ಬೆಂಗಳೂರು : ಕಾನ್ ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ ಇಲ್ಲಿದೆ. ಸೆ.20 ರಂದು ಕಾನ್ ಸ್ಟೇಬಲ್ ಹುದ್ದೆಗೆ ನಗರದಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ.
ಸಿವಿಲ್ ಪೊಲೀಸ್ ಕಾನ್ಟೇಬಲ್ ಪುರುಷ ಮತ್ತು ಮಹಿಳಾ ಹಾಗೂ ಸಿವಿಲ್ ಪೊಲೀಸ್ ಕಾನ್ಸ್ಟೆಬಲ್ ಪುರುಷ ಮತ್ತು ಮಹಿಳಾ)( ಕಲ್ಯಾಣ ಕರ್ನಾಟಕ) ಹುದ್ದೆಗಳ ಭರ್ತಿಯ ಸಂಬಂಧ ಸುಮಾರು 37,640 ಅಭ್ಯರ್ಥಿಗಳಿಗೆ ಸೆ.20ರಂದು ಪರೀಕ್ಷೆ ನಡೆಯಲಿದೆ. ನಗರದ 69 ಪರೀಕ್ಷಾ ಕೇಂದ್ರದಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 12.30ರವರೆಗೆ ಲಿಖಿತ ಪರೀಕ್ಷೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು www.ksp.gov.in ವೆಬ್ ಸೈಟ್ ವೀಕ್ಷಿಸಬಹುದಾಗಿದೆ. ಅರ್ಹ ಅಭ್ಯರ್ಥಿಗಳು ಕರೆಪತ್ರವನ್ನು ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬಹುದಾಗಿದೆ.