ಶಿಕ್ಷಣ ಸುದ್ದಿ

ಬಿಗ್ ನ್ಯೂಸ್: ಶಾಲೆಗಳ ಭಾಗಶಃ ಪುನಾರಂಭಕ್ಕೆ ಸರ್ಕಾರದಿಂದ ಮಾರ್ಗಸೂಚಿ

 

ಧಾರವಾಡ: ರಾಜ್ಯದಲ್ಲಿ ಭಾಗಶಃ ಶಾಲೆ ಪುನಾರಂಭಕ್ಕೆ ಶೀಘ್ರವೇ ಮಾರ್ಗಸೂಚಿ ಹೊರಡಿಸಲಾಗುವುದು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಎಸ್. ಸುರೇಶ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿ, 9 ರಿಂದ 12 ನೇ ತರಗತಿವರೆಗಿನ ಮಕ್ಕಳು ಶಾಲೆಗೆ ಆಗಮಿಸಿ ಶಿಕ್ಷಕರು ಮಾರ್ಗದರ್ಶನ ಪಡೆಯಲು ಸೆಪ್ಟೆಂಬರ್ 21 ರಿಂದ ಅವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಶಾಲೆಗಳಿಗೆ 9 ರಿಂದ 12ನೇ ತರಗತಿ ಮಕ್ಕಳು ಬಂದು ಹೋಗಲು ಅವಕಾಶ ನೀಡಿದ್ದು ನಂತರದಲ್ಲಿ ಶಾಲೆ-ಕಾಲೇಜು ತರಗತಿ ಆರಂಭಿಸಲು ಹಸಿರು ನಿಶಾನೆ ಸಿಕ್ಕಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಆರಂಭಿಸಲಾಗುವುದು.

ಸದ್ಯಕ್ಕೆ 9 ರಿಂದ 12 ನೇ ತರಗತಿಯ ಮಕ್ಕಳು ಶಾಲೆಗೆ ಆಗಮಿಸಿ ಶಿಕ್ಷಕರ ಮಾರ್ಗದರ್ಶನ ಪಡೆಯಲು ಅವಕಾಶವಿದ್ದು ಶನಿವಾರ, ಭಾನುವಾರದ ವೇಳೆಗೆ ಭಾಗಶಃ ಶಾಲೆ ಆರಂಭಕ್ಕೆ ಮಾರ್ಗಸೂಚಿ ಸಿದ್ಧಪಡಿಸಿ ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ.

Leave a Reply

Your email address will not be published.