ಶಿಕ್ಷಣ ಸುದ್ದಿ

BIG NEWS : ಸೆ. 21 ರಿಂದ ಶಾಲೆ-ಕಾಲೇಜುಗಳು ಆರಂಭ!

 

ನವದೆಹಲಿ : ಬೆಂಗಳೂರು : ಕೊರೊನಾ ಆತಂಕದ ನಡುವೆಯೂ ಸೆ. 21 ರಿಂದ ಶಾಲಾ-ಕಾಲೇಜುಗಳ ಆರಂಭಕ್ಕೆ ಸಿದ್ಧತೆ ನಡೆಯುತ್ತಿದ್ದು, ಕೇಂದ್ರ ಸರ್ಕಾರದ ಅನುಮತಿ ಮೇಲೆ ಶಾಲಾ-ಕಾಲೇಜು ಪ್ರಾರಂಭಕ್ಕೆ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಸೆಪ್ಟೆಂಬರ್ 21ರಿಂದ ದೇಶಾದ್ಯಂತ 9 ರಿಂದ 12ನೇ ತರಗತಿ ಶಾಲಾ-ಕಾಲೇಜು ಆರಂಭಕ್ಕೆ ನೂತನ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಈ ಮೂಲಕ ಸೆಪ್ಟೆಂಬರ್ 21ರಿಂದ ದೇಶಾದ್ಯಂತ 9ರಿಂದ 12ನೇ ತರಗತಿ ಶಾಲೆಗಳು ಆರಂಭವಾಗಲಿವೆ ಎನ್ನಲಾಗುತ್ತಿದೆ.

ಈ ಕುರಿತಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೂತನ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಈ ಮಾರ್ಗಸೂಚಿಯಂತೆ ಶಿಕ್ಷಕರು, ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಕಡ್ಡಾಯವಾಗಿ 6 ಅಡಿ ದೈಹಿಕ ಅಂತರವನ್ನು ಕಾಯ್ದುಕೊಳ್ಳಬೇಕಿದೆ.

ಮಕ್ಕಳು ಕಡ್ಡಾಯವಾಗಿ ಬರುವಂತೆ ಒತ್ತಾಯ ಮಾಡುವಂತಿಲ್ಲ. ಶಾಲೆಗೆ ಬರುವ ಪ್ರತಿ ವಿದ್ಯಾರ್ಥಿಯು ಪೋಷಕರಿಂದ ಒಪ್ಪಿಗೆ ಪತ್ರ ತರಬೇಕು. ವಿದ್ಯಾರ್ಥಿಗಳು ಸಾಮಾಜಿಕ ಅಂತರದಲ್ಲಿ ಕುಳಿತುಕೊಳ್ಳಲು ಡೆಸ್ಕ್ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದೆ.

ಇನ್ನೂ ಮುಂದುವರೆದು ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸಬೇಕು. ಆಗಾಗ ತಪ್ಪದೇ ಹ್ಯಾಂಡ್ ವಾಷ್ ಮಾಡಿಕೊಳ್ಳಬೇಕು. ಸ್ವಯಂ ಆರೋಗ್ಯ ತಪಾಸಣೆಗೂ ಒಳಗಾಗುವಂತೆ ಸೂಚಿಸಿದೆ. ಅಲ್ಲದೇ ಆನ್ ಲೈನ್ ತರಗತಿಯ ಮುಂದುವರಿಕೆಯ ಬಗ್ಗೆಯೂ ಸೂಚನೆ ನೀಡಿರುವ ಕೇಂದ್ರ ಆರೋಗ್ಯ ಇಲಾಖೆ, ಕಂಟೈನ್ಮೆಂಟ್ ಝೋನ್ ನಲ್ಲಿರುವ ಶಾಲೆಗಳು, ವಿದ್ಯಾರ್ಥಿಗಳು ಶಾಲೆಗೆ ಹಾಜರಾಗದಂತೆ ಸೂಚನೆ ನೀಡಿದೆ.

Leave a Reply

Your email address will not be published.