ತಾಜಾ ಸುದ್ದಿ

Fact Check : ಸೆ.25ರಿಂದ ‘ದೇಶಾದ್ಯಂತ ಮತ್ತೆ ಲಾಕ್ ಡೌನ್’.? : ಇಲ್ಲಿದೆ ಅಸಲಿ ಸತ್ಯ

 

ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಅನ್ ಲಾಕ್ ಮಾರ್ಗಸೂಚಿ ಸೆಪ್ಟೆಂಬರ್ 25ರವರೆಗೆ ಜಾರಿಯಲ್ಲಿದೆ. ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಕಾರಣದಿಂದಾಗಿ ಮತ್ತೆ ದೇಶಾದ್ಯಂತ ಲಾಕ್ ಡೌನ್ ಸೆಪ್ಟೆಂಬರ್ 25ರ ನಂತ್ರ ಜಾರಿಯಾಗಲಿದೆ ಎಂಬುದಾಗಿ ರಾಷ್ಟ್ರೀಯ ವಿಕೋಪ ನಿರ್ವಹಣಾ ಸಂಸ್ಥೆ ತಿಳಿಸಿದೆ ಎಂಬುದಾಗಿ ಪೋಸ್ಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದ್ರೇ ಈ ಕುರಿತಂತೆ ಸತ್ಯಾಸತ್ಯತೆ, ಅಸಲಿ ಸತ್ಯ ಏನು ಅಂತ ಮುಂದೆ ಓದಿ.

ಅನ್ ಲಾಕ್ ಮಾರ್ಗಸೂಚಿ ಸೆಪ್ಟೆಂಬರ್ 25ಕ್ಕೆ ಮುಕ್ತಾಯಗೊಂಡ ನಂತ್ರ ದೇಶಾದ್ಯಂತ ಮತ್ತೆ ಲಾಕ್ ಡೌನ್ ಅನ್ನು ಜಾರಿಗೊಳಿಸಲಾಗುತ್ತಿದೆ.

ಈ ಕುರಿತಂತೆ ರಾಷ್ಟ್ರೀಯ ವಿಕೋಪ ನಿರ್ವಹಣಾ ಸಂಸ್ಥೆ ಆದೇಶ ಕೂಡ ಮಾಡಿದೆ ಎಂಬುದಾಗಿ ಆದೇಶವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇಂತಹ ಆದೇಶದ ಬಗ್ಗೆ ಪಿಐಪಿ ಫ್ಯಾಕ್ಟ್ ಚೆಕ್ ಗೆ ಇಳಿದಿದ್ದು, ಇದೊಂದು ನಕಲಿ, ಫೇಕ್ ವೈರಲ್ ಸುದ್ದಿಯಷ್ಟೇ. ಈ ತರದ ಯಾವುದೇ ಲಾಕ್ ಡೌನ್ ದೇಶಾದ್ಯಂತ ಮತ್ತೆ ಜಾರಿಯಾಗುವುದಿಲ್ಲ ಎಂಬುದನ್ನು ಖಚಿತ ಪಡಿಸಿದೆ. ಈ ಮೂಲಕ ವೈರಲ್ ಆದ ಪೋಸ್ಟ್ ಫೇಕ್ ಎಂಬುದನ್ನು ಖಚಿತ ಪಡಿಸಿದೆ.

ಇನ್ನೂ ರಾಷ್ಟ್ರೀಯ ವಿಕೋಪ ನಿರ್ವಹಣಾ ಸಂಸ್ಥೆಯು ಯಾವುದೇ ಆದೇಶವನ್ನು ಹೀಗೆ ಹೊರಡಿಸಿಲ್ಲ. ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವಂತ ಸುದ್ದಿ ಫೇಕ್ ಆಗಿರುವಂತದ್ದು. ವೈರಲ್ ಆಗಿರುವಂತ ಸುದ್ದಿ ಸತ್ಯದಿಂದ ಕೂಡಿಲ್ಲ. ಇದು ನಕಲಿ ಆದೇಶವಾಗಿದೆ. ಕ್ರಿಯೇಟ್ ಮಾಡಿರುವಂತ ಆದೇಶ ಎಂಬುದನ್ನು ಪತ್ತೆ ಹಚ್ಚಿ ತಿಳಿಸಿದೆ.

Leave a Reply

Your email address will not be published.