ರಾಜ್ಯ ಸರ್ಕಾರದಿಂದ ಪಿಂಚಣಿದಾರರಿಗೆ ಸಿಹಿ ಸುದ್ದಿ: ಸದ್ಯದಲ್ಲೇ ಸಿಗಲಿದೆ ಐದು ತಿಂಗಳಿಂದ ನಿಂತಿದ್ದ ವೃದ್ಧಾಪ್ಯ ವೇತನದ ಹಣ

September 13, 2020

 


ಡಿಜಿಟಲ್‌ಡೆಸ್ಕ್‌: ಇನ್ಮುಂದೆ ಆಧಾರ್ ಕಾರ್ಡಿನಲ್ಲಿ 60 ವರ್ಷ ತುಂಬಿದೆ ಎಂದು ನಮೂದಾಗುತ್ತಿದ್ದಂತೆಯೇ ನೇರವಾಗಿ ಕಂದಾಯ ಇಲಾಖೆಯ ಅರ್ಹ ಫಲಾನುಭವಿಗಳಿಗೆ ವೃದ್ಧಾಪ್ಯ ವೇತನ ನೀಡುವಂತಹ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಅವರು ಇತ್ತೀಚಿಗೆ ತುಮಕೂರು ಜಿಲ್ಲೆಯ ಬುಕ್ಕಾಪಟ್ಟಣ ರಸ್ತೆಯ ಬೈಪಾಸ್ ಹೆದ್ದಾರಿ ಸಮೀಪದಲ್ಲಿ ಸುಮಾರು 13 ಕೊಟಿ ರೂಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ಮಿನಿ ವಿಧಾನಸೌಧ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡುತ್ತ ಈ ಮಾಹಿತಿ ನೀಡಿದರು.

ಇದೇ ವೇಳೆ ಅವರು ಮಾತನಾಡುತ್ತ 60 ವರ್ಷ ವಯಸ್ಸಾದ ಫಲಾನುಭವಿಗಳ ಸಂಪೂರ್ಣ ದಾಖಲೆಗಳು ನಮ್ಮಲ್ಲಿಯೇ ಇರುವಾಗ ಅವರನ್ನು ವೃದ್ಧಾಪ್ಯ ವೇತನಕ್ಕಾಗಿ ಅರ್ಜಿ ಕೇಳುವುದು ಸಾಧುವಲ್ಲ.

ಹೀಗಾಗಿ ಆಯಾ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ್‍ಗಳು ಇದರ ಜವಾಬ್ದಾರಿ ಹೊತ್ತು 60 ವರ್ಷ ವಯಸ್ಸಾದೊಡನೆ ಅಂತಹ ಫಲಾನುಭವಿಗಳ ಮನೆ ಬಾಗಿಲಿಗೆ ಸೌಲಭ್ಯ ದೊರಕುವಂತವ ವ್ಯವಸ್ಥೆ ಕಲ್ಪಿಸಲು ಸರ್ಕಾರ ಕ್ರಮ ಕೈಗೊಂಡಿದೆ ಅಂತ ತಿಳಿಸಿದರು.

ಇನ್ನು ರಾಜ್ಯದ ಬಹುತೇಕ ಫಲಾನುಭವಿಗಳಿಗೆ ಮೂರು, ನಾಲ್ಕು ತಿಂಗಳಾದರೂ ಮಾಸಾಶನ ಸಿಕ್ಕಿಲ್ಲದ ಕಾರಣ ಫಲಾನುಭಗಿಗಳ ಆಧಾರ್ ಕಾರ್ಡ್‍ಗಳನ್ನು ಲಿಂಕ್ ಮಡಲಾಗುತ್ತಿದೆ. ಈ ಪ್ರಕ್ರಿಯೆ ಮುಗಿದ ಕೂಡಲೇ ಅರ್ಹರೆಲ್ಲರಿಗೂ ಸೌಲಭ್ಯ ಸಿಗಲಿದೆ. ಆಧಾರ್ ಲಿಂಕ್‍ನಿಂದ ಬೋಗಸ್ ಫಲಾನುಭವಿಗಳನ್ನು ಕೈಬಿಡಲಾಗುತ್ತದೆ. ಇದರಿಂದ 7000 ಕೋಟಿ ರೂ ಸರ್ಕಾರಕ್ಕೆ ಉಳಿತಾಯವಾಗಲಿದೆ. ರಾಜ್ಯ ಸರ್ಕಾರ ನೀಡುವ ಮಾಸಾಶಗಳು ಇನ್ನು ಮುಂದೆ ಅಂಚೆ ಕಚೇರಿಯ ಮೂಲಕ ಲಭ್ಯವಾಗುವುದಿಲ್ಲ. ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಾಕಲಾಗುವುದು. ಇನ್ನು ಮೂರು ತಿಂಗಳೊಳಗೆ ಈ ಪ್ರಕ್ರಿಯೆ ಮುಗಿಯಲಿದೆ. ಎಂದು ಸರ್ಕಾರ ಕೈಗೊಂಡಿರುವ ಮಹತ್ವದ ಕಾರ್ಯಗಳ ಬಗ್ಗೆ ಆರ್.ಅಶೋಕ್ ತಿಳಿಸಿದರು. ಕರೊನಾ ಹಿನ್ನೆಲೆಯಲ್ಲಿ ಕಳೆದ 5 ತಿಂಗಳಿಂದ ಸ್ಥಗಿತಗೊಂಡಿದ್ದ ವಿವಿಧ ಸಾಮಾಜಿಕ ಸುರಕ್ಷಾ ಯೋಜನೆಗಳಿಗೆ ರಾಜ್ಯ ಸರ್ಕಾರ 3,500 ಕೋಟಿ ರೂ. ಬಿಡುಗಡೆ ಮಾಡಿದೆ ಎನ್ನಲಾಗಿದೆ.

Related Articles

Advertisement
Previous
Next Post »