ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಡಿಸಿಇಟಿ-2020 ಪರಿಷ್ಕರಿಸಿದ ವೇಳಾಪಟ್ಟಿಯನ್ನು ಪ್ರಕಟ ಮಾಡಿದೆ. ಪರೀಕ್ಷೆಗೆ ಆನ್ಲೈನ್ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಿದೆ.
2020ನೇ ಸಾಲಿನ ಎರಡನೇ ವರ್ಷದ / ಮೂರನೇ ಸೆಮಿಸ್ಟರ್ ಲ್ಯಾಟರಲ್ ಇಂಜಿನಿಯರಿಂಗ್ ಪ್ರವೇಶಾತಿಗೆ ದಿನಾಂಕ 09-08-2020 ರಂದು ನಡೆಸಲು ನಿಗದಿಪಡಿಸಲಾಗಿದ್ದ ಡಿಸಿಇಟಿ-2020ರ ಪರೀಕ್ಷೆಯನ್ನು ರಾಜ್ಯದಲ್ಲಿನ ಕೊರೊನಾ ಹಿನ್ನೆಲೆಯಲ್ಲಿ ಮುಂದೂಡಿ, ದಿನಾಂಕ 07-10-2020 ರಂದು ನಡೆಸಲು ವೇಳಾಪಟ್ಟಿ ಪ್ರಕಟಿಸಲಾಗಿತ್ತು.
ಆದರೆ ಅದೇ ದಿನಾಂಕಗಳಂದು ಕೆಲವು ವಿವಿಗಳ ಹಾಗೂ ಇತರೆ ಇಲಾಖೆಗಳ ಪರೀಕ್ಷೆಗಳು ನಡೆಯುತ್ತಿರುವುದರಿಂದ , ಅಭ್ಯರ್ಥಿಗಳ ಮನವಿಗಳನ್ನು ಪರಿಗಣಿಸಿ, ಈಗ ಡಿಸಿಇಟಿ 2020ರ ಪರೀಕ್ಷೆಯನ್ನು ದಿನಾಂಕ 14-10-2020 ರಂದು ನಡೆಸಲು ನಿರ್ಧರಿಸಲಾಗಿದೆ.
ಡಿಸಿಇಟಿ 2020 ಪ್ರವೇಶಾತಿಗೆ ಅರ್ಜಿ ಸಲ್ಲಿಸದ ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ಕಲ್ಪಿಸಲಾಗಿದೆ.
ಅಭ್ಯರ್ಥಿಗಳು ಪರೀಕ್ಷೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ಅಧಿಕೃತ ವೆಬ್ಸೈಟ್ https://cetonline.karnataka.gov.in/kea/?utm_source=DH-MoreFromPub&utm_medium=DH-app&utm_campaign=DH ಗೆ ಭೇಟಿ ನೀಡಿ ಪಡೆಯಬಹುದು.