸ್.. ಅರ್ಜಿ ಸಲ್ಲಿಕೆ ಸೆ.21ರ ವರೆಗೆ ವಿಸ್ತರಣೆ

September 17, 2020
Thursday, September 17, 2020

 


ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಡಿಸಿಇಟಿ-2020 ಪರಿಷ್ಕರಿಸಿದ ವೇಳಾಪಟ್ಟಿಯನ್ನು ಪ್ರಕಟ ಮಾಡಿದೆ. ಪರೀಕ್ಷೆಗೆ ಆನ್‌ಲೈನ್‌ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಿದೆ.

2020ನೇ ಸಾಲಿನ ಎರಡನೇ ವರ್ಷದ / ಮೂರನೇ ಸೆಮಿಸ್ಟರ್ ಲ್ಯಾಟರಲ್ ಇಂಜಿನಿಯರಿಂಗ್ ಪ್ರವೇಶಾತಿಗೆ ದಿನಾಂಕ 09-08-2020 ರಂದು ನಡೆಸಲು ನಿಗದಿಪಡಿಸಲಾಗಿದ್ದ ಡಿಸಿಇಟಿ-2020ರ ಪರೀಕ್ಷೆಯನ್ನು ರಾಜ್ಯದಲ್ಲಿನ ಕೊರೊನಾ ಹಿನ್ನೆಲೆಯಲ್ಲಿ ಮುಂದೂಡಿ, ದಿನಾಂಕ 07-10-2020 ರಂದು ನಡೆಸಲು ವೇಳಾಪಟ್ಟಿ ಪ್ರಕಟಿಸಲಾಗಿತ್ತು.

ಆದರೆ ಅದೇ ದಿನಾಂಕಗಳಂದು ಕೆಲವು ವಿವಿಗಳ ಹಾಗೂ ಇತರೆ ಇಲಾಖೆಗಳ ಪರೀಕ್ಷೆಗಳು ನಡೆಯುತ್ತಿರುವುದರಿಂದ , ಅಭ್ಯರ್ಥಿಗಳ ಮನವಿಗಳನ್ನು ಪರಿಗಣಿಸಿ, ಈಗ ಡಿಸಿಇಟಿ 2020ರ ಪರೀಕ್ಷೆಯನ್ನು ದಿನಾಂಕ 14-10-2020 ರಂದು ನಡೆಸಲು ನಿರ್ಧರಿಸಲಾಗಿದೆ.

ಡಿಸಿಇಟಿ 2020 ಪ್ರವೇಶಾತಿಗೆ ಅರ್ಜಿ ಸಲ್ಲಿಸದ ಅಭ್ಯರ್ಥಿಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ಕಲ್ಪಿಸಲಾಗಿದೆ.

ಅಭ್ಯರ್ಥಿಗಳು ಸೆಪ್ಟೆಂಬರ್ 21,2020ರ ಸಂಜೆ 5:30ರೊಳಗೆ ಅನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕವನ್ನು ಸೆಪ್ಟೆಂಬರ್ 22,2020ರೊಳಗೆ ಪಾವತಿಸಬೇಕಿರುತ್ತದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಆದರೆ ಇಲ್ಲಿಯವರೆಗೆ ಶುಲ್ಕ ಪಾವತಿಸದೇ ಇರುವ ಅಭ್ಯರ್ಥಿಗಳು ಕೂಡ ಶುಲ್ಕವನ್ನು ಪಾವತಿಸಬಹುದು.

ಅಭ್ಯರ್ಥಿಗಳು ಪರೀಕ್ಷೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/?utm_source=DH-MoreFromPub&utm_medium=DH-app&utm_campaign=DH ಗೆ ಭೇಟಿ ನೀಡಿ ಪಡೆಯಬಹುದು.

Thanks for reading Karnataka DCET 2020: ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ರಿಲೀಸ್.. ಅರ್ಜಿ ಸಲ್ಲಿಕೆ ಸೆ.21ರ ವರೆಗೆ ವಿಸ್ತರಣೆ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on Karnataka DCET 2020: ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ರಿಲೀಸ್.. ಅರ್ಜಿ ಸಲ್ಲಿಕೆ ಸೆ.21ರ ವರೆಗೆ ವಿಸ್ತರಣೆ

Post a Comment