ತಾಜಾ ಸುದ್ದಿ

ಮನೆಯಲ್ಲಿಯೇ ಕುಳಿತು ಈ ರೀತಿಯಾಗಿ ʼಹಣʼ ಗಳಿಸಿ

 


ದುಡ್ಡು ಯಾರಿಗೆ ಬೇಡ ಹೇಳಿ, ಎಲ್ಲರಿಗೂ ಹಣದ ಅವಶ್ಯಕತೆ ಇರುತ್ತದೆ. ಆದರೆ ಕೆಲವರು ಮನೆಯಿಂದ ಹೊರಗೆ ಹೋಗಿ ದುಡಿಯುತ್ತಾರೆ. ಇನ್ನು ಕೆಲವರಿಗೆ ಹೊರಗೆ ಹೋಗುವುದಕ್ಕೆ ಆಗುವುದಿಲ್ಲ. ಹೆಚ್ಚಾಗಿ ಮಹಿಳೆಯರು ಗಂಡ, ಮಕ್ಕಳು, ಸಂಸಾರ ಎಂದು ಮನೆಯಲ್ಲಿಯೇ ಇದ್ದುಬಿಡುತ್ತಾರೆ.

ನಮ್ಮ ಕೈಯಲ್ಲಿ ಸ್ವಲ್ಪ ದುಡ್ಡು ಇದ್ದರೆ ನಮಗೆ ಬೇಕೆನಿಸಿದ್ದು ತೆಗೆದುಕೊಳ್ಳವುದಕ್ಕೆ ಆಗುತ್ತದೆ ಎಂಬ ಆಸೆ ಎಲ್ಲರಿಗೂ ಇರುತ್ತದೆ. ಹಾಗಾಗಿ ಬಿಡುವಿನ ಸಮಯದಲ್ಲಿ ಏನಾದರೂ ಮಾಡಬಹುದಾ ಎಂದು ಯೋಚಿಸಿ. ನಿಮಗೆ ಯಾವುದಾದರೂ ಟ್ಯಾಲೆಂಟ್ ಇದ್ದರೆ ಅದನ್ನು ಮುಂದುವರಿಸಿ.

ಇನ್ನು ಬರವಣಿಗೆ ಆಸಕ್ತಿ ಇರುವವರು ಪತ್ರಿಕೆಗಳಿಗೆ ಲೇಖನ ಬರೆದುಕೊಡುವುದನ್ನು ಮಾಡಬಹುದು. ಇದರಿಂದ ಕೂಡ ಹಣ ಸಿಗುತ್ತದೆ. ಹಾಗೇ ನಿಮಗೆ ಭಾಷೆಯ ಮೇಲೆ ಹಿಡಿತವಿದ್ದರೆ ಅನುವಾದ ಕೆಲಸಗಳನ್ನು ಮಾಡಬಹುದು.

ಅಡುಗೆಯಲ್ಲಿ ನಿಮಗೆ ಆಸಕ್ತಿ ಇದ್ದರೆ ಯೂ ಟ್ಯೂಬ್ ಚಾನೆಲ್ ಗಳನ್ನು ಮಾಡಿಕೊಂಡು ಅದರಲ್ಲಿ ನಿಮಗೆ ಗೊತ್ತಿರುವ ಅಡುಗೆಗಳನ್ನು ಮಾಡಿ ತೋರಿಸಬಹುದು. ಇದು ಕೂಡ ಆರ್ಥಿಕ ಸ್ವಾವಲಂಬಿಯಾಗಲು ನಿಮಗೆ ಸಹಾಯ ಮಾಡುತ್ತದೆ.

ಆಭರಣ ತಯಾರಿಕೆ, ಸೀರೆಗೆ ಕುಚ್ಚು ಹಾಕುವುದು, ಟ್ಯೂಷನ್ ಹೇಳಿಕೊಡುವುದು ಇದೆಲ್ಲಾ ಕೂಡ ನಿಮಗೆ ಸ್ವಲ್ಪ ಮಟ್ಟಿನ ಹಣ ಗಳಿಕೆಗೆ ಸಹಾಯ ಮಾಡುತ್ತದೆ. ಜತೆಗೆ ನಿಮ್ಮಲ್ಲಿನ ಪ್ರತಿಭೆಯನ್ನು ಹೊರಜಗತ್ತಿಗೆ ತೋರಿಸಲು ಸಹಾಯಕವಾಗುತ್ತದೆ.

One Reply to “ಮನೆಯಲ್ಲಿಯೇ ಕುಳಿತು ಈ ರೀತಿಯಾಗಿ ʼಹಣʼ ಗಳಿಸಿ

Leave a Reply

Your email address will not be published.