ತಾಜಾ ಸುದ್ದಿ

ಶುಭ ಸುದ್ದಿ: ನಿರುದ್ಯೋಗ ಭತ್ಯೆ ಪಾವತಿಗೆ ಗ್ರೀನ್‌ ಸಿಗ್ನಲ್

 ಕೊರೊನಾ ಲಾಕ್ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ನೌಕರರಿಗೆ ನೌಕರರ ರಾಜ್ಯ ವಿಮಾ ನಿಗಮ ಮೂರು ತಿಂಗಳ ಸರಾಸರಿ ವೇತನದ ಶೇಕಡ 50ರಷ್ಟು ನಿರುದ್ಯೋಗ ಲಾಭವಾಗಿ ಪಾವತಿಸುವ ಕುರಿತಂತೆ ಅಧಿಸೂಚನೆ ಹೊರ ಬಿದ್ದಿದೆ.

ನೌಕರರ ರಾಜ್ಯ ವಿಮೆ ಯೋಜನೆಯಡಿ ಬರುವ ಕಾರ್ಮಿಕರಿಗೆ ನಿರುದ್ಯೋಗ ಲಾಭವನ್ನು ಪಾವತಿಸುವ ಆಟಲ್ ಬಿಮಿತ್ ವ್ಯಕ್ತಿ ಕಲ್ಯಾಣ್ ಯೋಜನೆ ಜಾರಿಗೊಳಿಸಲಾಗುತ್ತಿದೆ.

ಈ ಹಿಂದೆ ಇಎಸ್‌ಐ ಕಾರ್ಪೊರೇಷನ್ ಸಭೆಯಲ್ಲಿ ಈ ಕುರಿತಾಗಿ ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದ್ದು, ಕೊರೊನಾ ಸಾಂಕ್ರಾಮಿಕ ರೋಗ ಪೀಡಿತ ಕಾರ್ಮಿಕರಿಗೆ ಪರಿಹಾರವನ್ನು ನೀಡಲು ಈಗ ಅಧಿಸೂಚನೆ ಹೊರಡಿಸಲಾಗಿದೆ.

ಉದ್ಯೋಗ ಕಳೆದುಕೊಂಡ ಕಾರ್ಮಿಕರಿಗೆ ಈಗಿರುವ ಪರಿಸ್ಥಿತಿಗೆ ಅನುಗುಣವಾಗಿ ಪರಿಹಾರ ಪ್ರಮಾಣ ಪಡೆಯಲು ನಿಯಮ ಸಡಿಲಿಕೆ ಮಾಡಲಾಗುವುದು. ಮೂರು ತಿಂಗಳ ಸರಾಸರಿ ವೇತನದ 50 ಪ್ರತಿಶತದಷ್ಟು ನಿರುದ್ಯೋಗ ಲಾಭವಾಗಿ ಪಾವತಿಸಲಾಗುವುದು ಎಂದು ಹೇಳಲಾಗಿದೆ.

Leave a Reply

Your email address will not be published.