BREAKING : ಸೆ.28ಕ್ಕೆ ನಡೆಯಬೇಕಿದ್ದ SSLC ಪೂರಕ ಪರೀಕ್ಷೆ ಮುಂದೂಡಿಕೆ

September 26, 2020
Saturday, September 26, 2020

 


ಬೆಂಗಳೂರು : ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ಮಸೂಧೆಗಳನ್ನು ವಿರೋಧಿಸಿ, ಸೆಪ್ಟೆಂಬರ್ 28ಕ್ಕೆ ವಿವಿಧ ರೈತ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಸೆಪ್ಟೆಂಬರ್ 28ರಂದು ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಸೆ.28ರಂದು ನಿಗಧಿಯಾಗಿದ್ದಂತ ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯನ್ನು ಸೆ.29ಕ್ಕೆ ಮುಂದೂಡಿ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸುತ್ತೋಲೆ ಹೊರಡಿಸಿದೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಡಿಸಿರುವಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ಸೆಪ್ಟೆಂಬರ್ 28ರಂದು ರೈತ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿವೆ. 

ಸೆ.28ರಂದು ವಿಜ್ಞಾನ, ರಾಜ್ಯಶಾಸ್ತ್ರ, ಮಧ್ಯಾಹ್ನ ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ ಪರೀಕ್ಷೆಗಳನ್ನು ನಿಗಧಿ ಪಡಿಸಲಾಗಿತ್ತು. ಆದ್ರೇ ಕರ್ನಾಟಕ ಬಂದ್ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಸೆಪ್ಟೆಂಬರ್ 28ರಂದು ನಡೆಯಬೇಕಿದ್ದ ಪೂರಕ ಪರೀಕ್ಷೆಯನ್ನು ಸೆಪ್ಟೆಂಬರ್ 29ಕ್ಕೆ ಮುಂದೂಡಲಾಗಿದೆ. ಇತರೆ ಪರೀಕ್ಷೆಗಳು ನಿಗಧಿಯಂತೆ ನಡೆಯಲಿದೆ ಎಂಬುದಾಗಿ ತಿಳಿಸಿದೆ.

Thanks for reading BREAKING : ಸೆ.28ಕ್ಕೆ ನಡೆಯಬೇಕಿದ್ದ SSLC ಪೂರಕ ಪರೀಕ್ಷೆ ಮುಂದೂಡಿಕೆ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on BREAKING : ಸೆ.28ಕ್ಕೆ ನಡೆಯಬೇಕಿದ್ದ SSLC ಪೂರಕ ಪರೀಕ್ಷೆ ಮುಂದೂಡಿಕೆ

Post a Comment